ಯಾವುದಾದರು ಕಾರ್ಯಕ್ರಮಕ್ಕೆ ಭೇಟಿ ನೀಡಿದರೆ ಬಹಳ ಸಾಮಾನ್ಯವೆಂಬಂತೆ ಅಲ್ಲಿ ಮುಂದಿನ ಎರಡೋ ಮೂರು ಸಾಲು ಕುರ್ಚಿಗಳನ್ನು ವಿಶೇಷವಾಗಿ ಇಟ್ಟಿರಲಾಗುತ್ತದೆ ಅಥವಾ ಅದು ಸೀಮಿತವಾಗಿರುತ್ತದೆ, ಸಮಾರಂಬಕ್ಕೆ ಬರುವ ವಿಶಿಷ್ಟ ವ್ಯಕ್ತಿಗಳಿಗಾಗಿ, ಗಣ್ಯರಿಗಾಗಿ ಮೀಸಲಿಟ್ಟ ಜಾಗ! ಎಲ್ಲಕ್ಕಿಂತ ಹೆಚ್ಚಾಗಿ ಸಿರಿವಂತರಿಗೆ ಮೀಸಲಿಟ್ಟ ಜಾಗ, ಸಾಮಾನ್ಯರು ಸ್ವಲ್ಪ ದೂರವುಳಿಯಬೇಕಾದ ಜಾಗ, ವಿಐಪಿಗಳಿಗೆ ಪ್ರಾತಿನಿದ್ಯ ನೀಡುವ, ಅವರನ್ನು ಸತ್ಕರಿಸುವ ಒಂದು ವ್ಯವಸ್ಥೆ.
ವಿಐಪಿಗಳನ್ನು ಹಲವು ರೀತಿಯಲಿ ಪಟ್ಟಿ ಮಾಡಲಾಗಿರುತ್ತದೆ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಸಾಧಕರು! ಆದರೆ ಹೆಚ್ಚಿನ ಪ್ರಾತಿನಿದ್ಯ ಸಿಗುವುದು ಶ್ರೀಮಂತಿಕೆಗೆ ಎನ್ನುವುದು ಹಲವು ಕಡೆ ವಾಸ್ತವ, ಇಲ್ಲಿ ಅಂತಹ ವ್ಯವಸ್ಥೆ ಕಾಲಗಟ್ಟಕ್ಕೆ ಅನಿವಾರ್ಯ, ಆದರೆ ಆ ವಿಐಪಿ ಕುರ್ಚಿಯ ಸಾಲುಗಳು ಸಾಮಾನ್ಯರಿಗೆ ಸ್ಪೂರ್ತಿಯ ಸಾಲುಗಳಾಗಬೇಕು! ಹಾಗಾಗಬೇಕಾದಲಿ ಅದರಲ್ಲಿ ಬಹಳಷ್ಟು ಅರ್ಹ ವ್ಯಕ್ತಿಗಳನ್ನು ಕುಲ್ಲಿರಿಸಬೇಕಾಗುತ್ತದೆ, ಅಲಂಕರಿಸುವ ವ್ಯಕ್ತಿಗಳು ಕೂಡಾ ಅರ್ಹವಾಗಿರಬೇಕಾಗುತ್ತದೆ, ಅದು ಜಾಗ ಬರ್ತಿ ಮಾಡುವ ಸಾಲುಗಳು ಆಗುತ್ತಿರುವುದು ವಿಪರ್ಯಾಸ.
ಶ್ರೀಮಂತಿಕೆಯನ್ನೇ ಮಾನದಂಡವಾಗಿಸುವುದಕ್ಕಿಂತ ಹೆಚ್ಚಾಗಿ ಅಲ್ಲಿ ಸಾಧಕ ಶ್ರೀಮಂತರಿಗೆ ಹೆಚ್ಚು ಪ್ರಾತಿನಿಧ್ಯ ಸಿಗಬೇಕು, ಸಾಮಾಜಕ್ಕೆ ಬಹಳ ಹತ್ತಿರವಾಗಿರುವ ವ್ಯಕ್ತಿಗಳಿರಬೇಕು, ಸಾಮಾನ್ಯರು ಕೂಡಾ ಮುಂದೆ ಸಾಧಕರಾದಾಗ ಆ ಕುರ್ಚಿಗಳಲ್ಲಿ ಕುಳಿತುಕೊಳ್ಳುವ ಅವಕಾಶ ಪಡೆಯಬೇಕು, ಅದು ಅಹಂಕಾರ ಪ್ರತಿಷ್ಠೆಯ ಸಾಲುಗಳಾಗಬಾರದು. ಸಾಧಕರನ್ನು ಅಣಕಿಸುವ ಸಾಲುಗಳೂ ಆಗಿರಬಾರದು, ಅದು ಪ್ರತಿಷ್ಠೆಯ ಚೇರುಗಳಾಗುವುದಕ್ಕಿಂತ್ ಸಮುದ್ದಾರಕರ ಚೇರುಗಳಾಗಬೇಕು, ಕೇವಲ ಶ್ರೀಮಂತಿಕೆ ಪ್ರಾತಿನಿಧ್ಯತೆ ಆಗಬಾರದು, ಶ್ರೀಮಂತಿಕೆಯ ಜೊತೆಯಲ್ಲಿ ಅರ್ಹ ಸಾಧಕ ವ್ಯಕ್ತಿತ್ವಗಳೂ ಅಲ್ಲಿರಬೇಕು.
ನಿಜವಾದ ವಿಐಪಿಗಳಿಗೆ ಗೌರವ ನೀಡುವ ಚೇರುಗಳಾಗಬೇಕು, ಕೇವಲ ಹಣ ಪ್ರತಿಷ್ಠೆಯ ಚೇರುಗಳಾಗಬಾರದು, ಸಮಾಜದಲ್ಲಿ ಗಮಾನರ್ಹ ಸಾಧನೆ ಮಾಡಿದ ವ್ಯಕ್ತಿತ್ವಗಳು ಅಲ್ಲಿ ಕಾಣಸಿಗಬೇಕು, ಸಾಧನೆಗಳು ಸಾಧಕರನ್ನು ಮುಂದಿನ ಸಾಲುಗಳಿಗೆ ಅಹ್ವಾನಿಸುವಂತಹ ಲೈನುಗಳಾಗಬೇಕು, ಸಾದಕರನ್ನು ಅಲ್ಲಿ ಕುಳ್ಳಿರಿಸಿ ಆ ಸಾಲುಗಳು ಬೆಳೆಯಬೇಕು, ಅನರ್ಹವಾದ ವ್ಯಕ್ತಿಗಳನ್ನು ಅಲ್ಲಿ ಕುಳ್ಳಿರಿಸಿ ಸಾಧಕರಿಗೆ ಅವಮಾನ ಮಾಡುವುದು ನಿಲ್ಲಬೇಕು, ಕಷ್ಟ ಪಟ್ಟ ಮುಂದೆ ಬಂದ ಜೀವಗಳು ಏನು ಕಷ್ಟ ಪಡದೆ ಮುಂದೆ ಬಂದು ಶ್ರೀಮಂತಿಕೆ ಮಾತ್ರ ಸಂಪಾದಿಸಿದವನ ಜೊತೆ ಕುಳ್ಳಿರಿಸಿ ಸಾಧನೆಗೆ ಅವಮಾನ ಮಾಡಬಾರದು, ಸಮಾಜದಲ್ಲಿ ಇನ್ನಷ್ಟು ಸ್ಪೂರ್ತಿದಾಯಕ ಸಾಧಕರು, ಸಮಾಜ ಕಾಳಜಿಯ ಉತ್ತಮ ಸ್ಥಿತಿವಂತರು ಬೆಳೆದು ವಿಐಪಿ ಸಾಲುಗಳು ಇನ್ನಷ್ಟು ಬೆಳೆಯಲಿ, ಕೇವಲ ಪ್ರತಿಷ್ಠೆಯ ಸಾಲುಗಳಾಗದೆ ಸ್ಪೂರ್ತಿಯ ಸಾಲುಗಳಾಗಲಿ.


No comments:
Post a Comment