Thursday, September 11, 2014

ಕಾಶ್ಮೀರದ ಕಣ್ಣೀರು


ಕ್ಷಣ ಕ್ಷಣವೂ ಭಯೋತ್ಪಾದನೆಯ ನೆರಳಲ್ಲಿ, 
ಅಡಗಿದ್ದವು ಮಾನವೀಯತೆಯ ನೆಲೆ ಅಲ್ಲಿ, 
ಮನುಷ್ಯಟ್ಟಹಾಸಕ್ಕೆ ನಲುಗಿದ್ದ ನಾಡಿಂದು ನೀರಿನಲ್ಲಿ! 
ಕೋಟಿ ರೂಪಾಯಿಯ ಧನಿಕ ಪರದಾಡುತ್ತಿರುವುದೂ ಅದೇ ನೀರಿಗಾಗಿ!.

ಸೈನಿಕ ಸೇವೆಯ ಸಮರೋಪಾದಿಗೆ ಅಸಹನೆಯ ಕಲ್ಲು,
ನೆರವಿಗಾಗಿ ಧಾವಿಸಬೇಕಾಗಿದೆ ಮಾನವೀಯತೆಯ ಬಂಧು,
ಪ್ರಕೃತಿಯ ಅಟ್ಟಹಾಸಕ್ಕೆ ಕಾಶ್ಮೀರಿಯ ಸಂಕಷ್ಟ,
ರಕ್ತದ ತಪ್ಪಲಲ್ಲಿ ನೀರಿನ ಸೆಳೆಗೆ ಹಲವು ಬಲಿ.

ಪ್ರಾರ್ಥನೆ ಪರಿಹಾರದ ಭರವಸೆ ಇರಲಿ,
ಪ್ರವಾಹದ ಮಗ್ಗಳಿನಿಂದ ಕಾಶ್ಮೀರ ಹೊರಬರಲಿ,
ನೊಂದ ಜೀವಗಳಿಗೆ ಬದುಕು ಕಟ್ಟಿಕೊಲ್ಲುವ ದಿನ ಬರಲಿ,
ಭಾರತದ ಹೆಮ್ಮೆಯ ಭಾಗವಾಗಿ ಬೆಳೆಯಲಿ ಕಾಶ್ಮೀರ.

No comments: