Thursday, September 11, 2014

ರಕ್ತದ ಕೋಡಿ ಹರಿಸಿ ಕಷ್ಟ ಪಟ್ಟು ಪಡೆದು ಗಳಿಸಿದ ಸ್ವಾತಂತ್ರ್ಯ
ಕೋಟಿ ಕೋಟಿ ಲೂಟುವವರ ಕೈಯ್ಯಲ್ಲಿ ಇಂದು ನಮ್ಮ ಸ್ವಾತಂತ್ರ್ಯ

ಲೂಟಿ ಮಾಡಿ ಹರಿಯುವ ಗಲಭೆಯ ರಕ್ತವೇ ನಮಗೆ ಸಿಕ್ಕ ಸ್ವಾತಂತ್ರ್ಯ
ನಮ್ಮವರದೇ ಭಯದ ಕರಿನೆರಳಿನಲ್ಲಿ ಇಂಗ್ಲೀಷರು ಬಿಟ್ಟು ಹೋದ ಸ್ವಾತಂತ್ರ್ಯ

ಜಾತಿ ಭೇದ ವರ್ಣವಿಲ್ಲದೆ ನಡೆದ ಹೋರಾಟದ ಫಲವೇ ಸ್ವಾತಂತ್ರ್ಯ
ರಕ್ತದಲ್ಲೂ ಜಾತಿ ಹುಡುಕುವ ಕೀಚಕರ ಮದ್ಯೆ ಯಾವ ನಿರೀಕ್ಷೆಯ ಸ್ವಾತಂತ್ರ್ಯ 

ವರುಷ ಉರುಳಿ ಮತ್ತೆ ಮತ್ತೆ ಬರುತಿದೆ ಸಂಬ್ರಮದ ಸ್ವಾತಂತ್ರ್ಯ
ಹಸಿದ ಬಡವನಿಗೆ ಕೇಸರಿ ಬಿಳಿ ಹಸಿರು ಬಣ್ಣದಲ್ಲಿ ಯಾವ ಸ್ವಾತಂತ್ರ್ಯ

No comments: