ಸತ್ತು ಹೋಗಿರುವ ಒಂದು ಶವದ ಮುಂದೆ ನಿಮ್ಮ ರೋಧನೆಯನ್ನು ಹೇಳಲು ನೀವು ಇಷ್ಟಪಡುತ್ತೀರ? ಅಥವಾ ಸತ್ತು ಬಿದ್ದಿರುವ ಶವದಿಂದ ಏನಾದರು ಪವಾಡ ಸಂಭವಿಸಿ ನಿಮ್ಮ ರೋಧನೆ ಕೊನೆಗೊಳ್ಳಬಹುದು ಎನ್ನುವ ಮೂಡ ನಂಬಿಕೆಯೇ ನಿಮಗೆ ? ಸತ್ತು ಬಿದ್ದಿರುವ ಶವದಿಂದ ನೀವು ಎನೂ ನಿರೀಕ್ಸಿಸುತ್ತಿಲ್ಲ ಎಂದಾದಲ್ಲಿ ಅದೇ ಮಾತನ್ನು ನೀವೇ ಇಸ್ಟಪಟ್ಟು ಆರಿಸಿ ಕಳುಹಿಸಿದ ನಿಮ್ಮನ್ನು ನಿಯಂತ್ರಿಸುತ್ತಿರುವ ನಿಮ್ಮ ಮಂತ್ರಿ ಮಹಾಶಯರುಗಳಿಗೆ ಹೋಲಿಸಿಕೊಳ್ಳಿ.
ಸಧ್ರಡತೆಯಿಂದ ಬಾಳಿ ಬದುಕಬೇಕಾದ ಜನತೆ ಇನ್ನೂ ಕೂಡಾ ಸತ್ತು ಹೋಗಿರುವ ಒಂದು ಶವದ ಮುಂದೆ ಯಾಕೆ ಅಂಗಲಾಚಬೇಕು? ಸತ್ತು ಹೋದ ಶವವನ್ನು ದಫನ ಮಾಡಿ ಅದಕ್ಕೊಂದು ಅಂತ್ಯ ಕಾಣಿಸಬೇಕೆಂದು ನಿಮಗೆ ಅನ್ನಿಸುವುದಿಲ್ಲವೇ? ನಿಮಗೆ ಈಗ ನಿರ್ಧರಿಸುವ ಕಾಲ ಬಂದಿದೆ ನೀವು ಎಚ್ಚೆತ್ತುಕೊಳ್ಳಿ, ಸತ್ತು ಹೋದ ಶವದಿಂದ ಪವಾಡ ಸಂಭವಿಸಬಹುದೆಂದು ಇನ್ನು ನಿರೀಕ್ಷೆ ಇಟ್ಟುಕೊಳ್ಳಬೇಡಿ ಆ ಕಲ್ಪನೆಯನ್ನು ಬಿಟ್ಟು ಬಿಡಿ, ಶವ ಈಗಾಗಲೇ ಕೊಳೆತು ಎಲ್ಲೆಡೆ ಗಬ್ಬುನಾಥ ಬೀರುತ್ತಿದೆ, ಪ್ರಜಾಪ್ರಭುತ್ವದ ಅಡಿಯಲ್ಲಿ ಅದಕ್ಕೊಂದು ದಾರಿ ಕಾಣಿಸಿ ಬುದ್ದಿವಂತರಾಗಿ.
ಹಲವು ವರ್ಷಗಳಿಂದ ಮೌನಿಯಾಗಿರುವ ಒಬ್ಬ ಪ್ರಧಾನಿಯಿಂದ, ಅವರನ್ನು ದಾಳವಾಗಿ ಬಳಸಿಕೊಳ್ಳುತ್ತಿರುವ ಹಲವು ಕೈಗಳಿಂದ, ಬದಲಾವಣೆಯೆಂದರೆ ಏನು ಎಂದು ತಿಳಿಯದೆ ಕೇವಲ ಬೊಗಳೆ ಮಾತಿಗೆ ಬದಲಾವಣೆಯ ಗಾಳಿ ಬೀಸುತ್ತಿರುವ ರಾಕ್ಷರರ ಮಧ್ಯೆ, ಹಗರಣಗಳ ಧೀರರು, ನೀಲಿವಾಗ್ಮಿಗಳು, ಆತ್ಮಹತ್ಯೆ ನಾಟಕ ಮಾಡುವವರು ದೇಶದ ಸಂಪತ್ತು ಕೊಳ್ಳೆ ಹೊಡೆದಿರುವಾಗ ಇನ್ನು ಯಾವ ಪವಾಡ ಸಂಭವಿಸಲಿದೆಯೆಂದು ನೀವು ಕಾಯುತಿದ್ದೀರಿ? ಇವರು ಅಸಮರ್ಥರು ಎಂದು ಕಳೆದು ಹೋದ ದಿನಗಳಲ್ಲಿ ಗ್ರಹಿಸಿಕೊಳ್ಳಲು ಸಾದ್ಯವಾಗಲಿಲ್ಲವೇ? ನಿಮಗಿನ್ನು ಅರ್ಥವಾಗಲು ಸಮಯಾವಕಾಶ ಬೇಕೇ? ಇನ್ನು ಇವರಿಂದ ಯಾವ ನಿರೀಕ್ಷೆ ?

ಸಾಯುವವರೆಗೆ ಇವರೇ ಪರ್ಯಾಯ ವ್ಯವಸ್ಥೆ ಎನ್ನುವ ಕಲ್ಪನೆ ಬಿಟ್ಟು ಬಿಡಿ ಇನ್ನಾದರು ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮತ್ತೆ ಐದು ವರ್ಷ ಶವದ ಮುಂದೆ ಕಾಲ ಕಳೆಯಬೇಡಿ, ಆರಿಸುವಾಗ ಒಂದು ಕ್ಷಣ ಯೋಚಿಸಿ ದೇಶದ ಭವಿಷ್ಯಕ್ಕಾಗಿ ಉತ್ತಮ ವ್ಯಕ್ತಿಗೆ ನನ್ನ ಮತ ಎಂದು ನಿರ್ಧರಿಸಿ ಹಕ್ಕು ಚಲಾಯಿಸಿ, ಬದಲಾವಣೆಗಾಗಿ ನಿಮ್ಮ ಹಕ್ಕುಗಳನ್ನು ಬಳಸಿಕೊಳ್ಳಿ, ಉತ್ತಮ ಚಾರಿತ್ರ್ಯವುಳ್ಳ ಅಭ್ಯರ್ಥಿಗಳಿಗೆ ಮತ ಹಾಕಿ, ಜನರ ಪರವಾಗಿ ಕೆಲಸ ಮಾಡಿದವರ ಕೈ ಹಿಡಿಯಿರಿ, ರಾಜಕೀಯದಲ್ಲೊಂದು ಇತಿಹಾಸ ನಿರ್ಮಿಸಿ.
ಮತದಾನದ ದಿನ ಬಿಟ್ಟಿ ರಜೆ ಸಿಕ್ಕಿದೆ ಎಂದು ಹಾಯಾಗಿ ಮಲಗಿ ಕಾಲ ಕಳೆಯುವ ಮೂರ್ಖರ ಪಟ್ಟಿಯಲ್ಲಿ ನೀವು ಕೂಡಾ ಸೇರಿಕೊಳ್ಳಬೇಡಿ, ಜವಾಬ್ದಾರಿಯುತ ನಾಗರೀಕರಾಗಿ, ನಾಗರೀಕತೆಯ ಬೆಳವಣಿಗೆಯಲ್ಲಿ ಕೈ ಜೋಡಿಸಿ, ಬದಲಾಯಿಸುವ ದಿನ ಬಂದಿದೆ, ಇದು ಬದಲಾವಣೆಗೆ ಸಕಾಲ.





























