ಅವನು ಜರೆದಾಗ ಇವನ ಉತ್ತರ,
ಇವನು ಉತ್ತರಿಸಿದಾಗ ಅವನು ತತ್ತರ.
ಸ್ವಾರ್ಥಿಗಳ ಮಧ್ಯೆ ಕಾದಾಟದ ಕದನ,
ಒಂದಾಷಯದ ಜನರೆಲ್ಲಾ ಅಲ್ಲಲ್ಲಿ ವಿರಸ.
ಲಯ ತಪ್ಪಿದ, ತಪ್ಪಿಸಿದ ಜನರ ನಡುವೆ,
ವೈಷಮ್ಯ ದ್ವೇಷಗಳೆಂಬ ಮಹಾ ಕಣಿವೆ.
ಕಣ್ಣೀರೊರೆಸಲು ಅಡ್ಡಗಾಲಾಯಿತು ನಮ್ಮ ಸ್ವಾರ್ಥ,
ಅಹಂಕಾರ ತೊರೆಯದ ನಮ್ಮ ಮನಸ್ಸೆಷ್ಟು ಕಟುಕ
No comments:
Post a Comment