ಹಲವು
ಕಟ್ಟಳೆಗಳನ್ನಿಟ್ಟು ನಾಸರ್ ಮದನಿಯವರನ್ನು ನ್ಯಾಯಾಲಯ ನ್ಯಾಯಬದ್ದವಾಗಿ ಜಾಮೀನು ನೀಡಿ
ಬಿಡುಗಡೆಗೊಳಿಸಿದೆ!! ದುರಾದೃಷ್ಟವಸಾತ್ ಕೆಲವು ಬ್ಲಾ ಬ್ಲಾ ನ್ಯೂಸ್ ಚಾನೆಲ್ ಗಳು
ಅದೆನೋ ಮಹಾಪಾಪ ಎಂದೆನಿಸುವಂತೆ ವರ್ತಿಸುತ್ತಿದೆ ಮತ್ತು ಗಂಟೆ ಗಟ್ಟಲೆ ಅದರ ಬಗ್ಗೆ
ಚರ್ಚಿಸಿ ಯಾರಿಗೂ ತಿಳಿಯದ ವಿಚಾರಗಳು ತಮಗೆ ಮಾತ್ರ ತಿಳಿದಿವೆ ಎಂದು ಬಿಂಬಿಸಿ "ಟಿ ಆರ್
ಪಿ" ಹೆಚ್ಚಿಸಿ ಕೊಲ್ಲುವ ಮಹದಾಸೆಯಲ್ಲಿದೆ, ಇದರ ಮದ್ಯೆ ಇಸ್ರೇಲಿನ ನೀಚ ಬುದ್ದಿಯನ್ನು
ಮರೆತಿದೆ, ಮುದ್ದು ಮಕ್ಕಳು ಅಮಾನುಷವಾಗಿ ಕೊಲ್ಲಲ್ಪಡುವ ದೃಶ್ಯಗಳು
ಇವರ ಕಣ್ಣಿಗೆ ಬೀಳಲೇ ಇಲ್ಲ, ಅದು ತಪ್ಪು ಎಂದೆನಿಸಲೇ ಇಲ್ಲ. ಇರಾಕ್ ನಲ್ಲಿ
ನಡೆಯುತ್ತಿರುವ ರಕ್ತಪಾತ ತಪ್ಪು ಎಂದು ತಿಳಿದ ಇವರಿಗೆ ಗಾಝಾದಲ್ಲಿ ಕ್ರೂರಿಗಳಾದ
ಇಸ್ರೇಲಿಗಳು ಹರಿಸಿದ ರಕ್ತ ಮಾನವ ರಕ್ತ ಎಂದು ಭಾಸವಾಗಳಿಲ್ಲ,ಉಹಾಪೋಹಗಳನ್ನು
ವೈಭವೀಕರಿಸುವ ಇಸ್ರೇಲಿ ಚೇಳಾಗಳಿವರು. ಇವರಿಗೆಲ್ಲ ಜನರಿಗೆ ಸತ್ಯ ತಲುಪಿಸುವ
ಹಂಬಲವಿಲ್ಲ, ಕೆಲವರು ಹಾಕುವ ಬಿಸ್ಕತ್ತು ಗಳನ್ನು ಹೆಕ್ಕಿ, ಸಾಧ್ಯವಾಗದಿದ್ದಲ್ಲಿ
ನೆಕ್ಕಿ ತಿನ್ನುವ ಕೊಟದವರು ಎನ್ನುವ ಮಟ್ಟಿಗೆ ಪತ್ರಿಕಾ ಧರ್ಮವನ್ನು ಮರೆತು
ಬಿಟ್ಟಿದ್ದಾರೆ.
ಬಿಸ್ಕತ್ತು ಹಾಕಿದವರಿಗೆ ವಿಶ್ವಾಸ ತೊರಿಸುವ ಭರಾಟೆಯಲ್ಲಿ ಮಾನವೀಯತೆ ಮರೆತ ಎಲ್ಲ ಮಾಧ್ಯಮಗಳಿಗೆ ಧಿಕ್ಕಾರ.
ಬಿಸ್ಕತ್ತು ಹಾಕಿದವರಿಗೆ ವಿಶ್ವಾಸ ತೊರಿಸುವ ಭರಾಟೆಯಲ್ಲಿ ಮಾನವೀಯತೆ ಮರೆತ ಎಲ್ಲ ಮಾಧ್ಯಮಗಳಿಗೆ ಧಿಕ್ಕಾರ.
No comments:
Post a Comment