ಧಾರ್ಮಿಕತೆಗೆ ತೊಡಕಾದ ಆರ್ಥಿಕ ವ್ಯವಸ್ಥೆ!!
ಮಾಲಿಕನಾದವನು ಕೆಲಸಗಾರನಿಗೆ ಒಳ್ಳೆಯ ಸಂಬಳ ನೀಡಿ ಆತನನ್ನು ಚೆನ್ನಾಗಿ ನೋಡಿಕೊಂಡರೆ ಕೆಲಸಗಾರನು ನಿಷ್ಟೆಯಿಂದ ಕೆಲಸ ಮಾಡಿ ಮಾಲಿಕನಿಗೆ ಅತಿ ಪ್ರೀಯವಾದ ವ್ಯಕ್ತಿಯಾಗಿ ಬಹು ಕಾಲದ ವರೆಗೆ ಆತನ ಬಳಿಯಲ್ಲಿಯೇ ಕೆಲಸ ಮಾಡಿಕೊಂಡಿರುತ್ತಾನೆ. ಆ ಮೂಲಕ ಮಾಲಕ ವಿಶ್ವಾಸ ಗಳಿಸಿಕೊಳ್ಳುತ್ತಾನೆ, ಒಂದು ವೇಳೆ ಕೆಲಸಗಾರನ ಆರ್ಥಿಕತೆಯ ಮೇಲೆ ಹೊಡೆತ ಬಿದ್ದರೆ ಆತ ಸಂಪಾದನೆಗಾಗಿ ಅಥವಾ ಆರ್ಥಿಕತೆಯ ಸುಧಾರಣೆಗಾಗಿ ಕೆಲವು ಅಡ್ಡ ದಾರಿಗಳನ್ನು ನೋಡಿಕೊಳ್ಳುತ್ತಾನೆ. ವಿಷಯವನ್ನು ಪ್ರಸ್ತಾಪಿಸುವುದಾದರೆ ಪ್ರಸ್ತುತ ಬಹಳ ಹೊಣೆಗಾರಿಕೆ ಮತ್ತು ಪ್ರಜ್ನಾವಂತಿಕೆಯಿಂದ ಕೆಲಸ ನಿರ್ವಹಿಸಬೇಕಾಗಿದ್ದ ಧಾರ್ಮಿಕ ವಿದ್ವಾಂಸರುಗಳು ಕೆಲವೊಮ್ಮೆ ಅಸಹಜ ತಪ್ಪುಗಳ ಹೊಣೆ ಹೊತ್ತುಕೊಳ್ಳಬೆಕಾಗುತ್ತದೆ, ಆರ್ಥಿಕತೆಯ ಪರಿಣಾಮ ಈ ತಪ್ಪುಗಳ ನಿರ್ಮಾರ್ತ್ ಎಂದು ಬಣ್ಣಿಸಿದರೆ ತಪ್ಪಾಗದು.
