"ಹಾಜಬ್ಬ ಹಸನಬ್ಬ" ಬೆತ್ತಲಾದ ಪ್ರಕರಣ, "ನೌಶಾದ್ ಖಾಸಿಮ್ಜಿ" ಹತ್ಯೆ ಮತ್ತು ಇಂತಹ ಹತ್ತು ಹಲವು ಕೊಲೆಗಳು, ದೌರ್ಜ್ಯನ್ಯಗಳು ಕರಾವಳಿ ಜಿಲ್ಲೆಯಲ್ಲಿ ನಡೆದಾಗ ಪ್ರಗತಿಪರರು, ಸಮುದಾಯದ ಸಂಘಟನೆಗಳು ಪ್ರತಿಭಟನೆ ನಡೆಸಿತ್ತು, ಪತ್ರಿಕಾ ಹೇಳಿಕೆಯು ಕೊಟ್ಟಿತ್ತು ಮತ್ತು ಆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಡೆಯುವ ಕಟ್ಟ ಕಡೆಯ ಕೊಲೆ ಇದು, ಇನ್ನೆಂದು ಅಮಾಯಕರ ಕೊಲೆ ನಡೆಯದು ನಾವು ಎಚ್ಚೆತ್ತುಕೊಂಡಿದ್ದೇವೆ ಎಂದು ಬೊಬ್ಬೆ ಇಟ್ಟಿದ್ದೆವು, ಪ್ರತಿಭಟನೆ, ಘೋಷನೆಗಳನ್ನು ಕೂಗಿದ್ದೆವು, ಸರಕಾರಗಳು "CID" ತನಿಖೆ ಎಂದಾಗ "CBI" ತನಿಖೆ ನಡೆಸಬೇಕು ಎಂದು ಬೇಡಿಕೆ ಇಟ್ಟು ಕೆಲವು ದಿನ ಪ್ರತಿಭಟನೆ ನಡೆಸಿದೆವು, ಅಂದು ಕೆಲವು ದಿನ ಕಚ್ಚಾಟ ಮರೆತು ಒಂದಾಗಿಯೇ ಇದ್ದೆವು. ದಿನ ಕಳೆದಂತೆ ಪ್ರಕರಣ ಹಳೆಯದಾಯಿತು, ಎಲ್ಲರೂ ಮರೆತು ಬಿಟ್ಟರು, ಎಲ್ಲವನ್ನು ಮರೆತು ಅದೇ ಹಳೆಯ ಕಚ್ಚಾಟದಲ್ಲಿ, ಕೆಸೆರೆರೆಚಾಟದಲ್ಲಿ ತೊಡಗಿಕೊಂಡಿದ್ದೆವು.
ಈ ಹಿಂದೆ ನಡೆದ ಕೊಲೆಯೇ ಅಂತಿಮ ಕೊಲೆ ಎಂದು ನಂಬಿದ್ದವರಿಗೆ ಮುಂಜಾನೆಯ ಹೊತ್ತಿಗೆ ಆಘಾತದ ವಿಷಯವೊಂದು ಕಿವಿಗೆ ಬಿತ್ತು ಈ ಹಿಂದೆ ನಡೆದ ಎಲ್ಲ ಕೊಲೆಗಳಿಗಿಂತ ಭೀಕರವಾದ ಕೊಲೆ, ಬಜರಂಗಿ ಪ್ರಾಯೋಜಿತ "ANF" ನ ಅಮಾನವೀಯ ಕೃತ್ಯಕ್ಕೆ "ಕಬೀರ್" ಎನ್ನುವ ಮುಗ್ದ ಯುವಕ ತನ್ನ ಎದೆಯಲ್ಲಿ ಗುಂಡು ನಾಟಿಕೊಂಡು