Tuesday, September 30, 2014

ಸ್ನೇಹಿತರಾಗಿರೋ ಚಹಾ ಕುಡಿದುಕೊಂಡು

ಸ್ನೇಹಿತರ ಬಳಿ ಹಲವು ವಿಷಯಗಳನ್ನು ಚರ್ಚಿಸಿ ಸಂತೋಷ ಪಡುವ ನಾವು  ಕೆಲವು ನೋವುಗಳನ್ನುಹಂಚಲು ಇಷ್ಟಪಡುವುದಿಲ್ಲ ಆದರೆ ಹಂಚಿಕೊಂಡಾಗ ಸಿಗುವ ನಿರಾಳತೆ ಬಚ್ಚಿಟ್ಟಾಗ ಸಿಗಲು ಸಾದ್ಯವಿಲ್ಲ, ಹೊಟ್ಟೆಯ ಹಸಿವನ್ನು ತಣಿಸಲು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ತಿನ್ನುವ ನಮಗೆ ಸಂಜೆಯ ಟೀ ಕುಡಿಯುವುದು ಅತ್ಯಗತ್ಯ ಅಲ್ಲ, ಆದರೂ ತಲೆನೋವು ಬಾರದಿರಲಿ ಎನ್ನುವ ಸಲುವಾಗಿ ಹೆಚ್ಚಿನ ಜನರು ಅದಕ್ಕೆ ಒಗ್ಗಿಕೊಂಡಿದ್ದಾರೆ, ಅದೇ ರೀತಿ ಕೆಲವು ವಿಚಾರಗಳನ್ನು ಸ್ನೇಹಿತರ ಜೊತೆ ಹಂಚಿಕೊಂಡಾಗ ಚಹಾ ಕುಡಿಯದೆ ಬರುವ ತಾತ್ಕಾಲಿಕ ತಲೆನೋವನ್ನು ತಪ್ಪಿಸಬಹುದು, ಮನಸ್ಸಿನಲ್ಲಿ ಬಚ್ಚಿಟ್ಟು ಕಾಡುತ್ತಿರುವ ವಿಚಾರಗಳನ್ನು ಸ್ನೇಹಿತರ ಜೊತೆ ಮುಕ್ತವಾಗಿ ಚರ್ಚಿಸಿ ಪರಿಹಾರ ಪಡೆದು ನಿರಾಳವಾಗಿರಬಹುದು. 
ಯಾವುದಕ್ಕೂ ಸ್ನೇಹಿತರಾಗಿರೋ ಚಹಾ ಕುಡಿದುಕೊಂಡು. 

No comments: