ಜೇಬಿನಲ್ಲಿ ದುಡ್ಡು ತುಂಬಿರುವ ಒಬ್ಬ ಧನಿಕನಿಂದ ಮಾತ್ರ ಸಮಾಜ ಸೇವೆ ಮಾಡಲು ಸಾಧ್ಯ ಎಂದು ತಿಳಿದಿರುವ ಮನೋಸ್ಥಿತಿಯ ಮಧ್ಯೆ ಬದುಕುತ್ತಿರುವವರು ನಾವು. ಆದರೆ ಇದು ಸತ್ಯಕ್ಕೆ ಬಲು ದೊರವಾದ ಮಾತು ಸಮಾಜ ಸೇವೆ ಮಾಡಲು ಮನಸ್ಸಿರಬೇಕೇ ಹೊರತು ದುಡ್ಡಲ್ಲ, ಸಾಧನೆಗಳ ಪಟ್ಟಿಯಲ್ಲಿ ಹೆಚ್ಚು ಸಾಧಿಸಿದವರು ಬಡತನದ ಮಧ್ಯೆ ಕಾಲ ಕಳೆದವರು.

ದುಡ್ಡಿರಲಿ ಇಲ್ಲದೆ ಇರಲಿ ಸಮಾಜ ಸೇವೆ ಮಾಡುವ ಮನಸ್ಸಿರಲಿ, ಸಮಾಜದ ಬಗ್ಗೆ ಕಾಳಜಿ ಇರಲಿ, ವ್ಯವಸ್ಥೆಯನ್ನು ಬದಲಾಯಿಸುವ ಬಗ್ಗೆ ಗುರಿಯಿರಲಿ, ಆ ನಡೆಯಲ್ಲಿ ಸ್ಪಸ್ಟತೆಯಿರಲಿ. ಜೇಬಿನಲ್ಲಿ ಬಿಡುಗಾಸು ಇಲ್ಲದ ಒಬ್ಬ ವ್ಯಕ್ತಿಯಿಂದ ಸಮಾಜದಲ್ಲಿ ಬಹಳಸ್ಟು ಕೆಲಸ ಮಾಡಲು ಸಾಧ್ಯ, ದಾರಿಯಲ್ಲಿ ಹೊಗುವ ದಾರಿಹೋಕನಿಗೆ ದಾರಿ ತೋರಿಸುವುದು, ರಸ್ತೆಯಲ್ಲಿ ಬಿದ್ದ ಒಬ್ಬ ವ್ಯಕ್ತಿಯನ್ನು ಎತ್ತುವುದು ಕೊಡ ಸಮಾಜ ಸೇವೆಯ ಭಾಗ.
ತನ್ನ ನೋವುಗಳ ನಡುವೆ ಸಮಾಜದ ಬಗ್ಗೆ ಕಾಳಜಿ ಇಡುವವನೇ ನಿಜವಾದ ಸಮಾಜ ಪ್ರೇಮಿ, ಕಸ್ಟಗಳಿಗೆ ಸ್ಪಂದಿಸುವವನಿಗೆ ನೋವುಗಳ ಅರಿವಿರಬೇಕು ಆಗ ಸೇವೆಯಲ್ಲಿ ಭಾವನಾತ್ಮಕ ಸಂಭಂದವಿರುತ್ತದೆ.
ದುಡ್ಡಿರುವವರು ಇಲ್ಲದವರು ಜೊತೆಗೊಡಿ ಕೆಲಸ ಮಾಡಿದಾಗ ಮಾತ್ರ ಅದು ಸಮಾಜಮುಖಿಯಾದ ಕೆಲಸವಾಗುತ್ತದೆ ಇಲ್ಲಿ ಇದು ಒಂದೇ ನಾಣ್ಯದ ಎರಡು ಮುಖ. ಸಮಾಜ ಸೇವಕನಿಗೆ ತನ್ನ ಕೊಪವನ್ನು, ಆವೇಷವನ್ನು, ಭಾವುಕತೆಯನ್ನು ತಡೆದುಕೊಲ್ಲುವ ಕಲೆ ಗೊತ್ತಿರಬೇಕು ಆಗ ಅವನೊಬ್ಬ ಯಶಸ್ಞಿ ಸಮಾಜ ಸೇವಕನಾಗಲು ಸಾಧ್ಯ. ಸಮಾಜ ಸೇವೆ ಮಾನವ ಪ್ರೀತಿಯಿಂದ ದೇವ ಸಂಪ್ರೀತಿಗಾಗಿ ನಡೆದಾಗ ಅನುಗ್ರಹಗಳ ಸುರಿಮಳೆ ಸುರಿಯುವುದನ್ನು ನಿರೀಕ್ಶಿಸಿಸಬಹುದು ಮತ್ತು ಅದು ನಾಳಿನ ಲೋಕದಲ್ಲಿ ಉತ್ತರ ನೀಡುವ ವಸ್ತುವಾಗಬಹುದು ಮತ್ತು ಅದೇ ಆಗಲಿ ದೇವನು ಅನುಗ್ರಹಿಸಲಿ......


No comments:
Post a Comment