ಒಂದು ವ್ಯವಸ್ಥೆಯಲ್ಲಿ ಯಾರೋ ಮತಾಂದಿಗಳು ಮಾಡಿದ ತಪ್ಪಿಗಾಗಿ ಇಡೀ ಒಂದು ವರ್ಗವನ್ನೇ ತಪ್ಪಿತಸ್ಥರನ್ನಾಗಿ ನಿಲ್ಲಿಸುವ ಪ್ರಕ್ರೀಯೆ ನಡೆದುಕೊಂಡು ಬರುತ್ತದೆ ಮತ್ತು ಆ ಪ್ರಕ್ರೀಯೆ ಇಂದು ನಿಂಗೇಗೌಡ ಮತ್ತು ಶಿವಾನಂದರನ್ನು ಭಯೋತ್ಪಾದಕರು ಎಂದು ಗುರುತಿಸಲು ಸಾಧ್ಯವಾಗದೇ ಇರುವುದು. ಕೆಂಪೆಗೌಡ ವಿಮಾನ ನಿಲ್ದಾಣವನ್ನು ಬಾಂಬಿನ ಮೂಲಕ ಉಡಾಯಿಸುತ್ತೇವೆ ಎಂದು ಮುಸಲ್ಮಾನ ಹೆಸರಿರುವ ಯಾರಾದರೂ ಹೇಳಿರುತ್ತಿದ್ದರೆ ಇಷ್ಟೊತ್ತಿಗೆ ಅವರ ಹೆಸರುಗಳು ಟಿ ಆರ್ ಪಿ ಮಾಧ್ಯಮಗಳಲ್ಲಿ ವಿಜ್ರಂಬಿಸುತ್ತಿದ್ದವು! ಕೆಲ ಸಮಯದ ಹಿಂದೆ ಕಾಸರಗೋಡಿನ ಖಾದರ್ ನ ಹೆಸರು ರಾರಾಜಿಸಿದ ಹಾಗೆ!.
ಆದರೆ ಹುಸಿ ಬಾಂಬು ಕರೆಗಾಗಿ ಬಂಧಿಸಲ್ಪಟ್ಟ ವ್ಯಕ್ತಿಗಳು ಬೆಂಗಳೂರಿನ ವಿಮಾನ ನಿಲ್ದಾಣ ಸ್ಪೋಟಿಸುತ್ತೇವೆ ಎಂದು ಹೇಳಿ ಬಂಧನಕ್ಕೊಳಗಾದಾಗ ಬೆಂಗಳೂರನ್ನು ಸ್ಪೋಟಿಸುತ್ತೇನೆ ಎಂದು ಹೇಳಿ ಮೈಸೂರಿನಲ್ಲಿ ಬಂಧನಕ್ಕೊಳಗಾದ ಪ್ರದೀಪನಂತೆ ಮಾನಸಿಕ ರೋಗಿಗಳು ಎಂದು ವಿಮರ್ಸಿಸಲ್ಪಡುವುದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ ಯಾವ ಮಾಧ್ಯಮಗಳೂ ಅವರನ್ನು ಭಯೋತ್ಪಾದಕರು ಎಂದು ಬಿಂಬಿಸುತ್ತಿಲ್ಲ, ದೇಶದ ನಾಗರೀಕರನ್ನು ಯಾರೆಲ್ಲ ಭಯದ ವಾತಾವರಣದಲ್ಲಿ ಇಡಲು ಪ್ರಯತ್ನಿಸುತ್ತಾರೋ ಅವರೆಲ್ಲಾ ಭಯೋತ್ಪಾದಕರು ಅದು ಮುಸ್ಲಿಂ, ಹಿಂದು ಅಥವ ಇತರ ಯಾವ ಧರ್ಮದವನೇ ಆಗಿರಲಿ.
ಭಯೋತ್ಪಾದಕ ಎನ್ನುವ ಶಬ್ದ ಮುಸಲ್ಮಾನರಿಗೆ ಅಂಟಿಕೊಂಡಿರುವುದು ವಿಪರ್ಯಾಸ, ಮುಸಲ್ಮಾನರು ಈ ದೇಶವನ್ನು ಎಲ್ಲ ಕಾಲದಲ್ಲಿ ಅತಿಯಾಗಿ ಪ್ರೀತಿಸುವವರು ಮತ್ತು ದೇಶ ಮುನ್ನಡೆಯುವಲ್ಲಿ ಶಕ್ತಿ ನೀಡುವವರು.ಮಾಧ್ಯಮಗಳು ಮುಸಲ್ಮಾನರು ಭಯೋತ್ಪಾದನ ಸಂಬಂಧಿ ಕೇಸುಗಳಲ್ಲಿ ಆರೋಪಿ ಎಂದಾಗ ಡಂಗುರ ಸಾರಿ ಭಯೋತ್ಪಾದಕ ಎಂದು ಚಿತ್ರಿಸುತ್ತದೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾತ್ರ ವಹಿಸುವ ಎಲ್ಲರನ್ನೂ ಸಮಾನವಾಗಿ ವಿಶ್ಲೇಷಿಸಬೇಕಾದದ್ದು ಮಾಧ್ಯಮಗಳ ಕರ್ತವ್ಯ, ಮಾಧ್ಯಮಗಳು ನ್ಯಾಯದ ಪರವಾಗಿ ನಿಲ್ಲಬೇಕು.




No comments:
Post a Comment