ಇನ್ಷಾ ಖಲೀಲ್ ಭರತ್ ರಾಜ್ ಎನ್ನುವ ಯುವಕನೊಂದಿಗೆ ಓಡಿ ಹೋಗಿದ್ದಾಳೆ!! ಅದಕ್ಕಿಂತ ಹೆಚ್ಚಾಗಿ ಮುಸ್ಲಿಂ ಹೆಣ್ಣುಮಗಳೊಬ್ಬಳು ಹಿಂದು ಯುವಕನೊಂದಿಗೆ ಓಡಿ ಹೋಗಿದ್ದಾಳೆ, ರಕ್ತ ಕುದಿಸುವ ಯುವಕರಿಗೆ ಚರ್ಚಾ ವಸ್ತುವಾಗಿ ಇನ್ಷಾ ಓಡಿ ಹೋಗಿದ್ದಾಳೆ. ಇನ್ಷಾ ಎಂಬ ದಾರಿ ತಪ್ಪಿದ ಹುಡುಗಿ ಓಡಿ ಹೋಗಿದ್ದರೆ ಬಿಟ್ಟು ಬಿಡಬಹುದಿತ್ತು ಆದರೆ ಇನ್ಷಾಳನ್ನು ತಾಂತ್ರಿಕತೆಯ ಮೂಲಕ ಆತ್ಮ ಹತ್ಯೆ ಮಾಡಿಸಿ ಖುಷಿ ಪಟ್ಟ ಅಜ್ನಾನಿ ಯುವಕರಿಂದಾಗಿ ಇನ್ನಷ್ಟು ಇನ್ಷಾ ಓಡಿ ಹೋಗಿವುದನ್ನು ನಿಲ್ಲಿಸಬೇಕಾಗಿದೆ. ಆ ಮುಗ್ದ ಯುವತಿ ಧರ್ಮದ ಎಲ್ಲೆಗಳನ್ನು ಮೀರಿ ಹೋಗಿರುವುದಕ್ಕೆ ಅವಳದೇ ಆದ ಕಾರಣವಿರಬಹುದು ಮತ್ತು ಆ ಕಾರಣಕ್ಕಾಗಿ ಅವಳು ತೆಗೆದುಕೊಂಡ ನಿರ್ಧಾರ ತಪ್ಪಾಗಿರಬಹುದು ಆದರೆ ಕಾರಣ ಹುಡುಕುತ್ತಾ ಹೋದಷ್ಟು ದಾರಿ ತಪ್ಪುತ್ತಿರುವ ಯುವತಿಯರ ಮನೋಸ್ಥಿತಿ ಅರ್ಥವಾಗಬಹುದು ಮತ್ತು ಸಮುದಾಯದ ಯುವಕರ ತಪ್ಪುಗಳ ಪರಿಚಯವಾಗಬಹುದು.
ಇನ್ಷಾ ಇಸ್ಲಾಮಿನಿಂದ ಎಷ್ಟು ದೂರವಾಗಿದ್ದಾಳೆ ಎಂದರೆ ಅವಳು ಒಂದು ವೇಳೆ ಮರಳಿ ಬರಲು ಇಷ್ಟಪಟ್ಟರೆ ಅವಳಿಗೆ ಬರಳು ಅಸಾಧ್ಯವಾಗುವಷ್ಟು ಧರ್ಮದ ಗೋಡೆಗಳನ್ನೆಲ್ಲಾ ಅಧರ್ಮಿಗಳು (ಧರ್ಮದ ಒಳಗಡೆ ಇರುವವರು) ಮುಚ್ಚಿಹಾಕಿದ್ದಾರೆ ಮತ್ತು ಧರ್ಮ ನಾಯಕರು ಕಚ್ಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಪ್ರಶ್ನೆಗಳಿಗೆ ಇನ್ಷಾ ಮಾತ್ರ ಉತ್ತರಿಸಲು ಸಾಧ್ಯ. ಇನ್ಷಾಳ ಘಟನೆ ಓಡಿಸಿಕೊಂಡು ಹೋದವನ ಬಗ್ಗೆ ಮಾತ್ರ ಚರ್ಚಿಸುವ ಚರ್ಚೆಯಾಗುವುದಕ್ಕಿಂತ ಸಮುದಾಯದ ಇನ್ಷಾ ರ ಬಗ್ಗೆ ಚಿಂತಿಸುವ ಪ್ರಯತ್ನ ನಡೆಸಬೇಕಾಗಿದೆ. ಕಿಡಿಗೇಡಿಗಳು ಇನ್ಶಾಳ ಸಹೋದರರಾಗಿ ಯೋಚಿಸಬೇಕಾಗಿದೆ. ಸಮುದಾಯದ ಮಧ್ಯೆ ಅವಳು ಕಂಡು ಕೊಂಡ ದುರಂತಗಳ ಬಗ್ಗೆ ಯೋಚಿಸಬೇಕಾಗಿದೆ, ಈ ಘಟನೆ ಕಚ್ಚಾಡುವ ಮನಸ್ಸುಗಳನ್ನು ತಳಮಳಗೊಳಿಸಬೇಕಾಗಿದೆ, ಭಿನ್ನತೆಯ ಪಾಪವನ್ನು ಅರಿಯುವಂತೆ ಚಿಂತನೆಗೊಳಪಡಿಸಬೇಕಾಗಿದೆ, ಧಾರ್ಮಿಕ
ಶಿಕ್ಷಣದ ಕೊರತೆಯನ್ನು ನೀಗಿಸಬೇಕಾಗಿದೆ, ತಮ್ಮ ಮಕ್ಕಳ ನಡೆದಾಟದ ಬಗ್ಗೆ ಗಮನ ಹರಿಸುವಂತೆ ಲಕ್ಶ್ಯ ಹರಿಸಬೇಕಾಗಿದೆ, ದುಡ್ಡು ಸಂಪಾದಿಸುವ ಆತುರದ ಮಧ್ಯೆ ತನ್ನವರನ್ನು ಮರೆತವನಿಗೆ ಯೋಚಿಸುವ ಕಾಲವಾಗಬೇಕಾಗಿದೆ.
