ಪ್ರಾಣಿಯನ್ನು ಕೊಂದರು ಕೊಂದರು ಎಂದು ಹೇಳಿ ನೀನು ಸುತ್ತತೊಡಗಿದೆ,
ಕೊಂದರು ಕೊಂದರು ಎಂದು ಹೇಳಿ ಕೊಂದದ್ದನ್ನುನ್ನು ನೀನೆ ತಿಂದು ಬಂದೆ.
ಪ್ರಾಣಿಯ ಹೆಸರಿನಲ್ಲಿ ನರ ಸತ್ತವನಾಗಿ ಮನುಷ್ಯನನ್ನೇ ನೀನು ಕೊಲ್ಲತೊಡಗಿದೆ,
ಸ್ವಂತ ಹಿತಕ್ಕಾಗಿ ಮನುಷ್ಯ ಜೀವದೊಡನೆ ಚೆಲ್ಲಾಟವಾಡಿ ದೇಶಕ್ಕೆ ಕುತ್ತು ತಂದೆ.
ಆ ಕಡೆ ಸಾಕಲಾಗದೆ ಕೊಲ್ಲುವವನಿಗೆ ಮಾರಿದವನು ನೀನೆ,
ಅವನು ಕೊಂದದ್ದನ್ನು ತಿಂದು ಮೆಲ್ಲಗೆ ಸಾಗಿದವನು ನೀನೆ.
ಪ್ರಾಣಿಯ ಹೆಸರಿನಲ್ಲಿ ನೀನು ಮನುಷ್ಯತ್ವ ಕಳೆದು ದೇಶ ಒಡೆಯಬೇಡ,
ನೀ ಮಾರಬೇಡ! ಕೊಲ್ಲುವವನಿಗೆ ಕೊಡಬೇಡ! ತಿನ್ನುವನನು ತಿನ್ನಲಾರ!
ಕಟ್ಟಲು ನಿನಗೆ ಇಷ್ಟವಿದ್ದರೆ ಕಷ್ಟ ಪಟ್ಟು ಸುಂದರ ದೇಶ ಕಟ್ಟು,
ಹಗ್ಗ ಹಿಡಿದು ಬರುವವನನ್ನು ನಿನ್ನ ಅಟ್ಟಹಾಸಕ್ಕೆ ಬಲಿ ಮಾಡದಿರು.

No comments:
Post a Comment