Friday, October 31, 2014

ಸಾಧುವನ್ನು ಕ್ರೂರವಾಗಿಸುವಲ್ಲಿ ಮನುಷ್ಯನ ಪಾತ್ರ ( ಲೇಖನ)


ಚರ್ಚೆಯಲ್ಲಿರುವ ಒಂದು ವಸ್ತು ಮನುಷ್ಯನ ರಕ್ತವನ್ನೇ ಹೀರುತ್ತಿದೆ, ಅದು ಮನುಷ್ಯ ಸಂಬಂಧಗಳ ಮಧ್ಯೆ ಬಿರುಕನ್ನು ಉಂಟು ಮಾಡಿದೆ, ಅಗಾಧವಾದ ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣವಾಗಿದೆ, ಅಗಾಗ್ಗೆ ಕೋಮು ವಿರಹಿಗಳಿಗೆ ತಮ್ಮ ದುರ್ವರ್ತನೆಯನ್ನು ಪ್ರದರ್ಸಿಸುವ ವಸ್ತುವಾಗಿದೆ, ದೇವರೆಂದು ಪೊಜಿಸುವ ಒಂದು ವರ್ಗ! ಇನ್ನೊಂದೆಡೆ ಕಾನುನಿನಾತ್ಮಕ ನಿಷೇಧಿಸಲ್ಪಡದಿದ್ದರೂ ತೆರೆ ಮರೆಯಲ್ಲಿ ಮಾರಾಟ ಮಾಡುವವರೊಂದಿಗೆ ಪಡೆದು ತಿನ್ನುವ ವರ್ಗ! ಒಟ್ಟಲ್ಲಿ ಸದಾ ಚರ್ಚೆಯಲ್ಲಿರುವ ವಸ್ತು ಗೋವು!!


ಗೋವನ್ನು ಮತ್ತೆ ಚರ್ಚೆಗೆ ಎಳೆದು ತರಲಾಗುತ್ತಿದೆ, ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಯನ್ನು ದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳಿಗೆ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ, ಹುಲಿ ಸ್ವಾಭಾವಿಕವಾಗಿ ತನ್ನ ಮೇಲೆ ದಾಳಿ ಮಾಡುತ್ತಾರೋ ಎನ್ನುವ ಭಯದಿಂದ ಎದುರಿನಲ್ಲಿರುವವನ ಮೇಲೆ ಎರಗುತ್ತದೆ ಆಗ ಆತ ಗಾಯಗೊಳ್ಳುತ್ತಾನೆ ಅಥವ ಸಾಯುತ್ತಾನೆ ಅದು ಹಿಂಸೆಯ ಪ್ರತೀಕವಾಗುತ್ತದೆ ವಾಸ್ತವದಲ್ಲಿ ಆ ಪ್ರಾಣಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಕೂಡಾ ನಾವು ಹೆಜ್ಜೆ ತಪ್ಪಿ ವಿಫಲರಾಗಿದ್ದೇವೆ. ಸಾಧು ಪ್ರಾಣಿಯಾಗಿರುವ ಗೋವು ಈ ದೇಶದಲ್ಲಿ ಹುಲಿಗಿಂತಲೂ ಭಯಾನಕವಾದ ಹಿಂಸೆಯನ್ನು ಸೃಷ್ಟಿಸಿದೆ, ಅದೆಷ್ಟೋ ಜನರ ಜೀವಗಳನ್ನು ಬಲಿತೆಗೆದುಕೊಂಡಿದೆ, ಗೋವಿನ ಹೆಸರಿನಲ್ಲಿ ಬಲಿ ತೆಗೆಯಲಾಗಿದೆ! ಒಂದರ್ಥದಲ್ಲಿ ಹುಲಿಗಿಂತಲೂ ಅಪಾರವಾದ ಹಿಂಸಾತ್ಮಕ ಕೃತ್ಯಗಳಿಗೆ ಗೋವು ಕಾರಣವಾಗಿದೆ.

ತನ್ನನ್ನು ರಕ್ಷಿಸಿಕೊಳ್ಳುವಾಗ ಹುಲಿ ಹಿಂಸಾತ್ಮಕ ಪ್ರಾಣಿ ಎಂದು ಹೆಸರು ಪಡೆದಿದೆ ಆದರೆ ಸಾಧುವಾದ ಗೋವು ಮನುಷ್ಯರ ಪೈಶಾಚಿಕ ಚಿಂತನೆಗಳಿಂದಾಗಿ ಹಿಂಸೆಯ ಪ್ರತೀಕವಾಗಿದೆ, ಬೆಕೆಂದೇ ಬಳಸಿಕೊಳ್ಳಲಾಗಿದೆ. ಸಾಧುವಾದ ಗೋವು ಇಷ್ಟೊಂದು ಅಗಾಧವಾದ ಹಿಂಸೆಗೆ ಪ್ರಚೋದನೆ ನೀಡುತ್ತದೆ ಎನ್ನುವಾಗ ರಾಷ್ಟ್ರೀಯ ಪ್ರಾಣಿಯಾದಲ್ಲಿ ಬಡ ಜನತೆ ಮತ್ತಷ್ಟು ನಷ್ಟ ಅನುಭವಿಸಬೇಕಾದೀತು, ಗೋವು ರಾಷ್ಟ್ರೀಯ ಪ್ರಾಣಿಯಾಗಬೇಕು ಎಂದು ಮಂಡಿಸುವ ವಾದವೇ ಬಲು ದೊಡ್ಡ ತಪ್ಪುಕಲ್ಪನೆ.


