Saturday, September 20, 2014

ಹೆಜ್ಜೆ ತಪ್ಪಿಸುತ್ತಿರುವ ಓಲೈಕೆ (ಲೇಖನ)



ಮುಗ್ದತೆಯನ್ನು ಬಳಸಿ ದೇಶದಲ್ಲಿ ಮುಸ್ಲಿಮರ ಓಲೈಕೆ ನಡೆಯುತ್ತಲೇ ಬಂದಿರುವ ಪ್ರಸಂಗ, ಓಲೈಕೆಗಳು ಮುಸ್ಲಿಮರ ಮುಗ್ದ ಮನಸ್ಸನ್ನು ಗೆದ್ದಿದೆ ಕೂಡಾ, ಪ್ರಜಾಪ್ರಬುತ್ವ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಈ ದೇಶದ ಮುಸಲ್ಮಾನರು ದೇಶಕ್ಕಾಗಿ ಸಾಯಲು ಇಷ್ಟಪಡುತ್ತಾರೆ ಅವರು ದೇಶ ದ್ರೋಹ ವೆಸಗಲಾರರು ಎಂದಾಗ ಆ ಹೇಳಿಕೆಯನ್ನು ಎಲ್ಲೆಡೆ ಸ್ವಾಗತಿಸಲಾಗಿದೆ ಒಬ್ಬ ದೇಶದ ಪ್ರಧಾನಿ ಪ್ರಜಾಪ್ರಬುತ್ವ ವ್ಯವಸ್ಥೆಯ ಸಮತೋಲನಕ್ಕಾಗಿ ನೀಡಿದ ಹೇಳಿಕೆಯನ್ನು ಒಪ್ಪಿಕೊಳ್ಳಬಹುದು ಆದರೆ ಅದರ ಹಿನ್ನಲೆ ಮತ್ತು ಆಗು ಹೋಗುಗಳನ್ನು ಮರೆಯುವಂತಹ ರೀತಿಯಲ್ಲಿ ಸ್ವಾಗತಿಸೋದು ತರವಲ್ಲ,  ಬಿಜೆಪಿಯ ಮುಖಂಡರುಗಳು ಮುಸ್ಲಿಮರಲ್ಲಿ ಕ್ಷಮಾ ಭಾವನೆ ವ್ಯಕ್ತಪಡಿಸುತ್ತಿರುವು ಇದೇ ಮೊದಲ ಬಾರಿ ಅಲ್ಲ, ರಾಜನಾಥ್ ಸಿಂಗ್ ರಂತಹ ಪ್ರಮುಖ ನಾಯಕರು ಕ್ಷಮೆ ಕೇಳುತ್ತಲೇ ಬಂದಿದ್ದಾರೆ ಮತ್ತು ಸ್ವಾರ್ಥದ ಕ್ಷಮೆಗೆ ಮುಸಲ್ಮಾನರು ಕರಗಿದ್ದಾರೆ ಕೂಡಾ ಹಾಗಾಗಿ ಮತ್ತೆ ಮತ್ತೆ ಅನುಕಂಪದ ಓಲೈಕೆಗಳು ನಡೆಯುತ್ತಿದೆ, ನರೇಂದ್ರ ಮೋದಿಯವರು ಮುಸ್ಲಿಮರ ಪರವಾಗಿ ಮಾತನಾಡಿದರೂ ಅವರನ್ನು ಏಕೆ ಟೀಕೆಗೆ ಒಳಪಾಡಿಸಲಾಗುತ್ತಿದೆ ಎನ್ನೂದು ಕೂಡ ಬಲು ದೊಡ್ಡ ಪ್ರಶ್ನೆ! ಅದು ಅವರು ನಂಬಿಕೊಂಡು ಬಂದಂತಹ ಸಿದ್ದಾಂತ ಮತ್ತು ಅದರ ಅನುಸ್ಟಾನದ ವಿರುದ್ದ ನಡೆಯುವ ಪ್ರಬಲ ದ್ವನಿ,

