Tuesday, September 30, 2014

ಮಾನ ರಕ್ಷಣೆಗಾಗಿ ಮನವಿ!

ದಾರಿಹೋಕನೊಬ್ಬನಿಗೆ ಬೀದಿ ಬದಿ ಬಿದ್ದಿದ್ದ ಅಂಚೆ ಪತ್ರವೊಂದು ಕಾಣಸಿಕ್ಕಿತು ಅದನ್ನು ಎತ್ತಿಕೊಂಡು ಸಾಗುತ್ತಿದ್ದ ಅಂಚೆ ವಿತರಕನನ್ನು ಇದೋ ನಿಮ್ಮ ಪತ್ರ ಎಂದು ಕರೆದ! ಅಷ್ಟೊತ್ತಿಗೆ ಆತ ಮಾರ್ಗದಂಚಿನಲ್ಲಿ ಮರೆಯಾಗಿದ್ದ, ಪತ್ರ ಹಿಡಿದುಕೊಂಡು ಸಂಯಮ ತಡೆಯಲಾಗದ ದಾರಿಹೋಕ ಅದನ್ನು ತೆರೆದೇ ಬಿಟ್ಟ.....
ಪತ್ರ ಓದಿದೊಡನೆ ದಂಗಾಗಿ ಹೋದ.....

ಪತ್ರದಲ್ಲಿ......

ನಮಸ್ಕಾರಗಳು,
ಮಾನ ರಕ್ಷಣೆಗಾಗಿ ಮನವಿ!

ಇತ್ತೀಚೆಗೆ ನಮಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ, ಮಾತೆ ಎಂದು ಕರೆದವರು ಮಾತೆಯನ್ನು ಬಿಡದೆ ಅತ್ಯಾಚಾರ ಮಾಡಿದ ಘಟನೆ ನನಗೆ ತಡವಾಗಿ ತಿಳಿದು ಬಂತು ಆ ದಿನದಿಂದ ನನಗೆ ನಿದ್ದೆ ಬರುತ್ತಿಲ್ಲ ಹೊರಗೆ ಹೋದ ನನ್ನವರು ಪರಿಶುದ್ದರಾಗಿ ತಿರುಗಿ ಬರಲಾರರೋ ಎನ್ನುವ ಭಯ, ನನ್ನ ಮತ್ತು ನನ್ನವರ ಮೇಲೆ ಈ  ರಕ್ಷಕರು ಬಕ್ಷಕರಾಗಿ ತಮ್ಮ ಕಾಮವನ್ನು ತೀರಿಸುತ್ತಾರೋ ಎನ್ನುವ ಭಯವಿದೆ, ದಯವಿಟ್ಟು ರಕ್ಷಣೆ ನೀಡಿ ಇಲ್ಲದಿದ್ದರೆ ಒಂದು ಪರವಾನಿಗೆಯ ಶಾಶ್ತ್ರಾಸ್ತ್ರ ವನ್ನಾದರೂ ನೀಡಿ ಮನುಷ್ಯ ಕಾಮ ಪಿಶಾಚಿಗಳಿಂದ ರಕ್ಷಿಸಿ, ದಯವಿಟ್ಟು ನಮ್ಮನ್ನು ರಕ್ಷಿಸುತ್ತೇವೆ ಎಂದು ಹೇಳಿಕೊಂಡು ತಿರುಗಾಡುವವರಿಂದ ನಮ್ಮನ್ನು ರಕ್ಷಿಸಿ. ಮಾತೆ ಮಾತೆ ಎಂದು ನಮ್ಮ ಮಾನದ ಕಥೆಯನ್ನೇ ಇಲ್ಲವಾಗಿಸಲು ಹೊರಟವರಿಂದ ನಮ್ಮನ್ನು ರಕ್ಷಿಸಿ, ಸಾಧ್ಯವಾಗದಿದ್ದರೆ ಶಿಸ್ತಿನಿಂದ ಕಡಿದು ತಿನ್ನುವವರಿಗಾದರೂ ಮಾರಿ ಬಿಡಿ......

ನಿಮ್ಮನ್ನೇ ನಂಬಿದ್ದೇವೆ
ಇತೀ ತಮ್ಮ
ಮಾತು ಮಾತಿಗೂ ಮಾತೆ ಎಂದು ಕರೆಸಲ್ಪಟ್ಟವರು.

ಪತ್ರ ತೆರೆದ ತಪ್ಪಿಗೆ ತನ್ನನ್ನು ತಾನೇ ಶಪಿಸಿಕೊಂಡು ತನ್ನ ದಾರಿಯಲ್ಲಿ ನದೆದ.

No comments: