ದಟ್ಟ ಕಾಡಿನ ಮಧ್ಯೆ ಮುನ್ನುಗಿ ದೇಶಕ್ಕೆ ಮಾರಕವಾಗಿರುವ ನಕ್ಷಲರನ್ನು ಹುಡುಕಿ, ಪರಿಸ್ಥಿತಿ ಕೈ ಮೀರಿದರೆ ಗುಂಡಿಕ್ಕಿ ಕೊಂದು ಹಾಕಿ ಮತ್ತು ಗುಂಡಿಕ್ಕುವಾಗ ಕೆಲವು ನಿಯಮಗಳನ್ನು ಪಾಲಿಸಿ ಎಂದು ಹೇಳಿ "ANF" ಸೈನಿಕರನ್ನು ಕಾಡಿಗೆ ಕಳಿಸುತ್ತದೆ. ಕೆಲವೊಮ್ಮೆ ಅಪರೂಪಕ್ಕೆ ಪ್ರತ್ಯಕ್ಷವಾಗುವ ನಕ್ಷಲರು ಎದುರಾದಾಗ, ದಾಳಿ ನಡೆದಾಗ "ANF" ಎನ್ನುವವರ ಬಂದೂಕಿನಿಂದ ಹಾರಿಸಿದ ಗುಂಡು ಹಾರುವುದೇ ಇಲ್ಲ, ಕಾರಣ ಅದು ಉಪಯೋಗಿಸದೆ ತುಕ್ಕು ಹಿಡಿದಿತ್ತು ಎಂದು ಸಬೂಬು, ಒಂದು ವೇಳೆ ಹಾರಿದರೂ ಅದು ನಕ್ಷಲನ ಎದೆಯನ್ನು ಬಿಡಿ, ಅವನ ಕಾಲಿಗೂ ಕೂಡ ತಾಗುವುದಿಲ್ಲ. ಚಲಾಯಿಸಿದ ಗುಂಡುಗಳ ದಾಖಲೆ ಪರಿಶೀಲಿಸಿದಾಗ ಹೆಚ್ಚಿನದೆಲ್ಲ ಮರಕ್ಕೋ ಅಥವಾ ಇನ್ನೆಲ್ಲಿಯೋ ಬಿದ್ದಿರುತ್ತದೆ.
ರಾಜ್ಯ ಹೆದ್ದಾರಿಯಲ್ಲಿ ಅಮಾಯಕರು ಸಾಗುತ್ತಿರುವಾಗ, ದನ ಸಾಗಾಟ ಮಾಡುತಿದ್ದರು, ತಡೆದಾಗ ಓಡಿ ಹೋದರು ಎಂದು ಆಗ ಹಾರಿಸಿದ ಗುಂಡು ಮಾತ್ರ "ಕಬೀರ್" ಎನ್ನುವವನ ಎದೆ ನಾಟಿರುತ್ತದೆ, "ANF" ನ ಕೆಲವು ಬಜರಂಗಿ ಚೇಲಾಗಳಿಗೆ ಆ ಕ್ಷಣದಲ್ಲಿ ತಾವು ಪಡೆದಿರುವ ತರಬೇತಿ ಸರಿಯಾಗಿ ನೆನಪಿಗೆ ಬರುತದೆ, ಅಲ್ಲ್ಲಿಒಂದು ಗುಂಡು ಕೂಡಾ ಗುರಿ ತಪ್ಪುವುದಿಲ್ಲ, ಇದು "ANF " ನಲ್ಲಿ ಬಜರಂಗಿ ಅಜೆಂಡಾ ಹೊಂದಿರುವವರಿದ್ದಾರೆ ಎನ್ನುವುದಕ್ಕೆ ಆಧಾರ.
"ಕಬೀರ್" ಎನ್ನುವವ ಮುಸ್ಲಿಮನಾಗಿದ್ದ ಎನ್ನುವ ಕಾರಣಕ್ಕೆ ಕೊಲೆ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯ, ಅದಕ್ಕಿಂತ ಹೆಚ್ಚಾಗಿ ಇದು ಪ್ರಜಾಪ್ರಬುತ್ವದ ಕಗ್ಗೊಲೆ, ಮಾಹಿತಿಯ ಪ್ರಕಾರ ಆಲ್ಲಿ ದನವನ್ನು ಪರವಾನಿಗೆ ಪಡೆದೇ ಸಾಗಿಸಲಾಗುತ್ತಿತ್ತು ಅಷ್ಟಕ್ಕೂ ಕರ್ನಾಟಕ ಗೋಹತ್ಯೆ ನಿಷೇದ ಹೊಂದಿರುವ ರಾಜ್ಯವೇನೂ ಅಲ್ಲ.
ಕಗ್ಗೊಲೆಯ ವಿರುದ್ದ ಜನದ್ವನಿ ಆರಂಭವಾಗುತ್ತದೆ, ಪ್ರತಿಭಟನೆಗಳ ಸರಮಾಲೆಗಳು ಶುರುವಾಗುತ್ತದೆ ಎಂದು ಆಡಳಿತದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಗೊತ್ತು, ಅದಕ್ಕಾಗಿಯೇ ಎಲ್ಲ ಘಟನೆಗಳ ಸಂದರ್ಭ ಮಾಮೂಲಿ ಎನ್ನುವಂತೆ ೫ಲಕ್ಷ ಪರಿಹಾರ ಕೊಟ್ಟು ಕಗ್ಗೊಲೆಯ ತಾಪವನ್ನು ಕುಗ್ಗಿಸುವ ಕೆಲಸ ಯಥಾವತ್ತಾಗಿ ನಡೆದಿದೆ. ಈ ಘಟನೆಗೆ ಕಾಂಗ್ರೆಸ್ ಸರಕಾರ ನೇರ ಹೊಣೆ ಎನ್ನುವುದು ಸ್ಪಷ್ಟ.
ಇದರ ಮಧ್ಯೆ "ಕಬೀರ್" ಕೊಲೆಯ ಹೆಸರಿಟ್ಟು ಹಲವು ಸಂಘಟನೆಗಳು ಪ್ರತಿಭಟನೆ ನಡೆಸುವ ತಯಾರಿಯಲ್ಲಿದೆ, ಇಲ್ಲಿ ಕಬೀರ್ ಎನ್ನುವ ಅಮಾಯಕನ ಕಗ್ಗೊಲೆಗೆ ನ್ಯಾಯ ಕೊಡಿಸಬೇಕು ಎನ್ನುವುದಕ್ಕಿಂತ ಸಂಘಟನೆಗಳು ತಮ್ಮ ಬಲ ಪ್ರದರ್ಶಿಸುವ ಹುನ್ನಾರ ನಡೆಸುವಂತೆ ಕಾಣುತ್ತಿದೆ. ಎಲ್ಲರೂ ಅವರವರ ಪಾಡಿಗೆ ಅವನಿಗಿಂತ ನಾನು ಮುಂಚೆ ಎನ್ನುವ ಹಾಗೆ, ನನಗೆ ಹೆಚ್ಚು ನೋವು ಎಂದು ತೋರಿಸಲು ಪ್ರತಿಭಟನೆ, ಪತ್ರಿಕಾಗೋಷ್ಠಿ ನಡೆಸಲು ಹೊರಟಿದೆ.
ವಿಪರ್ಯಾಸ ಇವರ್ಯಾರಿಗೂ ಇದು "ಕಬೀರ್" ಎನ್ನುವ ಅಮಾಯಕನ ಕೊಲೆ ಪ್ರಜಾಪ್ರಬುತ್ವದ ಕೊಲೆ ನಾವೆಲ್ಲಾ ಒಟ್ಟಾಗಿ ಪ್ರತಿ ಭಟಿಸಬೇಕು ಅನ್ನುವ ಬುದ್ದಿ ಇಲ್ಲ, ಇದರ ಮೂಲಕ ತಮ್ಮ ಸಂಘಟನೆಗಳ ಬಲ ಪ್ರದರ್ಶನಕ್ಕೆ ದಾರಿ ಮಾಡಿ ಕೊಳ್ಳುವ ತವಕದಲ್ಲಿದ್ದಾರೆ, ಇಲ್ಲಿ ನಿನ್ನೆ "ನೌಶಾದ್ ಖಾಸಿಮ್ಜಿ" ಇವತ್ತು "ಕಬೀರ್" ನಾಳೆ "ನಾನು" ಎನ್ನುವವರು ನಾಳೆ ನಾನು ಇದೇ ರೀತಿ ಕಗ್ಗೊಲೆಯಾಗುವುದು ಬೇಡ, ನಾವೆಲ್ಲಾ ಒಟ್ಟಾಗಿ ಒಂದೇ ವೇದಿಕೆಯಡಿ ಹೋರಾಡೋಣ, ಆ ಮೂಲಕ ಮರಣವನ್ನಪ್ಪಿದ "ಕಬೀರ್" ನಿಗೆ ನ್ಯಾಯ ಕೊಡಿಸೋಣ ಎಂದು ಯೋಚಿಸಲು ಇಲ್ಲಿ ಯಾರಿಗೂ ಪುರುಸೊತ್ತಿಲ್ಲ, ಇಲ್ಲಿ ಎಲ್ಲರಿಗೂ ಅವರವರ ಲೆಟರ್ ಹೆಡ್, ಸ್ಟ್ಯಾಂಪ್, ಬ್ಯಾನರ್ ಮೇಲೆಯೇ ಪ್ರೀತಿ ಜಾಸ್ತಿ. ಇನ್ನಾದರೂ ಒಂದಾಗಿ ಹೋರಾಡೋಣ ಇಲ್ಲದಿದ್ದರೆ ಇನ್ನಸ್ಟು "ನಾನು" ಗಳು ಇಲ್ಲಿ ಕಗ್ಗೊಲೆಯಾಗುತ್ತಾರೆ, ಬಜರಂಗಿಗಳು ತಮ್ಮ ಅಟ್ಟ ಹಾಸ ಬೇರೆ ಬೇರೆ ರೀತಿಯಲ್ಲಿ ಮುಂದುವರೆಸುತ್ತಾರೆ, ಇದು ಎಚ್ಚರಿಕೆಯಲ್ಲ!! ವಾಸ್ತವ.
ವಯಕ್ತಿಕ ಬಲ ಪ್ರದರ್ಶನದ ಹಿತಾಸಕ್ತಿ ಬದಿಗಿಟ್ಟು ಕಬೀರ್ ಬಿಟ್ಟು ಹೋದ ಪ್ರಶ್ನೆಗೆ ಒಟ್ಟಾಗಿ ಉತ್ತರಿಸಬೇಕಾದ ಸಕಾಲ.


No comments:
Post a Comment