Friday, September 26, 2014

ಇಂಡಿಯನ್ ಜಾಹಿಲೀನ್.......


ಪ್ರದೀಪ್ ಬದಲಿಗೆ ಮಹಮ್ಮೆದ್ ಮೈಸೂರಿನ ಪ್ರಕರಣದಲ್ಲಿ ಇದ್ದಿದ್ದಲ್ಲಿ ಬಲುದೊಡ್ಡ ಚರ್ಚೆಯಾಗುತಿತ್ತು, ಕೇಜಿ ಲೆಕ್ಕದಲ್ಲಿ ಮಾರಲ್ಪಡಲು ಅರ್ಹವಾಗಿರುವ ಕೆಲವು ಪತ್ರಿಕೆಗಳು ದಪ್ಪ ಅಕ್ಷರದಲ್ಲಿ ಹೊಸ ವ್ಯಾಖ್ಯಾನದೊಂದಿಗೆ ವರ್ಣರಂಜಿತ ಮುಖ ಪುಟ ಪ್ರಕಟಿಸುತಿತ್ತು, ಕಲ್ಪನೆಗಳ ಚರ್ಚೆ ನಡೆಯುತ್ತಿತ್ತು, ಚರ್ಚಾ ಗೋಷ್ಟಿಯ ಹಿಂದಿನ ಪರದೆಯಲ್ಲಿ ಗಡ್ಡಾ ದರಿಸಿರುವ ಗನ್ ದಾರಿಯೊಬ್ಬ ಕಾಣಸಿಗುತ್ತಿದ್ದ ಆದರೆ ಸಿಕ್ಕಿರುವುದು ಪ್ರದೀಪ್. ೩೦ ಕಡೆಗಳಲ್ಲಿ ಸ್ಪೋಟ ನಡೆಸುವ ಬೆದರಿಕೆ ನೀಡಿ ಸಂದೇಶ ರವಾನಿಸಿದ ಆರೋಪ ಆತನ ಮೇಲೆ ಇದೆ, ಆದರೆ ಆತ ಚರ್ಚೆ ಅಲ್ಲ ಅಮಾಯಕ, ಆತನ ಮನೆ ಮತ್ತು ಸಂತಾನದ ಕಥೆಯನ್ನು ನಮ್ಮ ಮಾಧ್ಯಮಗಳು ಬಿಚ್ಚಿಡುವುದಿಲ್ಲ ಕಾರಣ ಟೆರರಿಸ್ಟ್ ಆಗಬೇಕಾದರೆ ಮಾಧ್ಯಮಗಳ ದ್ರಿಷ್ಟಿಯಲ್ಲಿ ಕೆಲವು ಮಾನದಂಡಗಳಿವೆ ಅದರ ಪ್ರಕಾರ ಗಡ್ಡಾ, ಪೈಜಾಮಾ ಅಥವಾ ಕಡೆ ಪಕ್ಷ ಮುಸ್ಲಿಂ ಹೆಸರು ಇರಬೇಕು.  ಪ್ರದೀಪನಿಗೆ ಮುಸ್ಲಿಮರ ಜೊತೆ ಸಂಬಂದ ಇದೆಯೇ ಎಂದು ಸ್ಟ್ರಿಂಗ್ ಆಪರೇಷನ್ ಮಾಡಲು ಹೊರಟಿರಬಹುದು ನಮ್ಮ ಮೇಕಿಂಗ್ ನ್ಯೂಸ್ ಚಾನೆಲ್ ಗಳು ಆ ಕಾರಣದಿಂದ ಚರ್ಚೆಯಲ್ಲಿ ಕಾಣುತ್ತಿಲ್ಲ ವಾಗಿರಬಹುದು. ಭಟ್ಕಳದ ನಂಟು ಹುಡುಕಲು ಹೋಗಿರಬಹುದು ಇನ್ನು ಕೆಲವು ಮಾದ್ಯಮಗಳು. ಪ್ರದೀಪ ಇಂಡಿಯನ್  ಜಾಹಿಲೀನ್ ಎಂದು ಅಷ್ಟು ಸುಲಭವಾಗಿ ಮಾಧ್ಯಮಗಳು ಒಪ್ಪಿಕೊಳ್ಳುವುದಿಲ್ಲ, ಪ್ರದೀಪ ಮಾನಸಿಕ ಸ್ಥಿಮಿತ ಕಳೆದುಕೊಂಡವನು, ಮಾನಸಿಕ ಅಸ್ವಸ್ಥ ಎಂದು ವಾದಿಸಲು ತೊಡಗಬಹುದು ಕೂಡಾ, ತದನತರ ಯಾವುದಾದರು ಗಡ್ಡದಾರಿಯ ಹಿಂದೆ ಮೇಕಿಂಗ್ ನ್ಯೂಸ್ ಮಾಡುತ್ತಾ ಸಮಯ ಕಳೆಯಬಹುದು ನಮ್ಮ ಕೆಲವು ಜಾಹಿಲೀನ್ ಮಾಧ್ಯಮಗಳು.  

No comments: