Monday, September 22, 2014

ರಾಜಕೀಯ ಭಯೋತ್ಪಾದನೆ


ಲಕ್ಷಗಟ್ಟಲೆ ಮುಸ್ಲಿಮರು 
ಮದರಸಾ ಕೇಂದ್ರದ 
ನೆರಳಲ್ಲಿ ಬೆಳೆದವರು.

ಒಂದಿಬ್ಬರಿಗೆ ವಿಳಾಸ 
ನೀಡುವ ಸಲುವಾಗಿ 
ನೆರಳಿನ ಕೇಂದ್ರವನ್ನೇ 
ಭಯೋತ್ಪಾದನ 
ತಾಣವಾಗಿಸ 
ಹೊರಟರಿವರು.

ಮನೆಯಲ್ಲಿ, ಬೈಕಿನಲ್ಲಿ, 
ಬಾಂಬು ತಯಾರಿಸುವಲ್ಲಿ 
ಚಿದ್ರಗೊಂಡು 
ನರಳಾಡಿದವರು 
ದೇಶ ಸೇವಕರಾಗುವಾಗ, 
ಸ್ವಾತಂತ್ರದ ಬಾವುಟ 
ಹಾರಿಸುವ ಮದರಸಾಗಳು
ಆಯುಧಗಳ ತಾಣವೆಂಬ 
ಹೊಲಸು ರಾಜಕೀಯ.

ಒಂದೆರಡು ಗಂಟೆಯ 
ಪಾಠದಲ್ಲೇ 
ಜಗತ್ತಿಗೆ ಮಾದರಿ 
ವ್ಯಕ್ತಿಗಳನ್ನು ನೀಡಿದ 
ಮದರಸಾಗಳ ಬಗ್ಗೆ 
ಕೆಲವರು ನೀಡಿದ 
ಹುಚ್ಚು ಕಲ್ಪನೆಗಳೇ 
ಭಯೋತ್ಪಾದನೆ.

No comments: