ನಾನು ಕಷ್ಟ
ಪಟ್ಟು ಸಂಪಾದಿಸಿದ
ದುಡ್ಡು! ನನ್ನ
ಬುದ್ದಿಶಕ್ತಿಯಿಂದ ಕೂಡಿಟ್ಟ
ದುಡ್ಡು!! ಅದರಲ್ಲಿ
ಬಡವನ ಪಾಲು
ಎಲ್ಲಿಂದ ಬಂತು?
ಹೀಗೆ ಅಲೋಚಿಸುವ
ಸ್ಥಿತಿವಂತರು ನಮ್ಮ
ಮಧ್ಯೆ ಹೆಚ್ಚು
ಹಾಗಾಗಿಯೇ ಕೆಲವು
ಸೀಮಿತ ಶ್ರೀಮಂತರು
ದುಂದುವೆಚ್ಚದಲ್ಲಿ ತೊಡಗಿರುವುದು,
ಆಡಂಬರದ ಮದುವೆಗಳು
ಕಾಣಸಿಗುವುದು, ಖರ್ಚು
ಮಾಡಬಾರದು ಎಂದು
ಯಾವ ಧರ್ಮದ
ತತ್ವಾದರ್ಶಗಳು ಅಡ್ಡಿಯಾಗಿಲ್ಲ,
ಅಡ್ಡಿಪಡಿಸದವರೂ ಇಲ್ಲ,
ಒಂದು ಇತಿಮಿತಿಯೊಳಗೆ
ಖರ್ಚು ಮಾಡಲು
ಶ್ರೀಮಂತರಿಗೂ, ಬಡವರಿಗೂ,
ಒಟ್ಟಲ್ಲಿ ಸರ್ವಜನರಿಗೂ
ಸೃಷ್ಟಿಕರ್ತನು ಸಮ್ಮತಿಸಿರುತ್ತಾನೆ
ಆದರೆ ಆ ಎಲ್ಲೆಗಳನ್ನು ಮೀರಿ ಹೋಗಬಾರದು.
ಸೃಷ್ಟಿಸಿದ ಸೃಷ್ಟಿಕರ್ತನನ್ನೇ
ಮೂರ್ಖ ಮಾಡಲು
ಹೊರಟಿರುವ ಸಮಾಜ
ಇದು, ಮಸೀದಿಯ
ಒಳಗೆ ಸರಳವಾಗಿ
ನಿಖಾ ಕಾರ್ಯಕ್ರಮ
ಮುಗಿಸಿ ತದನಂತರ
ಆಡಂಬರದ ಎಲ್ಲೆಗಳನ್ನೆಲ್ಲಾ
ಮೀರಿ ಶೃಂಗಾರಗೊಂಡ
ಬಣ್ಣ ಬಣ್ಣದ
ಚಿತ್ತಾರಗಳ ನಡುವೆ
ತಿನ್ನುವವನು ತಿಂದು
ಮುಗಿಸಲು ಸಾಧ್ಯವಿಲ್ಲದಷ್ಟು
ಇಟ್ಟು ಭಾರೀ
ಮದುವೆ ಎಂದು
ಪ್ರಚಾರ ಗಿಟ್ಟಿಸಿಕೊಳ್ಳುವ
ತವಕ!!! ಇಂತಹ
ಮನೋಸ್ಥಿತಿ ಉಲ್ಲ
ಶ್ರೀಮಂತರಿಗೆ "ನಿಮ್ಮನ್ನು ನಿರ್ಗತಿಕನಾಗಿ
ಕಂಡು ಸ್ಥಿತಿವಂತನಾಗಿ
ಮಾಡಲಿಲ್ಲವೇ" (ಕುರ್ ಆನ್ - 93: 8) ಎನ್ನುವ ದೇವ ವಾಖ್ಯ
ಮರೆತಂತಿದೆ! ಮರೆತವರಲ್ಲ
ಸಂಪತ್ತು ಮರೆಸಿದೆ.
ಒಂದು ಕಡೆ
ಸರಳವಾಗಿ ನಿಖಾ
ಆಗಿ ದೇವನನ್ನು
ಮರುಳು ಮಾಡುವ
ಸಂಚು ಇನ್ನೊಂದೆಡೆ
ತನ್ನ ಆಡಂಬರದ
ಮೂಲಕ ಸ್ವರ್ಗವನ್ನು
ಖರೀದಿಸಿದ ನೆನಪು!
ಇದಕ್ಕೆಲ್ಲಾ ಕೊನೆ
ಇದೆ ಬಡ
ನಿರ್ಗತಿಕನ ಕಣ್ಣೀರ
ಶಾಪವೇ ಇದಕ್ಕೆಲ್ಲಾ
ಕೊನೆ.
"ಸಿರಿವಂತನಾಗಿ ಮಾಡಲಿಲ್ಲವೇ"
ಎಂದು ಎಚ್ಚರಿಸಿದ
ಸೃಷ್ಟಿಕರ್ತನಿಗೆ ಸಂಪತ್ತಿನ
ಮೋಹದ ಅಂಧಕಾರದಲ್ಲಿ
ಬದುಕುತ್ತಿರಿವವನನ್ನು ನಿರ್ಗತಿಕನಾಗಿ
ಮಾಡಲು ಅಹೋರಾತ್ರಿಗಳು
ಬೇಕಾಗಿಲ್ಲ ಅವನ
ಪರೀಕ್ಷೆ ನೆನಪಿರಲಿ.
ದೇವನು ನಮ್ಮ
ಮೇಲಿನ ಅನುಗ್ರಹಗಳು
ಇಲ್ಲವಾಗಿಸುವುದಕ್ಕಿಂತ ಮೊದಲು
ನಾವು ಎಚ್ಚೆತ್ತುಕೊಳ್ಳಬೇಕಾಗಿದೆ, ಖರ್ಚಿನಲ್ಲಿ ವಾಸ್ತವಿಕತೆಯ
ನೆನಪಿರಲಿ ಅದು
ಇನ್ನೊಬ್ಬನನ್ನು ಹಿಯಾಳಿಸುವ,
ಹಿಮ್ಮೆಟ್ಟಿಸುವ ಅಥವಾ
ಆಡಂಬರದಲ್ಲಿ ಪ್ರಥಮ
ಸ್ಥಾನ ಪದೆದುಕೊಳ್ಳುವ
ತೆವಳಾಗದಿರಲಿ, ನಾಳೆ
ದೇವನ ಮುಂದೆ
ನಿಳ್ಳುವಾಗ ನಿರ್ಗತಿಕರಾದ
ಶ್ರೀಮಂತರಾಗಿ ನಿಲ್ಲದೆ
ಪರೀಕ್ಷೆಯಲ್ಲಿ ಜಯಿಸಿದ
ಶ್ರೀಮಂತರ ಪಟ್ಟಿಯಲ್ಲಿ
ಸೇರಿಕೊಳ್ಳುವ ಪ್ರಯತ್ನಗಳಿರಲಿ.



No comments:
Post a Comment