ಬಿರುಗಾಳಿಗೆ ಹಲವಾರು ಮಂದಿ ಮನೆ, ಸೊತ್ತುಗಳನ್ನು ಕಳೆದುಕೊಂಡು ನಿರ್ಗತಿಕರಾಗುತ್ತಾರೆ ಅಲ್ಲಿ ಶ್ರೀಮಂತರು ಬಡವರು ಎಲ್ಲರೂ ಅಸಹಾಯಕರಾಗುತ್ತಾರೆ, ತಮ್ಮ ಜೀವನವನ್ನು ಹಳೆಯ ಪದ್ದತಿಗೆ ಮರಳಿಸಲು ಹಲವು ವರುಷಗಳೇ ತೆಗೆದುಕೊಳ್ಳುತ್ತಾರೆ, ಇದು ಪ್ರಕೃತಿಯ ಅಟ್ಟಹಾಸ! ಇದೆ ರೀತಿ ಕೆಲೆವೊಮ್ಮೆ ಶ್ರೀಮಂತ ಕುಟುಂಬದ ಸಾಧಾರಣ ಸಂಸಾರದ ಅಧಾರ ಸ್ಥಂಬವೊಂದು ರೋಗ ಪೀಡಿತವಾಗಿಯೋ, ಅಚಾನಕ್ಕಾಗಿಯೋ ಮರಣ ಹೊಂದಿದರೆ ಅ ಕುಟುಂಬದ ಪರಿಸ್ಥಿತಿ ಒಲಾಮಯವಾಗುತ್ತದೆ. ಕುಟುಂಬದ ಶ್ರೀಮಂತಿಕೆ ಹಿನ್ನಲೆ ನಿರ್ಗತಿಕ ಕುಟುಂಬವನ್ನು ಕೈ ಹಿಡಿದಲ್ಲಿ ಪರಿಸ್ಥಿತಿ ತಹಬದಿಗೆ ಬರುತ್ತದೆ, ಇಲ್ಲದಿದಲ್ಲಿ ಸಾಧಾರಣವಾಗಿ ನಡೆಯುತ್ತಿದ್ದ ಆ ಕುಟುಂಬಕ್ಕೆ ನಗು ಮರೇಚಿಕೆಯಾಗುತ್ತದೆ, ಹೆಚ್ಚಿನೆಲ್ಲ ಶ್ರೀಮಂತ ಕುಟುಂಬ ಈ ಪರಿಸ್ಥಿತಿ ಇರುವ ಅರೆ ಮದ್ಯಮ ವರ್ಗದ ಕುಟುಂಬಗಳನ್ನು ಕೈ ಬಿಟ್ಟ ಸಲುವಾಗಿ ಅಂತಹ ಆಸರೆ ಕಳೆದುಕೊಂಡ ಕುಟುಂಬಗಳು ನಿರ್ಗತಿಕವಾಗಿವೆ, ಅಂತಹ ಉದಾಹರಣೆಗಳನ್ನು ಸಮಾಜದಲ್ಲಿ ಬಹಳಷ್ಟು ಕಾಣಬಹುದು.
ಅರೆ ಆರ್ಥಿಕ ಸ್ಥಿತಿಯಲ್ಲೇ ಬೆಳದು ಬಂದ ಆ ಕುಟುಂಬವನ್ನು ಅವರ ಹೀನಾಯ ಸ್ಥಿತಿಯಲ್ಲೇ ಅವರ ಸೊತ್ತುಗಳಿಂದ ಸಂಬಂಧಿಕರೇ ಕಸಿದುಕೊಳ್ಳುತ್ತಾರೆ, ತಮ್ಮದೇ ಕುಟುಂಬದ ಭಾಗ ಹೇಗೆ ಬದುಕುತ್ತಿದೆ ಎಂದು ಪರಿಸೀಲಿಸುವ ಗೋಜಿಗೆ ಶ್ರೀಮಂತ ವ್ಯಕ್ತಿಗಳು ಹೋಗುವುದಿಲ್ಲ, ಇನ್ನು ವ್ಯವಸ್ಥೆಗೆ ಅನುಗುಣವಾಗಿ ವಿಧವೆಯಾದ ತಾಯಿ ಬೇರೆ ಮದುವೆಯಾದಲ್ಲಿ ನಂತರ ಆ ಎರಡು ಕುಟುಂಬಗಳ ನಡುವೆ ಹೇಳಿಕೊಳ್ಳುವಂತಹ ಸಂಬಂಧ ಇರುವುದುಲ್ಲ, ಹೀಗೆ ತಮ್ಮವರನ್ನು ನೋಡದ ಕೆಲವು ಶ್ರೀಮಂತರು ಶೋಕಿಗಾಗಿ ಯಾರಿಗೋ ತೋರಿಕೆಗಾಗಿ ನೀಡುವ ಪರಿಪಾಟ ಬೆಳೆಸಿಕೊಳ್ಳುತ್ತಾರೆ, ತನ್ನವರು ಅರೆ ಹೊಟ್ಟೆಯಲ್ಲಿ ಇರುವಾಗ ಶೋಕಿಯೇ ಮೆಲೈಸುತ್ತದೆ, ತಂದೆ ತಾಯಿಯನ್ನು ಕಳೆದುಕೊಂಡು ಕಷ್ಟಪಡುತ್ತಿರುವ ಕುಟುಂಬವನ್ನು ಬೀದಿಪಾಲು ಮಾಡುತ್ತಾರೆ, ಕೆಲವೊಮ್ಮೆ ಅವರದೇ ಸೊತ್ತಿನಲ್ಲಿ ಸೌಧ ಕಟ್ಟಿ ಮೆರೆಯುವವರೂ ಇದ್ದಾರೆ.
ಹೆಚ್ಚಾಗಿ ಅಲ್ಪ ಸ್ವಲ್ಪ ಕಲಿತ ಮಗ ಕುಟುಂಬದ ಕೈ ಹಿಡಿಯುತ್ತಾನೆ, ಆತನು ಕುಟುಂಬವನ್ನು ಸವಾಲಾಗಿ ಮುನ್ನಡೆಸಿ ಯಶಶ್ವಿಯಾಗಿ ತನ್ನನ್ನು ಕಡೆಗನಿಸಿದವರನ್ನು ಸೆಟೆದು ನಿಲ್ಲುತ್ತಾನೆ, ಅಪರೂಪಕ್ಕ್ಕೆ ಹೆಣ್ಣು ಮಗಳು ಕಷ್ಟ ಪಟ್ಟು ಕಲಿತು ಆ ಕುಟುಂಬದ ಸಂತೋಷಕ್ಕೆ ಬುನಾದಿ ಹಾಕುತ್ತಾಳೆ, ಆ ಹೆಣ್ಣುಮಗಳೇ ಎಲ್ಲಕ್ಕೂ ಓಡಾಡಿ ಕುಟುಂಬಕ್ಕಾಗಿ ಜೀವನ ಸವೆಸುತ್ತಾಳೆ, ತನ್ನದೇ ಕುಟುಂಬದ ಶ್ರೀಮಂತ ವ್ಯಕ್ತಿಯ ಹೆಣ್ಣು ಮಗಳು ಅತಿ ಸಣ್ಣ ವಯಸ್ಸಿನಲ್ಲೇ ವಿವಾಹ ಬಂದಕ್ಕೊಳಗಾಗುವಾಗ ತನ್ನವರಿಗಾಗಿ ಕಷ್ಟ ಪಡುವ ಆ ಹೆಣ್ಣು ಮಗಳು ಅದೇ ಕಷ್ಟದ ಜೀವನ ಮುಂದುವರೆಸುತ್ತಾಳೆ. ಮಗನೊಬ ತನ್ನ ಸಹೋದರಿಯ ಮದುವೆಗಾಗಿ ತನ್ನೆಲ್ಲವನ್ನು ಬದಿಗಿಟ್ಟು ಅತಿ ದೊಡ್ಡ ತ್ಯಾಗಿಯಾಗುತ್ತಾನೆ, ಇದೆಲ್ಲಾ ಹಲವು ಬಾರಿ ಶ್ರೀಮಂತಿಕೆಯ ಮದವೇರಿದ ವ್ಯಕ್ತಿಗಳಿಗೆ ಕಿಂಚಿತ್ತೂ ಪಶ್ಚಾತಾಪದ ರೂಪಿಕರಣವಾಗುವುದಿಲ್ಲ, ಕೆಲವೊಮ್ಮೆ ತನ್ನವರನ್ನು ದೊರವಿಟ್ಟು ಅವರ ಬಗ್ಗೆ ಯೋಚಿಸದ ಶ್ರೀಮಂತ ಧರಿದ್ರ ಕುಟುಂಬಿಕರು ಕ್ರೂರಿಗಳಾಗುತ್ತಾರೆ, ಅನಾಥರ ಸೋತ್ತನ್ನೇ ಕಬಳಿಸುತ್ತಾರೆ, ತೋರಿಕೆಗಾಗಿ ಪ್ರತಿಫಲ ನಿಷೇಧವಾದ ದಾನ ಧರ್ಮ ಮಾಡುವುದಕ್ಕಿಂತ ತನ್ನದೇ ಕುಟುಂಬದ ಅಸಹಾಯಕ ಕುಟುಂಬದ ವ್ಯಕ್ತಿಗಳ ಕಣ್ನೀರೊರೆಸಬಹುದಿತ್ತು, ಕಷ್ಟ ಪಡುವ ಮಗನಿಗೆ ಆಸರೆಯಾಗಬಹುದಿತ್ತು.
