Friday, May 1, 2015

ನ್ಯಾಯಾಲಯದ ಮೇಲೆ ನಂಬಿಕೆ ಇಡಬಹುದಾದಂತ ತೀರ್ಪುಗಳು.


ದೇಶದ ಹಲವು ಜೈಲುಗಳಲ್ಲಿ ಉಗ್ರಗಾಮಿಗಳು ಎನ್ನುವ ಹೆಸರಿನಲ್ಲಿ ಹಲವು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ ವಿಚಾರಣೆಗಳು ನಡೆಯುತ್ತಿದೆ ಹಲವು ಬಾರಿ ಸಾಕ್ಷ್ಯಾ ಧಾರಗಳ ಕೊರತೆ ಎಂದು ಹಲವು ಅಮಾಯಕ ಯುವಕರನ್ನು ಹೊರಬಿಡಲಾಗಿದೆ ಇನ್ನಷ್ಟು ಅಮಾಯಕ ಯುವಕರು ಜೈಲಿನಲ್ಲಿ ಬಂಧಿಯಾಗಿದ್ದಾರೆ. ರಾತ್ರೋರಾತ್ರಿ ಮನೆಗೆ ನುಗ್ಗಿ ಯುವಕರನ್ನು ಎಳೆದು ಕೊಂಡು ಹೋಗುವ ಕೆಲಸಗಳು ಅಗಾಗ ನಡೆಯುತ್ತಿರುತ್ತದೆ ಇದೆಲ್ಲದರ ಮಧ್ಯೆ ಕಾನೂನಿನ ಮೇಲೆ ನಂಬಿಕೆ ಇಡಬಹುದಾದಂತಹ ತಿರ್ಪುಗಳು ಹೊರಬೀಳುತ್ತಿರುತ್ತದೆ.
ಹುಬ್ಬಳ್ಳಿಯ 1ನೇ ಹೆಚ್ಚುವರಿ ಸೆಷನ್ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದ್ದು ಇದರಲ್ಲಿ 2008ರಲ್ಲಿ ಹುಬ್ಬಳ್ಳಿ ಮಾತ್ತು ರಾಜ್ಯದ ಇತರೆಡೆಗಳಿಂದ ಬಂಧಿಸಲ್ಪಟ್ಟಿದ್ದ 17ಮಂದಿ ಯುವಕರನ್ನು ಕೇಸಿನಿಂದ ಖುಲಾಸೆಗೊಳಿಸಲಾಗಿದೆ, ಇವರೆಲ್ಲರೂ ಸಿಮಿ ಸಂಘಟನೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಪಟ್ಟಿದ್ದರು ಮತ್ತು ವಿದ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದರು ಎನ್ನುವ ಆರೋಪ ಇತ್ತು, ಬಾಂಬ್ ಮತ್ತು ಡಿಟೋನೇಟರ್ ವಷಪಡಿಸಲಾಗಿತ್ತು. ಸುದೀರ್ಘವಾದ ತನಿಖೆಯಲ್ಲಿ ಸುಮಾರು 278 ರಷ್ಟು ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿತ್ತು, ನಾರ್ಕೋ ಎನಾಲಿಸಿಸ್ ನಂತಹ ಪರೀಕ್ಷೆಗಳನ್ನು ಕೂಡಾ ನಡೆಸಲಾಗಿತ್ತು ಕೊನೆಯಲ್ಲಿ ನ್ಯಾಯಾಲಯ ಸಾಕ್ಷಾಧಾರಗಳ ಕೊರತೆಯಿಂದ ಇವರನ್ನೆಲ್ಲ ಕೇಸಿನಿಂದ ಮುಕ್ತಗೊಳಿಸಿದೆ.
ನಿವೃತ್ತ ಡಿವೈಯೆಸ್ಪಿ ಒಬ್ಬರ ಅಭಿಪ್ರಾಯದಂತೆ ಸಾಕ್ಷಾಧಾರಗಳೆಲ್ಲ ಬಂಧಿತರ ವಿರುದ್ದವಾಗಿಯೇ ಇತ್ತು ಆದರೆ ಅದನ್ನು ನ್ಯಾಯಿಕರಿಸುವಲ್ಲಿ ಪ್ರೊಷಿಕ್ಯೂಶನ್ ವಿಫಲವಾಯಿತು ಮತ್ತು ನಾರ್ಕೋ ಎನಾಲಿಸಿಸ್ ಪರೀಕ್ಷೆಯಲ್ಲಿ ಇವರೆಲ್ಲ ಬಾಯಿ ಬಿಟ್ಟಿದ್ದರು ಆದರೂ ಹೊರಬಂದರೂ ಎಂದು ಬೇಸರ ವ್ಯಕ್ತಪಡಿಸುವಂತಹ ಮನೋಸ್ಥಿತಿ. ಎನೇ ಆಗಲಿ 17 ಅಮಾಯಕ ಯುವಕರು ಉಗ್ರ ಪಟ್ಟಿಯಿಂದ ವಿಮುಕ್ತಿ ಹೊಂದಳಿದ್ದಾರೆ ಇನ್ನಷ್ಟು ಅಮಾಯಕರು ಶೀಘ್ರವೇ ಹೊರಬರಲಿ. ಈ ಕೇಸಿಗೆ ಸಂಬಂಧಪಟ್ಟಂತೆ ರಿಯಾಜ್ ಭಟ್ಕಳ್, ಯಾಸೀನ್ ಭಟ್ಕಳ್, ಇಕ್ಬಾಳ್ ಭಟ್ಕಳ್ ರನ್ನು ವಿಚಾರಣೆಗೊಳಡಿಸಿಲ್ಲ ಇವರನ್ನು ಹೊರತು ಪಡಿಸಿ ಉಳಿದ 17 ಮಂದಿಯನ್ನು ಕೇಸಿನಿಂದ ಖುಲಾಸೆಗೊಳಿಸಲಾಗಿದೆ. ಇ ದೇಶದ ಕಾನೂನಿನ ಮೇಲೆ ನಂಬಿಕೆ ಇಡಬಹುದಾದಂತಹ ತೀರ್ಪುಗಳು ನ್ಯಾಯಲಯದಿಂದ ಹೊರಬೀಳುತ್ತಿರುವುದರಲ್ಲಿ ಸಂತೋಷವಿದೆ ಅದು ಕಪೋಲಕಲ್ಪಿತ ವರದಿ ಪ್ರಕಟಿಸುವ ಕೆಲ ಮಾಧ್ಯಮಗಳಿಗೂ ಅರ್ಥವಾಗಲಿ.

No comments: