Monday, May 18, 2015

ಯಾರಿಗೂ ನೀಡದ ರಕ್ತ

ಮಡದಿಗೆ
ರಕ್ತ ಬೇಕೆಂದು
ಡಾಕ್ಟರ್ ಹೇಳಿದಾಗ
ರಕ್ತಕ್ಕಾಗಿ
ಇತರರಿಗೆ 
ಮೊರೆ ಇಟ್ಟ 
ಪತಿ
ಬೇರೊಬ್ಬ ರಕ್ತ
ಕೊಟ್ಟ ಮೇಲೆ
ತನ್ನಲ್ಲಿ ಯಾರಿಗೂ 
ನೀಡದ ರಕ್ತವಿದೆಯೆಂದು
ನೆನಪಿಸಿಕೊಂಡ

ಪಾಪ

ವಿರೋಧಿಸಲಿಕ್ಕಾಗಿಯೇ 
ಚುಚ್ಚಿ ಮಾತನಾಡುತ್ತಿದ್ದ 
ಒಬ್ಬಾತ 
ತನ್ನನ್ನು ತಾನೇ
ಪಾಪಗಳಿಂದ
ಚುಚ್ಚಿಸಿಕೊಳ್ಳುತ್ತಿದ್ದ.

ಒಗ್ಗಟ್ಟು ಜೀವಂತಿತವಾಗಿರಲಿ.

ಮಾರ್ಚ್ 13 ರಂದು ತೊಕ್ಕೊಟ್ಟಿನ ಖಾಸಗಿ ಶಾಲೆಯೊಂದರ ವಿಧ್ಯಾರ್ಥಿನಿ ಮೇಲೆ ಅದೇ ಶಾಲೆಯ ಬಸ್ ಡ್ರೈವರ್ ಲೈಂಗಿಕ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಕ್ರೋಶಕ್ಕೆ ಕಾರಣವಾಗಿತ್ತು ವಿವಿಧ ಸಂಘ ಸಂಶ್ಥೆ ಗಳು, ವಿಧ್ಯಾರ್ಥಿ ಸಂಘಟನೆಗಳು ಡೀಸಿ ಕಚೇರಿ ಮತ್ತು ಶಾಲಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತ್ತು ಹಲವು ಸಂಘ ಸಂಸ್ಥೆಗಳು ನಿರಂತರವಾಗಿ ಆಡಳಿತ ವರ್ಗಕ್ಕೆ ಪ್ರಕರಣದ ಗಂಭೀರತೆಯನ್ನು ಅರ್ಥೈಸುವ ಪ್ರಯತ್ನ ನಡೆಸುತ್ತಿತ್ತು. ಶಾಲಾ ಆಡಳಿತ ಮಂಡಲಿ ಆರೋಪಿಯನ್ನು ರಕ್ಷಿಸುವ ಪ್ರಯತ್ನ ನಡೆಸುತ್ತಿರುವುದು ವಿವಿಧ ಸಂಘ ಸಂಸ್ಥೆಗಳ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿತ್ತು. ವಿವಿಧ ಸಂಘಟನೆಗಳ ಒಗ್ಗಟ್ಟಿನ ಹೋರಾಟದ ಫಲವಾಗಿ ಪ್ರಕರಣ ನಡೆದು ತಿಂಗಳುಗಳು ಕಳೆದರು ಪ್ರಕರಣ ಜೀವಂತವಾಗಿತ್ತು. ಪೋಷಕರು ತಮ್ಮ ಮಕ್ಕಳ ಬಗ್ಗೆ ಅತೀವ ಕಾಳಜಿ ವಹಿಸಬೇಕಾದ ಬಗ್ಗೆ ಸಮಾಜದಲ್ಲಿ ಜಾಗೃತಿಯಾಯಿತು, ಜಿಲ್ಲೆಯ ಶಾಲಾ ಆಡಳಿತ ಮಂಡಳಿ ಶಿಶ್ತು ಕ್ರಮಗಳನ್ನು ಪಾಲಿಸುವ ಅಗತ್ಯವು ಬಂದೊದಗಿತು. ಸಂಘ ಸಂಸ್ಥೆಗಳು ಸಿ ಐ ಡಿ ತನಿಖೆಯಾಗಬೇಕೆಂದು ಒತ್ತಾಯಿಸದಿದ್ದರು ರಾಜ್ಯ ಸರಕಾರ ಇದನ್ನೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿ ಇದೀಗ ಸಿ ಐ ಡಿ ತನಿಖೆಗೆ ಒಪ್ಪಿಸಿದೆ. ಇದು ಎಲ್ಲಾ ನಾಗರಿಕರ, ಸಂಘ ಸಂಸ್ಥೆಗಳ ಒಗ್ಗಟ್ಟಿನ ಹೋರಾಟಕ್ಕೆ ಸಧ್ಯ ಸಂದ ಜಯ ಎನ್ನಬಹುದು. ಈ ಪ್ರಕರಣದಲ್ಲಿ ನ್ಯಾಯ ಒದಗಿಸಲು ಇನ್ನಷ್ಟು ಸುದೀರ್ಘ ಪಯಣಿಸಳಿರುವ ಕಾರಣ ಒಗ್ಗಟ್ಟು ಜೀವಂತಿತವಾಗಿರಲಿ.

Friday, May 1, 2015

ನ್ಯಾಯಾಲಯದ ಮೇಲೆ ನಂಬಿಕೆ ಇಡಬಹುದಾದಂತ ತೀರ್ಪುಗಳು.


ದೇಶದ ಹಲವು ಜೈಲುಗಳಲ್ಲಿ ಉಗ್ರಗಾಮಿಗಳು ಎನ್ನುವ ಹೆಸರಿನಲ್ಲಿ ಹಲವು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ ವಿಚಾರಣೆಗಳು ನಡೆಯುತ್ತಿದೆ ಹಲವು ಬಾರಿ ಸಾಕ್ಷ್ಯಾ ಧಾರಗಳ ಕೊರತೆ ಎಂದು ಹಲವು ಅಮಾಯಕ ಯುವಕರನ್ನು ಹೊರಬಿಡಲಾಗಿದೆ ಇನ್ನಷ್ಟು ಅಮಾಯಕ ಯುವಕರು ಜೈಲಿನಲ್ಲಿ ಬಂಧಿಯಾಗಿದ್ದಾರೆ. ರಾತ್ರೋರಾತ್ರಿ ಮನೆಗೆ ನುಗ್ಗಿ ಯುವಕರನ್ನು ಎಳೆದು ಕೊಂಡು ಹೋಗುವ ಕೆಲಸಗಳು ಅಗಾಗ ನಡೆಯುತ್ತಿರುತ್ತದೆ ಇದೆಲ್ಲದರ ಮಧ್ಯೆ ಕಾನೂನಿನ ಮೇಲೆ ನಂಬಿಕೆ ಇಡಬಹುದಾದಂತಹ ತಿರ್ಪುಗಳು ಹೊರಬೀಳುತ್ತಿರುತ್ತದೆ.
ಹುಬ್ಬಳ್ಳಿಯ 1ನೇ ಹೆಚ್ಚುವರಿ ಸೆಷನ್ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದ್ದು ಇದರಲ್ಲಿ 2008ರಲ್ಲಿ ಹುಬ್ಬಳ್ಳಿ ಮಾತ್ತು ರಾಜ್ಯದ ಇತರೆಡೆಗಳಿಂದ ಬಂಧಿಸಲ್ಪಟ್ಟಿದ್ದ 17ಮಂದಿ ಯುವಕರನ್ನು ಕೇಸಿನಿಂದ ಖುಲಾಸೆಗೊಳಿಸಲಾಗಿದೆ, ಇವರೆಲ್ಲರೂ ಸಿಮಿ ಸಂಘಟನೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಪಟ್ಟಿದ್ದರು ಮತ್ತು ವಿದ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದರು ಎನ್ನುವ ಆರೋಪ ಇತ್ತು, ಬಾಂಬ್ ಮತ್ತು ಡಿಟೋನೇಟರ್ ವಷಪಡಿಸಲಾಗಿತ್ತು. ಸುದೀರ್ಘವಾದ ತನಿಖೆಯಲ್ಲಿ ಸುಮಾರು 278 ರಷ್ಟು ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿತ್ತು, ನಾರ್ಕೋ ಎನಾಲಿಸಿಸ್ ನಂತಹ ಪರೀಕ್ಷೆಗಳನ್ನು ಕೂಡಾ ನಡೆಸಲಾಗಿತ್ತು ಕೊನೆಯಲ್ಲಿ ನ್ಯಾಯಾಲಯ ಸಾಕ್ಷಾಧಾರಗಳ ಕೊರತೆಯಿಂದ ಇವರನ್ನೆಲ್ಲ ಕೇಸಿನಿಂದ ಮುಕ್ತಗೊಳಿಸಿದೆ.
ನಿವೃತ್ತ ಡಿವೈಯೆಸ್ಪಿ ಒಬ್ಬರ ಅಭಿಪ್ರಾಯದಂತೆ ಸಾಕ್ಷಾಧಾರಗಳೆಲ್ಲ ಬಂಧಿತರ ವಿರುದ್ದವಾಗಿಯೇ ಇತ್ತು ಆದರೆ ಅದನ್ನು ನ್ಯಾಯಿಕರಿಸುವಲ್ಲಿ ಪ್ರೊಷಿಕ್ಯೂಶನ್ ವಿಫಲವಾಯಿತು ಮತ್ತು ನಾರ್ಕೋ ಎನಾಲಿಸಿಸ್ ಪರೀಕ್ಷೆಯಲ್ಲಿ ಇವರೆಲ್ಲ ಬಾಯಿ ಬಿಟ್ಟಿದ್ದರು ಆದರೂ ಹೊರಬಂದರೂ ಎಂದು ಬೇಸರ ವ್ಯಕ್ತಪಡಿಸುವಂತಹ ಮನೋಸ್ಥಿತಿ. ಎನೇ ಆಗಲಿ 17 ಅಮಾಯಕ ಯುವಕರು ಉಗ್ರ ಪಟ್ಟಿಯಿಂದ ವಿಮುಕ್ತಿ ಹೊಂದಳಿದ್ದಾರೆ ಇನ್ನಷ್ಟು ಅಮಾಯಕರು ಶೀಘ್ರವೇ ಹೊರಬರಲಿ. ಈ ಕೇಸಿಗೆ ಸಂಬಂಧಪಟ್ಟಂತೆ ರಿಯಾಜ್ ಭಟ್ಕಳ್, ಯಾಸೀನ್ ಭಟ್ಕಳ್, ಇಕ್ಬಾಳ್ ಭಟ್ಕಳ್ ರನ್ನು ವಿಚಾರಣೆಗೊಳಡಿಸಿಲ್ಲ ಇವರನ್ನು ಹೊರತು ಪಡಿಸಿ ಉಳಿದ 17 ಮಂದಿಯನ್ನು ಕೇಸಿನಿಂದ ಖುಲಾಸೆಗೊಳಿಸಲಾಗಿದೆ. ಇ ದೇಶದ ಕಾನೂನಿನ ಮೇಲೆ ನಂಬಿಕೆ ಇಡಬಹುದಾದಂತಹ ತೀರ್ಪುಗಳು ನ್ಯಾಯಲಯದಿಂದ ಹೊರಬೀಳುತ್ತಿರುವುದರಲ್ಲಿ ಸಂತೋಷವಿದೆ ಅದು ಕಪೋಲಕಲ್ಪಿತ ವರದಿ ಪ್ರಕಟಿಸುವ ಕೆಲ ಮಾಧ್ಯಮಗಳಿಗೂ ಅರ್ಥವಾಗಲಿ.