Friday, October 31, 2014

ಸಾಧುವನ್ನು ಕ್ರೂರವಾಗಿಸುವಲ್ಲಿ ಮನುಷ್ಯನ ಪಾತ್ರ ( ಲೇಖನ)


ಚರ್ಚೆಯಲ್ಲಿರುವ ಒಂದು ವಸ್ತು ಮನುಷ್ಯನ ರಕ್ತವನ್ನೇ ಹೀರುತ್ತಿದೆ, ಅದು ಮನುಷ್ಯ ಸಂಬಂಧಗಳ ಮಧ್ಯೆ ಬಿರುಕನ್ನು ಉಂಟು ಮಾಡಿದೆ, ಅಗಾಧವಾದ ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣವಾಗಿದೆ, ಅಗಾಗ್ಗೆ ಕೋಮು ವಿರಹಿಗಳಿಗೆ ತಮ್ಮ ದುರ್ವರ್ತನೆಯನ್ನು ಪ್ರದರ್ಸಿಸುವ ವಸ್ತುವಾಗಿದೆ, ದೇವರೆಂದು ಪೊಜಿಸುವ ಒಂದು ವರ್ಗ! ಇನ್ನೊಂದೆಡೆ ಕಾನುನಿನಾತ್ಮಕ ನಿಷೇಧಿಸಲ್ಪಡದಿದ್ದರೂ ತೆರೆ ಮರೆಯಲ್ಲಿ ಮಾರಾಟ ಮಾಡುವವರೊಂದಿಗೆ ಪಡೆದು ತಿನ್ನುವ ವರ್ಗ! ಒಟ್ಟಲ್ಲಿ ಸದಾ ಚರ್ಚೆಯಲ್ಲಿರುವ ವಸ್ತು ಗೋವು!!


ಗೋವನ್ನು ಮತ್ತೆ ಚರ್ಚೆಗೆ ಎಳೆದು ತರಲಾಗುತ್ತಿದೆ, ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಯನ್ನು ದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳಿಗೆ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ, ಹುಲಿ ಸ್ವಾಭಾವಿಕವಾಗಿ ತನ್ನ ಮೇಲೆ ದಾಳಿ ಮಾಡುತ್ತಾರೋ ಎನ್ನುವ ಭಯದಿಂದ ಎದುರಿನಲ್ಲಿರುವವನ ಮೇಲೆ ಎರಗುತ್ತದೆ ಆಗ ಆತ ಗಾಯಗೊಳ್ಳುತ್ತಾನೆ ಅಥವ ಸಾಯುತ್ತಾನೆ ಅದು ಹಿಂಸೆಯ ಪ್ರತೀಕವಾಗುತ್ತದೆ ವಾಸ್ತವದಲ್ಲಿ ಆ ಪ್ರಾಣಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಕೂಡಾ ನಾವು ಹೆಜ್ಜೆ ತಪ್ಪಿ ವಿಫಲರಾಗಿದ್ದೇವೆ. ಸಾಧು ಪ್ರಾಣಿಯಾಗಿರುವ ಗೋವು ಈ ದೇಶದಲ್ಲಿ ಹುಲಿಗಿಂತಲೂ ಭಯಾನಕವಾದ ಹಿಂಸೆಯನ್ನು ಸೃಷ್ಟಿಸಿದೆ, ಅದೆಷ್ಟೋ ಜನರ ಜೀವಗಳನ್ನು ಬಲಿತೆಗೆದುಕೊಂಡಿದೆ, ಗೋವಿನ ಹೆಸರಿನಲ್ಲಿ ಬಲಿ ತೆಗೆಯಲಾಗಿದೆ! ಒಂದರ್ಥದಲ್ಲಿ ಹುಲಿಗಿಂತಲೂ ಅಪಾರವಾದ ಹಿಂಸಾತ್ಮಕ ಕೃತ್ಯಗಳಿಗೆ ಗೋವು ಕಾರಣವಾಗಿದೆ.

ತನ್ನನ್ನು ರಕ್ಷಿಸಿಕೊಳ್ಳುವಾಗ ಹುಲಿ ಹಿಂಸಾತ್ಮಕ ಪ್ರಾಣಿ ಎಂದು ಹೆಸರು ಪಡೆದಿದೆ ಆದರೆ ಸಾಧುವಾದ ಗೋವು ಮನುಷ್ಯರ ಪೈಶಾಚಿಕ ಚಿಂತನೆಗಳಿಂದಾಗಿ ಹಿಂಸೆಯ ಪ್ರತೀಕವಾಗಿದೆ, ಬೆಕೆಂದೇ ಬಳಸಿಕೊಳ್ಳಲಾಗಿದೆ. ಸಾಧುವಾದ ಗೋವು ಇಷ್ಟೊಂದು ಅಗಾಧವಾದ ಹಿಂಸೆಗೆ ಪ್ರಚೋದನೆ ನೀಡುತ್ತದೆ ಎನ್ನುವಾಗ ರಾಷ್ಟ್ರೀಯ ಪ್ರಾಣಿಯಾದಲ್ಲಿ ಬಡ ಜನತೆ ಮತ್ತಷ್ಟು ನಷ್ಟ ಅನುಭವಿಸಬೇಕಾದೀತು, ಗೋವು ರಾಷ್ಟ್ರೀಯ ಪ್ರಾಣಿಯಾಗಬೇಕು ಎಂದು ಮಂಡಿಸುವ ವಾದವೇ ಬಲು ದೊಡ್ಡ ತಪ್ಪುಕಲ್ಪನೆ.


ಪ್ರಬಲವಾಗಿ ಹುಲಿ ಅಥವಾ ಗೋವು ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎನ್ನುವುದಲ್ಲ ಈ ಪ್ರಾಣಿಗಳು ಮನುಷ್ಯನ ಸ್ವಾರ್ಥಕ್ಕೆ ಬಲಿಪಶುಗಳಾಗಿವೆ, ಇಲ್ಲಿ ಪ್ರಾಣಿಗಳು ಸ್ವಾರ್ಥದ ಫಲವಾಗಿ ಚರ್ಚಾ ವಸ್ತುವಾಗಿದೆ, ಸಾಧು ಪ್ರಾಣಿಯನ್ನು ಗೌರವಿಸುವುದಕ್ಕಿಂತ ಅದನ್ನು ಚರ್ಚೆಗೊಳಪಡಿಸುವುದಕ್ಕಿಂತ ಹೆಚ್ಚಾಗಿ ಸ್ವಾರ್ಥಿ ಮನುಷ್ಯ ಪ್ರಚಾರದಲ್ಲಿರಬಯಸುತ್ತಾನೆ, ತನ್ನ ಮತಾಂಧತೆಯನ್ನು ಪ್ರದರ್ಶಿಸಲು ಪ್ರಾಣಿಗಳನ್ನು ದಾಳವಾಗಿಸಿಕೊಂಡಿದ್ದಾನೆ, ಮನುಷ್ಯನನ್ನು ಬಲಿತೆಗೆಯುವಾಗ ಪ್ರಾಣಿಗಳು ಒಂದು ಕಾಲ್ಪನಿಕ ಕಾರಣವಾಗಿದೆ ಅಷ್ಟೇ. 

No comments: