ಸತ್ಯದ ವಕ್ತಾರರಾಗಿ,
ಸದ್ಗುಣ ಹೊಂದಿ,
ನ್ಯಾಯದ ಚುಕ್ಕಾಣಿಗೆ
ಬೆನ್ನೆಲುಬಾಗಿ,
ಅಸಹಾಯಕರಿಗೆ
ಆಸರೆಯಾಗಿ,
ಅಶಕ್ತ ಕೈಗಳಿಗೆ
ಶಕ್ತಿಯಾಗಿ,
ಸತ್ಯದ ಸ್ವಾವಲಂಬದ
ನಿಲುವಿನಲ್ಲಿ,
ಯುವಕರೇ ಮುನ್ನಡೆಯಿರಿ.
ಗೆಲುವಿನ ನಿರೀಕ್ಷೆಯಲ್ಲಿ.
ಸತ್ಕರ್ಮದ ಹಾದಿಯಲ್ಲಿ,
ಕಷ್ಟಗಳಿಗೆ ಸ್ಪಂದಿಸುವವರಾಗಿ,
ಸಮಾಜದ ಬದಲಾವಣೆಯಲ್ಲಿ,
ನ್ಯಾಯದ ಪರವಾಗಿ
ಯುವಕರೇ ಮುನ್ನಡೆಯಿರಿ
ಹೊಸ ಬೆಳದಿಂಗಳ ಕನಸಾಗಿ ,
ಶಾಂತಿಯ ಮರುಸ್ಥಾಪನೆಗಾಗಿ
ಐಕ್ಯತೆಯ ಅಗತ್ಯಕ್ಕಾಗಿ,
ಆಶಯಗಳೊಂದಿಗೆ
ಯುವಕರೇ ಮುನ್ನಡೆಯಿರಿ.
No comments:
Post a Comment