ನಾನು ಸ್ವರ್ಗಕ್ಕೆ!
ನೀನು ನರಕಕ್ಕೆ!
ಕಚ್ಚಾಡಿ
ಸೋದರನನ್ನು
ದೂರ
ಮಾಡಿಟ್ಟ.
ದುಡುಕಿನಿಂದ
ಇಸ್ಲಾಮೀ
ಆಶಯವನ್ನು
ಧೂಲೀಪಟವಾಗಿಸಿಬಿಟ್ಟ
ಕಾಲ ಕಳೆಯಿತು
ಸಂಬಂದ
ದೂರವಾಗಿತ್ತು
ಅದೊಂದು ದಿನ
ಸೋದರ
ಇಹಲೋಕ ತ್ಯಜಿಸಿದ್ದ
ನೀನು ಸ್ವರ್ಗಕ್ಕೆ
ನೀ ಮಾಡಿದ ಪುಣ್ಯ
ಕಾರ್ಯಕ್ಕೆ
ನಿನ್ನನರಿಯದೆ ನಾ
ಎಡವಿದ್ದೆ
ನಿಂತು ಅತ್ತು ಬಿಟ್ಟ.
ಕಚ್ಚಾಡಿಸಿ ದೂರ
ಮಾಡಿದವರಾರು?
ಸೋದರರೊಳಗೆ ನರಕದ
ಭಾವ ತಂದವರಾರು?
ಅರಿತು ಸ್ವರ್ಗದ ಕಡೆ
ನಡೆಯಬೇಕಾದವರು ನಾವು......
No comments:
Post a Comment