Thursday, September 1, 2016

ಗಲ್ಫ್ ನ ಒಂದು ವರ್ಷದ ಅವಲೋಕನ ಮತ್ತು ತಂದೆ ಬೆವರಿಳಿಸಿದ ಮರುಭೂಮಿಯ ನೈಜ ಚಿತ್ರಣದ ಮೆಲುಕಿನೊಂದಿಗೆ.

ಗಲ್ಫ್! ಗಲ್ಫ್! ಗಲ್ಫ್!!! ಹೆಚ್ಚಿನವರು ಜೀವನದ ಪರ್ಯಾಯ ಭಾಗವಾಗಿ ಅಯ್ದುಕೊಂಡ ಸರಳ ಮಾರ್ಗ.

ಸಾಕಷ್ಟು ಸಮಯ ಗಲ್ಫ್ ಯಾತ್ರೆಯನ್ನು ತಿರಸ್ಕರಿಸಿ ಕೊನೆಗೊಮ್ಮೆ ಹೆಚ್ಚಿನವರು ಆಯ್ದುಕೊಂಡ ಅದೇ ಹಳೆಯ ದಾರಿಯಲ್ಲಿ ಸಾಗಿದೆ, ಆ ದಾರಿಯ ಪಯಣದಲ್ಲಿ  ಒಂದು ವರುಷ ದಾಟಿತು, ದಾರಿಯುದ್ದಕ್ಕು ನೋವಿದೆ ಎನ್ನುವುದಕ್ಕಿಂತ ಹೆಚ್ಚು ಹೆಚ್ಚಿನದೆಲ್ಲಾ ಕಳೆದುಕೊಂಡಿದ್ದೇನೆ ಎಂದು ಆಲೋಚಿಸಿದ್ದೆ ಹೆಚ್ಚು.

ಘಮಘಮಿಸುವ ಸೆಂಟ್, ಕಣ್ಣಿಗೊಂದು ಕನ್ನಡಕ, ಹೊಸ ಪದ್ದತಿಯ ಗಲ್ಫಿಗರನ್ನು ಕಂಡು ಬೆಳೆದಿದ್ದು ಮಾತ್ರ ಅಲ್ಲ ಹತ್ತನೇ ತರಗತಿಯಿಂದಲೇ ನಾನು ಕೂಡಾ ಗಲ್ಫಿಗೆ ಸಲ್ಲಬೇಕಾದವನು ಎನ್ನುವ ಕಲ್ಪನೆಯೊಂದಿಗೆ ಬೆಳೆದಿರುವುದು ಅದೇ ಕಾರಣ ಕಲಿಕೆಯುದ್ದಕ್ಕೂ ಪಡೆದುಕೊಂಡ ಮಾರ್ಕ್ಸ್ ಗಳು ಕೂಡಾ ಗಲ್ಫ್ ಗೆ ಸಲ್ಲುವುದಕ್ಕೆ ಮಾತ್ರ ಸಾಕೆನಿಸುವಂತಹದ್ದು, ಎಷ್ಟೇ ಸಮಜಾಯಿಸಿ ನೀಡಿದರೂ ಯುವತಲೆಮಾರುಗಳ ಗಲ್ಫ್ ಕನಸು ಜೀವನದ ಕೊನೆ ಘಳಿಗೆಗೆ ನೋವು ನೀಡುವಂತಹದ್ದು.

ಬಲಿಷ್ಟ ಉದಾಹರಣೆಯಾಗಿ ನನ್ನ ತಂದೆಯನ್ನೇ ಉದಾಹರಣೆಯಾಗಿ ನೀಡ ಬಯಸಿದೆ ಅವರಿಗೆ ಏನು ಇಷ್ಟ, ಯಾವುದು ಕಷ್ಟ, ಅವರೇನು ಹೆಚ್ಚಾಗಿ ಇಷ್ಟಪಡುತ್ತಾರೆ ಖಂಡಿತಾ ನಾನು ವಾಸ್ತವವಾಗಿ ಅತಿ ಹೆಚ್ಚು ತಿಳಿದವನಲ್ಲ ಕಾರಣ ಅದು ನನ್ನ ತಪ್ಪಲ್ಲ, ಅವರ ತಪ್ಪು ಕೂಡಾ ಅಲ್ಲ, ಅವರಂತು ಮರುಭೂಮಿಯ ಬಿಸಿಲಲ್ಲಿ ಬೆವರು ಸಹಿಸಿ ನಮ್ಮನ್ನು ಬೆಳೆಸಿದವರು ಹೆಚ್ಚೆಂದರೆ ವರುಷಕ್ಕೊಮ್ಮೆ ಅಪರೂಪಕ್ಕೆ ಅವರನ್ನು ಕಂಡು ಬೆಳೆದವನು ನಾನು ಸ್ವಲ್ಪ ಕಾಲವಷ್ಟೇ ಅವರ ಹತ್ತಿರದಲ್ಲಿದ್ದೆ ಮತ್ತೆ ನಾನು ದೂರವಾಗಿ ಅವರಿರುವ ನಾಡಿನಲ್ಲಿದ್ದೇನೆ ಮತ್ತು ಅವರಿಗಾಗಿ.

ಒಂದಂತು ಸತ್ಯ ಅವನಷ್ಟು ದುಡ್ಡು ಮಾಡಿದ ನೀನೇನು ಮಾಡಿದೆ ಎಂದು ಕೇಳುವ ಪ್ರತಿಯೊಬ್ಬ ಕೂಡಾ ಒಂದಲ್ಲ ಒಂದನ್ನು ಕಳೆದುಕೊಂಡಿದ್ದಾರೆ ಮತ್ತು ಮನುಷ್ಯ ಸ್ವಾಭಾವಿಕ ಭಾವುಕತೆಯನ್ನು ಅರ್ಥ ಮಾಡುವಲ್ಲಿ ಪ್ರತಿಯೊಬ್ಬರು ವಿಫಲರಾಗಿದ್ದಾರೆ, ಆಸ್ತಿ ಕೂಡಿಟ್ಟ ತಂದೆಯ ಹಿಂದೆ ಓಡಾಡುತ್ತಿರುವ ಮಕ್ಕಳು ಪಾಲು ಕೇಳುವ ಸಲುವಾಗಿ ಎಂದಾದರೆ ಅದು ಆ ತಂದೆಯ ದೌರ್ಭಾಗ್ಯ. ದುಡ್ಡು ಜೀವನದ ಮುಖ್ಯ ಅವಿಭಾಗ್ಯ ಅಂಗ ಅದಕ್ಕಾಗಿ ಎಲ್ಲರನ್ನು ಕಳೆದುಕೊಳ್ಳಬೇಕೆಂದಿಲ್ಲ. ನನ್ನ ಮಾತು ಎಲ್ಲಾ ಸಮಯದಲ್ಲಿ ವಾಸ್ತವವೆನಿಸಬೇಕೆಂದಿಲ್ಲ ಆದರೆ ಆ ನಿಟ್ಟಿನ ಪ್ರಯತ್ನ ಆಲೋಚನೆಗಳು ಅಗತ್ಯ.

ಸೌದಿ ಅರೇಬಿಯಾದ ಬದುಕಿನಲ್ಲಿ ನಾನಂತು ಹೆಚ್ಚು ಪ್ರೀತಿ, ವಾತ್ಸಲ್ಯ ಕುಟುಂಬಿಕರು ಮತ್ತು ಗೆಳೆಯರೊಂದಿಗೆ ಪಡೆದುಕೊಂಡಿದ್ದೇನೆ ನನ್ನವರನ್ನು ಅಗಲಿದ್ದೇನೆ ಎನ್ನುವ ದುಖ್ಹ ಬಿಟ್ಟರೆ ಬೇರೆ ನೋವಿದೆ ಎಂದರೆ ಅದು ತಪ್ಪಾಗುತ್ತದೆ, ಇಲ್ಲಿನ ಅನಿವಾಸಿಗಳು ಬಹಳ ಭಾವುಕ ಜೀವಿಗಳು ಪರಸ್ಪರ ಸ್ನೇಹ ಜೀವಿಗಳು, ನಗು ನಗುತ್ತಲೇ ಸ್ವಾಗತಿಸುವವರು.

ಊರಿನಲ್ಲಿ ಸಾಧಾರಣ ಸಂಬಳ ಪಡೆಯುತ್ತಿದ್ದೇನೆ ಎನ್ನುವ ಕಾರಣ ಮಾತ್ರ ನಾನಿಂದು ಅನಿವಾಸಿಯಾಗಳು ಕಾರಣವಾಯಿತು, ಊರಿನಲ್ಲಿ ನೂರಾರು ಹೊಸ ಬಳಗದ ಗೆಳೆಯರಿದ್ದರು ಇಂದು ಆ ಸ್ನೇಹ ಮುಂದುವರೆದಿದೆ ಹಾಗೆಯೇ ಪ್ರೋತ್ಸಾಹವಿರಲಿ.

