ಸತ್ಯವನ್ನು ಪರಿಚಯ ಪಡಿಸುವ ಮಾಧ್ಯಮಗಳ ಕೊರತೆಯಿಂದಾಗಿ ಖಾದರ್ ನಂತವರು ಬೇಕಾಬಿಟ್ಟಿ ಬ್ರೆಕಿಂಗ್ ನ್ಯೂಸ್ ಗಳಾಗುತ್ತಿದ್ದಾರೆ, ಮುಸ್ಲಿಂ ಹೆಸರು ಕೇಳಿ ಬಂದಾಗ ಪರಾಮರ್ಶಿಸದೇ ವೈಭವಿಕರಿಸಿ ಇಸ್ಲಾಮಿಗೆ ಧಕ್ಕೆ ತರಲು ಮಾಧ್ಯಮಗಳು ಎನಿಸಿಕೊಂಡವುಗಳು ತುದಿಗಾಲಲ್ಲಿ ನಿಂತಿವೆ. ಮಾರುವಾಗ ಗುಜರಿ ಅಂಗಡಿಯವನಲ್ಲಿ ತೂಕದ ಲೆಕ್ಕದಲ್ಲಿ ಬೆಲೆ ಪಡೆಯಲು ಮಾತ್ರವೇ ಅರ್ಹವಾಗಿರುವ ಪತ್ರಿಕೆಗಳು ತುಂಬಿ ಹೋಗಿವೆ, ಮಾಧ್ಯಮ ವೃತ್ತಿಗೆ ಅಸಹ್ಯವಾಗುವಂತೆ ನಡೆದುಕೊಳ್ಳುತ್ತಿವೆ ಹೆಚ್ಚಿನೆಲ್ಲ ಪತ್ರಿಕೆಗಳು.
ನ್ಯಾಯ ಸತ್ಯವಂತನ ಕಡೆಗೆ ಇದೆ ಖಾದರ್ ನಂತ ಅಮಾಯಕರು ಟೆರ್ರೆರಿಸ್ಟ್ ಎಂದು ಹಣೆ ಪಟ್ಟಿ ಕಟ್ಟಿ ನಿರ್ಧೋಷಿಗಳು ಎಂದು ಸಾಬೀತಾಗುತ್ತಿದ್ದಾರೆ, ವಿಪರ್ಯಾಸ ಕೆಲ ಮಾಧ್ಯಮಗಳಿಗೆ ಇನ್ನೂ ಅವರು ಟೆರರಿಸ್ಟ್! ವೈಭವೀಕರಿಸಿ ಸುಳ್ಳನ್ನು ಸತ್ಯ ಎಂದು ಸಾಬೀತು ಪಡಿಸಲು ಹೊರಟ ಕೆಲ ಮಾಧ್ಯಮಗಳು ತಪ್ಪಿನ ಅರಿವಿಲ್ಲದಂತೆ ಸುಮ್ಮನೆ ಕುಳಿತಿವೆ, ಮಾಡುವುದೇ ತಪ್ಪು ಅನ್ನುವಾಗ ತಪ್ಪಿತಸ್ತನ ಮನೋಭಾವ ಕುತಂತ್ರಿ ಮಾಧ್ಯಮಗಳಿಗೆ ಬರುವುದಾದರು ಹೇಗೆ? ಇಂತಹ ಪತ್ರಿಕೆಗಳು ಇನ್ಯಾವ ಖಾದರ್ ನನ್ನು ಬಲಿಪಶು ಮಾಡಿಸಬಹುದು ಎಂದು ಹೊಂಚು ಹಾಕಿ ತನ್ನ ಸಂಚಿನತ್ತ ಚಿತ್ತವನ್ನು ಕೇಂದ್ರೀಕರಿಸಿದೆ.
ಖಾದರ್ ನಂತವರು ಇವರಾಟಕ್ಕೆ ಬಲಿಯಾಗಿ ಟೆರರಿಸ್ಟ್ ಎಂದು ಬಿಂಬಿತವಾಗಿ ಮನಸೋತು ಜೀವನ ಕಳೆಯುತ್ತಿದ್ದಾರೆ, ವಂಚಿತರಾಗುತ್ತಿದ್ದಾರೆ, ಇನ್ನಷ್ಟು ಖಾದರ್ ಗಳು ಬಲಿಯಾಗುತ್ತಿದ್ದಾರೆ. ಕಾದರ್ ನಂತವರು ಟೆರರಿಸ್ಟ್ ಗಳಾಗಲು ಕಾರಣ ಯಾರು ಅನ್ನುವುದು ಕೂಡ ಬಲು ದೊಡ್ಡ ಪ್ರಶ್ನೆಯೇ ಸರಿ!! ಸತ್ಯವಂತರು ಮಾಧ್ಯಮಗಳತ್ತ ಮುಖ ಮಾಡದೆ ದೂರ ನಿಂತು ದುರಂತಕ್ಕೆ ಸಾಕ್ಷಿಯಾಗುತ್ತಿದ್ದಾರೆ! ಮತಿಗೆಟ್ಟವರು ಕಚ್ಚಾಡುತ್ತಿದ್ದಾರೆ ತಮ್ಮೊಳಗೆ! ನ್ಯಾಯಯುತರು ಮಾಧ್ಯಮ ರಂಗಕ್ಕೆ ಪ್ರವೇಶ ಮಾಡುವ ಪ್ರಯತ್ನ ನಡೆಸಿದರೂ ಬೆಂಬಲದ ಕೊರತೆಯ ಫಲವಾಗಿ ಸೋತು ಹೊಗುತ್ತಿದ್ದಾರೆ, ಇವೆಲ್ಲಾ ಕಾರಣದಿಂದ ಲದ್ದಿ ಪತ್ರಿಕೆಗಳು ರಾಜ್ಯದ ಹೆಸರಾಂತ ಪತ್ರಿಕೆಗಳು ಎಂದು ಬಿಂಬಿತವಾಗಿದೆ.
ಹಲವು ಮಾಧ್ಯಮಗಳು ಮುಸ್ಲಿಮರನ್ನು ಟೆರರಿಸ್ಟ್ ಎಂದು ಪ್ರಚಾರ ಪಡಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ, ಮಾತ್ರವಲ್ಲ ಅದರಲ್ಲಿ ಗೆದ್ದಿದೆ ಕೂಡ, ಅದರೂ ನಾವು ನಿಷ್ಕ್ರೀಯರು! ಸ್ವಾರ್ಥಿಗಳು ನಮ್ಮ ನಮ್ಮೊಳಗೇ!! ಕೆಲವು ಮಾಧ್ಯಮಗಳನ್ನು ನೀಚ ಪತ್ರಿಕೆಗಳು ಎನ್ನುವುದಕ್ಕಿಂತ ಹಲವು ಸಮಾಜ ಮುಖಿ ಪತ್ರಿಕೆಗಳು ಹುಟ್ಟಬೇಕಾಗಿದೆ ಪ್ರಸಕ್ತ ಕಾಲಮಾನಕ್ಕೆ, ಅವರು ನೀಚ ಪ್ರವೃತ್ತಿಯನ್ನೇ ಮಾಡಲೆಂದು ಬಂದವರು ಇನ್ನು ಅವರಿಂದ ಒಳಿತಿನ ನಿರೀಕ್ಷೆ ಮೂರ್ಖತನ.
ಮಾಧ್ಯಮ ರಂಗದಲ್ಲಿ ಮುಸ್ಲಿಮರ ಮಾತ್ರವಲ್ಲ ನೀತಿವಂತರ ಪ್ರವೇಶ ಅಗತ್ಯವಲ್ಲವೇ? ನಾವು ಇನ್ನೊಂದು ಖಾದರ್ ಬಲಿಯಾಗುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳ ಬೇಡವೆ? ಲದ್ದಿ ಪತ್ರಿಕೆಗಳು ಮುಸ್ಲಿಮರನ್ನು ಗುರಿಯಾಗಿಸಿ ಟೆರರಿಸ್ಟ್ ಎಂದು ಬಿಂಬಿಸಲು ಏನು ಕಾರಣ ಎಂದು ಅರಿಯಬೇಕಲ್ಲವೇ? ಮುಸ್ಲಿಮರೇ ಏಕೆ ಬಲಿಯಾಗುತ್ತಿದ್ದಾರೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಲ್ಲವೇ? ಪ್ರಶ್ನಿಸಿಕೊಳ್ಳೋಣ! ನಮ್ಮೊಳಗೇ ಉತ್ತರ ಸಿಗಬಹುದು.
No comments:
Post a Comment