ಪ್ರಬಲವಾಗಿ ಹುಲಿ ಅಥವಾ ಗೋವು ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎನ್ನುವುದಲ್ಲ ಈ ಪ್ರಾಣಿಗಳು ಮನುಷ್ಯನ ಸ್ವಾರ್ಥಕ್ಕೆ ಬಲಿಪಶುಗಳಾಗಿವೆ, ಇಲ್ಲಿ ಪ್ರಾಣಿಗಳು ಸ್ವಾರ್ಥದ ಫಲವಾಗಿ ಚರ್ಚಾ ವಸ್ತುವಾಗಿದೆ, ಸಾಧು ಪ್ರಾಣಿಯನ್ನು ಗೌರವಿಸುವುದಕ್ಕಿಂತ ಅದನ್ನು ಚರ್ಚೆಗೊಳಪಡಿಸುವುದಕ್ಕಿಂತ ಹೆಚ್ಚಾಗಿ ಸ್ವಾರ್ಥಿ ಮನುಷ್ಯ ಪ್ರಚಾರದಲ್ಲಿರಬಯಸುತ್ತಾನೆ, ತನ್ನ ಮತಾಂಧತೆಯನ್ನು ಪ್ರದರ್ಶಿಸಲು ಪ್ರಾಣಿಗಳನ್ನು ದಾಳವಾಗಿಸಿಕೊಂಡಿದ್ದಾನೆ, ಮನುಷ್ಯನನ್ನು ಬಲಿತೆಗೆಯುವಾಗ ಪ್ರಾಣಿಗಳು ಒಂದು ಕಾಲ್ಪನಿಕ ಕಾರಣವಾಗಿದೆ ಅಷ್ಟೇ. 

Tuesday, October 28, 2014

ಸಂತೋಷ

ಕಬರಸ್ಥಾನವನು
ನೋಡಿ ಯೋಚಿಸಿದೆ
ಎಷ್ಟೊಂದು ಶಾಂತಿ
ಸಮಾಧಾನ,
ಜಯಿಸಿದ ಸಂತೋಷ!

ದೇವನ ಆದೇಶಗಳಿಗೆ
ತಲೆಬಾಗಿ
ಜೀವಿಸಿದವನಿಗೆ  

Monday, October 27, 2014

ಅಹಂಕಾರದ ನಡೆ!

ಮಕ್ಕಕ್ಕೆ
ಹೋದ ಧನಿಕನೊಬ್ಬ
ಇನ್ಯಾವ ಬಡವನ
ಲೂಟಿ ಮಾಡಲಿ
ಎಂದು ಯೋಚಿಸುತ್ತಿದ್ದ!

ಪಾಪ ಮಾಡಿದರೇನು
ಇನ್ನೊಮ್ಮೆ
ಮಕ್ಕಾಕ್ಕೆ ತೆರಳಿ
ಪುಣ್ಯ ಗಳಿಸಿದರಾಯಿತು
ಎಂದು
ಅಲ್ಲಿಂದ
ಹೊರಟು ನಿಂತ
ಅಹಂಕಾರದ
ನಡೆಯಿಂದ  

ಹೆಜ್ಜೆಗುರುತು

ಕಡಲ 
ತದಿಯ ಅಲೆಗಳ 
ನೆನಪಲಿ 
ಅವಳು 
ಹಾದು ಹೋದ 
ಹೆಜ್ಜೆಗಳ ನೆನಪು 
ಬೀಸಿ ಬಂದ ಅಲೆ 
ಮಾಯಿಸಿದ 
ಹೆಜ್ಜೆಗುರುತು 
ವಾಸ್ತವ ಲೋಕದಲಿ 
ಬದುಕು ಕಟ್ಟಲು 
ಸ್ಪೂರ್ತಿಯ ಗುರುತು...

Wednesday, October 22, 2014

ವಿಐಪಿ ಸಾಲುಗಳು!


ಯಾವುದಾದರು ಕಾರ್ಯಕ್ರಮಕ್ಕೆ ಭೇಟಿ ನೀಡಿದರೆ ಬಹಳ ಸಾಮಾನ್ಯವೆಂಬಂತೆ ಅಲ್ಲಿ ಮುಂದಿನ ಎರಡೋ ಮೂರು ಸಾಲು ಕುರ್ಚಿಗಳನ್ನು ವಿಶೇಷವಾಗಿ ಇಟ್ಟಿರಲಾಗುತ್ತದೆ ಅಥವಾ ಅದು ಸೀಮಿತವಾಗಿರುತ್ತದೆ, ಸಮಾರಂಬಕ್ಕೆ ಬರುವ ವಿಶಿಷ್ಟ ವ್ಯಕ್ತಿಗಳಿಗಾಗಿ, ಗಣ್ಯರಿಗಾಗಿ ಮೀಸಲಿಟ್ಟ ಜಾಗ! ಎಲ್ಲಕ್ಕಿಂತ ಹೆಚ್ಚಾಗಿ ಸಿರಿವಂತರಿಗೆ ಮೀಸಲಿಟ್ಟ ಜಾಗ, ಸಾಮಾನ್ಯರು ಸ್ವಲ್ಪ ದೂರವುಳಿಯಬೇಕಾದ ಜಾಗ, ವಿಐಪಿಗಳಿಗೆ ಪ್ರಾತಿನಿದ್ಯ ನೀಡುವ, ಅವರನ್ನು ಸತ್ಕರಿಸುವ ಒಂದು ವ್ಯವಸ್ಥೆ.

