ಸರಕಾರ ಬಡವರ ಪರವಾಗಿ ಹಲವು ಜನಪ್ರೀಯ ಯೋಜನೆಗಳನ್ನು ತಂದಿದೆ ಮತ್ತು ಅದು ಬಂದಿದೆ ಎನ್ನುವುದರ ಹೊರತಾಗಿ ಆ ಸೌಲಭ್ಯಗಳಿಂದ ವಂಚಿತರಾಗಿ ಕೊನೆಗೆ ಬಿಲ್ಲು ಕಟ್ಟಲು ಕೂಡ ಪರದಾಡಿ ಹೆಣಗಾಡುವ ಸ್ಥಿತಿಯೇ ನಮ್ಮ ಬಡರೋಗಿಗಳಿಗೆ ಅಧಿಕ. ನಮಗೆ ಸಿಗಬೇಕಿದ್ದ ಯೋಜನೆಯ ಲಾಭ ಸಿಗದೇ ಹೋಯಿತು ಎನ್ನುವ ಮಾನಸಿಕ ಬೇಸರ ಬೇರೆ ಆ ರೋಗಿಗಳಲ್ಲಿ, ಸರಕಾರ ಬಡವರಿಗಾಗಿಯೇ "ವಾಜಪೇಯಿ ಅರೋಗ್ಯ ಶ್ರೀ", "ಸುರಕ್ಷ " ಯೋಜನೆ ಮತ್ತು ಮುಂತಾದ ಹಲವು ಯೋಜನೆಗಳನ್ನು ಜಾರಿ ಮಾಡಿದೆ ಇದರಿಂದ ಹಲವು ಬಡ ರೋಗಿಗಳಿಗೆ ಲಾಭವಾಗಿದೆ ಎನ್ನುವುದಕ್ಕಿಂತ ಆ ಲಾಭವನ್ನು ಪಡೆಯದೆ ನ್ಯಾಯ ವಂಚಿತರಾಗಿರುವವರೇ ಅಧಿಕ, ಒಂದು ವೇಳೆ ಪಡೆದಿದ್ದರೂ ಅವರು ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳ ಬೆಜವಾಬ್ದಾರಿಗಳಿಗೆ ಬಲಿಯಾಗಿ ಕೊನೆಗೆ ಯಾರದೂ ಮೂಲಕ ಕಸರತ್ತು ನಡೆಸಿ ತಮಗಾಗಿ ಇರುವ ಯೋಜನೆಯನ್ನು ಪಡೆದುಕೊಳ್ಳುವ ದುರವಸ್ಥೆ.
ಖಾಸಗಿ ಆಸ್ಪತ್ರೆಗಳಿಗೆ ಧಾಕಲಾಗುವ ರೋಗಿಗಳಿಗೆ ಸರಿಯಾದ ಮಾಹಿತಿ ಕೊಟ್ಟು ಅವರಿಗೆ ಸೂಚನೆ ನೀಡಬೇಕಾದ ಸಿಬ್ಬಂದಿಗಳು ಉದ್ದಟತನವನ್ನು ತೋರಿ ಸರಿಯಾದ ಮಾಹಿತಿ ನೀಡದೆ ಅವರಿಗೆ ಸಿಗಬೇಕಾದ ಯೋಜನೆಗಳಿಂದ ಅವರನ್ನು ವಂಚಿಸಿ ಅವರಿಗೆ ದಾರಿ ತಪ್ಪಿಸಿ ಕೊನೆಯಲ್ಲಿ ನಿಮ್ಮದೇ ತಪ್ಪು ಎಂದು ಬಿಂಬಿಸುವುದು ದಿನನಿತ್ಯ ನಡೆಯುತ್ತಿರುತ್ತದೆ, ಇಸ್ಟೇ ಅಲ್ಲದೆ ಯಾವ ರೀತಿಯಲ್ಲಿ ಬಡ ರೋಗಿಯಿಂದ ಕಸಿದುಕೊಳ್ಳಬಹುದು