Tuesday, June 16, 2015

ಸಂತುಷ್ಟ - ಸಂಕಷ್ಟ

ಸರ್ಕಾರದ ಭರವಸೆ! 
ಹಾರ್ಟ್ ಸರ್ಜರಿಯಾ? 
ಬಿ. ಪಿ. ಎಲ್ ಕಾರ್ಡಾ? 
ಪಡೆದುಕೋ 
 ಉಚಿತ ಸೇವೆ.....  
ಬಡವನು  ಸಂತುಷ್ಟ.  

ಖಾಸಗಿ ಆಸ್ಪತ್ರೆಯ 
ಸರ್ಜರಿಯ ಡಾಕ್ಟರ್ 
ಗಂಬೀರತೆಯಿಂದ, 
ಸರಕಾರದ ವಸ್ತುಗಳು 
 ತುಕ್ಕು ಹಿಡಿದಿದೆ 
ಜಾಗ್ರತೆ !!
ನಮ್ಮದು ಒರಿಜಿನಲ್ 
 ...ಅದನ್ನೇ ಹಾಕಿ....  
ಕೌಂಟರ್ ನಲ್ಲಿ 
ಕಟ್ಟಿ ಬಾ.  
ಬಡವನಿಗೆ ಸಂಕಷ್ಟ.  

ವಿವಾದ


ವಿದೇಶಾಂಗ ಮಂತ್ರಿ 
ವಿದೇಶದಲ್ಲಿರುವವರಿಗೆ 
ಸಹಾಯ ಮಾಡಿ 
ವಿವಾದ,
ಪ್ರವಾಸ ಮಂತ್ರಿಯಾದ 
ಪ್ರಧಾನಿಯಿಂದ ದಿನಕ್ಕೊಂದು 
ವಿವಾದ,
ವಿದೇಶದ ಕಪ್ಪು ಹಣ ತರುತ್ತೇನೆಂದ 
ಭಾಷಣಗಳಿಂದ 
ಪದೇ ಪದೇ 
ವಿವಾದ,
ಮಂದಿರ ಎಂದು ಹೇಳಿ 
ಮಾಡಿರುವವರು 
ಬರೀ 
ವಿವಾದ,
ಹೌದು!!!
ಇದು ಸ್ವಚ್ಚ ಭಾರತದ 
ಕನಸು ಹೇಳಿಕೊಟ್ಟವರ 
ನಂಬಿ ಹಾಕಿದ ಮತಕ್ಕೆ 
ಸಿಕ್ಕಿದ ಅಚ್ಚೇ ದಿನ್.....

Monday, June 15, 2015

ಮಾನವೀಯತೆಯ ಗುಣ

ತಲವಾರಿನಿಂದ ಕೈ ಕಡಿದಾಗ
ಚಿಮ್ಮಿ ಹರಿದಿದ್ದು ರಕ್ತ,
ಕೈ ಜೋಡಿಸಲು ಬಾಟಲಿಯಿಂದ
ಸಿರಿಂಜಿನಲ್ಲಿ ಹರಿದದ್ದೂ ರಕ್ತ.

ಕೈ ಕಡಿದಾತನ
ಮಯ್ಯಲ್ಲಿ ಬರೀ ರಕ್ತದ ಕಣ,
ರಕ್ತ ನೀಡಿದಾತನ
ರಕ್ತದಲ್ಲಿ ಮಾನವೀಯತೆಯ ಗುಣ.

ಕೈ ಕಡಿಯುವವರು,
ರಕ್ತ ಹರಿಸುವವರು,
ರಕ್ತ ನೀಡುವ
ಮಾನವರಾಗಬೇಕಾಗಿದೆ. 

ಪ್ರೇರೇಪಣೆ

ಅವಳು 
ಓಡಿ ಹೋದಳು 
ಓಡಿ ಹೊದಳು 
ಎಂದು
ಬಾಯ್ಬಿರಿದುಕೊಂಡು 
ಇನ್ನಷ್ಟು 
ಮಂದಿಗೆ 
ಓಡಿ ಹೋಗಲು 
ಪ್ರೇರೇಪಣೆ ನೀಡದಿರಿ