Thursday, July 30, 2015

ಬದಲಾಗಬಯಸುವ ದೋಷಿಗಳಿಗೆ ಹಿಂಜರಿಕೆಯಾಗುವ ಗಲ್ಲು!


ಯಾಕೂಬ್ ಮೆಮೊನ್ ಗೆ ಗಲ್ಲು ಶಿಕ್ಷೆ ಎಂಬ  ತೀರ್ಪನ್ನು ಎತ್ತಿ ಹಿಡಿಯುವವರಲ್ಲಿ ಹೆಚ್ಚಿನವರು ಗಲ್ಲು ಶಿಕ್ಷೆ ಎಂಬ ಪದ್ದತಿಯೇ ಬೇಡ ಎಂದು ವಾದಿಸುವವರು ಇದೊಂದು ವಿಚಾರ ಮಾತ್ರ ಸಾಕು ಜಾತಿ ಅಧಾರದ ಹಿನ್ನಲೆಯಲ್ಲಿ ತೀರ್ಪನ್ನು ಬೆಂಬಲಿಸಲಾಗುತ್ತಿದೆ ಮತ್ತು ಹಿತಾಶಕ್ತಿಗಳೆಲ್ಲ ಕೈ ಚಾಚಿದೆ ಎಂದು ತಿಳಿದುಕೊಳ್ಳಲು. ರಾಜೀವ್ ಹಂತಕರು ನೇಣು ಕುಣಿಕೆಯಿಂದ ಪಾರಾಗುವಾಗ ತುಟಿ ಬಿಚ್ಚಲು ತಾಕತ್ತಿಲ್ಲದವರು ಶರಣಾಗತಿಯಾದವನ ನೇಣು ಕುಣಿಕೆ ಯನ್ನು ಬಿಗಿಗೊಳಿಸುವಲ್ಲಿ ಹಾತೊರೆದಿದ್ದಾರೆ. ಸುಪ್ರೀಂ ಕೋರ್ಟ್ ಶರಣಾಗತಿ ವಾದವನ್ನು ತಾಳ್ಳಿಹಾಕಿರಬಹುದು ಮತ್ತು ಅದಕ್ಕೆ ಸಾಕ್ಷಗಳಿಲ್ಲ ಎನ್ನುವುದು ಮಾತ್ರ ಕಾರಣ ಎನ್ನುವುದು ವಾಸ್ತವ.

21 ವರ್ಷಗಳ ಸೆರೆವಾಸದ ನಂತರ ತನ್ನಲ್ಲಾದ ಬದಲಾವಣೆಯನ್ನು ತೋರಿಸಿಕೊಂಡರೂ ನ್ಯಾಯ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳು ಎದ್ದು ಕಾಣುತ್ತಿದೆ, ಕ್ರಿಮಿನಲ್ ಒಬ್ಬ ಜೈಲುವಾಸದಿಂದ ಬದಲಾಗಲು ಯತ್ನಿಸಿದಾಗ ಅವನಿಗೆ ಕ್ಷಮಾದಾನ ಇಲ್ಲವೆಂದಾದಲ್ಲಿ ಮನ ಪರಿವರ್ತನೆಯ ಕೇಂದ್ರಗಳಾಗಿ ಜೈಲುಗಳನ್ನು ಬಿಂಬಿಸಲು ಪ್ರಯತ್ನಿಸುತ್ತಿರುವ ಪರಿಶ್ರಮ ಅರ್ಥಹೀನ. 257 ಮಂದಿಯ ಮಾರಣಹೋಮದ ಹೊಣೆಗಾರಿಕೆ ಹೊತ್ತು ಯಾಕುಬ್ ಮೆಮೊನ್ ನೇಣು ಕುಣಿಕೆ ಏರುವುದಾದರೆ ಸಾವಿರಾರು ಜನರ ಸಾವಿನ ಹೊಣೆ ಹೊತ್ತು ಸಾಯಬೇಕಾದ
ಮೇಧಾವಿಗಳೆನಿಸಿಕೊಂಡ ನೂರಾರು ಮಂದಿ ನಮ್ಮಲ್ಲಿದ್ದಾರೆ ಮತ್ತು ಅವರುಗಳು ಯಾಕುಬ್ ಮೆಮೊನ್ ಗಿಂತ ಒಂದು ನಿಮಿಷ ಮುಂಚೆಯಾದರೂ ನೇಣು ಗಂಬ ಏರಲು ಅರ್ಹವಾದವರು.

