ಕೆಲವೊಮ್ಮೆ ನಾವು ಅವಿವೇಕಿಗಳಾಗುತ್ತೇವೆ ವಿವೇಚನಶೀಲರೆಂದು ಭಾವಿಸಿ, ತಪ್ಪನ್ನು ಸರಿಪಡಿಸುವ ಹೆಸರಿನಲ್ಲಿ ಇಲ್ಲದ ತಪ್ಪುಗಳನ್ನು ಸೃಷ್ಟಿಸಿ ಅವಾಂತರಗಳಿಗೆ ದಾರಿಮಾಡಿಕೊಡುತ್ತೇವೆ, ಸಹಜವಾಗಿ ಜನರು ಬದುಕುತ್ತಿರುವ ಸಮಾಜದಲ್ಲಿ ಬಿರುಕುಗಳಿಗೆ ನಾಂದಿಯಾಗುತ್ತೇವೆ, ಇಲ್ಲದ ವ್ಯಕ್ತಿಗಳನ್ನು ನೀರೆರೆದು ಪೋಷಿಸಲು ನಾವೇ ಸ್ವ ಕಾರಣವಾಗುತ್ತೇವೆ. ಇದಕ್ಕೆ ನಮ್ಮ ಕಾಳಜಿಯ ಆವೇಶ ಕಾರಣವಾಗಿರಬಹುದು, ತಿಳುವಳಿಕೆಯ ಕೊರತೆಯಾಗಿರಬಹುದು, ಸಮುದಾಯದ ಮೇಲಿನ ಪ್ರೀತಿಯಾಗಿರಬಹುದು, ಎಚ್ಚರ ಕೆಲವೊಮ್ಮೆ ಇವೆಲ್ಲ ನಮ್ಮನ್ನೆ ನಾವು ತಪ್ಪಿನ ಹೊಣೆಗಾರಿಕೆ ಹೊತ್ತುಕೊಳ್ಳಬೇಕಾದ ಮಾರಕ ರೂಪ ಪಡೆಯಬಹುದು.
ದೆಹಲಿಯ ಝೂ ಒಂದರಲ್ಲಿ ಮನುಷ್ಯನ ಪೀಕಲಾಟಕ್ಕೆ ಹೆದರಿ ಹುಲಿಯೊಂದು ಮಕ್ಸೂದ್ ಎಂಬ ಮುಗ್ದನನ್ನು ಬಲಿ ತೆಗೆದಿದೆ ಎಂದು ಇಡೀ ಹುಲಿ ಸಂತಾನವನ್ನು ಅದಕ್ಕೆ ಹೊಣೆಯಾಗಿಸಿದರೆ ಹೇಗೆ? ನಿಜವಾಗಿ ಅಲ್ಲಿ ಹುಲಿಗಿಂತ ಅದನ್ನು ಭಯಪಡಿಸಿದ ಮನುಷ್ಯರದ್ದೂ ತಪ್ಪಿದೆ ಎಂದು ಅನಿಸುವುದಿಲ್ಲವೇ? ಸಮಾಜದಲ್ಲಿ ಯಾವುದೋ ಒಂದು ಹೆಣ್ಣು ತನ್ನ ಹೆತ್ತವರ ಕಾಳಜಿಯ ಕೊರತೆಯಿಂದ ದಾರಿ ತಪ್ಪಿದಾಳೆ ಎಂದರೆ ಅದನ್ನು ಇಡೀ ಸಮುದಾಯಕ್ಕೆ ಹೊಣೆಯಾಗಿಸಿ ಮಾನ ಹರಾಜು ಮಾಡುವುದು ಮಾತ್ರವಲ್ಲ ಅದರಲ್ಲಿ ನಮ್ಮ ಪಾತ್ರವೂ ಇರುವುದು ಸಮಂಜಸವೇ? ಲೆಕ್ಕ ಪರಿಶೋಧನೆ ಮಾಡಿದವರ ಹಾಗೆ ಇಂತಿಷ್ಟೇ ಹೆಣ್ಣು ಮಕ್ಕಳು ಕೆಟ್ಟು ಹೋಗಿದ್ದಾರೆ ಎಂದು ಹೇಳುವುದು ಅದನ್ನು ವ್ಯಾಪಕವಾಗಿ ಪಸರಿಸುವುದು ಅದೆಷ್ಟು ಸರಿ? ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ವದಂತಿಗಳನ್ನು ಹಬ್ಬಿಸಬಾರದು ಎಂದು ತಿಳಿದಿರುವ ನಾವು ಸುಳ್ಳನ್ನು ಮತ್ತಷ್ಟು ಹಬ್ಬಿಸಿ ಸಮುದಾಯಕ್ಕೆ ಉಪಕಾರ ಮಾಡಿದ್ದೇವೆ ಎಂದು ತಿಳಿದರೆ ನಾವು ವಿಜಯಿಗಳಾಗಳು ಸಾಧ್ಯವೇ? ಕೆಟ್ಟು ಹೋದವರು ಇರಬಹುದು ಅದಕ್ಕೆ ಅದರದೇ ಅದ ವ್ಯವಸ್ಥೆಯಲ್ಲಿ ಪರಿಹಾರ ಕಂಡುಕೊಳ್ಳೋಣ ಬದಲಾಗಿ ವದಂತಿಗಳನ್ನು ಸತ್ಯವೆಂದು ಹಬ್ಬಿಸಿ ನಮ್ಮ ಹೆಣ್ಣು ಮಕ್ಕಳಿಗೆ ನಾವೇ ಶತ್ರುಗಳಾಗದಿರೋಣ. ಈಗಷ್ಟೆ ಸಮುದಾಯದ ಹೆಣ್ನುಮಕ್ಕಳು ಹೊರ ಸಮಾಜದಲ್ಲಿ ಇಸ್ಲಾಮಿನ ಅತ್ಯುನ್ನತ ಶಕ್ತಿಗಳಾಗಿ ಬೆಳೆಯುತ್ತಿರುವಾಗ ಅವರ ಉತ್ಸಾಹವನ್ನು ಕೆಡಿಸದಿರೋಣ, ಕೆಟ್ಟವರಿದ್ದರೆ ಅವರ ಹೆತ್ತವರಿಗೆ ಮನವರಿಕೆ ನಡೆಸಿ ಅವರನ್ನೂ ಜಗತ್ತಿಗೆ ಶಕ್ತಿಯಾಗಿ ಪರಿಚಯಪಡಿಸೋಣ, ಸತ್ಯವರಿಯೋಣ, ಕಲಂಕಳಿಗೆ ತೆರೆ ಎಳೆಯೋಣ.....
No comments:
Post a Comment