ಕಲ್ಲು ಬಿದ್ದಾಗ
ಒಂದಾಗುವ ಕನಸು!
ಶಾಂತಿ ಇರುವಾಗ
ಕಚ್ಚಾಡುವ ಮನಸು!
ಶತ್ರುವಿನ ಕಲ್ಲಿಗೆ
ಒಂದಾಗುವ ಯುವಶಕ್ತಿ,
ಕಚ್ಚಾಡುವ ಮನೋಸ್ಥಿತಿಗೆ
ಜೈ ಎನ್ನುವ ಅತಿಶಯೋಕ್ತಿ.
ಸಭೆ ಕರೆದವರು ಸಭೆಯಲ್ಲೇ
ಮಾತು ಮುಗಿಸಿದರು,
ನಂಬಿ ಕುಳಿತವರು ನಂಬಿ
ಮತ್ತೆ ಮತ್ತೆ ಕೆಡುತಿರುವವರು.
ನ್ಯಾಯದ ನಿರೀಕ್ಷೆಗಾಗಿ
ಪ್ರತಿರೋಧದ ಒಂದು ಗುಂಪು,
ನಾಡಿನೆಲ್ಲೆಡೆ ನಡೆಯುವ
ನಡೆಯಲ್ಲಿ ಸಾಮಾನ್ಯನ
ಕಣ್ಣು ಕೂಡಾ ಕೆಂಪು.
ಶಾಂತಿ ಪ್ರೀಯರ
ಅರ್ಥವಾಗದ ಮಾಮೂಲಿ ನಡೆ,
ತಲೆಕೆಡಿಸದ ಮೌನಿಗಳಿಂದ
ಎಲ್ಲೆಡೆ ಅನ್ಯಾಯದ ಪಡೆ.
ಬಾಂಗ್ ನಿಲ್ಲಿಸಲು ಕೆಲವರು,
ನುಗ್ಗಿ ಹೊಡೆಯಲು ಹಲವರು,
ಅಪಪ್ರಚಾರ ನಡೆಸಲು
ಹಾತೊರೆಯುವವರು,
! ಅಶಾಂತಿ! ಅಶಾಂತಿ!
ಭಗ್ನವಾದ ಸಮಾಜದಲ್ಲಿ
ನಿರೀಕ್ಷೆಯೊಂದೇ,
ಒಳಿತಿನ
ಕಡೆ ಸಾಗಬೇಕಾದ
ಯುವಕರ ಸ್ಪಷ್ಟ ದಾರಿ.

