ಬುರ್ಖಾದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ, ಕುರಾನಿನ ವಾಕ್ಯದ ಅರ್ದ ಅಂಶವನ್ನು ಲೇಪಿಸಿ ಅದರ ಹಿನ್ನಲೆಯನ್ನು ಮರೆತು
ವಿಭಿನ್ನ ಅರ್ಥವನ್ನು ಸಮಾಜಕ್ಕೆ ಪರಿಚಯಪಡಿಸುವ ಮನೋಸ್ಥಿತಿಗಳು ಬೆಳೆದು ಬರುತ್ತಿದೆ, ಆವೇಶದಲ್ಲಿ ಯಾರ ಮಾತು ಎಂದು ಅರಿಯದೆ ಅದನ್ನು ತಿಳಿಯುವ ಪುರುಸೊತ್ತಿಲ್ಲದೆ ಕೆಲವರು ಇಂತವರೆ ಎಂದು ನಿರ್ಧರಿಸುವ ಮೂಲಕ ಮಾತಿಗೆ ಮಾತು ಬೆಳೆಯುತ್ತಿದೆ, ಏಟಿಗೆ ಎದಿರೇಟು ನೀಡುವ ಭರದಲ್ಲಿ ಮುಸ್ಲಿಮ ಸಮುದಾಯದ ಕೆಲ ಯುವಕರು ಪ್ರಜ್ಞಾವಂತಿಕೆಯನ್ನು ಮರೆಯುತಿದ್ದಾರೆ, ತಮ್ಮ ವರ್ತನೆ ಹೇಗಿರಬೇಕು, ತಾವು ಹೇಗೆ ಸಮಾಜಕ್ಕೆ ಮಾದರಿ ಅನ್ನುವುದನ್ನು ತಳ್ಳಿ ಹಾಕುವಂತಿದ್ದಾರೆ.
ಬುರ್ಖಾ ಸಮುದಾಯದ ಹೆಣ್ಣು ಮಕ್ಕಳಿಗೆ ಬೇಕೋ ಬೇಡವೇ? ಅದು ಅವರಿಗೆ ಹಿಂಸೆಯಾಗುತ್ತಿದೆ ಎಂದು ಚಿಂತಿಸಿ ಅದು ಅವರಿಗೆ ಬೇಕೋ ಬೇಡವೋ ಎಂದು ಗುಪ್ತ ಮತದಾನ ಮಾಡಬೇಕು ಆಗ ಸತ್ಯ ಹೊರಬರುತ್ತದೆ ಎಂದು ಹೇಳಿದಾಗ ಅದರ ಬಗ್ಗೆ ಚರ್ಚೆಗಳು ನಡೆಯುತಿದೆ, ಆ ಚರ್ಚೆಗಳು ಒಂದು ಹಂತ ಮೀರಿದಾಗ ಅದನ್ನು ಚರ್ಚೆ ಮಾಡಿದವರು ಇಂತಹ ಮನೋಸ್ಥಿತಿ ಉಳ್ಳವರ ಬಗ್ಗೆ ಒಂದು ಗುಪ್ತ ಮತದಾನ ನಡೆಸಿ ಇಂತಹ ಸಲಹೆ ನೀಡುವವರು ಈ ಸಮಾಜಕ್ಕೆ ಬೇಕೇ ಬೇಡವೇ ಎಂದು ಒಂದು ಗುಪ್ತ ಮತದಾನ ಮಾಡಿದರೆ ಹೇಗೆ ಎಂದು ಯೋಚಿಸಬಹುದಿತ್ತು, ಆದರೆ ಹಾಗೆ ಮತದಾನಗಳು ಎಲ್ಲ ಸಮಸ್ಯೆಗೆ ಪರಿಹಾರ ಅಲ್ಲ, ಬುರ್ಖಾದ ಬಗ್ಗೆ ಹಾಗೆ ಹೇಳಿದಾಗ ಮತದಾನದ ಸಿದ್ದತೆಗ ನಡೆಸುವ ಪ್ರಯತ್ನಗಳು ನಡೆಯಬೇಕಿಲ್ಲ.