ಅನೇಕ ಶ್ರೀಮಂತರು ಮನಸ್ಸಿನಲ್ಲಿ ಅವರಿಗೆಲ್ಲಾ ತಾವೇ ಕರ್ಚು ಮಾಡಬೇಕು ಎನ್ನುವ ಭಯದಿಂದ ಅವರನ್ನು ಆದಷ್ಟು ದೂರವಿಡುತ್ತಾರೆ, ಶ್ರೀಮಂತರ ಇಂತಹ ವರ್ತನೆ ಬಡ ಕುಟುಂಬವನ್ನು ಸ್ವಾಭಿಮಾನಿಗಳಾಗಿ ಮಾಡುತ್ತದೆ ಅವರು ಕಷ್ಟಗಳನ್ನು ತಮ್ಮೊಳಗೆ ಅಡಗಿಸಿಡುತ್ತಾರೆ, ಕೆಲವೊಮ್ಮೆ ಅದು ಅವರನ್ನು ದಾರಿ ತಪ್ಪಿಸುತ್ತದೆ, ತನ್ನ ಅಸಹಾಯಕ ಕುಟುಂಬಿಕರಿಗೆ ಒಂದಿಷ್ಟು ಮಾರ್ಗದರ್ಶನ ನೀಡಿದ್ದರೆ ಆ ಮನೆ ಮಗನು ದೊಡ್ಡ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ! ಆ ಹೆಣ್ಣು ಮಗುವು ಇವರ ಹೆಣ್ಣು ಮಗಳಂತೆ ತನ್ನ ಗಂಡನೊಂದಿಗೆ ಸುಖವಾಗಿರುತ್ತಿದ್ದಳು, ಈ ಬಗ್ಗೆ ಸ್ವಲ್ಪವೂ ಪ್ರಯತ್ನ ನಡೆಸದೆ ಇರಲು ಸಂಪತ್ತಿನ ವ್ಯಾಮೋಹ ಹೊಂದಿರುವ ಅತಿ ಕ್ರೂರಿಗಳಿಂದ ಮಾತ್ರ ಸಾಧ್ಯ.
ಅಸಹಾಯಕ ಕುಟುಂಬಗಳು ಬೀದಿಗೆ ಬರದಿರಲು ಶ್ರೀಮಂತ ವ್ಯಕ್ತಿಗಳು ತಮ್ಮ ಕುಟುಂಬದ ನಿರ್ಗತಿಕರ ಕಡೆಗೆ ಕಣ್ಣಾಡಿಸಬೇಕಾಗಿದೆ, ಹಾಗೆ ಅಸಹಾಯಕ ಕುಟುಂಬಗಳು ಸಂಬಂಧಿಕರು ಎನ್ನುವ ನೆಲೆಯಲ್ಲಿ ಸಹಾಯ ಕೇಳಿದಾಗ ನಟನೆಯನ್ನು ನಿಲ್ಲಿಸಿ ಅವರ ಪರವಾಗಿ ಬೆಂಬಲವಾಗಿ ನಿಲ್ಲಬೇಕಾಗುತ್ತದೆ, ಕಡೆಗಣಿಸಿ ಅವರು ಬೀದಿಗೆ ಬಂದಲ್ಲಿ ಅಂತಹ ಬಡ ಕುಟುಂಬಗಳ ಶಾಪ ಈ ಶ್ರೀಮಂತರನ್ನು ಕಾಡದೆ ಇರದು, ಈ ಬಗ್ಗೆ ತಮ್ಮವರನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಶ್ರೀಮಂತ ವ್ಯಕ್ತಿಗಳು ಗಾಡವಾಗಿ ಯೋಚಿಸಬೇಕಾಗಿದೆ, ಹಂಚಿಕೊಂಡು ಬಾಳಬೇಕು ಶ್ರೀಮಂತರಾಗಲಿ! ಬಡವರಾಗಲಿ! ಹಂಚಿಕೊಂಡಿದ್ದರಲ್ಲಿ ಇರುವ ಸುಖ ಬಚ್ಚಿಟ್ಟು ಕೂಡಿಟ್ಟಿದ್ದರಲ್ಲಿ ಯಾವತ್ತಿಗೂ ಕಾಣಲು ಸಾದ್ಯವಿಲ್ಲ ಅನ್ನುವುದನ್ನು ಅರಿತುಕೊಂಡು ಬಾಳಬೇಕು.

No comments:
Post a Comment