ಜಗತ್ತಿಗೆ ಹಲವು ಪ್ರಶ್ನೆಗಳನ್ನು ಬಿಟ್ಟು ಇಹಲೋಕ ತ್ಯಜಿಸಿದ್ದ. ವಾಹನ ನಿಲ್ಲಿಸಿದೆವು, ನಿಲ್ಲಿಸಲಿಲ್ಲ ಆ ಕೂಡಲೇ ನಾವು ನಮ್ಮ ತುಕ್ಕು ಹಿಡಿದ ಬಂದೂಕಿನಿಂದ ಹಾರಿಸಿದ ಗುಂಡು ಅವನ ಎದೆ ಸೀಳಿತು ಎಂದು "ANF" ನ ಅಧಿಕಾರಿಗಳು ಮತ್ತು ಪೋಲಿಸರಿಂದ ಹೇಳಿಕೆ ಕೂಡ ಬಂತು. ಘಟನೆಯ ಸ್ಥಳದಿಂದ ತಪ್ಪಿಸಿಕೊಂಡು ಬಂದು ಶಾಸಕರಲ್ಲಿ ನಡೆದ ಘಟನೆಯನ್ನು ವಿವರಿಸಿದವರು ಹೇಳಿದ ವಿವರೆಣೆಗು "ANF" ಪೊಲೀಸರು ಹೇಳಿದ ಹೇಳಿಕೆಗೆ ಯಾವುದೇ ಹೋಲಿಕೆ ಇರಲಿಲ್ಲ, ಬಜರಂಗಿ ಪ್ರಾಯೋಜಕತ್ವದ ಗುಂಡಾಗಳಿಗೆ ಸತ್ಯ ಹೇಳಲು ಗೊತ್ತಿಲ್ಲ ಬಿಡಿ.

ಅಷ್ಟೊತ್ತಿಗೆ ಜಿಲ್ಲೆಯ ಪ್ರಗತಿಪರರಿಂದ, ಸಮುದಾಯದ ನಾಯಕರಿಂದ, ರಾಜಕೀಯ ನೇತಾರರಿಂದ ಆಕ್ರೋಶದ ಮಾತುಗಳು ಕೇಳಿ ಬಂದವು, ಕೆಲವರು ಸಾವಿರಾರು ಮಂದಿಯನ್ನು ಸೇರಿಸಿ ಪ್ರತಿಭಟನೆಯಲ್ಲಿ ತೊಡಗಿದರೆ ಇನ್ನು ಹಲವರು ನೂರಾರು ಜನರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸಿದರು, ಇನ್ನು ಕೆಲವರು ಅತಿ ವೇಗವಾಗಿ, ಹಲವರು ತಡವಾಗಿ ಪತ್ರಿಕಗೋಷ್ಟಿ ನಡೆಸಿದರು, ಮತ್ತು ಕೆಲವರು ತಮ್ಮ ಮನವಿಯನ್ನು ಸಲ್ಲಿಸಿ "ಕಬೀರ್" ನ ಕೊಲೆಯನ್ನು ಖಂಡಿಸಿದರು. ಒಟ್ಟಿನಲ್ಲಿ ಕಚ್ಚಾಟದಲ್ಲಿ, ಕೆಸರೆರೆಚಾಟದಲ್ಲಿ ತೊಡಗಿದವರೆಲ್ಲ "ಕಬೀರ್" ನ ಕೊಲೆ ಪ್ರಜಾಪ್ರಭುತ್ವದ ಕೊಲೆ ಎಂದು ಒಪ್ಪಿಕೊಂಡರು. ಎಲ್ಲರೂ "ANF" ನಡೆಯನ್ನು ವಿರೋಧಿಸಿದರು.
"DC" ಕಚೇರಿಯ ಮುಂದೆ ಹಲವು ಪತಾಕೆಗಳು ರಾರಾಜಿಸಿದವು, ಘೋಷನೆಗಳು ಮೊಳಗಿದವು ಆದರೆ "ಕಬೀರ್" ಮತ್ತು ಆತನ ಕುಟುಂಬ ಅನುಭವಿಸಿದ ಕಷ್ಟ ಇನ್ನು ಯಾರಿಗೂ ಬರಬಾರದು ಎನ್ನುವ ಸ್ಪಸ್ಟ ನಿರ್ದಾರ ಸಮುದಾಯದಿಂದ ಬರಲಿಲ್ಲ, ಈ ಪ್ರತಿಭಟನೆ ನಡೆಸಿದವರಿಗೆ, ಪತಾಕೆ ಹಿಡಿದವರಿಗೆ, ಘೋಷಣೆ ಕೂಗಿದವರಿಗೆ, ಪತ್ರಿಕಾಘೋಸ್ಟಿ ಕರೆದವರಿಗೆ, ಮನವಿ ಸಲ್ಲಿಸಿದವರಿಗೆ ಇದು ನಮ್ಮ ನಮ್ಮ ಬಲಪ್ರದರ್ಶನದ, ನಮ್ಮ ಅಸ್ತಿತ್ವ ತೋರಿಸುವ ಸಮಯವಲ್ಲ, ಇದು ನಾವೆಲ್ಲಾ ಒಟ್ಟಾಗಿ ಮಾಡಬೇಕಾದ ಹೋರಾಟ, ಇದು ಸಂಘಟನಾ ಸಮಸ್ಯೆಯಲ್ಲ ಬದಲಾಗಿ ನಮ್ಮ ಸಮುದಯಾದ ಸಮಸ್ಯೆ,ಇನ್ನಸ್ಟು ಕಬೀರ್ ಗಳು ಮರಣವನ್ನಪ್ಪಲು ದಾರಿ ಮಾಡಿಕೊಡದಿರೋಣ, ಇನ್ನಾದರೂ ಒಂದಾಗಿ ಹೋರಾಡೋಣ ಎಂದು ಯಾರಿಗೂ ಅನ್ನಿಸಲಿಲ್ಲ, ಅದರ ಅಗತ್ಯ ಯಾರಿಗೂ ಇಲ್ಲ, ಹಾಗೆ ಮಾಡಿದಲ್ಲಿ ತಮ್ಮ ಪತಾಕೆಗಳಿಗೆ ಅಲ್ಲಿ ಜಾಗವಿರದು ಎನ್ನುವ ಭಯವೋ ಏನೋ??
ಈ ಹಿಂದೆಯೂ ಈ ಕೊಲೆ ಜಿಲ್ಲೆಯ ಕಟ್ಟ ಕಡೆಯ ಕೊಲೆ ಎಂದು ಹೇಳಿದಾಗ ಕೂಡಾ ಸಿಳ್ಳೆ ಹೊಡೆದಿದ್ದೇವೆ, ಚಪ್ಪಾಳೆ ತಟ್ಟಿದ್ದೇವೆ, ಜೈಕಾರ ಕೂಗಿದ್ದೇವೆ ಅದರೂ ಅದು ಮುಂದುವರಿಯುತ್ತಲೇ ಇದೆ, "ಕಬೀರ್" ನ ವಿಷಯದಲ್ಲೂ ಕೂಡಾ ಹಾಗೆ ಅದು ಸಿಳ್ಳೆಗೆ ಮತ್ತು ಚಪ್ಪಾಳೆಗೆ ಮಾತ್ರ ಸೀಮಿತವಾಗಬಹುದು, ಎಲ್ಲರೂ ಪ್ರತಿಭಟನೆ ನಡೆಸಿದರು, ಹೇಳಿಕೆ ಕೊಟ್ಟರು ಮತ್ತು ತಮ್ಮ ಪಾಡಿಗೆ ತಾವು ಹೊರಟು ಹೋದರು ಇನ್ನು ಇವರೆಲ್ಲ ಬರುವುದು ಇನ್ನೊಂದು "ಕಬೀರ್" ಕೊಲೆಯಾದ ನಂತರ, ಪ್ರಜಾಪ್ರಭುತ್ವದ ಕೊಲೆಯನ್ನು ನಾವು ಒಂದಾಗಿ ಪ್ರತಿಭಟಿಸೋಣ ಎಂದು ಯಾರೂ ಸಿದ್ದರಿಲ್ಲ, ಏಕೆಂದರೆ ಅವನನ್ನು ಕಂಡರೆ ಇವನಿಗೆ ಆಗುವುದಿಲ್ಲ, ಇವನನ್ನು ಕಂಡರೆ ಅವನಿಗೆ ಆಗುವುದಿಲ್ಲ, ಅವನ ಜೊತೆ ಇವನು ವೇದಿಕೆ ಹಂಚುವುದಿಲ್ಲ, ಇವನ ಜೊತೆ ಅವನು ವೇದಿಕೆ ಹಂಚುವುದಿಲ್ಲ ಇದು ಸಮಸ್ಯೆ, ಈ ಸಮಸ್ಯೆಯಿಂದ ಯಾವತ್ತಿನವರೆಗೆ ಹೊರಗೆ ಬರುವುದಿಲ್ಲವೋ ಅಲ್ಲಿಯವರಗೆ ಇಂತಹ "ಕಬೀರ್" ಗಳು ಕೊಲೆಯಾಗುತ್ತಲೇ ಇರುತ್ತಾರೆ ಮತ್ತು "ಕಬೀರ್" ನ ಕೊಲೆ ಈ ಜಿಲ್ಲೆಯ ಕೊನೆಯ ಕೊಲೆ ಕೂಡಾ ಅಲ್ಲ.
ಸತ್ಯವಾಗಿಯೂ ಈ ಸಮುದಾಯಕ್ಕೆ ಐಕ್ಯತೆಯ ಅಗತ್ಯವಿದೆ "ಕಬೀರ್" ನ ಕೊಲೆ ನಿಜವಾಗಿಯೂ ಕೊನೆಯ ಕೊಲೆ ಆಗಬೇಕೆಂದಾದಲ್ಲಿ ಎಲ್ಲರೂ ಒಂದಾಗಬೇಕು, ಒಟ್ಟಿಗೆ ಕುಳಿತು ಚರ್ಚಿಸಿ ಸರಕಾರದ ಮುಂದೆ ಬೇಡಿಕೆ ಇಡಬೇಕು ಆ ಮೂಲಕ ಸರಕಾರಕ್ಕೂ ಕೂಡ ನಡುಕ ಉಂಟಾಗಬೇಕು, ಮುಂದೆ ಅಮಾನವೀಯವಾಗಿ ಕೊಲೆ ಮಾಡುವ ಪುಂಡರಿಗೆ ಸಹಾಯಕ್ಕೆನಿಲ್ಲಲಿಕ್ಕೆ ಯಾರೂ ಕೂಡ ಇರಬಾರಾದು ಈ ಸಮುದಾಯದ ಐಕ್ಯತೆಗಾಗಿ ಸಮುದಾಯ ಒಂದೆಡೆ ಸೇರಬೇಕು, ಸಮುದಾಯದ ಐಕ್ಯತಾ ವೇದಿಕೆ ನಿರ್ಮಾಣವಾಗಬೇಕು, ಈ ಮುಂಚೆ ಚಿಂತಕರು ಚಿಂತಿಸಿ ಸ್ಥಾಪಿಸಿದ್ದ ಸಮುದಾಯದ ವೇದಿಕೆಗಳು ದುರಾದ್ರುಸ್ಟವಸಾತ್ ಕೇವಲ ಕೆಲವು ಮುಖಗಳಿಗೆ ಮಾತ್ರ ಸೀಮಿತವಾಗಿದೆ, ಅದು ಕೆಲವರ ಎಜೆಂಟರಂತೆ ವರ್ತಿಸುತ್ತದೆ, ಮತ್ತು ಕೆಲವರ ಪೊಲೊವೆರ್ಸ್ ಗಳು ಮಾತ್ರ ಅದರಲ್ಲಿ ಸೇರಿಕೊಂಡಿದ್ದಾರೆ. ಆದ್ದರಿಂದ ಅದು ಸಮುದಾಯಕ್ಕೆ ಮಹತ್ವದ ಲಾಭ ತಂದುಕೊಡಲಿಲ್ಲ, ಎಲ್ಲ ಸಿದ್ದಾಂತಗಳಿರುವ ಸಮುದಾಯದ ನಾಯಕರು ಸೇರಿಕೊಂಡು ಐಕ್ಯತ ವೇದಿಕೆ ಅಥವಾ ಅಂತಹ ಒಕ್ಕೂಟ ಸ್ಥಾಪಿಸಬೇಕು, ಅದು "ಕಬೀರ್" ನ ಕೊಲೆಯ ಹಿನ್ನಲೆಯ ಮೂಲಕವಾದರೂ ಆರಂಭವಾಗಬೇಕು, ಇಷ್ಟರವರೆಗೆ ಪಾಠ ಕಲಿಯದ ಸಮುದಾಯ "ಕಬೀರ್" ಎದೆಗೆ ಗುಂಡು ಏರಿಸಿಕೊಂಡು ಇಹಲೋಕ ತ್ಯಜಿಸಿದ್ದನ್ನು ನೆನಪಿಸಿಕೊಂಡಾದರು ಒಂದಾಗಬೇಕು.
ಇದುವರೆಗೆ ಒಂದೇ ಕಡೆ ಕುಳಿತುಕೊಳ್ಳದವರು, ಕುಳಿತುಕೊಂಡವರು, ಇಷ್ಟವಿದ್ದರು, ಇಷ್ಟವಿಲ್ಲದಿದ್ದರು ಎಲ್ಲ ಇಷ್ಟ, ಕಷ್ಟಗಳನ್ನು ಬದಿಗಿಟ್ಟು "ಕಬೀರ್" ಗಾಗಿಯಾದರೂ ಒಂದಾಗಬೇಕು, ಇನ್ನಸ್ಟು "ಕಬೀರ್" ಮಾರ್ಗದ ಮಧ್ಯೆ ಎದೆಗೆ ಗುಂಡು ನಾಟಿಕೊಂಡು ಸಾಯುವುದು, ತಲಾವಾರು ಏಟಿನಿಂದ ಹತ್ಯೆಗೊಳಗಾಗುವುದು, ಅನಾಥವಾಗಿ ಹೆಣವಾಗುವದನ್ನು ತಡೆಯಲು ಎಲ್ಲರೂ ಮನಸ್ಸು ಮಾಡಬೇಕು, ಎಲ್ಲರೂ ಒಗ್ಗಟ್ಟಾಗಿ ತೀರ್ಮಾನಿಸಿ "CBI" ತನಿಕೆ ಬೇಕೋ, ಪರಿಹಾರ ಹೆಚ್ಚಿಸಬೇಕೋ, ಪೋಲೀಸರ ವರ್ಗಾವಣೆ ಆಗಬೇಕೋ, ಇನ್ನು ಮುಂದೆ ಈ ರೀತಿ ನಡೆಯದಂತೆ ಮಾಡಲು ಏನು ಮಾಡಬೇಕು ಎಂದು ತೀರ್ಮಾನಿಸಬೇಕು. ಆ ಮೂಲಕ ಕೊಲೆ ಪಾತಕರಿಗೆ ನಿಮ್ಮ ಸಮಯ ಮುಗಿದು ಹೋಗಿದೆ "ಕಬೀರ್" ನಮ್ಮನ್ನು ಎಚ್ಚರಿಸಿದ್ದಾನೆ ಇನ್ನು "ಕಬೀರ್" ರನ್ನು ಅನ್ಯಾಯವಾಗಿ ಕೊಲ್ಲಲು ನಿಮಗೆ ಸಾದ್ಯವಿಲ್ಲ ಎನ್ನುವ ಸ್ಪಸ್ಟ ಸಂದೇಶ ಸಮುದಾಯ ಒಟ್ಟಾಗಿ ಸೇರಿ ಕೊಲೆಪಾತಕರಿಗೆ ರವಾನಿಸಬೇಕು.

ಐಕ್ಯತಾ ವೇದಿಕೆ ಅಥವಾ ಅಂತಹ ಎಲ್ಲರೂ ಸೇರಿದ ಒಂದು ವೇದಿಕೆಯಿಯಿಂದ ಸ್ಪಸ್ಟ ಸಂದೇಶ ಹೊರಬೀಳಬೇಕು ಆ ಮೂಲಕ "ಕಬೀರ್" ಮತ್ತು ಈ ಮುಂಚೆ ಅನ್ಯಾಯವಾಗಿ ಕೊಲ್ಲಲ್ಪಟ್ಟವರಿಗೆ, ಮರ್ಧನಕ್ಕೊಳಗಾದವರಿಗೆ ನ್ಯಾಯ ಸಿಗಲಿ ಅವರಿಗೆ ನ್ಯಾಯ ಕೊಡಿಸುವುದರಲ್ಲಿ ನಮ್ಮ ಪಾತ್ರ ಬಹಳ ಮುಖ್ಯ, ಇನ್ನೂ ನಾವು ಒಂದಾಗದಿದ್ದಲ್ಲಿ "ಕಬೀರ್" ನನ್ನು ಕೊಂದವರು ಅಟ್ಟಹಾಸ ಮುಂದುವರೆಸುತ್ತಾರೆ, ಅವರಿಗೆ ನಮ್ಮ ಕಚ್ಚಾಟ, ಒಳಜಗಳ ಕಂಡು ದೈರ್ಯ ಹೆಚ್ಚುತದೆಯೇ ಹೊರತು ಕಡಿಮೆ ಆಗುವುದಿಲ್ಲ.
ಕಟ್ಟ ಕಡೆಯ ಮಾತು ಒಂದು ವೇಳೆ ಸಮುದಾಯಕ್ಕೆ ಇನ್ನು ಕೂಡಾ ತಮ್ಮ ಕಚ್ಚಾಟವನ್ನು ಬಿಟ್ಟು ಒಂದಾಗಲು ಸಾದ್ಯವಿಲ್ಲ ಎಂದಾದಲ್ಲಿ, ಅವನ ಜೊತೆ, ಇವನ ಜೊತೆ ಕುಳಿತುಕೊಳ್ಳಲು ಮನಸ್ಸು ತಯಾರಿಲ್ಲ ಎಂದಾದಲ್ಲಿ, "ಕಬೀರ್" ಗಿಂತ ನಮ್ಮ ಸ್ವಂತ ವೇದಿಕೆ ನಮಗೆ ಮುಖ್ಯ ಎಂದಾದಲ್ಲಿ, ಇನ್ನೂ ನಾವು ಪಾಠ ಕಲಿಯಲಿಲ್ಲ ಎಂದಾದಲ್ಲಿ, ನಮ್ಮ ಅದೇ ಸ್ವಂತ ವೇದಿಕೆಯಿಂದ ಹೇಳಬೇಕು "ಕಬೀರ್", "ಕಬೀರ್", "ಕಬೀರ್" ಕ್ಷಮಿಸಿ ಬಿಡು!! ನಿನಗೆ ನ್ಯಾಯ ಕೊಡಿಸುವುದಕ್ಕಿಂತ ನಮ್ಮ ಸಂಘಟನೆಗಳ ಬಲಪ್ರದರ್ಶನ ಮತ್ತು ಕಾಚ್ಚಾಟವೆ ನಮಗೆ ಮುಖ್ಯ !! ಬಹಿರಂಗವಾಗಿ ಘೋಷಿಸುವ ಮೂಲಕವಾದರೂ "ಕಬೀರ್" ಮತ್ತು ಕಣ್ಣೀರಿನಿಂದ ತುಂಬಿರುವ ಆತನ ಕುಟುಂಬಕ್ಕೂ, ಮಾತ್ರವಲ್ಲ ಇನ್ನು ಬರ್ಬರವಾಗಿ ಹತ್ಯೆಯಾಗಳಿರುವ "ಕಬೀರ್" ಗಳಿಗೂ ಅವರ ಕುಟುಂಬಕ್ಕೂ ಈಗಲೇ ಸಂತಾಪ ಸೂಚಿಸಿ ನಮ್ಮ ಸಂಘಟನೆಗಳನ್ನು ಬೆಳೆಸಿಕೊಂಡು, ಪತಾಕೆಗಳನ್ನು ಹಾರಿಸಿಕೊಂಡು ಹಾಯಾಗಿರೋಣ.