ಅನ್ನುವ ಬಗ್ಗೆ ಚಿಂತನೆ ನಡೆಸುವಂತೆ ಭಾಸವಾಗುತ್ತದೆ. ಬಡ ರೋಗಿಗಳು ಮೊದಲೇ ಅವರ ರೋಗದ ಚಿಂತೆಯಲ್ಲಿ ಮತ್ತು ಅಸಹಾಯಕತೆಯಲ್ಲಿ ಇರುವಾಗ, ಸಿಬ್ಬಂದಿಗಳ ಕಾಟಕ್ಕೆ ಬೇರೆ ಬಲಿಯಾಗಬೇಕು. ಕೊನೆಗೆ ಅವರ ಪರವಾಗಿ ಯಾರಾದರು ಮಾತನಾಡಿದರೆ ಅವರ ವಿರುದ್ದವೇ ಗುಂಪಾಗಿ ತಿರುಗಿ ಬಿದ್ದು ಅವರಿಗೆ ಕೂಡ ತಾವೇ ಸರಿ ನಿಮ್ಮವರದೇ ತಪ್ಪು ಎಂದು ವಾದಿಸುತ್ತಾರೆ, ಕಡೆ ಪಕ್ಷ ಬಡ ರೋಗಿಗಳಿಗೆ ಸಾಂತ್ವನ ನೀಡಬೇಕಾದವರೇ ಉದ್ದಟತನ ತೋರಿಸುವು ಎಷ್ಟು ಸರಿ? ಸರಕಾರ ಕೂಡಾ ಖಾಸಗಿ ಆಸ್ಪತ್ರೆಗಳಿಗೆ ಬೇಕಾ ಬಿಟ್ಟಿ ಪ್ರೋತ್ಸಾಹಿಸುವುದು ಬಡ ರೋಗಿಗಳು ನ್ಯಾಯ ವಂಚಿತರಾಗುತ್ತಿರಲು ಕಾರಣ.
ಆಸ್ಪತ್ರೆಯ ಆಡಳಿತ ವರ್ಗ, ಸಿಬ್ಬಂದಿಗಳು ಸರಿಯಾಗಿ ಸಹಕರಿಸುತಿದ್ದಿದ್ದರೆ ಬಡ ರೋಗಿಗಳು ಯೋಜನೆಯ ಲಾಭ ಪಡೆದು ಒಂದು ರೂಪಾಯಿ ಕೂಡ ಕಟ್ಟದೆ ಅವರ ಮನೆಗೆ ತಲುಪುಬಹುದು ಅಷ್ಟೊಂದು ಭ್ರಹತ್ ಮಟ್ಟದಲ್ಲಿದೆ ಸರಕಾರೀ ಯೋಜನೆಗಳು, ಆದರೆ ಎನೂ ಕಟ್ಟದೆ ಆಸ್ಪತ್ರೆಯಿಂದ ಹೊರಗೆ ಹೋಗಿ ಮನೆ ತಲುಪಿದವರು ಕಡಿಮೆಯೇ! ಬಡರೋಗಿಗಗಳನ್ನು ಒಂದಲ್ಲ ಒಂದು ರೀತಿಯಲ್ಲಿ ದಾರಿ ತಪ್ಪಿಸಿ ಅವರನ್ನು ವಂಚಿಸಲಾಗುತ್ತಿದೆ, ಕೊನೆಗೆ ಬಡವನೊಬ್ಬ ಮಾತನಾಡಿದರೆ ನಿಮಗೆ ಸಿಗುವ ಯೋಜನೆಯ ಲಾಭ ಸಿಗಬೇಕಾದರೆ ಬಾಕಿ ಇರುವ ಇಷ್ಟು ಮೊತ್ತ ಕಟ್ಟಿ ನಂತರವಸ್ಟೇ ನಿಮ್ಮ ಸರಕಾರೀ ಯೋಜನೆಯ ಅರ್ಜಿ ಮುಂದೆ ಹೋಗುತ್ತದೆ ಎನ್ನುವ ಉದ್ದಟತನದ ದುರ್ವರ್ಥನೆ ಬೇರೆ ಬಡ ರೋಗಿ ಸಹಿಸಬೇಕು.
ಸೌಜನ್ಯದ ಮಾತುಗಳಿಂದ ನಯವಾಗಿ ವರ್ತಿಸಿ ಸಮಾಧಾನದಿಂದ ರೋಗಿ ಮತ್ತು ಆತನ ಜೊತೆ ಇರುವವರಿಗೆ ಬಡ ರೋಗಿಗಳಿಗೆ ಸಿಗಬೇಕಾದ ಲಾಭವನ್ನು ಆದಸ್ಟು ಬೇಗ ಕೊಡಿಸುವಲ್ಲಿ ಸಹಕರಿಸಬೇಕಾದ ಆಡಳಿತ ವರ್ಗ ಮತ್ತು ಸಿಬ್ಬಂದಿಗಳು ತಮ್ಮನ್ನು ಪ್ರಶ್ನಿಸಿದ್ದಾರೆ ಎನ್ನುವ ಒಂದೇ ಒಂದು ಕಾರಣಕ್ಕೆ ಅವರ ಮೇಲೆ ಹಾರಿಹಾಯುವುದು, ಬಡ ರೋಗಿಗಳ ಮುಗ್ದ ಮನಸ್ಸಿನ ಮೇಲೆ ಆಡುತ್ತಿರುವ ಚೆಲ್ಲಾಟ ಕಾಣಬಹುದು ಮತ್ತು ಪ್ರಶ್ನಿಸಿದವರಲ್ಲಿ ಅತ್ತಿತ್ತ ಅಲೆದಾಡಿದವರೇ ಹೆಚ್ಚು! ಇದೆಷ್ಟು ಸರಿ ? ಯಾರು ಇದಕ್ಕೆ ಹೊಣೆ? ಎನೂ ತಿಳಿಯದ ಬಡಪಾಯಿಯೊಬ್ಬ ಖಾಸಗಿ ಆಸ್ಪತ್ರೆಗಳ ನಿರ್ದೇಶನಕ್ಕೆ ತಲೆಯಾಡಿಸಿ ಅವರು ಹೇಳಿದಸ್ಟು ದುಡ್ಡನ್ನು ಸಾಲ ಮಾಡಿಯೋ, ಮನೆ ಮಾರಿಯೋ ಆಸ್ಪತ್ರೆಗೆ ಕಟ್ಟಿ ಸರಕಾರ ಮತ್ತು ಅದರ ಯೋಜನೆಗೆ ಶಾಪ ಹಾಕಿ ಮನೆಗೆ ಹೊರಟು ಹೋಗುತ್ತಾರೆ. ಬಡವನಿಗೆ ಲಾಭವಾಗಳು ಸಾಧ್ಯವಾಗದ ಸರಕಾರೀ ಯೋಜನೆಗಳು ಇದ್ದರೆಸ್ಟು! ಇಲ್ಲದಿದ್ದರೆಷ್ಟು!.
ಸರಕಾರ ಹಲವು ಉತ್ತಮ ಯೋಜನೆಗಳನ್ನು ಬಡ ಜನರಿಗೆ ಕೊಟ್ಟಿದೆ, ಆದರೆ ಅದು ಬಡವರಿಗೆ ಸರಿಯಾಗಿ ನ್ಯಾಯವಾದ ರೀತಿಯಲ್ಲಿ ತಲುಪಬೇಕಾದ ಅಗತ್ಯವಿದೆ, ಈ ಬಗ್ಗೆ ಸಾರ್ವಜನಿಕರಲ್ಲಿ ಕೂಡ ಮಾಹಿತಿಯ ಕೊರತೆಯಿದೆ ಮತ್ತು ಅದನ್ನು ಖಾಸಗಿ ಆಸ್ಪತ್ರೆಗಳು ದುರುಪಯೋಗಪಡಿಸುತ್ತಿವೆ. ಸಾರ್ವಜನಿಕರು ತಮ್ಮ ಹಕ್ಕುಗಳನ್ನು ಕೇಳಿ ಪಡೆಯುವ ರೀತಿಯಲ್ಲಿ ವ್ಯಾಪಕವಾದ ಅರಿವು ಮೂಡಿಸಬೇಕು, ಖಾಸಗಿ ಆಸ್ಪತ್ರೆಗಳು ಕೂಡ ವ್ಯವಸ್ತಿತವಾಗಿ ದುಡ್ಡು ದೋಚುವುದನ್ನು ನಿಲ್ಲಿಸಿ ಬಡ ರೋಗಿಗಳಿಗೆ ಅವರ ಯೋಜನೆಗಳು ಸುಲಭವಾಗಿ ತಲುಪುವ ಹಾಗೆ ಪ್ರಯತ್ನಿಸಬೇಕು ಅಸ್ಟು ಮಾತ್ರವಲ್ಲ ತಮ್ಮ ಉದ್ದಟತನದ, ಅತಿರೇಕದ ವರ್ತನೆಯನ್ನು ನಿಲ್ಲಿಸಬೇಕು, ಬಡ ರೋಗಿಗಳೊಂದಿಗೆ ಸ್ನೇಹ ಮಯವಾಗಿ ವರ್ತಿಸಬೇಕು ಅವರು ಧಾಕಲಾಗುವಾಗ ಅವರ ದಾರಿ ತಪ್ಪಿಸಿ, ಸರಿಯಾದ ಮಾಹಿತಿ ನೀಡದೆ ಅವರನ್ನು ವಂಚಿತರನ್ನಾಗಿ ಮಾಡಬಾರದು ಈ ಬಗ್ಗೆ ಸರಕಾರ ಮತ್ತು ಸಂಬಂದಪಟ್ಟವರು ಕೂಡ ಕಾಳಜಿ ವಹಿಸಬೇಕು, ಇದೆ ಬಡ ಜನರಿಂದ ಆರಿಸಿ ಬಂದು ಕುರ್ಚಿಯಲ್ಲಿ ಕುಳಿತುಕೊಂಡವರು ಕುರ್ಚಿಯಲ್ಲಿ ಕುಳಿತುಕೊಳ್ಳಲು ಕಾರಣವಾದ ಬಡ ಜನರ ಬಗ್ಗೆ ಇನ್ನಾದರೂ ಸರಿಯಾಗಿ ಕಾಳಜಿ ವಹಿಸಬೇಕು.
ಖಾಸಗಿ ಆಸ್ಪತ್ರೆಗಳಿಗೆ ಸರಕಾರಿ ಯೋಜನೆಯ ಬಗ್ಗೆ ಮಾಹಿತಿ ನೀಡಲು, ಮಾಹಿತಿ ಫಳಕಗಳನ್ನು ಹಾಕಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು, ಬಡರೋಗಿಗಳು ತಮ್ಮ ಸಮಸ್ಯೆ ಪರಿಹರಿಸಲು ಯಾರದೋ ಕೈ ಕಾಲು ಹಿಡಿಯುವ, ಯಾರಿಂದಲೋ ಫೋನಾಯಿಸುವ, ಆ ಮೂಲಕ ಹೆಣಗಾಡಿ ತಮಗೆ ಸಿಗಬೇಕಾಗಿರುವ ಯೋಜನೆಯನ್ನು ಪಡೆದುಕೊಳುವ ಪರಿಸ್ಥಿತಿ ನಿಲ್ಲಬೇಕು, ಅವರಿಗಾಗಿಯೇ ಸರಕಾರಗಳು ಯೋಜನೆಯನ್ನು ಸ್ರಸ್ಟಿಸಿರುವಾಗ ಅದರ ಲಾಭವನ್ನು ಕೂಡ ಅವರು ಬಹಳ ಸುಲಭವಾಗಿ ಪದೆದುಕೊಲ್ಲುವಂತಾಗಬೇಕು, ಬಡ ರೋಗಿಗಳು ಅಲೆದಾಡುವ ಗೋಳು ನಿಲ್ಲಬೇಕು, ಆ ರೀತಿಯಲ್ಲಿ ಸ್ಪಷ್ಟವಾದ ದಾರಿಯಲ್ಲಿ ನೇರಾ ನೇರಾ ಅವರಿಗೆ ಸರಕಾರೀ ಯೋಜನೆಗಳು ಲಭ್ಯವಾದಾಗ ಮಾತ್ರ ಸರಕಾರ ಪ್ರಕಟಿಸಿದ ಬಡವರ ಪರ ಯೋಜನೆಗಳು ನಿಜ ಅರ್ಥದಲ್ಲಿ ಬಡವರ ಪರ ಇರುವ ಯೋಜನೆಗಳಾಗಳು ಸಾಧ್ಯ, ಇಲ್ಲದಿದ್ದರೆ ಬಜೆಟ್ ಪ್ರತಿಗಳಲ್ಲೂ ಮತ್ತು ಯೋಜನೆಯೊಂದು ಇದೆ ಎಂದು ಹೇಳುವುದಕ್ಕೆ ಮಾತ್ರ ಸಿಮಿತವಾಗಬಹುದು.
No comments:
Post a Comment