ಇನ್ಷಾ ಧರ್ಮದ ಎಲ್ಲೆಗಳನ್ನು ಮೀರಿ ಹೋಗಿರುವುದನ್ನು ಖಂಡಿಸಲೇಬೇಕು ಅದಕ್ಕೆ ಕಾರಣವಾದವರನ್ನು ಕಾನೂನಿನ ಚೌಕಾಟ್ಟಿನ ಮುಂದೆ ತಂದು ನಿಲ್ಲಿಸಲೇಬೇಕು ಆದರೆ ಇನ್ಷಾಳ ಹೆಸರಿನಲ್ಲಿ ಮತಾಂಧತೆಯನ್ನು ಮೆರೆಯಬಾರದು. ತಮ್ಮೊಳಗಿನ ವೈಶಮ್ಯಕ್ಕಾಗಿ ಒಂದು ಹುಡುಗಿಯ ಹೆಸರನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿಸಿ ಖುಶಿ ಪಡುವ ವಿಗ್ನ ಸಂತೋಷಿಗಳನ್ನು ಹುಡುಕಿ ಸದೆಬಡಿಯಬೇಕು. ಇನ್ಶಾಳ ದಾರಿ ಕಂಡುಕೊಳ್ಳುವ ಸಮುದಾಯದ ಯುವತಿಯರ ಸಮಸ್ಯಗಳನ್ನು ಸಮುದಾಯ ಒಟ್ಟಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಇನ್ಷಾಲಂತವರಿಗೆ ಬೇರೊಂದು ಧರ್ಮದ ಯುವಕರೊಂದಿಗೆ ಓಡಿ ಹೋಗಳು ಬೇರೆ ಬೇರೆ ಕಾರಣಗಳಿರಬಹುದು ಆದರೆ ಅಂತಹ ಮನೋಸ್ಥಿತಿಗಳನ್ನು ಬದಲಾಯಿಸಿ ಇಸ್ಲಾಮಿ ಕಲ್ಪನೆ ಮೂಡಿಸಳು ಸಮುದಾಯ ಒಗ್ಗಟ್ಟಿನ ಅಸ್ತ್ರವನ್ನು ಪ್ರಯೋಗಿಸಬೇಕು. ಒಂದು ಸ್ವಚ ಇಸ್ಲಾಮಿ ನಡೆಯನ್ನು ನಮ್ಮ ಯುವತಿಯರು ಮತ್ತು ಹೆಚ್ಚಾಗಿ ಯುವ ಸಮುದಾಯಕ್ಕೆ ಬಹಳ ಗಾಢವಾಗಿ ಅಭ್ಯಸಿಸಳು ಅವಕಾಸ ಕಲ್ಪಿಸಬೇಕು. ಧರ್ಮವನ್ನು ಸಂಕುಚಿತ ಸಂಕೋಲೆಗಳಿಂದ ಹೊರಗೆ ತಂದು ಸೃಷ್ಟಿಕರ್ತನ ಆದೇಶಗಳ ಕಲ್ಪನೆಗೆ ಒಗ್ಗಿಸಿಕೊಂಡಾಗ "ಲವ್ ಜಿಹಾದ್" ಎಂಬ ಕಟ್ಟು ಕತೆಯನ್ನು ಮಾತ್ರವಲ್ಲ ನಮ್ಮ ತಪ್ಪು ಕಲ್ಪನೆಗಳಿಂದಾಗಿ ಬೆಳೆದು ಬರುತ್ತಿರುವ "ಲವ್ ಕೇಸರಿ" ಎಂಬ ಮಾನಸಿಕ ಸಿದ್ದಾಂತಕ್ಕು ಕಡಿವಾಣ ಹಾಕಬಹುದಾಗಿದೆ.

No comments:
Post a Comment