ಗಲ್ಫ್ ಜೀವನ ಎಲ್ಲರಿಗು ಹಿಡಿಸಬೇಕೆಂದಿಲ್ಲ ಮತ್ತು ಹಿಡಿಸಿದವರೆಲ್ಲ ಇಲ್ಲೇ ನೆಲೆಸಿರಬೇಕು, ಹಿಡಿಸದವರು ಹೊರಟುಬಿಡಬೇಕು ಎನ್ನುವ ಪದ್ದತಿ ಕೂಡಾ ಜಾರಿಯಲ್ಲಿಲ್ಲ!. ಎಲ್ಲವು  ಕಾಲ ನಿರ್ಧರಿತ, ಪರಿಸ್ಥಿತಿ ಅವಲೋಕಿತ, ಮನುಷ್ಯನ ಮಾನಸಿಕ ಹಿತಚಿಂತನೆಗಿಂತ ಹಲವು ಗಂಟೆಗಳ ದುಡಿತವೇ ಹೆಚ್ಚು ತೂಕ, ಕೂಡಿಡುವ ಸಂಪತ್ತಿಗೆ ಪ್ರಶಂಶೆ. ಪ್ರೀತಿ, ವಾತ್ಸಲ್ಯ ನೀಡಬಯಸುವವರಿಂದ ಮಾತ್ರ ಪಡೆಯಬಹುದಷ್ಟೆ. ಇಲ್ಲಿನ ಅನಿವಾಸಿಗಳು ಕಷ್ಟಪಟ್ಟು ದುಡಿಯುವವರು ಮಾತ್ರವಲ್ಲ ತಿಂಗಳಾಗುವಾಗ ದುಡಿದ ಸಂಬಳ ಪಡೆಯಲು ಅದಕ್ಕಿಂತ ಹೆಚ್ಚು ಶ್ರಮ ಮತ್ತು ಬೆವರು ಇಳಿಸಬೇಕು ಎನ್ನುವುದು ಕೂಡಾ ಅಷ್ಟೇ ಸತ್ಯ.

ಸೌದಿ ಅರೇಬಿಯಾದ ತುರೈಫ್ ನಲ್ಲಿ ಹೊಸಬಳಗದ ಜೊತೆ ಕೆಲಸ ಮಾಡಿ ಹೊಸ ಅನುಭವಾಗಿದೆ, ಮೈ ಕೊರೆಯುವ ಚಳಿಯಲ್ಲು ಕೆಲಸ ಮಾಡಿದಾಗ ಕುಟುಂಬಿಕರ, ಗೆಳೆಯರ ಸಂಪರ್ಕ ಹುಮ್ಮಸ್ಸು ನೀಡಿತ್ತು. ಮಕ್ಕಾ, ಮದೀನ ಯಾತ್ರೆ ಜೀವನಕ್ಕೆ ಹೊಸ ಚೈತನ್ಯ ನೀಡಿದ್ದು ಸತ್ಯ, ಜೀವನದ ಅತ್ಯಂತ ದುಖ್ಹ ತಪ್ತ ದಿನಗಳ ನೆನಪು ಕೂಡಾ ಮಾಸಿಹೋಗಿದೆ, ಸಧ್ಯ ಕಡಲ ತೀರ ಜುಬೈಲ್ ನಲ್ಲಿ ಕೆಲಸ ನಾಳೆ ಎಲ್ಲಿ ಅರಿವಿಲ್ಲ.

ಗಲ್ಫ್ ನ ವಾಸ್ತವಿಕತೆ ಬದಲಾಗುತ್ತಿದೆ, ಹೊಸ ಪೋಲಿಸಿಗಳು ಅನಿವಾಸಿಗಳನ್ನು ಅತಂತ್ರವಾಗಿಸಿದೆ, ಯುವ ತಲೆಮಾರು ಹೊಸ ಜೀವನ ಪದ್ದತಿ ರೂಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ, ಬದಲಾವಣೆಯನ್ನು ಒಪ್ಪಿಕೊಂಡು ಮುನ್ನಡೆಯಬೇಕಾಗಿದೆ, ಅನಿವಾಸಿಯಾಗುವ ಕನಸು ಮನಸ್ಸಿನಿಂದ ದೂರವಿರಿಸಬೇಕಾಗಿದೆ, ಕಾಲಕ್ಕೆ ತಕ್ಕಂತೆ ಚಲಿಸುವ ಅಭ್ಯಾಸವಿಟ್ಟುಕೊಳ್ಳುವುದು ಒಳ್ಳೆಯ ಕ್ರಮ, "ಬದಲಾವಣೆ ಆಡು ಮೇಯಿಸಲು ಬಯಸುವಷ್ಟು ವೀಪರೀತವಾಗಬಾರದು ಹಾಗು ದುಡಿದವನ ಸಂಬಲ ನೀಡುವಲ್ಲಿ ಸತಾಯಿಸಿ ಮಹಲ್ಲು ಕಟ್ಟುವಷ್ಟು ನೀಚವಾಗಿರಬಾರದು".

ಬಹಳ ಮುಕ್ತವಾಗಿ ಹಂಚಿಕೊಂಡಿದ್ದೇನೆ ಓದುಗರೆಲ್ಲ ಒಪ್ಪಿಕೊಳ್ಳಬೇಕೆಂದಿಲ್ಲ, ತಂದೆ, ತಾಯಿ, ಹೆಂಡತಿ, ಮಕ್ಕಳು, ಕುಟುಂಬಿಕರು, ಸ್ನೇಹಿತರನ್ನು ದೂರವಿರಿಸಿ ಬದುಕು ಸವೆಸುವ ಪ್ರತಿಯೊಬ್ಬನ ದ್ವನಿ ಎಂದು ತಿಳಿದ್ದೇನೆ ನನ್ನ ಅನುಭವ. ಬದುಕಿನಲ್ಲಿ ಬದಲಾವಣೆಗಳು ನಡೆಯಲಿ ಎಂಬ ಆಶಯದೊಂದಿಗೆ...

No comments: