ಪ್ರಜಾಪ್ರಭುತ್ವ ದೇಶದ ಹದಿನೈದನೆ ಪ್ರಧಾನಮಂತ್ರಿಯಾಗಿ ಭಾರತ ದೇಶಕ್ಕೆ ನರೇಂದ್ರ ಮೋದಿಯವರು ಪಾದಾರ್ಪನೆಗೈದಿದ್ದಾರೆ, ಅವರ ಪ್ರಮಾಣವಚನ ಸಮಾರಂಭ ಹಲವು ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದೆ, ಸಾರ್ಕ್ ದೇಶಗಳ ಹಲವು ಮುಖಂಡ ದಿಗ್ಗಜರುಗಳು ಭಾರತದ ನೆಲಕ್ಕೆ ಕಾಲಿಟ್ಟಿದ್ದಾರೆ, ಶತ್ರು ದೇಶವೆಂದೇ ಪರಿಗಣಿಸಲ್ಪಟ್ಟಿರುವ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಪ್ ಕೂಡಾ ಭಾರತಕೆ ಭೇಟಿ ನೀಡಿದ್ದಾರೆ, ಅವರು ಭಾರತಕ್ಕೆ ಕಾಲಿಟ್ಟು ಭಾರತ ದೇಶದ ಮಣ್ಣನ್ನು ಅಪವಿತ್ರ ಮಾಡಿದಿರಲಿ ಎಂದು ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಪರಿಶ್ರಮ ಪಟ್ಟವರೇ ಅಪಸ್ವರ ಎತ್ತಿದರೂ, ಅದೆಲ್ಲವನ್ನು ಮೆಟ್ಟಿ ನಿಂತು ನರೇಂದ್ರ ಮೋದಿಯವರು ಬದಲಾವಣೆಯ ಬೆಳವಣಿಗೆಯತ್ತ ದಾಪುಗಾಲಿಟ್ಟಿದ್ದಾರೆ.

ಅಫ್ಗಾನಿಸ್ಥಾನ, ಶ್ರೀಲಂಕ, ಬಾಂಗ್ಲಾದೇಶ, ಮಾಲ್ಡಿವ್ಸ್, ನೇಪಾಳ, ಭೂತಾನ್ ನಾಯಕರ ಜೊತೆ ಹಲವು ಮಹತ್ವದ ಮಾತುಕತೆಗಳು ನಡೆದಿವೆ, ಮಾರಿಷಸ್ ಪ್ರಧಾನಿ ಕೂಡ ಸಾಥ್ ನೀಡಿದ್ದಾರೆ. ಮುಖ್ಯವಾಗಿ ಪಾಕಿಸ್ತಾನದ ಪ್ರಧಾನಿಯ ಜೊತೆ ಉತ್ತಮ ಸೌಹಾರ್ದಯುತ ಪ್ರಸ್ತಾಪಗಳು ನಡೆದಿವೆ. ನವಾಜ್ ಷರೀಪ್ ಮತ್ತು ನರೇಂದ್ರ ಮೋದಿಯವರು ಬಹಳ ಆತ್ಮೀಯವಾಗಿ ಕೈ ಕುಳುಕಿಕೊಂಡಿದ್ದಾರೆ, ಇದು ಎರಡು ದೇಶಗಳ ನಡುವೆ ಉತ್ತಮ ಸಂಬಂದ ಮೂಡಿಸುವ ನಡೆಯಾಗಲಿ ಎನ್ನುವುದು ಎಲ್ಲರ ಅಭಿಪ್ರಾಯ. ಪದಗ್ರಹಣ ಸಮಾರಂಭದಲ್ಲಿ ಕಂಡು ಬಂದ ದೃಶ್ಯಗಳು ಕಣ್ತುಂಬಿಕೊಳ್ಳುವಂತೆ ಮಾಡಿದೆ, ವೈರಿಗಳಂತೆ ಕಾದಾಡುತಿದ್ದವರು ಪರಸ್ಪರ ಸ್ನೇಹಮಯವಾಗಿ ವರ್ತಿಸಿದ್ದಾರೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಡಿದೆ, ದೇವೇಗೌಡರು ಸೇರಿ ಹಲವು ಅಗ್ರಗಣ್ಯ ನಾಯಕರು ಪದಗ್ರಹಣ ಸಮಾರಂಭಕ್ಕೆ ಸಾಥ್ ನೀಡಿದ್ದಾರೆ, ಅಡ್ವಾನಿಯವರು ಖುದ್ದಾಗಿ ಎಲ್ಲ ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡದ್ದು ಕೂಡ ಒಳ್ಳೆಯ ಬೆಳವಣಿಗೆ, ಏನೇ ವೈಷಮ್ಯಗಳಿದ್ದರು ನಾಯಕರ ಈ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ನೀಡಿದ ಗೌರವವೇ ಸರಿ.

ನರೇಂದ್ರ ಮೋದಿಯವರ ನಡೆ ಅವರ ಗೆಲುವಿಗಾಗಿ ಪರಿಶ್ರಮ ಪಟ್ಟವರಿಗೆ ಇಷ್ಟವಾದಂತೆ ಕಾಣುತ್ತಿಲ್ಲ ಅವರ ಇತ್ತೀಚೆಗಿನ ಬದಲಾವಣೆಯ ಹಾದಿ ಕಾರ್ಯಕರ್ತರ ನಡುವೆಯೇ ಅಪಸ್ವರದ ಮಾತಾಗುತ್ತಿದೆ, ನರೇಂದ್ರ ಮೋದಿಯವರು ಹಿಂದುತ್ವನ್ನು ಮರೆತಿದ್ದಾರೆ ಎಂದು ಹೇಳುವ ಮಟ್ಟಿಗೆ ಮೋದಿಯವರ ನಡೆ ಸಾಗಿದೆ ಎಂದು ಪಿಸುಗುಡುತ್ತಿದ್ದಾರೆ, ಅವರು ಅಭಿವೃದ್ದಿಯ ಕಡೆಗೆ ಹೆಚ್ಚು ಗಮನ ಕೊಡುತಿದ್ದಾರೆ ಇದು ನಿಜವಾಗಿಯೂ ಉತ್ತಮ ಬೆಳವಣಿಗೆ, ಭಯದ ಕರಿನೆರಳಿನಲ್ಲಿ ಬದುಕಬೇಕಾಗಬಹುದೋ ಎಂದು ತಿಳಿದಿದ್ದ ಅಲ್ಪಸಂಖ್ಯಾತರು ಕೂಡಾ ನಿಟ್ಟುಸಿರು ಬಿಟ್ಟವರಂತೆ ಕಂಡರೂ ಸಂಪೂರ್ಣವಾಗಿ ಇದು ಹೀಗೆಯೇ ಇರಬಹುದು ಎಂದು ಒಪ್ಪಿಕೊಳ್ಳಲು ತಯಾರಾಗಿಲ್ಲ ಮತ್ತು ಅದಕ್ಕೆ ಕಾಲವೇ ಉತ್ತರಿಸುತ್ತದೆ ಎನ್ನುವಾಗಲೇ ಆರ್ಟಿಕಲ್ 370ಯ ಬಗ್ಗೆ ಚರ್ಚೆ ಆರಂಭವಾಗಿದೆ. ನರೇಂದ್ರ ಮೋದಿಯವರ ಕೆಲವು ನಡೆ ಅಲ್ಪಸಂಖ್ಯಾತರಲ್ಲಿ ಬಹಳ ಆಶಾವಾದ ಮೂಡಿಸಿದೆ ಅದು ಹೀಗೆ ಮುಂದುವರೆಯಲಿ ಎನ್ನುವುದು ಹಾರೈಕೆ.

ನರೇಂದ್ರ ಮೋದಿಯವರು ಬದಲಾವಣೆಯ ದಾರಿಯಲ್ಲಿ ಸಾಗುವ ಪ್ರಥಮ ಹಂತವಾಗಿ ಪದಗ್ರಹಣ ನಡೆಯುತ್ತಿರುವಾಗ ಆ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿರುವಾಗ ಯಾವುದು ನಡೆಯಬಾರದು ಎಂದು ದೇಶದ ಜನತೆ ಅಶಿಸಿತ್ತೋ ಅದು ನಡೆದಿದೆ. ಬಿಜಾಪುರದಲ್ಲಿ ವಿಜಯ ಘೋಷ ಮೆರವಣಿಗೆಯ ವೇಳೆ ಹಿಂದುತ್ವವಾದಿಗಳ ಕಲ್ಲು ಅಲ್ಪಸಂಖ್ಯಾತರ ಮೇಲೆ ಬಿದ್ದಿದೆ, ಹಿಂದುತ್ವವಾದಿಗಳು ಮತ್ತು ಅಲ್ಪಸಂಖ್ಯಾತರು ಹೊಡೆದಾಡಿಕೊಂದಿದ್ದಾರೆ. ಕೊಮುಗಲಭೆಗೆ ಹೆಸರಾಗದ ಉತ್ತರ ಕರ್ನಾಟಕದಲ್ಲಿ ಉಹಿಸದ ಘಟನೆ ನಡೆದು ಹೋಗಿದೆ, ಈ ಘಟನೆ ರಾಜ್ಯದ ಜನತೆಗೆ ಮೋದಿ ಬಂದಿದ್ದಾರೆ ಎಂದು ನೆನಪಿಸುವಂತೆ ಹಿಂದುತ್ವವಾದಿಗಳು ನಡೆದುಕೊಂಡಿದ್ದಾರೆ. ಮೋದಿಯವರು ಅದೆಷ್ಟೇ ಅಭಿವೃದ್ದಿಯ ಮಾತನ್ನಾಡಿದರು ಅದನ್ನು ಒಪ್ಪಿಕೊಳ್ಳಲು ಅವರ ಅನುಯಾಯಿಗಳು, ಅವರು ನಡೆದುಕೊಂಡು ಬಂದ ದಾರಿ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಸಾದ್ಯವಿಲ್ಲ ಎನ್ನುವುದನ್ನು ಮರೆಯುವಂತಿಲ್ಲ, ಮೋದಿಯವರು ಎಷ್ಟೇ ಅವರ ನಡೆಯನ್ನು ಬದಲಾಯಿಸುವಂತೆ ಕಂಡರೂ ಅವರ ಆಶಯವನ್ನು ಉಳಿಸಿಕೊಳ್ಳಲು ಅವರ ಅನುಯಾಯಿಗಳು ಇಷ್ಟಪಡುತ್ತಿಲ್ಲ ಎಂದು ತೋರಿಸುವಂತಹ ಹೆಜ್ಜೆ ಕಂಡು ಬರುತ್ತಿದೆ.
ನರೇಂದ್ರ ಮೋದಿಯವರು ಬಹಳ ಆತ್ಮೀಯವಾಗಿ ನವಾಜ್ ಷರೀಫರ ಕೈ ಕುಳುಕಿದಂತೆ ಅನ್ಯೋನತೆಯಿಂದ ಕೈ ಕುಳುಕಲು ಹಿಂದುತ್ವವಾದಿಗಳು ತಯಾರಿಲ್ಲ, ಬಿಜಾಪುರದ ಘಟನೆ ಮತ್ತೊಮ್ಮೆ ಹಿಂದುತ್ವವಾದವನ್ನು ಎತ್ತಿ ತೋರಿಸಿದೆ, ಸೌಹಾರ್ದತೆಗೆ ಭಂಗವಾಗಿದೆ, ಬಿಜಾಪುರದ ಜನ ಮೋದಿಯವರು ಅಧಿಕಾರ ಸ್ವೀಕರಿಸಿದ ದಿನ ಭಯದ ನೆರಳಿನಲ್ಲಿ ರಾತ್ರಿ ಕಳೆದಿದ್ದಾರೆ. ಹಿಂದುತ್ವಾದಿಗಳ ಕಲ್ಲು ಅಲ್ಪಸಂಖ್ಯಾತರನ್ನು ನಾಟಿದೆ, ಪ್ರತಿಯಾಗಿ ಅಲ್ಪಸಂಖ್ಯಾತ ವರ್ಗದಿಂದ ತಿರುಗೇಟು ಬಿದ್ದಿದೆ, ಇಬ್ಬರೂ ಪರಸ್ಪರ ವೈರಿಗಳಂತೆ ಹೊಡೆದಾಡಿಕೊಂಡಿದ್ದಾರೆ, ಅಲ್ಲಿ ದೂಡ್ಡ ದೊಂಬಿಯೇ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ಸ್ ಸರಕಾರವಿದ್ದರು ಇದಕ್ಕೆ ನೇರವಾಗಿ ಹಿಂದುತ್ವವಾದಿಗಳ ನಡೆಯೇ ಕಾರಣವಾಗುತ್ತದೆ ಎಂದು ಊಹಿಸಬಹುದು. ನೇರ ಹೊಣೆಯಾಗಿಸಿ ಬಸವನಗೌಡ ಯತ್ನಾಳ್ ಪಾಟೀಲರ ಬಂಧನ ಆಗಿದೆ. ಇನ್ನು ಇಂತಹ ಘಟನೆಗಳು ಮುಂದುವರೆಯದೆ ಸೌಹಾರ್ದಯುತ ವಾತಾವರಣ ಸೃಸ್ಟಿಯಾಗುವಲ್ಲಿ ಎಲ್ಲರು ಪ್ರಯತ್ನಿಸಲಿ.
ನರೇಂದ್ರ ಮೋದಿಯವರ ನಡೆ ಅಲ್ಪಸಂಖ್ಯಾತರಿಗೆ ಚೈತನ್ಯ ಮೂಡಿಸಿದ ಹಾಗೆ ಕಾಣುತ್ತಿದೆ, ಅದು ಹಾಗೆಯೇ ಮುಂದುವರೆಯಲಿ, ಅವರು ದೇಶದ ಪ್ರಧಾನಿಯಾಗಿ ದೇಶವನ್ನು ಅಬಿವೃದ್ದಿಯತ್ತ ಮುಂದೆ ಕೊಂಡು ಹೋಗಲಿ, ಹಿಂದುತ್ವವಾದಿಗಳು, ಮತಾಂದಿಗಳು ಕಲ್ಲುಗಳನ್ನು ಬದಿಗಿಟ್ಟು ದೇಶದ ಅಬಿವೃದ್ದಿಗೆ ಸಹಕಾರ ನೀಡಲಿ, ಪರಸ್ಪರ ಸ್ನೇಹಿತರಾಗಿ ಜೀವಿಸಲಿ. ನರೇಂದ್ರ ಮೋದಿಯವಯರಂತೆ ಆತ್ಮೀಯವಾಗಿ ಕೈ ಕುಳುಕಿಕೊಳ್ಳಲು ಪ್ರಯತ್ನಿಸೋಣ, ಒಡೆದ ಮನಸ್ಸುಗಳು ಒಂದಾಗಲಿ, ಮೋದಿಯವರು ಅಲ್ಪಸಂಖ್ಯಾತರು ಇಟ್ಟುಕೊಂಡಿರುವ ಆಶಾಭಾವನೆಯನ್ನು ಉಳಿಸಿಕೊಳ್ಳಲಿ, ಪಾಕಿಸ್ತಾನ ಮತ್ತು ಭಾರತದ ನಡುವೆ ಇರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿ, ಬಾಂಗ್ಲ ವಲಸಿಗರ ಸಮಸ್ಯೆಗೆ ಸರಿಯಾದ ವೈಜ್ನಾನಿಕ ಪರಿಹಾರ ಕಂಡು ಹುಡುಕಲಿ, ಅಲ್ಪಸಂಖ್ಯಾತರು ಇಟ್ಟುಕೊಂಡಿರುವ ಭಯದ ನೆರಳು ಇಲ್ಲವಾಗಿ ನರೇಂದ್ರ ಮೋದಿಯವರ ಹೆಜ್ಜೆ ಭಯದ ವಾತಾವರಣ ಇಲ್ಲದ್ದನ್ನು ಸಾಬೀತುಪಡಿಸಲಿ, ಅಲ್ಪಸಂಖ್ಯಾತರ ನಂಬಿಕೆ ನಿಜವಾಗಲಿ, ಹಿಂದುತ್ವವಾದಿಗಳು ಕೊಡ ದೇಶವನ್ನು ಅಭಿವೃದ್ದಿಯತ್ತ ಮುನ್ನಡೆಸುವಲ್ಲಿ ನರೇಂದ್ರ ಮೋದಿಯವರಿಗೆ ಸಾಥ್ ನೀಡಲಿ, ಪ್ರಧಾನಿಯಯವರ ಸರಿಯಾದ ನಡೆಯನ್ನು ಎಲ್ಲರೂ ಒಪ್ಪಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೈಸಲಿ. 
2 comments:
Good job ri
Well said bro.... Kudos for heart n great words!! .
Post a Comment