ವಿಐಪಿಗಳನ್ನು ಹಲವು ರೀತಿಯಲಿ ಪಟ್ಟಿ ಮಾಡಲಾಗಿರುತ್ತದೆ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಸಾಧಕರು! ಆದರೆ ಹೆಚ್ಚಿನ ಪ್ರಾತಿನಿದ್ಯ ಸಿಗುವುದು ಶ್ರೀಮಂತಿಕೆಗೆ ಎನ್ನುವುದು ಹಲವು ಕಡೆ ವಾಸ್ತವ, ಇಲ್ಲಿ ಅಂತಹ ವ್ಯವಸ್ಥೆ ಕಾಲಗಟ್ಟಕ್ಕೆ ಅನಿವಾರ್ಯ, ಆದರೆ ಆ ವಿಐಪಿ ಕುರ್ಚಿಯ ಸಾಲುಗಳು ಸಾಮಾನ್ಯರಿಗೆ ಸ್ಪೂರ್ತಿಯ ಸಾಲುಗಳಾಗಬೇಕು! ಹಾಗಾಗಬೇಕಾದಲಿ ಅದರಲ್ಲಿ ಬಹಳಷ್ಟು ಅರ್ಹ ವ್ಯಕ್ತಿಗಳನ್ನು ಕುಲ್ಲಿರಿಸಬೇಕಾಗುತ್ತದೆ, ಅಲಂಕರಿಸುವ ವ್ಯಕ್ತಿಗಳು ಕೂಡಾ ಅರ್ಹವಾಗಿರಬೇಕಾಗುತ್ತದೆ, ಅದು ಜಾಗ ಬರ್ತಿ ಮಾಡುವ ಸಾಲುಗಳು ಆಗುತ್ತಿರುವುದು ವಿಪರ್ಯಾಸ.

ಶ್ರೀಮಂತಿಕೆಯನ್ನೇ ಮಾನದಂಡವಾಗಿಸುವುದಕ್ಕಿಂತ ಹೆಚ್ಚಾಗಿ ಅಲ್ಲಿ ಸಾಧಕ ಶ್ರೀಮಂತರಿಗೆ ಹೆಚ್ಚು ಪ್ರಾತಿನಿಧ್ಯ ಸಿಗಬೇಕು, ಸಾಮಾಜಕ್ಕೆ ಬಹಳ ಹತ್ತಿರವಾಗಿರುವ ವ್ಯಕ್ತಿಗಳಿರಬೇಕು, ಸಾಮಾನ್ಯರು ಕೂಡಾ ಮುಂದೆ ಸಾಧಕರಾದಾಗ ಆ ಕುರ್ಚಿಗಳಲ್ಲಿ ಕುಳಿತುಕೊಳ್ಳುವ ಅವಕಾಶ ಪಡೆಯಬೇಕು, ಅದು ಅಹಂಕಾರ ಪ್ರತಿಷ್ಠೆಯ ಸಾಲುಗಳಾಗಬಾರದು. ಸಾಧಕರನ್ನು ಅಣಕಿಸುವ ಸಾಲುಗಳೂ ಆಗಿರಬಾರದು, ಅದು ಪ್ರತಿಷ್ಠೆಯ ಚೇರುಗಳಾಗುವುದಕ್ಕಿಂತ್ ಸಮುದ್ದಾರಕರ ಚೇರುಗಳಾಗಬೇಕು, ಕೇವಲ ಶ್ರೀಮಂತಿಕೆ ಪ್ರಾತಿನಿಧ್ಯತೆ ಆಗಬಾರದು, ಶ್ರೀಮಂತಿಕೆಯ ಜೊತೆಯಲ್ಲಿ ಅರ್ಹ ಸಾಧಕ ವ್ಯಕ್ತಿತ್ವಗಳೂ ಅಲ್ಲಿರಬೇಕು.

ನಿಜವಾದ ವಿಐಪಿಗಳಿಗೆ ಗೌರವ ನೀಡುವ ಚೇರುಗಳಾಗಬೇಕು, ಕೇವಲ ಹಣ ಪ್ರತಿಷ್ಠೆಯ ಚೇರುಗಳಾಗಬಾರದು, ಸಮಾಜದಲ್ಲಿ ಗಮಾನರ್ಹ ಸಾಧನೆ ಮಾಡಿದ ವ್ಯಕ್ತಿತ್ವಗಳು ಅಲ್ಲಿ ಕಾಣಸಿಗಬೇಕು, ಸಾಧನೆಗಳು ಸಾಧಕರನ್ನು ಮುಂದಿನ ಸಾಲುಗಳಿಗೆ ಅಹ್ವಾನಿಸುವಂತಹ ಲೈನುಗಳಾಗಬೇಕು, ಸಾದಕರನ್ನು ಅಲ್ಲಿ ಕುಳ್ಳಿರಿಸಿ ಆ ಸಾಲುಗಳು ಬೆಳೆಯಬೇಕು, ಅನರ್ಹವಾದ ವ್ಯಕ್ತಿಗಳನ್ನು ಅಲ್ಲಿ ಕುಳ್ಳಿರಿಸಿ ಸಾಧಕರಿಗೆ ಅವಮಾನ ಮಾಡುವುದು ನಿಲ್ಲಬೇಕು, ಕಷ್ಟ ಪಟ್ಟ ಮುಂದೆ ಬಂದ ಜೀವಗಳು ಏನು ಕಷ್ಟ ಪಡದೆ ಮುಂದೆ ಬಂದು ಶ್ರೀಮಂತಿಕೆ ಮಾತ್ರ ಸಂಪಾದಿಸಿದವನ ಜೊತೆ  ಕುಳ್ಳಿರಿಸಿ ಸಾಧನೆಗೆ ಅವಮಾನ ಮಾಡಬಾರದು, ಸಮಾಜದಲ್ಲಿ ಇನ್ನಷ್ಟು ಸ್ಪೂರ್ತಿದಾಯಕ ಸಾಧಕರು, ಸಮಾಜ ಕಾಳಜಿಯ ಉತ್ತಮ ಸ್ಥಿತಿವಂತರು ಬೆಳೆದು ವಿಐಪಿ ಸಾಲುಗಳು ಇನ್ನಷ್ಟು ಬೆಳೆಯಲಿ, ಕೇವಲ  ಪ್ರತಿಷ್ಠೆಯ ಸಾಲುಗಳಾಗದೆ  ಸ್ಪೂರ್ತಿಯ ಸಾಲುಗಳಾಗಲಿ.  