ನೇಣುಗುಣಿಕೆ ಎಂಬುವುದು ಈ ದೇಶದ ಕ್ರಿಮಿನಲ್ ವ್ಯವಸ್ಥೆಯನ್ನು ಅಳಿಸಿಹಾಕಲು ಇರುವ ಪದ್ದತಿಯಲ್ಲ ಆದರೆ ಪ್ರಸ್ತುತ ಯಾಕುಬ್ ಎನ್ನುವ ಹೆಸರಿಗಾಗಿ ಒಬ್ಬ ನೇಣಿ ಗೇರುತ್ತಿದ್ದಾನೆ ಎನ್ನುವುದು ಸ್ಪಷ್ಟವಾದ ಚಿತ್ರಣ. ಅವನೊಬ್ಬ ಅಮಾಯಕ ಎಂದು ವಾದಿಸುವುದಕ್ಕಿಂತ ಜಾತಿ ಅಧಾರದಲ್ಲಿ ಬಲಿಯಾದ ವ್ಯಕ್ತಿಗಳಲ್ಲಿ ಈತನೂ ಒಬ್ಬ ಎಂದು ಬಣ್ಣಿಸಬಹುದು. ಹಲವಾರು ದೇಶಗಳಲ್ಲಿ ಗಲ್ಲು ಶಿಕ್ಷೆ ಎಂಬ ಪದ್ದತಿ ನಿರ್ಮೂಲನೆಯಾಗಿರುವಾಗ ಭಾರತದಲ್ಲಿ ಸಾಲು ಸಾಲಾಗಿ ಜಾತಿ ಅಧಾರದಲ್ಲಿ ನೇಣಿಗೇರುತ್ತಿದ್ದಾರೆ, ಸ್ವತಹ ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಜನ ಸಮೂಹ ಬೆಳೆದು ಬರುತ್ತಿರುವಾಗ ಅದನ್ನು ಸಮರ್ಥಿಸಲ್ಪಡುವ ಘಟನೆಗಳು ಮರುಕಳಿಸುತ್ತಿರುವುದು ವಿಷಾದನೀಯ.

1993 ರ ಮುಂಬೈ ಬ್ಲಾಸ್ಟ್ ನಲ್ಲಿ ಮಡಿದವರ ಬಗ್ಗೆ ಅನುಕಂಪ ಮತ್ತು ಅಗಾಧವಾದ ನೋವಿದೆ ಮತ್ತು ಆ ನೋವಿನ ಪ್ರತಿಫಲವೇ 21 ವರ್ಷಗಳ ಕಾಲ ಯಾಕೂಬ್ ಮೆಮೊನ್ ಜೈಲಿನ ಗೋಡೆಗಳ ಮದ್ಯೆ ಕಳೆದಿರುವುದು. ಬ್ರಷ್ಟರು, ಫ್ಯಾಸಿಸ್ಟರು ಈ ದೇಶವನ್ನು ಸಂಶಯ ಗಳ ಸುಳಿಯಲ್ಲಿ ಮುನ್ನಡೆಸುತ್ತಿರುವಾಗ ಯಾಕುಬ್ ನೇಣಿಗೇರುವುದು ವಿಚಿತ್ರವಲ್ಲ ಆದರೆ ಅನ್ಯಾಯದ ವಿರುದ್ದ ಸದಾ ದ್ವನಿ ಎತ್ತುವ ಬಹಳ ದೊಡ್ಡ ಬುದ್ದಿವಂತ ಸಮೂಹ ಇನ್ನೂ ಜೀವಂತವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.

