Monday, February 2, 2015

ಮುಸ್ಲಿಂ ಐಕ್ಯ ಕಮಿಟಿಯ ಅಗತ್ಯ!!


ಫ್ಯಾಸಿಸ್ಟ್ ವ್ಯಕ್ತಿಗಳ ಪರವಾದ ಸರಕಾರ ದೇಶದಲ್ಲಿ ಆಡಳಿತಕ್ಕೆ ಬಂದ ನಂತರ ಕೋಮುವಾದ ಹೆಚ್ಚಾಗತೊಡಗಿದೆ, ಅದರಲ್ಲೂ ಕೋಮುವಾದದ ದಳ್ಳುರಿಗೆ ಬುದ್ದಿವಂತರ ಜಿಲ್ಲೆ ಹೆಚ್ಚು ನಾಶ ನಷ್ಟ ಅನುಭವಿಸಿದೆ, ಮಾತ್ರವಲ್ಲ ಸಹಬಾಳ್ವೆಯಿಂದ ಬದುಕುತ್ತಿದ್ದ ಜನರ ಮನಸ್ಸುಗಳಲ್ಲಿ ಒಡಕುಂಟು ಮಾಡುವಲ್ಲಿ ಸಫಳತೆಯತ್ತ ಸಾಗುತ್ತಿದೆ. ಪ್ರತಿನಿತ್ಯ ಜಿಲ್ಲೆಯಲಿ ಅನುಮಾನದ ನೆಲೆಯಲ್ಲಿ ಒಂದಲ್ಲ ಒಂದು ಅಹಿತಕರ ಘಟನೆ ನಡೆಯುತ್ತಿದೆ, ಸಾಮಾನ್ಯವಾಗಿ ಇಲ್ಲಿ ಹೆಚ್ಚು ಅನಾಹುತಕ್ಕೆ ಒಳಗಾಗಿರುವುದು ಅಮಾಯಕರು, ಅದರಲ್ಲೂ ಮುಸ್ಲಿಮರು. ಮುಸ್ಲಿಮರು ಅನಾಯಕ್ಕೊಳಗಾಗುವ ಸಮಯದಲ್ಲಿ ಹೆಚ್ಚಿನವರಿಗೆ ಮುಸ್ಲಿಮರ ಮಧ್ಯೆ ಇರುವ ಭಿನ್ನತೆಯನ್ನು ಕೊನೆಗಾಣಿಸಬೇಕು ಎಂದು ನೆನಪಾಗುತ್ತದೆ, ಹಲವರು ಆ ನಿಟ್ಟಿನಲ್ಲಿ ಐಕ್ಯತೆಗಾಗಿ ಕೂಡಾ ಶ್ರಮಿಸುತ್ತಿದ್ದಾರೆ.

ಇವುಗಳ ಮಧ್ಯೆ ವೇದಿಕೆ ಏರಿದ ಕೆಲವು ಮೇಧಾವಿಗಳು ತೀವ್ರವಾದಿಗಳು, ಕುಶ್ಕ ಮತ್ತು ಇತರ ಮಾತುಗಳನ್ನು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಸುತ್ತಿದ್ದಾರೆ. ಅವರೊಂದಿಗೆ, ಇವರೊಂದಿಗೆ ಕೈ ಜೋಡಿಸಳು ಸಾಧ್ಯವಿಲ್ಲ ಎಂದು ಘಂಟಾಘೋಸವಾಗಿ ಘೋಷಿಸುತ್ತಾರೆ. ಎಲ್ಲಿಯೋ ಕಲ್ಲು ಬಿದ್ದ ಕೆಲ ದಿನಗಳ ನಂತರ ಈ ಕಚ್ಚಾಟ ಮತ್ತಷ್ಟು ಹೆಚ್ಚುತ್ತದೆ, ಇದರ ಮಧ್ಯೆ ಹೌದು ಮುಸ್ಲಿಮ್ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯಗಳ ಕಾರಣದಿಂದ ಕಚ್ಚಾಟ ನಡೆಯುತ್ತಿದೆ ಎಂದು ಹೇಳಿದರೆ ಮುಸ್ಲಿಮರ ಕಚ್ಚಾಟದ ಬಗ್ಗೆ ಏಕೆ ಮಾತನಾಡುತ್ತೀರಿ ಎಂದು ಹೇಳುವ ಆವೇಶದ ತಂಪಲ್ಲಿ ಬೆಳೆಯುತ್ತಿರುವ ಯುವಕರ ಗುಂಪು ಕೂಡಾ ಬೆಳೆದು ಬರುತ್ತಿದೆ. ಅಭಿಪ್ರಾಯಗಳನ್ನು ಉಪದೇಶ ಎಂದು ಪರಿಗಣಿಸಿ ಉಪದೇಶ ಬೇಡ ಎನ್ನುವ ಕಡೆಗನಿಸುವಿಕೆ ಕೂಡಾ ನಮ್ಮಲ್ಲಿದೆ.

ಒಬ್ಬರ ಜೊತೆ ಬೆರೆತು ಅರಿತುಕೊಂಡಾಗ ಮಾತ್ರ ವ್ಯಕ್ತಿತ್ವಗಳನ್ನು ಅರಿಯಲು ಸಾಧ್ಯ ಇಲ್ಲದೆ ಹೋದಲ್ಲಿ ಅದು ಮತ್ತಷ್ಟು ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಮುಸ್ಲಿಮರು ಯಾರ ವಿರುದ್ದವೂ ಒಗ್ಗಟ್ಟಾಗುವ ಅಗತ್ಯ ಇಲ್ಲ ಆದರೆ ಮುಸ್ಲಿಮರು ಮುಸ್ಲಿಮರು ಎನ್ನುವ ನೆಲೆಯಲ್ಲಿ ಒಗ್ಗಟ್ಟಾಗುವ ಅಗತ್ಯ ಖಂಡಿತಾ ಇದೆ, ಒಗ್ಗಟ್ಟಾಗುವ ಯೋಚನೆ ಇರುವ ಪ್ರತಿಯೊಬ್ಬನು ಬಿಕ್ಕಟ್ಟನು ಪ್ರಶ್ನಿಸಲೇಬೇಕಾಗಿದೆ. ಸಾಮಾನ್ಯವಾಗಿ ಮುಸ್ಲಿಮರಿಗೆ ಹೊಡೆತ ಬಿದ್ದು ಸಾಕಷ್ಟು ನಾಶ ನಷ್ಟ ಸಂಭವಿಸಿದ ನಂತರ ಮುಸ್ಲಿಂ ನಾಯಕರು ಸಭೆ ಸೇರಿ ಚರ್ಚಿಸುತ್ತಾರೆ ಮತ್ತು ಅಲ್ಲಿಯ ತಿರ್ಮಾನಗಳು ಒಂದು ಸಮಯಕ್ಕೆ ಮಾತ್ರ ಸೀಮಿತ.

ಬರಲಿರುವ ದಿನಗಳು ಅದು ಘರ್ ವಾಪಸಿ, ಲವ್ ಜಿಹಾದ್ ಮತ್ತು ಇನ್ನಿತರ ವ್ಯವಸ್ಥಿತ ಷಡ್ಯಂತ್ರಗಳ ದಿನಗಳಾಗಿವೆ, ಅವುಗಳಿಂದ ಹೆಚ್ಚು ಇಕ್ಕಟ್ಟಿಗೆ ಸಿಳುಕಿಕೊಳ್ಳುವವರು ಮುಸ್ಲಿಮರು ಈ ನಿಟ್ಟಿನಲ್ಲಿ ಮುಸ್ಲಿಂ ನಾಯಕರ ಪ್ರತಿನಿಧಿಗಳು ಸೀಮಿತ ಸಮಯಕ್ಕೆ ಮಾತ್ರ ಒಂದಾಗುವ ಪರಿಸ್ಥಿತಿಗೆ ಸೀಮಿತ ಆಗದೆ ಒಂದು ಶಾಶ್ವತ ಮುಸ್ಲಿಂ ಐಕ್ಯ ಕಮಿಟಿಯನ್ನು ಸ್ಥಾಪಿಸಬೇಕಾಗಿದೆ. ವಿವಿಧ ಮುಸ್ಲಿಂ ಸಂಘಟನೆಗಳ, ಸಂಸ್ಥೆಗಳ ನಾಯಕರ ಪ್ರತಿನಿಧಿ ಕೂಟವನ್ನು ರಚಿಸಿ ಚರ್ಚಿಸುವ ವಿಶಾಲ ಮನೋಭಾವ ಬೆಳೆದುಬರಬೇಕಾಗಿದೆ, 

ಮುಸ್ಲಿಮರು ಒಂದಾಗಿ ಸ್ಥಾಪಿಸಲ್ಪಡುವ ಸಂಸ್ಥೆ ಅಹಿತಕರ ಘಟನೆ ನಡೆದಾಗ ಅಲ್ಲಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವ ಮತ್ತು  ಅದರ ಬಗ್ಗೆ ಪ್ರತಿಭಟಿಸುವ ಕೆಲಸ ಮಾಡಬೇಕಾಗಿದೆ, ಕಾನೂನು ಹೋರಾಟಗಳನ್ನು ರೂಪಿಸಿಕೊಳ್ಳಬೇಕಾಗಿದೆ, ಮುಸ್ಲಿಮರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕಂಡುಕೊಳ್ಳಬೇಕಾಗಿದೆ, ಆಗ ಯಾರನ್ನು ಕೂಡ ಅವರು ಅವರಷ್ಟಕ್ಕೆ ಪ್ರತಿಭಟಿಸಿದ್ದಾರೆ ಚರ್ಚೆಗಳು ನಡಿದಿಲ್ಲ ಎನ್ನುವ ಹೇಳಿಕೆ ನೀಡಿ ತಪ್ಪಿಸಿಕೊಳ್ಳುವ ಪ್ರಮೇಯಯವನ್ನು ಇಲ್ಲವಾಗಿಸಬಹುದು. ಒಟ್ಟಲ್ಲಿ ಬಹುಕಾಲದ ಬೇಡಿಕೆ ಎಂಬಂತೆ ಮುಸ್ಲಿಮರು ಒಂದು ಮುಸ್ಲಿಂ ಐಕ್ಯ ಕಮಿಟಿಯನ್ನು ಸ್ಥಾಪಿಸಬೇಕಾಗಿದೆ, ಹಿತಾಶಕ್ತಿಗಳನ್ನು, ಪ್ರತಿಷ್ಠೆಗಳನ್ನು ಬದಿಗಿಟ್ಟು ನಾಯಕರು ಉದಾತ್ತವಾಗಿ ಯೋಚಿಸಬೇಕಾಗಿದೆ. ಭಟ್ಕಳದ ತಂಝೀಮ್ ಅಥವಾ ಉಡುಪಿಯ ಮುಸ್ಲಿಂ ಒಕ್ಕೂಟವನ್ನು ಉದಾಹರಣೆಯಾಗಿ ತೆಗೆದುಕೊಂಡು ಮುನ್ನಡೆಯಬೇಕಾಗಿದೆ.