ಸ್ವಾರ್ಥ


ಬೆಂಕಿಗಾಗಿ 
ಬೆಂಕಿಕಡ್ಡಿ ಗೀರಿ 
ಬೆಂಕಿ ಉರಿದಾಗ 
ಬೆಂಕಿಕಡ್ಡಿ 
ನನ್ನ ನೋಡಿ 
ನಗುತಿತ್ತು 
ಬೆಂಕಿಗಾಗಿ 
ನನ್ನ ಗೀರಿ 
ನೀ ನನ್ನ ಕೊಂದೆ, 
ನಿನ್ನನ್ಯಾರೋ 
ಸ್ವಾರ್ಥಕಾಗಿ 
ನೀ ನನ್ನ ಗೀರಿದ 
ಹಾಗೆ 
ಗೀರುವ ಮುಂಚೆ 
ಎಚ್ಚೆತ್ತುಕೋ 
ಎಂದು 
ಗಹಗಹಿಸಿ 
ನಗುತಿತ್ತು.

Tuesday, October 14, 2014

ಅನಾಥರಾದ ತಮ್ಮವರನ್ನು ಮರೆತ ಶ್ರೀಮಂತರು ಶಾಪಗ್ರಸ್ಥರಾಗದಿರಲಿ (ಲೇಖನ)



ಬಿರುಗಾಳಿಗೆ ಹಲವಾರು ಮಂದಿ ಮನೆ, ಸೊತ್ತುಗಳನ್ನು ಕಳೆದುಕೊಂಡು ನಿರ್ಗತಿಕರಾಗುತ್ತಾರೆ ಅಲ್ಲಿ ಶ್ರೀಮಂತರು ಬಡವರು ಎಲ್ಲರೂ ಅಸಹಾಯಕರಾಗುತ್ತಾರೆ, ತಮ್ಮ ಜೀವನವನ್ನು ಹಳೆಯ ಪದ್ದತಿಗೆ ಮರಳಿಸಲು ಹಲವು ವರುಷಗಳೇ ತೆಗೆದುಕೊಳ್ಳುತ್ತಾರೆ, ಇದು ಪ್ರಕೃತಿಯ ಅಟ್ಟಹಾಸ! ಇದೆ ರೀತಿ ಕೆಲೆವೊಮ್ಮೆ ಶ್ರೀಮಂತ ಕುಟುಂಬದ ಸಾಧಾರಣ ಸಂಸಾರದ ಅಧಾರ ಸ್ಥಂಬವೊಂದು ರೋಗ ಪೀಡಿತವಾಗಿಯೋ, ಅಚಾನಕ್ಕಾಗಿಯೋ ಮರಣ ಹೊಂದಿದರೆ ಅ ಕುಟುಂಬದ ಪರಿಸ್ಥಿತಿ ಒಲಾಮಯವಾಗುತ್ತದೆ. ಕುಟುಂಬದ ಶ್ರೀಮಂತಿಕೆ  ಹಿನ್ನಲೆ ನಿರ್ಗತಿಕ ಕುಟುಂಬವನ್ನು ಕೈ ಹಿಡಿದಲ್ಲಿ ಪರಿಸ್ಥಿತಿ ತಹಬದಿಗೆ ಬರುತ್ತದೆ, ಇಲ್ಲದಿದಲ್ಲಿ ಸಾಧಾರಣವಾಗಿ ನಡೆಯುತ್ತಿದ್ದ ಆ ಕುಟುಂಬಕ್ಕೆ ನಗು ಮರೇಚಿಕೆಯಾಗುತ್ತದೆ, ಹೆಚ್ಚಿನೆಲ್ಲ ಶ್ರೀಮಂತ ಕುಟುಂಬ ಈ ಪರಿಸ್ಥಿತಿ ಇರುವ ಅರೆ ಮದ್ಯಮ ವರ್ಗದ ಕುಟುಂಬಗಳನ್ನು ಕೈ ಬಿಟ್ಟ ಸಲುವಾಗಿ ಅಂತಹ ಆಸರೆ ಕಳೆದುಕೊಂಡ ಕುಟುಂಬಗಳು ನಿರ್ಗತಿಕವಾಗಿವೆ, ಅಂತಹ ಉದಾಹರಣೆಗಳನ್ನು ಸಮಾಜದಲ್ಲಿ ಬಹಳಷ್ಟು ಕಾಣಬಹುದು.


ಅರೆ ಆರ್ಥಿಕ ಸ್ಥಿತಿಯಲ್ಲೇ ಬೆಳದು ಬಂದ ಆ ಕುಟುಂಬವನ್ನು ಅವರ ಹೀನಾಯ ಸ್ಥಿತಿಯಲ್ಲೇ ಅವರ ಸೊತ್ತುಗಳಿಂದ ಸಂಬಂಧಿಕರೇ ಕಸಿದುಕೊಳ್ಳುತ್ತಾರೆ, ತಮ್ಮದೇ ಕುಟುಂಬದ ಭಾಗ ಹೇಗೆ ಬದುಕುತ್ತಿದೆ ಎಂದು ಪರಿಸೀಲಿಸುವ ಗೋಜಿಗೆ ಶ್ರೀಮಂತ ವ್ಯಕ್ತಿಗಳು ಹೋಗುವುದಿಲ್ಲ, ಇನ್ನು ವ್ಯವಸ್ಥೆಗೆ ಅನುಗುಣವಾಗಿ ವಿಧವೆಯಾದ ತಾಯಿ ಬೇರೆ ಮದುವೆಯಾದಲ್ಲಿ ನಂತರ ಆ ಎರಡು ಕುಟುಂಬಗಳ ನಡುವೆ ಹೇಳಿಕೊಳ್ಳುವಂತಹ ಸಂಬಂಧ ಇರುವುದುಲ್ಲ, ಹೀಗೆ ತಮ್ಮವರನ್ನು ನೋಡದ ಕೆಲವು ಶ್ರೀಮಂತರು ಶೋಕಿಗಾಗಿ ಯಾರಿಗೋ ತೋರಿಕೆಗಾಗಿ ನೀಡುವ ಪರಿಪಾಟ ಬೆಳೆಸಿಕೊಳ್ಳುತ್ತಾರೆ, ತನ್ನವರು ಅರೆ ಹೊಟ್ಟೆಯಲ್ಲಿ ಇರುವಾಗ ಶೋಕಿಯೇ ಮೆಲೈಸುತ್ತದೆ, ತಂದೆ ತಾಯಿಯನ್ನು ಕಳೆದುಕೊಂಡು ಕಷ್ಟಪಡುತ್ತಿರುವ ಕುಟುಂಬವನ್ನು ಬೀದಿಪಾಲು ಮಾಡುತ್ತಾರೆ, ಕೆಲವೊಮ್ಮೆ ಅವರದೇ ಸೊತ್ತಿನಲ್ಲಿ ಸೌಧ ಕಟ್ಟಿ ಮೆರೆಯುವವರೂ ಇದ್ದಾರೆ.

ಹೆಚ್ಚಾಗಿ ಅಲ್ಪ ಸ್ವಲ್ಪ ಕಲಿತ ಮಗ ಕುಟುಂಬದ ಕೈ ಹಿಡಿಯುತ್ತಾನೆ, ಆತನು ಕುಟುಂಬವನ್ನು ಸವಾಲಾಗಿ ಮುನ್ನಡೆಸಿ ಯಶಶ್ವಿಯಾಗಿ ತನ್ನನ್ನು ಕಡೆಗನಿಸಿದವರನ್ನು ಸೆಟೆದು ನಿಲ್ಲುತ್ತಾನೆ, ಅಪರೂಪಕ್ಕ್ಕೆ ಹೆಣ್ಣು ಮಗಳು ಕಷ್ಟ ಪಟ್ಟು ಕಲಿತು ಆ ಕುಟುಂಬದ ಸಂತೋಷಕ್ಕೆ ಬುನಾದಿ ಹಾಕುತ್ತಾಳೆ, ಆ ಹೆಣ್ಣುಮಗಳೇ ಎಲ್ಲಕ್ಕೂ ಓಡಾಡಿ ಕುಟುಂಬಕ್ಕಾಗಿ ಜೀವನ ಸವೆಸುತ್ತಾಳೆ, ತನ್ನದೇ ಕುಟುಂಬದ  ಶ್ರೀಮಂತ ವ್ಯಕ್ತಿಯ ಹೆಣ್ಣು ಮಗಳು ಅತಿ ಸಣ್ಣ ವಯಸ್ಸಿನಲ್ಲೇ ವಿವಾಹ ಬಂದಕ್ಕೊಳಗಾಗುವಾಗ ತನ್ನವರಿಗಾಗಿ ಕಷ್ಟ ಪಡುವ ಆ ಹೆಣ್ಣು ಮಗಳು ಅದೇ ಕಷ್ಟದ ಜೀವನ ಮುಂದುವರೆಸುತ್ತಾಳೆ.   ಮಗನೊಬ ತನ್ನ ಸಹೋದರಿಯ ಮದುವೆಗಾಗಿ ತನ್ನೆಲ್ಲವನ್ನು ಬದಿಗಿಟ್ಟು ಅತಿ ದೊಡ್ಡ ತ್ಯಾಗಿಯಾಗುತ್ತಾನೆ, ಇದೆಲ್ಲಾ ಹಲವು ಬಾರಿ ಶ್ರೀಮಂತಿಕೆಯ ಮದವೇರಿದ ವ್ಯಕ್ತಿಗಳಿಗೆ ಕಿಂಚಿತ್ತೂ ಪಶ್ಚಾತಾಪದ ರೂಪಿಕರಣವಾಗುವುದಿಲ್ಲ, ಕೆಲವೊಮ್ಮೆ ತನ್ನವರನ್ನು ದೊರವಿಟ್ಟು ಅವರ ಬಗ್ಗೆ ಯೋಚಿಸದ ಶ್ರೀಮಂತ ಧರಿದ್ರ ಕುಟುಂಬಿಕರು ಕ್ರೂರಿಗಳಾಗುತ್ತಾರೆ, ಅನಾಥರ ಸೋತ್ತನ್ನೇ ಕಬಳಿಸುತ್ತಾರೆ, ತೋರಿಕೆಗಾಗಿ ಪ್ರತಿಫಲ ನಿಷೇಧವಾದ ದಾನ ಧರ್ಮ ಮಾಡುವುದಕ್ಕಿಂತ ತನ್ನದೇ ಕುಟುಂಬದ ಅಸಹಾಯಕ ಕುಟುಂಬದ ವ್ಯಕ್ತಿಗಳ ಕಣ್ನೀರೊರೆಸಬಹುದಿತ್ತು, ಕಷ್ಟ ಪಡುವ ಮಗನಿಗೆ ಆಸರೆಯಾಗಬಹುದಿತ್ತು.

ಅನೇಕ ಶ್ರೀಮಂತರು ಮನಸ್ಸಿನಲ್ಲಿ ಅವರಿಗೆಲ್ಲಾ ತಾವೇ ಕರ್ಚು ಮಾಡಬೇಕು ಎನ್ನುವ ಭಯದಿಂದ ಅವರನ್ನು ಆದಷ್ಟು ದೂರವಿಡುತ್ತಾರೆ, ಶ್ರೀಮಂತರ ಇಂತಹ ವರ್ತನೆ ಬಡ ಕುಟುಂಬವನ್ನು ಸ್ವಾಭಿಮಾನಿಗಳಾಗಿ ಮಾಡುತ್ತದೆ ಅವರು ಕಷ್ಟಗಳನ್ನು ತಮ್ಮೊಳಗೆ ಅಡಗಿಸಿಡುತ್ತಾರೆ, ಕೆಲವೊಮ್ಮೆ ಅದು ಅವರನ್ನು ದಾರಿ ತಪ್ಪಿಸುತ್ತದೆ, ತನ್ನ ಅಸಹಾಯಕ ಕುಟುಂಬಿಕರಿಗೆ  ಒಂದಿಷ್ಟು ಮಾರ್ಗದರ್ಶನ ನೀಡಿದ್ದರೆ ಆ ಮನೆ ಮಗನು ದೊಡ್ಡ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ! ಆ ಹೆಣ್ಣು ಮಗುವು ಇವರ ಹೆಣ್ಣು ಮಗಳಂತೆ ತನ್ನ ಗಂಡನೊಂದಿಗೆ ಸುಖವಾಗಿರುತ್ತಿದ್ದಳು, ಈ ಬಗ್ಗೆ ಸ್ವಲ್ಪವೂ ಪ್ರಯತ್ನ ನಡೆಸದೆ ಇರಲು ಸಂಪತ್ತಿನ ವ್ಯಾಮೋಹ ಹೊಂದಿರುವ ಅತಿ ಕ್ರೂರಿಗಳಿಂದ ಮಾತ್ರ ಸಾಧ್ಯ.


ಅಸಹಾಯಕ ಕುಟುಂಬಗಳು ಬೀದಿಗೆ ಬರದಿರಲು ಶ್ರೀಮಂತ ವ್ಯಕ್ತಿಗಳು ತಮ್ಮ ಕುಟುಂಬದ ನಿರ್ಗತಿಕರ ಕಡೆಗೆ ಕಣ್ಣಾಡಿಸಬೇಕಾಗಿದೆ, ಹಾಗೆ ಅಸಹಾಯಕ ಕುಟುಂಬಗಳು ಸಂಬಂಧಿಕರು ಎನ್ನುವ ನೆಲೆಯಲ್ಲಿ ಸಹಾಯ ಕೇಳಿದಾಗ ನಟನೆಯನ್ನು ನಿಲ್ಲಿಸಿ ಅವರ ಪರವಾಗಿ ಬೆಂಬಲವಾಗಿ ನಿಲ್ಲಬೇಕಾಗುತ್ತದೆ, ಕಡೆಗಣಿಸಿ ಅವರು ಬೀದಿಗೆ ಬಂದಲ್ಲಿ ಅಂತಹ ಬಡ ಕುಟುಂಬಗಳ ಶಾಪ ಈ ಶ್ರೀಮಂತರನ್ನು ಕಾಡದೆ ಇರದು, ಈ ಬಗ್ಗೆ ತಮ್ಮವರನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಶ್ರೀಮಂತ ವ್ಯಕ್ತಿಗಳು ಗಾಡವಾಗಿ ಯೋಚಿಸಬೇಕಾಗಿದೆ, ಹಂಚಿಕೊಂಡು ಬಾಳಬೇಕು ಶ್ರೀಮಂತರಾಗಲಿ! ಬಡವರಾಗಲಿ! ಹಂಚಿಕೊಂಡಿದ್ದರಲ್ಲಿ ಇರುವ ಸುಖ ಬಚ್ಚಿಟ್ಟು ಕೂಡಿಟ್ಟಿದ್ದರಲ್ಲಿ ಯಾವತ್ತಿಗೂ ಕಾಣಲು ಸಾದ್ಯವಿಲ್ಲ ಅನ್ನುವುದನ್ನು ಅರಿತುಕೊಂಡು ಬಾಳಬೇಕು. 

ಮಧ್ಯಮ ವರ್ಗದ ಅತಿ ಬಡವ

ಕೈಯಲ್ಲೊಂದು ವಾಚು,
ಇಸ್ತ್ರೀ ಮಾಡಿದ ಬಟ್ಟೆ,
ಕಿಸೆಯಲ್ಲೊಂದು ಪರ್ಸು, 
ನೋಟುಗಳಿಲ್ಲದ ಪರ್ಸು!

ಪಳ ಪಳ ಮಿನುಗುವ ಶೊ, 
ಘಮ ಘಮ ಪರಿಮಳದ ಸೆಂಟು, 
ಬೆಳೆಬಾಳುವ ಮೊಬೈಲು, 
ಕರೆನ್ಸಿ ಇಲ್ಲದ ಮೊಬೈಲು!

ಬಡವನೆಂದು 
ಖ್ಯಾತಿ ಪಡೆದ 
ನೆರೆಮನೆಯವನಿಗೆ 
ಎಲ್ಲವನ್ನೂ 
ಬಂದು 
ಕೊಟ್ಟು ಹೋದರು, 
ಇಸ್ತ್ರೀಯ ಬಟ್ಟೆ 
ನೋಡಿಯೇ 
ನನ್ನನ್ನು ಬಿಟ್ಟು 
ಹೋದರು.

ನಾನು 
ಬದುಕಿರುವುದೇ ಹಾಗೆ 
ಎನನ್ನೂ ಹೇಳದೇ, ಕೇಳದೆ,
ಪರ್ಸು ಇದ್ದು ದುಡ್ಡಿಲ್ಲದವನಾಗಿ,
ದುಡ್ಡು ಇಲ್ಲದೆಯೂ ಕರ್ಚು ಮಾಡುವವನಾಗಿ, 
ಸಾಲದ ಹೊರೆ ನನ್ನ ಮೇಲೆ ಹೊತ್ತುಕೊಂಡವನಾಗಿ,
ಮಧ್ಯಮ ವರ್ಗದ ಅತಿ ಬಡವನಾಗಿ.

ಸುಡಲು ಸಿದ್ದರಾದವರಾಗಿ

ದೇವನನ್ನು 
ಕೆಲವೆಡೆಗೆ 
ಸೀಮಿತವಾಗಿಸಿದಾಗ, 
ದೇವನಲ್ಲಿಗೆ!! 
ಹೊರನಡೆದಾಗ 
ಸೃಷ್ಟಿಗಳ 
ಕಾಲ ಬುಡದಡಿಗೆ.

ಮಸೀದಿ ಮಂದಿರಗಳಲ್ಲಿ 
ದೇವನನ್ನು 
ಬಿಟ್ಟು ಬರುವುದಾದರೆ, 
ಬರಬಹುದು! 
ಬದುಕಬಹುದು!, 
ಕೊತ ಕೊತ 
ಕುದಿಯುವ 
ನರಕಾಗ್ನಿಯ ಬೆಂಕಿಯಲ್ಲಿ 
ಸುಡಲು ಸಿದ್ದರಾದವರಾಗಿ.

ಕಲಂಕಳಿಗೆ ತೆರೆ ಎಳೆಯಬೇಕಾಗಿರೋದು ಅತ್ಯಗತ್ಯ!

ಕೆಲವೊಮ್ಮೆ ನಾವು ಅವಿವೇಕಿಗಳಾಗುತ್ತೇವೆ ವಿವೇಚನಶೀಲರೆಂದು ಭಾವಿಸಿ, ತಪ್ಪನ್ನು ಸರಿಪಡಿಸುವ ಹೆಸರಿನಲ್ಲಿ ಇಲ್ಲದ ತಪ್ಪುಗಳನ್ನು ಸೃಷ್ಟಿಸಿ ಅವಾಂತರಗಳಿಗೆ ದಾರಿಮಾಡಿಕೊಡುತ್ತೇವೆ, ಸಹಜವಾಗಿ ಜನರು ಬದುಕುತ್ತಿರುವ ಸಮಾಜದಲ್ಲಿ ಬಿರುಕುಗಳಿಗೆ ನಾಂದಿಯಾಗುತ್ತೇವೆ, ಇಲ್ಲದ ವ್ಯಕ್ತಿಗಳನ್ನು ನೀರೆರೆದು ಪೋಷಿಸಲು ನಾವೇ ಸ್ವ ಕಾರಣವಾಗುತ್ತೇವೆ. ಇದಕ್ಕೆ ನಮ್ಮ ಕಾಳಜಿಯ ಆವೇಶ ಕಾರಣವಾಗಿರಬಹುದು, ತಿಳುವಳಿಕೆಯ ಕೊರತೆಯಾಗಿರಬಹುದು, ಸಮುದಾಯದ ಮೇಲಿನ ಪ್ರೀತಿಯಾಗಿರಬಹುದು, ಎಚ್ಚರ ಕೆಲವೊಮ್ಮೆ ಇವೆಲ್ಲ ನಮ್ಮನ್ನೆ ನಾವು ತಪ್ಪಿನ ಹೊಣೆಗಾರಿಕೆ ಹೊತ್ತುಕೊಳ್ಳಬೇಕಾದ ಮಾರಕ ರೂಪ ಪಡೆಯಬಹುದು.
ದೆಹಲಿಯ ಝೂ ಒಂದರಲ್ಲಿ ಮನುಷ್ಯನ ಪೀಕಲಾಟಕ್ಕೆ ಹೆದರಿ ಹುಲಿಯೊಂದು ಮಕ್ಸೂದ್ ಎಂಬ ಮುಗ್ದನನ್ನು ಬಲಿ ತೆಗೆದಿದೆ ಎಂದು ಇಡೀ ಹುಲಿ ಸಂತಾನವನ್ನು ಅದಕ್ಕೆ ಹೊಣೆಯಾಗಿಸಿದರೆ ಹೇಗೆ? ನಿಜವಾಗಿ ಅಲ್ಲಿ ಹುಲಿಗಿಂತ ಅದನ್ನು ಭಯಪಡಿಸಿದ ಮನುಷ್ಯರದ್ದೂ ತಪ್ಪಿದೆ ಎಂದು ಅನಿಸುವುದಿಲ್ಲವೇ? ಸಮಾಜದಲ್ಲಿ ಯಾವುದೋ ಒಂದು ಹೆಣ್ಣು ತನ್ನ ಹೆತ್ತವರ ಕಾಳಜಿಯ ಕೊರತೆಯಿಂದ ದಾರಿ ತಪ್ಪಿದಾಳೆ ಎಂದರೆ ಅದನ್ನು ಇಡೀ ಸಮುದಾಯಕ್ಕೆ ಹೊಣೆಯಾಗಿಸಿ ಮಾನ ಹರಾಜು ಮಾಡುವುದು ಮಾತ್ರವಲ್ಲ ಅದರಲ್ಲಿ ನಮ್ಮ ಪಾತ್ರವೂ ಇರುವುದು ಸಮಂಜಸವೇ? ಲೆಕ್ಕ ಪರಿಶೋಧನೆ ಮಾಡಿದವರ ಹಾಗೆ ಇಂತಿಷ್ಟೇ ಹೆಣ್ಣು ಮಕ್ಕಳು ಕೆಟ್ಟು ಹೋಗಿದ್ದಾರೆ ಎಂದು ಹೇಳುವುದು ಅದನ್ನು ವ್ಯಾಪಕವಾಗಿ ಪಸರಿಸುವುದು ಅದೆಷ್ಟು ಸರಿ? ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ವದಂತಿಗಳನ್ನು ಹಬ್ಬಿಸಬಾರದು ಎಂದು ತಿಳಿದಿರುವ ನಾವು ಸುಳ್ಳನ್ನು ಮತ್ತಷ್ಟು ಹಬ್ಬಿಸಿ ಸಮುದಾಯಕ್ಕೆ ಉಪಕಾರ ಮಾಡಿದ್ದೇವೆ ಎಂದು ತಿಳಿದರೆ ನಾವು ವಿಜಯಿಗಳಾಗಳು ಸಾಧ್ಯವೇ? ಕೆಟ್ಟು ಹೋದವರು ಇರಬಹುದು ಅದಕ್ಕೆ ಅದರದೇ ಅದ ವ್ಯವಸ್ಥೆಯಲ್ಲಿ ಪರಿಹಾರ ಕಂಡುಕೊಳ್ಳೋಣ ಬದಲಾಗಿ ವದಂತಿಗಳನ್ನು ಸತ್ಯವೆಂದು ಹಬ್ಬಿಸಿ ನಮ್ಮ ಹೆಣ್ಣು ಮಕ್ಕಳಿಗೆ ನಾವೇ ಶತ್ರುಗಳಾಗದಿರೋಣ. ಈಗಷ್ಟೆ ಸಮುದಾಯದ ಹೆಣ್ನುಮಕ್ಕಳು ಹೊರ ಸಮಾಜದಲ್ಲಿ ಇಸ್ಲಾಮಿನ ಅತ್ಯುನ್ನತ ಶಕ್ತಿಗಳಾಗಿ ಬೆಳೆಯುತ್ತಿರುವಾಗ ಅವರ ಉತ್ಸಾಹವನ್ನು ಕೆಡಿಸದಿರೋಣ, ಕೆಟ್ಟವರಿದ್ದರೆ ಅವರ ಹೆತ್ತವರಿಗೆ ಮನವರಿಕೆ ನಡೆಸಿ ಅವರನ್ನೂ ಜಗತ್ತಿಗೆ ಶಕ್ತಿಯಾಗಿ ಪರಿಚಯಪಡಿಸೋಣ, ಸತ್ಯವರಿಯೋಣ, ಕಲಂಕಳಿಗೆ ತೆರೆ ಎಳೆಯೋಣ.....