ಯಾಕೂಬ್ ನ ಗಲ್ಲು ಶಿಕ್ಷೆ ಎತ್ತಿ ಹಿಡಿದಾಗ ಸಂಬ್ರಮಿಸಿದವರು ತಮ್ಮ ಮುಖದ ನಗುವನ್ನು ಅಗಾಗ್ಗೆ ಬದಲಾಯಿಸುತ್ತಿದಾರೆ, ಅವರು ಸನ್ನಿವೇಷಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ. ತಮ್ಮ ಬಳಿಯೇ ಶಾಂತಿ ಕೆಡಿಸುವ ಪಡೆಯನ್ನಿಟ್ಟುಕೊಂಡು ಶಾಂತಿ ದೂತರ ಪೋಸು ನೀಡುತ್ತಿದ್ದಾರೆ.

ಕಲ್ಪನೆಗಲನ್ನು ಚಿವಿಟಿ ಹಾಕಿರುವ ಮಾದ್ಯಮಗಳಲ್ಲಿ ಚಿಂತನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಕಸಿದು ಸಂಬಳ ಪಡೆಯುವ ವ್ಯಕ್ತಿಯ ಬರಹಿತ ಮಾತುಗಳು ಪ್ರಚಲಿತದಲ್ಲಿದೆ. ಮಾನವ ಹತ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸುವ ಮಾಧ್ಯಮಗಳು " Yakoob should be hang out"  ಅನ್ನುವ ಘೋಷಣೆಗಳನ್ನು ತನ ಗೋಡೆಯಲ್ಲಿ ಸದ್ಯ ಭದ್ರಪಡಿಸಿಕೊಂಡಿದೆ. ಭಾರತದ ಕಾನೂನು ವ್ಯವಸ್ಥೆ ಪುಸ್ತಕದಲ್ಲಿ ಬಹಳ ಸುಂದರವಾಗಿ ಅಚ್ಚೊತ್ತಲ್ಪಟ್ಟಿದೆ ಆದರೆ ಅದನ್ನು ಕಾರ್ಯಗತಗೊಳಿಸುವವರ
ಕೈಯಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿದೆ ಇಲ್ಲಿಯ ಜನ ಈ ಬೆಳವಣಿಗೆಗಳನ್ನು ಮೆಚ್ಚಿಕೊಂಡಿಲ್ಲ.

ಯಾಕೂಬ್ ಮೆಮೊನ್ ಗೆ ಗಲ್ಲು ಎಂಬುವುದು ಬರೀ ಗಲ್ಲಲ್ಲ ಬದಲಾಗಿ ಬದಲಾಗಳು ಮನಸ್ಸಿರುವ, ಬದಲಾಗಲು ಪ್ರೇರಣೆ ಹೊಂದುತ್ತಿರುವ ಪ್ರತಿಯೊಬ್ಬ ಕ್ರಿಮಿನಲ್ ಗೂ ಕೂಡಾ ಹಿಂಜರಿಕೆಯಾಗುವ ನ್ಯಾಯದ ನಿರಾಕರಣೆ.ಸಮೀಕ್ಷೆಗಳು ಜಾತಿ ಆದಾರದಲ್ಲಿ ಹೆಚ್ಚಿನ ಕ್ರಿಮಿನಲ್ ಗಳು ನೇಣು ಗಂಬ ಏರಿದ್ದಾರೆ ಎಂದು ಹೇಳುತ್ತಿರುವಾಗ ಅದನ್ನು ದ್ರಿಡೀಕರಿಸಲು ಯಾಕೂಬ್ ಸಜ್ಜಾಗಿ ನಿಂತಿದ್ದಾನೆ.