ರಕ್ತ ಸಿಕ್ತ ಭೂಮಿ ಗಾಝ
ಹೋರಾಟದ ಸೆಳೆಯಿರುವ ತೋಟ
ಇಸ್ರೇಲಿ ಪಡೆಗಳ ಅಟ್ಟಹಾಸ
ಮುದ್ದು ಕಂದಮ್ಮಗಳ ಬಲಿಯಾಟ.!
ಕೈ ಕಾಲು ಕಳೆದುಕೊಂಡವರ ಆಕ್ರಂದನ
ತಂದೆಯೆದುರಿಗೆ ತಲೆಯಿಲ್ಲದೆ ಪ್ರಾಣಬಿಟ್ಟ ಮಗು
ಮಗನ ಮಡಿಲಲ್ಲಿ ನಗುತ್ತಲೇ ಮರಣ ಹೊಂದಿದ ತಾಯಿ
ಇಸ್ರೇಲಿ ರಾಕೆಟ್ ಮಾಡಿದ ಹಿಂಸೆ ಭಯಾನಕ ಚಿತ್ರ ಹಿಂಸೆ
ಪ್ಯಾಲೆಸ್ತೀನ್ ಹೋರಾಟ ಇಂದು ನಿನ್ನೆಯದಲ್ಲ..
ಪುಟ್ಬಾಲಿನ ಹಿಂದೆ ಜಗತ್ತು ಬಿದ್ದು ಬಿಟ್ಟಿದೆಯಲ್ಲ,
ಅರಬ್ ರಾಷ್ಟ್ರಗಳು ಮೌನವಾಗಿದೆಯಲ್ಲ
ಮಾನವೀಯತೆ ಮರೇಚಿಕೆಯಾಗಿದೆಯಲ್ಲ..
ಅರಬ್ ದೇಶಗಳ ಪರಿಹಾರದಾಟ,
ದುಷ್ಟ ದೇಶಗಳ ರಾಕೆಟಿನ ಕೂಟ.
ಪ್ಯಾಲಸ್ತೀನಿನ ಮಕ್ಕಳ ಮೇಲೆ ರಕ್ತದಾಟ,
ದೇವನ ವಿದಿಯತ್ತ ಜಗತ್ತಿನ ನೋಟ.


No comments:
Post a Comment