ಕರೆಂಟು ಶಾಕು

ಮನೆಯಿಡೀ 
ಒಂದರ್ದ ಘಂಟೆ 
ಕತ್ತಲೆಯಾದಾಗ 
ಹೊರಟಿತು ಕರೆಯೊಂದು 
ವಿಚಾರಣೆಯ 
ನೆಪದಲ್ಲಿ ಕರಂಟಿಂದು 
ಬಂದೀತೆ ಎಂದು 
ಜೋರು ದನಿಯಲಿ.

ಕರೆಂಟು 
ಕಾಣದ ಮನೆಗಳು, 
ಹಳ್ಳಿ ಕೇರಿಗಳು, 
ಇರುವ ದೇಶದಲ್ಲಿ 
ಒಂದರ್ದ ಘಂಟೆ 
ಕರೆಂಟೋದರೆ 
ಚಿಂತೆಯೇಕನಿಸಿತು.

ಕೋಟಿ ಕೋಟಿ 
ಲೂಟಿ ಮಾಡಿದ 
ಘನ ನಾಯಕರು 
ಬಚ್ಚಿಟ್ಟು ಹೋಗಿರುವರು 
ಜೈಲು ಕಂಬಿಗಳೆಡೆಗೆ, 
ತೀರ್ಪಿನಲಿ
ಅಭಿಮಾನಿಗಳಿಗೆ 
ಕರೆಂಟು ಶಾಕು 
ನೀಡಿದವರಾಗಿ, 
ಜನಮಾನಸವನು 
ಬಡತನದ 
ಬೇಗುದಿಯಲಿ 
ಅಲೆದಾಡಿಸಿದವರಾಗಿ.

ಚಿಂತೆ

ಹೊಟ್ಟೆ ತುಂಬ 
ತಿನ್ನುವಾಗ 
ತಿನ್ನದವರ ಬಗ್ಗೆ 
ಚಿಂತೆಯಿರಲಿಲ್ಲ.

ಹೊಟ್ಟೆ 
ಖಾಲಿಯಾದಾಗ 
ತಿನ್ನುವವರ್ಯಾರು 
ನನ್ನತ್ತ 
ಮುಖ 
ಮಾಡಲೇ ಇಲ್ಲ.

ದೇವನ ಭಯವಿರಲಿ

ಕಾನಣದ ಮಧ್ಯೆ
ಸಾಗುವಾಗ
ವನ್ಯ ಪ್ರಾಣಿಯ
ಭಯ ಕಾಡಿತು.

ಬಿದ್ದು ಸಣ್ಣಗೆ
ರಕ್ತ ಹರಿದಾಗ
ಮಯ್ಯಿಡೀ
ನೋವಾಯಿತು.

ಪುಣ್ಯ ಕಾರ್ಯಗಳೆಡೆಗೆ
ಗಮನ ನೀಡದ
ಆತನಿಗೆ
ದೇವನ
ನೆನಪು ಮರೆಯಾಗಿತ್ತು.

ದೇವನ ಭಯವಿರಲಿ,
ಸೃಷ್ಟಿಗಿಂತ
ಸೃಷ್ಟಿಕರ್ತನ ನೆನಪಾಗಲಿ,
ರಕ್ತ ಕುದಿಯುವ
ನರಕದ ಕಲ್ಪನೆಯಿರಲಿ,
ಮನದಾಳದಲ್ಲಿ ಹೆಚ್ಚು!
ದೇವನಿಗೆ ಜಾಗವಿರಲಿ. 

Thursday, October 9, 2014

ಸಿದ್ದರಾದವರಾಗಿ

ದೇವನನ್ನು 
ಕೆಲವೆಡೆಗೆ 
ಸೀಮಿತವಾಗಿಸಿದಾಗ, 
ದೇವನಲ್ಲಿಗೆ!! 
ಹೊರನಡೆದಾಗ 
ಸೃಷ್ಟಿಗಳ 
ಕಾಲ ಬುಡದಡಿಗೆ.

ಮಸೀದಿ ಮಂದಿರಗಳಲ್ಲಿ 
ದೇವನನ್ನು 
ಬಿಟ್ಟು ಬರುವುದಾದರೆ, 
ಬರಬಹುದು! 
ಬದುಕಬಹುದು!, 
ಕೊತ ಕೊತ 
ಕುದಿಯುವ 
ನರಕಾಗ್ನಿಯ ಬೆಂಕಿಯಲ್ಲಿ 
ಸುಡಲು ಸಿದ್ದರಾದವರಾಗಿ.