ಅಷ್ಟಕ್ಕೂಬುರ್ಖಾ ಬೇಕೋ ಬೇಡವೋ, ಅದು ಮಹಿಳೆಯರಿಗೆ ಹಿಂಸೆಯೇ ಎನ್ನುವ ಒಂದು ಚರ್ಚೆಗೆ ಮುಸ್ಲಿಂ ಯುವಕರು ಅವ್ಯಾಚ್ಯ ಸಬ್ದಗಳನ್ನು ಬಳಸಿ ಕೊಪಿಷ್ಟರಾಗುವ ಬದಲು ಮನವರಿಕೆ ಮಾಡಿಕೊಡಬಹುದಿತ್ತು, ಅಲ್ಲಿಯೂ ಇಸ್ಲಾಮಿನ ಸ್ವಭಾವವನ್ನು ಪ್ರಕಟಿಸಬಹುದಿತ್ತು, ಆಗಲೂ ಆದರ್ಶದಿಂದ ಮೆರೆಯಬಹುದಿತ್ತು. ಅಷ್ಟಕ್ಕೂಬುರ್ಖಾ ಧರಿಸುವ ಮಹಿಳೆ ಅದರ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸದಿರುವಾಗ ಅದು ಅವಳಿಗೆ ಸಮಸ್ಯೆ ಅಲ್ಲ ಎಂದು ಅರ್ಥ ಮಾಡಿಕೊಳ್ಳಬೇಕಿತ್ತು, ಚರ್ಚೆಗೆ ಇಳಿದಿರುವ ಕೆಲವರು ಚರ್ಚೆಯನ್ನಷ್ಟೇ ಬಯಸುತಿದ್ದಾರೆ ಆದರೆ ಪ್ರತಿಕ್ರೀಯಗಳು ಚರ್ಚೆಯಾಗಿ ಉಳಿದಿಲ್ಲ, ಕೆಲವೊಮ್ಮೆ ಅದು ನಿಂದನೆಯ ರೂಪವನ್ನು ಕೂಡಾ ಪಡೆದಿದೆ. ಕೋಪ ಭರಿತ ಚರ್ಚೆಗಳಿಂದ ಪರಿಹಾರ ದೊರಕದು ಅಂತಹ ಚರ್ಚೆಗಳು ಕೆಸರೆರೆಚಾಟಕ್ಕೆ ಮಾತ್ರ ದಾರಿ.
ಬುರ್ಖಾದ ಒಳಗಿರುವ ಮಹಿಳೆಯರಿಗೆ ದ್ವನಿಯಾಗಬೇಕು ಎನ್ನುವವರು ಅವರು ಧರಿಸಿರುವ ಬುರ್ಖಾದ ಒಳಗಿಂದಲೇ ದನಿಯಾಗಬಹುದಿತ್ತು, ಬದಲಾಗಿ ಅದನ್ನು ಕಳಚಿಟ್ಟು ಎಲ್ಲವನ್ನು ತೋರಿಸುವವಳಾಗಿ ಬಯಸಬಾರದಿತ್ತು!!
ಬುರ್ಖಾದ ಒಳಗಿರುವ ಮಹಿಳೆಯರಿಗೆ ದ್ವನಿಯಾಗಬೇಕು ಎನ್ನುವವರು ಅವರು ಧರಿಸಿರುವ ಬುರ್ಖಾದ ಒಳಗಿಂದಲೇ ದನಿಯಾಗಬಹುದಿತ್ತು, ಬದಲಾಗಿ ಅದನ್ನು ಕಳಚಿಟ್ಟು ಎಲ್ಲವನ್ನು ತೋರಿಸುವವಳಾಗಿ ಬಯಸಬಾರದಿತ್ತು!!
ಬುರ್ಖಾವನ್ನು ಒಪ್ಪಿಕೊಂಡವರು ಒಪ್ಪಿಕೊಂಡಿದ್ದಾರೆ, ಅದರ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಿದ್ದಾರೆ, ಒಪ್ಪದವರು ದೂರವುಳಿದಿದ್ದಾರೆ ಅವರ ಮೇಲೆ ಬಲವಂತಿಕೆಯೇ ಹೇರಿಕೆ ನಡೆದಿದಿಲ್ಲ, ನಡೆಸಲು ಸಾಧ್ಯವೂ ಇಲ್ಲ್ಲಮತ್ತು ಅದನ್ನು ತೀರ್ಮಾನಿಸುವಷ್ಟು ಮಹಿಳೆಯರು ಸಕ್ತರಾಗಿದ್ದಾರೆ.
ಇಸ್ಲಾಂ ಮಹಿಳೆಯರಿಗೆ ಸುರಕ್ಷತೆಯ ವಿಚಾರವಾಗಿ ಪರ್ದಾ ವ್ಯವಸ್ಥೆ ಯನ್ನು ಭೊಧಿಸಿದೆ, ಆ ಪರ್ದಾ ವ್ಯವಸ್ಥೆ ನಾನ ರೀತಿಯಲ್ಲಿ ಚಾಲ್ತಿಯಲ್ಲಿದೆ ಮತ್ತು ಅದರ ಭಾಗವೇ ನಾವು ಕಾಣುವ ಬುರ್ಖಾ. ಬುರ್ಖಾ ಧರಿಸದೆ ಪರ್ದಾದಾರಿಯಾಗಿರುವ ಮುಸ್ಲಿಂ ಮಹಿಳೆಯರ ಬಗ್ಗೆ ಯಾವ ಬಲವಂತಿಕೆಯು ಬುರ್ಖಾ ಧರಿಸಿ ಎಂದು ತಿಳಿಸಿಲ್ಲ ಹಾಗಾಗಿದ್ದರೆ ಅದು ಅರೆ ಪ್ರಜ್ಞಾವಂತಿಕೆ, ಬುರ್ಖಾ ಪರ್ದಾದ ಒಂದು ನಮೂನೆ ಅಷ್ಟೇ. ಮುಸ್ಲಿಂ ಯುವಕರು ಕೂಡಾ ಬುರ್ಖಾ ಮತ್ತು ಪರ್ದಾದ ವ್ಯತ್ಯಾಸವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು,
ಮುಸ್ಲಿಮರ ವಿಚಾರಗಳ ಬಗ್ಗೆ ಚಕಾರವೆತ್ತುವವರು ಅದನು ಚರ್ಚೆ ಮಾಡಿ ಪರಿಹರಿಸಿಕೊಳ್ಳಲು ಇಷ್ಟಪಡುವವರಲ್ಲ, ಅವರು ಚರ್ಚೆಗಳ ಮೂಲಕ ಸದಾ ಸಮಾಜದಲ್ಲಿ ಚಾಲ್ತಿಯಲ್ಲಿರುವ ವಸ್ತುವಾಗಲು ಇಷ್ಟಪಡುತ್ತಾರೆ, ಅವರಿಗೆ ತಮ್ಮನ್ನು ಗುರುತಿಸಿಕೊಳ್ಳುವ ಹಂಬಲ, ಆವೇಶದ ಮಾತುಗಳುಲ್ಲ ಯುವಕರಿಂದ ಅವರಿಂದು ಹಿರೋಗಳಾಗುತಿದ್ದಾರೆ, ನಮ್ಮ ನಿಮ್ಮಂತೆಯೇ ಇರುವವರನ್ನು ಹಿರೋಗಳಾಗಿ ಮಾಡುವುದನ್ನು ನಿಲ್ಲಿಸಬೇಕು, ಮುಸ್ಲಿಮರು ಆವೆಶಕ್ಕಿಂತ ಹೆಚ್ಚು ಇಸ್ಲಾಮಿ ವಾಸ್ತವಿಕತೆಯ ಬಗ್ಗೆ ಮಾತನಾಡಿದರೆ ಹೀರೋಗಳಾಗಳು ಬಯಸುವರು ಯಾವ ದಾರಿಯಿಂದಲೂ ಹಿರೋಗಳಾಗಳು ಸಾದ್ಯವಿಲ್ಲ, ಕೆಸರೆರೆಚಾಟಗಳು ನಮ್ಮ ನಿಮ್ಮಂತೆ ಇರುವರನ್ನು ಹಿರೋಗಳಾಗಿ ಮಾಡದಿರಲಿ.

No comments:
Post a Comment