ಅಷ್ಟಕ್ಕು ಮುಸ್ಲಿಮರಲ್ಲಿ ಕ್ಷಮಾ ಭಾವನೆ ವ್ಯಕ್ತಪಡಿಸುವವರು ಮುಸ್ಲಿಮರ ವಿರುದ್ದ ನಿಂತ ಸಲುವಾಗಿಯೇ ದೊಡ್ಡ ಮಟ್ಟಕ್ಕೆ ಬೆಳೆದಿರೋದು, ಇದೇ ಮಾತನ್ನು ಅವರು ಹಲವು ವರ್ಷಗಳ ಹಿಂದೆ ಒಪ್ಪಿಕೊಂಡಿದ್ದರೆ ಅವರಿಂದು ಇಷ್ಟು ದೊಡ್ಡ ನಾಯಕರಾಗಿ ಹೊರಹೊಮ್ಮುತ್ತಿರಲಿಲ್ಲ, ಇಂತಹ ಹೆಚ್ಚಿನೆಲ್ಲ ನಾಯಕರು ಮುಸ್ಲಿಮರ ವಿರುದ್ದ ನಿಂತ ಸಲುವಾಗಿಯೇ ರಾತ್ರೋರಾತ್ರಿ ನಾಯಕರೆನಿಸಿ ಕೊಂಡಿರುವುದು, ಚುನಾವಣೆಗೆ ಮುಂಚೆ ಮುಸ್ಲಿಮರ ಕ್ಷಮೆ ಕೇಳಿದವರು ಕೊನೆ ಕ್ಷಣದಲ್ಲಿ ತಮ್ಮ ಚುಣಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ತಾವು ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಮತ್ತು ಅ ಪ್ರಣಾಳಿಕೆ ಇವರ ಕ್ಷಮೆಗಳಿಗೆ ತದ್ವಿರುದ್ದವಾದ ಅರ್ಥ ನೀಡುತ್ತಿತ್ತು ಮತ್ತು ಅವರು ಏನು ಬಯಸುತ್ತಿದ್ದಾರೆ ಅನ್ನುವುದನ್ನು ಸ್ಪಷ್ಟವಾಗಿ ತೋರಿಸುತಿತ್ತು, ಅದೇ ಪ್ರಣಾಳಿಕೆಯ ಭಾಗವನ್ನು ಅವರು ಹಂತ ಹಂತವಾಗಿ ಅನುಷ್ಟಾನಗೊಳಿಸುತ್ತಿದ್ದಾರೆ ಮತ್ತು ಅದು ನಮಗಾರಿಗೂ ಅರಿವಾಗದ ರೀತಿಯಲ್ಲಿ, ಹಾಗೆ ಅದನ್ನು ಮರೆಮಾಚಲು ಮುಸ್ಲಿಮರ  ಮುಗ್ದತೆಯನ್ನು ಬಳಸಿಕೊಳ್ಳಲಾಗುತ್ತಿದೆ ಅದರ ಭಾಗವಾಗಿ ಈ  ಓಲೈಕೆಗಳು ಆಗಾಗ ನಡೆಯುತ್ತಿರುತ್ತದೆ ಅದೊಂದು ಸಹಜ ಪ್ರತಿಕ್ರೀಯೆ ಎಂದು ಬಣ್ಣಿಸಬಹುದು.


ಹೀಗೆ ಓಲೈಕೆಯನ್ನು ಸಮರ್ಥಿಸಿಕೊಂಡ ಒಂದು ವರ್ಗ ಎಲ್ಲವನ್ನು ಕಳೆದುಕೊಳ್ಳುವ ಹಂತ ಸೃಷ್ಠಿಯಾಗುತ್ತದೆ, ಮುಸ್ಲಿಮರು ದೇಶಕ್ಕಾಗಿ ಸಾಯಲು ಸಿದ್ದರಿದ್ದಾರೆ ಎಂದು ಒಪ್ಪಿಕೊಳ್ಳುವುದಾದರೆ ಮುಸ್ಲಿಮರಿಂದ ಈ ದೇಶಕ್ಕೆ ಅಪಾಯವವಿಲ್ಲ ಎಂದರ್ಥ, ಹಾಗಾದರೆ ಅಪಾಯ ಯಾರಿಂದ ಎನ್ನುವುದನ್ನು ಸ್ಪಷ್ಟಪಡಿಸಬೇಕಾಗುತ್ತದೆ, ವಿಳಾಸವಿಲ್ಲದ ಯಾರೋ ಮಾಡಿದ ದುಷ್ಕೃತ್ಯಕ್ಕೆ ಬಂದನವಾಗಿ ಜೈಲುಗಳಲ್ಲಿ ಇರುವ ಅಮಾಯಕ ಮುಸ್ಲಿಮರನ್ನು ಬಿಡುಗಡೆಗೊಳಿಸುವ ಕೆಲಸವನ್ನು ಶೀಘ್ರವಾಗಿ ಮೋದಿಯವರು ಮಾಡಬೇಕಾಗುತ್ತದೆ, ಇದು ಬರೀ ಹೇಳಿಕೆ ಮಾತ್ರ ಮತ್ತು ಬರೀ ಚರ್ಚೆಗೆ ಸೀಮಿತವಾದ ವಿಚಾರ, ಒಳ್ಳೆಯವರು ಎಂದು ಗಾಳಿಯಲ್ಲಿ ತೆಲಾಡಿಸಿ ತಮ್ಮ ಯೋಜನೆಗಳನ್ನು ಅನುಷ್ಟಾನಗೊಳಿಸುವ ಉದ್ದೇಶ.

ಪ್ರತಿರೋದವಿಲ್ಲದೆ ಅಂದುಕೊಂಡ ವಿಚಾರಗಳನ್ನು ಕಾರ್ಯರೂಪಕ್ಕೆ ಮಾಡಲು ಬಹಳ ಸುಲಬವಾಗಿ ಆಯ್ದುಕೊಂಡ ಮಾರ್ಗ, ನರೇಂದ್ರ ಮೋದಿಯವರು ಹೀಗೆ ನೀವು ಒಳ್ಳೆಯಯವರು ಎಂದು ಗಾಳಿಯಲ್ಲಿ ತೆಲಾಡಿಸುತ್ತಿರುವಾಗ ಅವರ ಆನುಯಾಯಿಗಳು ಅದೇ ದೇಶಪ್ರೇಮಿಗಳ ವಿರುದ್ದ ಲವ್ ಜಿಹಾದ್, ಮಾದರಸ ಭಯೋತ್ಪಾದನೆ ಎನ್ನುವ ಆರೋಪ ಹೊರಿಸುತ್ತಿದ್ದಾರೆ, ಅದರ ಬಗ್ಗೆ ದೇಶಪ್ರೇಮಿಗಳು ಎಂದು ಬಿಂಬಿಸಿದವರು ಚಕಾರವೆತ್ತುವುದಿಲ್ಲ ಇದರ ಮರ್ಮ ಅರಿಯಬೇಕಾಗಿದೆ, ಒಲೈಕೆಗಳಿಂದಲೇ ಮೇಲೆ ಬಂದವರು ಯಾವ ರೀತಿಯ ಒಲೈಕೆಗೂ ಹಿಂಜರಿಯಲಾರರು ಅವರು ಸದ್ದಡಗಿಸುವ ಸಲುವಾಗಿ ಯಾವ ಒಲೈಕೆಗು ಸಿದ್ದರಾದವರು, ಓಲೈಕೆಗೆ ಬಲಿಯಾಗಿ ಹೋರಾಟದ ಸ್ವರೂಪವಿಲ್ಲದ ಒಂದು ಸಮಾಜ ನಿರ್ಮಾಣವಾಗಿತ್ತಿದೆ ಮತ್ತು ಓಲೈಕೆಗೆ ಬಲಿಯಾಗಿ ಹಂತ ಹಂತವಾಗಿ ಸಿದ್ದಾಂತಗಳು ಅನುಷ್ಟಾನವಾಗುತ್ತಿದೆ, ಆದರೆ ಇದೆಲ್ಲದರ ಮದ್ಯೆ ಜತ್ಯಾತಿತವಾದಿಗಳು ಸ್ವಲ್ಪ ನಿದ್ದೆಯಂದ ಹೊರ ಬಂದು ವಾಸ್ತವಿಕತೆಯ ಅರಿವನ್ನು ಪಡೆಯಬೇಕಾಗುತ್ತದೆ, ಕಡೆ ಪಕ್ಷ ತೂಕಡಿಸಿ ಟೀಚರ್ ಮೂತ್ರ ಮಾಡಬೇಕಾಗಿದೆ ಎಂದು ಎದ್ದು ನಿಂತು ಅಳಲು ತೋಡಿಕೊಂಡ ಮಗುವಿನಂತಾದರು ಅಳಲು ತೋರ್ಪಡಿಸಲು ಸಿದ್ದವಾಗಬೇಕಾಗಿದೆ..... 

No comments: