"ಕಬೀರ್" ಅಮಾನುಷವಾಗಿ ಮಾರ್ಗ ಮಧ್ಯೆ ನೀನು ಕೊಲೆಯಾದೆ,
ಹೆತ್ತವರ ಜೊತೆ ಕೂಡಿ ಸಾವಿರಾರು ಕಣ್ಣುಗಳಲ್ಲಿ ನೀನು ಕಣ್ಣೀರಾದೆ.
ಪ್ರತಿಭಟನೆ, ಪತ್ರಿಕಾಗೋಷ್ಠಿ, ಮನವಿಗಳಲ್ಲಿ ನೀನು ಹೆಸರಾದೆ,
ಕೋಮುವಾದಿಗಳ ಅಟ್ಟಹಾಸಕ್ಕೆ ಕ್ರೂರವಾಗಿ ನೀನು ಬಲಿಯಾದೆ.
ನಿನ್ನೆದೆಗೆ ನಾಟಿದ ಗುಂಡಿನ ನೋವಿನಿಂದ ಮೆಲ್ಲಗೆ ನಮ್ಮಿಂದ ನೀನು ಮರೆಯಾದೆ?
ಈ ಮುಂಚೆ ಅಟ್ಟಹಾಸಕ್ಕೆ ಬಲಿಯಾದವರ ಪಟ್ಟಿಗೆ ನೀನು ಕೂಡಾ ಸೇರಿಹೋದೆ?
ನಿನ್ನ ನೋವಿನ ಅಕ್ರೋಶ ನಮಗೆ ಕೆಲವು ದಿನಗಳ ಮಟ್ಟಿಗೆ ಮಾತ್ರ "ಕಬೀರ್"
ಕ್ಷಮಿಸಿ ಬಿಡು ಇನ್ನೊಂದು ಕೊಲೆಯಾದ ಮೇಲೆ ನೀನು ನಮಗೆ ನೆನಪಾಗಬಹುದು.

No comments:
Post a Comment