ಬಹಳ ನಿಷ್ಟೆಯಿಂದ ಕಾರ್ಯನಿರ್ವಹಿಸುವ ಧಾರ್ಮಿಕ ವಿದ್ವಾಂಸರಿಗೆ ಆರ್ಥಿಕತೆ ಒಂದು ಸಮಸ್ಯೆಯಾಗದು ಆದರೆ ವಾಸ್ತವಿಕತೆಯನ್ನು ಅರಿತು ಜಮಾತ್ ಕಮಿಟಿಗಳು ಸಮಸ್ಯೆಯ ಮೂಲ ವ್ಯವಸ್ಥೆಗೆ ಪರಿಹಾರ ಕಲ್ಪಿಸಿದರೆ ಒಂದು ಸುಭದ್ರ ಧಾರ್ಮಿಕತೆಯ ಅಡಿಪಾಯದಲ್ಲಿ ಬೆಳೆದ ತಲೆಮಾರನ್ನು ಬೆಳೆಸಬಹುದು. ಧಾರ್ಮಿಕ ವಿದ್ಯಾಭ್ಯಾಸ ನೀಡುವ ವ್ಯಕ್ತಿಯೊಬ್ಬರಿಗೆ ತನ್ನ ಆರ್ಥಿಕ ಪರಿಸ್ಥಿತಿಯ ಚಿಂತನೆ ದೊಡ್ಡ ಸಮಸ್ಯೆಯಾಗಿ ಅದನ್ನು ಮಕ್ಕಳೊಂದಿಗೆ ತೋರ್ಪಡಿಸುವ ಸ್ಥಿತಿ ಒದಗಿ ಬಂದಿದೆ, ಕೆಲವೊಮ್ಮೆ ಆರ್ಥಿಕತೆಯ ಪರಿಣಾಮದಿಂದ ದಾಂಪತ್ಯಕ್ಕೆ ಕಾಲಿಡದೇ ಇದ್ದಲ್ಲಿ ಅದು ಇನ್ನಷ್ಟು ಗಂಭೀರ ಸಮಸ್ಯೆಗಳಿಗೆ ನಾಂದಿಯಾಗಬಹುದು ಮತ್ತು ಇಂತಹ ಸಮಸ್ಯೆಗಳು ಮಕ್ಕಳು ಮತ್ತು ಹೆತ್ತವರ ಮಧ್ಯೆ ಚರ್ಚೆಯಾಗಿ ಪ್ರತಿಷ್ಟೆಯ ಕಾರಣದಿಂದ ಮನಸ್ಸಿನಲ್ಲಿ ಬಚ್ಚಿಡುವಂತೆ ಆಗಿರುವುದೇ ಹೆಚ್ಚು. ಅಲ್ಲಲ್ಲಿ ನಡೆಯುವ ಕೆಲವು ಗಂಭೀರ ಸಮಸ್ಯೆಗಳು ಲೋಕಲ್ ಸಮಸ್ಯೆ ಎಂದು ಪರಿಗಣಿಸಿ ಚರ್ಚೆಯಾಗದೆ ಉಳಿದಿದೆ. ಆದರೆ ಮುಂದೊಮ್ಮೆ ಇದು ಬೆಳೆದು ಬರುವ ತಲೆಮಾರಿನ ಮೇಲೆ ಬಹಳ ವ್ಯತಿರಿಕ್ತ ಪರಿಣಾಮವನ್ನು ಬಿರುತ್ತದೆ ಮತ್ತು ಬೀರುತ್ತಿದೆ.
ನ್ಯಾಯಯುತವಾದ ಗೌರವಧನ, ಸಂಬಳ ಮತ್ತು ಅವರ ಅರ್ಥಿಕತೆಯ ಬಗ್ಗೆ ಅರಿತು ಜೊತೆಗೂಡಿ ಸಮಸ್ಯೆಗೆ ಪರಿಹಾರ ಕಲ್ಪಿಸಿದರೆ ಅವರ ಒಲವನ್ನು ಹೆಚ್ಚಾಗಿಸಬಹುದು ಮತ್ತು ಇದು ಸಮಸ್ಯೆಯ ವಾಸ್ಥವಿಕತೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ ಅವರನ್ನೇ ಅಣಕಿಸುವಂತೆ ಮನುಷ್ಯ ನಿರ್ಮಿತ ಕೆಮರಾಗಳನ್ನು ಅಳವಡಿಸುವ ಪ್ರಮೆಯವೂ ಒದಗದು. 4000 ದಿಂದ 5000 ದ ವರೆಗೆ ದುಡಿದು ದೇವನಿಗೆ ತಲೆಬಾಗಿ ಜೀವನ ನಡೆಸುವ ಧಾರ್ಮಿಕ ವಿದ್ವಾಂಸರನ್ನು ಸಾಮಾನ್ಯರಾದ ನಾವು ಗೌರವಿಸಲೇಬೇಕು. ಧಾರ್ಮಿಕ ವಿದ್ವಾಂಸರ ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ಬಗ್ಗೆ ಬಲು ದೊಡ್ಡ ಚರ್ಚೆ ಅಸ್ತಿರಗೊಂಡಿರುವ ಸಮುದಾಯಕ್ಕೆ ಕಾಲಘಟ್ಟದ ಅಗತ್ಯ.
No comments:
Post a Comment