ಕೈಯಲ್ಲೊಂದು ವಾಚು,
ಇಸ್ತ್ರೀ ಮಾಡಿದ ಬಟ್ಟೆ,
ಕಿಸೆಯಲ್ಲೊಂದು ಪರ್ಸು,
ನೋಟುಗಳಿಲ್ಲದ ಪರ್ಸು!
ಪಳ ಪಳ ಮಿನುಗುವ ಶೊ,
ಘಮ ಘಮ ಪರಿಮಳದ ಸೆಂಟು,
ಬೆಳೆಬಾಳುವ ಮೊಬೈಲು,
ಕರೆನ್ಸಿ ಇಲ್ಲದ ಮೊಬೈಲು!
ಬಡವನೆಂದು
ಖ್ಯಾತಿ ಪಡೆದ
ನೆರೆಮನೆಯವನಿಗೆ
ಎಲ್ಲವನ್ನೂ
ಬಂದು
ಕೊಟ್ಟು ಹೋದರು,
ಇಸ್ತ್ರೀಯ ಬಟ್ಟೆ
ನೋಡಿಯೇ
ನನ್ನನ್ನು ಬಿಟ್ಟು
ಹೋದರು.
ನಾನು
ಬದುಕಿರುವುದೇ ಹಾಗೆ
ಎನನ್ನೂ ಹೇಳದೇ, ಕೇಳದೆ,
ಪರ್ಸು ಇದ್ದು ದುಡ್ಡಿಲ್ಲದವನಾಗಿ,
ದುಡ್ಡು ಇಲ್ಲದೆಯೂ ಕರ್ಚು ಮಾಡುವವನಾಗಿ,
ಸಾಲದ ಹೊರೆ ನನ್ನ ಮೇಲೆ ಹೊತ್ತುಕೊಂಡವನಾಗಿ,
ಮಧ್ಯಮ ವರ್ಗದ ಅತಿ ಬಡವನಾಗಿ.
No comments:
Post a Comment