Thursday, April 10, 2014

ಜನತೆಗೊಂದು ಸದವಕಾಶ ಮತದಾನ (ಕವನ)



ದೇಶದ ಆರ್ಥಿಕ ಬಿಕ್ಕಟ್ಟು
ಎಲ್ಲ ನಮ್ಮ ದುರ್ಗುಣಗಳ ಎಡವಟ್ಟು
ಬೆಲೆಯೇರಿಕೆಯ ಪರಿಣಾಮ ತಿಳಿದಿದೆ
 ಪಾವತಿಸಲಾಗದೆ ಸಾಲ ಮೈಮೇಲಿದೆ 

ಟಾಟಾ, ಅಂಭಾನಿಗಳ ರಾಷ್ಟ್ರದ
 ಅಭಿವ್ರಿದ್ದಿ ಹೆಸರಿನ ಹರಿಕಾರರ
   ಗದ್ದುಗೆಗಾಗಿ ನಡೆಯುವ ಗಲಭೆಯ ಮಧ್ಯೆ   
ಜನತೆಗೊಂದು ಸದವಕಾಶ ಮತದಾನ  

ಬೆಳೆಯುತ್ತಿರುವ ಒಂದು ದೇಶದಲ್ಲಿ  
ಕುಡಿಯಲು ಯೋಗ್ಯ ನೀರಿಲ್ಲದ ಕಾಲದಲ್ಲಿ
ಪೊಳ್ಳು ಭರವಸೆಗಳ ಮಿಶ್ರಣದ ಮಧ್ಯೆ 
ಮತದಾರರಿಗೆ ತೀರ್ಪು ನೀಡುಸುವರ್ಣವಕಾಶ 
 

ಬಡ ಜನತೆಯ ಹಕ್ಕುಗಳನ್ನು ಕಸಿಯಲಾದಾಗ 
ಕುರ್ಚಿ ಬಿಸಿ ಮಾಡಿ ಜನತೆಗೆ ವಂಚನೆಯಾದಾಗ 
ಕಾಲ ಬಂದಿದೆ, ನಮ್ಮ ಮುಂದಿದೆ, ಮತ ಹಾಕಬೇಕಿದೆ 
 ಸಂಚಕಾರದ ರಾಜಕೀಯ ಬದಲಾವಣೆಯ ಗುರಿಯಾಗಿಸಿ 



ಪರಿವರ್ತನೆಯ ಸ್ಫೂರ್ತಿದಾಯಕ ನಾಯಕರನ್ನು ಆರಿಸಿ ,
ಯಾರಾಗಬಹುದೆಂದು ಹುಡುಕಾಡಿ ಸಮರ್ಥವಾಗಿ ನಿರ್ಧರಿಸಿ
 ಮಿಶ್ರಣದ, ಗದ್ದಲ ಗಲಾಟೆಯಿಲ್ಲದ ನಾಯಕರ ಆಯ್ಕೆಯಾಗಲಿ  
ಜನಮನ್ನಣೆ ಜನಾಂಧೋಲನವಾಗಿ ರೂಪುಗೊಳ್ಳಲಿ

ಯಾರಿಗೆ ಮತ ? ಯಾವ ಪಕ್ಷಕ್ಕೆ ?
ಯಾರ ಅಹವಾಲಿಗೆ ? ಯಾವ ಘೋಷನೆಗೆ

ದೇಶದ ಬದಲಾವಣೆಗೆ ಮತ ಚಲಾಯಿಸಿ 
ಕಾಪಟ್ಯದ ಹಳೆಯ ಮುಖಗಳಿಗೆ ಮುಕ್ತಿ ಕೊಡಿಸಿ
ಯಾರನ್ನು ಆರಿಸಬೇಕೆಂದು ನೀವೇ ನಿರ್ಧರಿಸಿ!!

1 comment:

Anonymous said...

hai pa nanu one blogspot na create madidini but adakke sariyagi analyze madoke agtha ella design madoke agtha ella help me bro.... achulovearea.blogspot.in