ಹತಾಶೆಯ ಮುಖಭಾವದಿಂದ ಮನಸ್ಸಿನಲ್ಲಿ ನೋವನ್ನಿಟ್ಟು ನಗುಮುಖದಿಂದ ಎದುರುಗೊಳ್ಳುವ ಒಬ್ಬ ನಾಯಕನ ಸಂಕಟ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅವನೊಬ್ಬ ಕಾರ್ಯಕರ್ತ ಎಂದೆನಿಸಲು ಅಸಮರ್ಥ. ಹತಾಶ ಮನೋಭಾವದ ನಡುವೆಯೂ ಸ್ಪೂರ್ತಿಧಾಯಕ ಮಾತುಗಳನ್ನಾಡುವ ದೈರ್ಯವಿದ್ದರೆ, ತಾನು ನಂಬಿಕೊಂಡಿರುವ ಬದಲಾವಣೆಯ ಸಿದ್ದಾಂತದ ಕಾರ್ಯದಲ್ಲಿ ನಾಯಕನೊಬ್ಬ ಮುಂದುವರಿಯುದಾದರೆ ಸರ್ವ ಲೋಕಗಳ ಪ್ರಭುವಿಣಾನೆ ಆತ ಮುನ್ನಡೆಸುತ್ತಿರುವ ಜನಾಂಧೋಲನದ ಜನಮುನ್ನಡೆಗೆ ಒಂದು ಕಾಲದಲ್ಲಿ ಜಯವಿದೆ ಅಂದು ಆ ದಿನ ಈ ಸಮಾಜಕ್ಕೆ ಅರ್ಪಿತವಾಗಲಿದೆ.
ದೇವನೇ ನೀನು ವಾಗ್ದಾನಿಸಿದಂತೆ ಒಂದು ಸಮರ್ಥವಾದ ಗುಂಪನ್ನು ಏಕೆ ಕಳುಹಿಸಿಕೊಡಬಾರದು ಎಂದು ನಾಯಕನಾದವನು ನಿರುತ್ಸಾಹದ ಕಾರ್ಯಕರ್ತರ ಬಗ್ಗೆ ಪ್ರಾರ್ಥಿಸಲು ಹೊರಡುವುದಾದರೆ ಅದು ಯಾರ ತಪ್ಪು? ನಾಯಕನಿಗೆ ಬೆನ್ನೆಲುಬಾಗಿ ನಿಲ್ಲಬೇಕಾಗಿದ್ದ ಕಾರ್ಯಕರ್ತರ ತಪ್ಪೇ? ಆತನ ಬೆನ್ನು ತಟ್ಟಬೇಕಾಗಿದ್ದ, ಆತನನ್ನು ಮುಂದೆ ಕಳುಹಿಸಿ, ಆತನಿಗೆ ಪೂರಕ ವ್ಯವಸ್ಥೆಗಳನ್ನು ನೀಡಿ ಬೆಂಬಲಿಸದವರ ತಪ್ಪೇ? ಅದಕ್ಕೆ ಅದರದೇ ಆದ ಕಾರಣವಿರಬಹುದು, ಕಾರಣ ಹುಡುಕುವ ಪ್ರಯತ್ನದಲ್ಲಿ ಕಾಲ ಕಳೆಯದೆ ಮುಂದಿರುವ ಧೌತ್ಯಗಳತ್ತ ಎದೆಗುಂದದೆ ಹೆಜ್ಜೆ ಇಡಬೇಕಾಗಿದೆ.
ಸಮಾಜ ಪರಿವರ್ತನೆಯ ದಾರಿಯಲ್ಲಿ ಸೋಲುಗಳು ಸಹಜ, ಆದರೆ ಸೊಲು ನಿರ್ನಾಮದ ಕಡೆಗೆ ಸಾಗಬಾರದು, ಧೈರ್ಯದಿಂದ, ಸತ್ಯದಿಂದ, ನಿಸ್ಟೆಯಿಂದ ಕೆಲಸ ಮಾಡಿದಾಗ ಮರ್ಧಿತರ, ಅಸಹಾಕಯರ, ಶೋಷಿತರ ಪರವಾಗಿ ನಿಂತು ಮನುಷ್ಯತ್ವದ ಪರವಾಗಿ ಹೋರಾಟಗಳು ನಡೆಯಬೇಕು, ದುರ್ಬಲ ವ್ಯವಸ್ಥೆಯನ್ನು ಕಂಡು ಅದೇ ದಾರಿಯಲಿ ಸಾಗುವ ಬದಲು ಅನ್ಯಾಯದ, ಅಕ್ರಮದ, ಅನೀತಿಯ ವಿರುದ್ದ ಜನಜಾಗ್ರತಿ ಹೋರಾಟಗಳು ನಡೆಯಬೇಕು, ಅ ಹೋರಾಟಗಳಲ್ಲಿ ನಮ್ಮೆಲ್ಲರ ಪಾತ್ರವಿರಬೇಕು ಮತ್ತು ನಾವು ಮುಂದಿನ ಸಾಲುಗಳಲ್ಲಿ ನಿಂತವರಾಗಿರಬೇಕು. ಒಂದು ಕಾಲದಲ್ಲಿ ಮಕ್ಕಾದ ಮಣ್ಣಿನಲ್ಲಿ ಅಸಹಾಯಕರ ವಿಮೋಚನೆಗಾಗಿ, ಮರ್ದಿತರ ಪರವಾಗಿ, ಅನಾಥೆಯರ ಸಂರಕ್ಷಣೆಗಾಗಿ, ಮಾನವಿಯತೆಯ ಹರಿಕಾರರಾಗಿ, ಸಂಪತ್ತಿನ ದುರ್ಬಳಕೆಯ ವಿರುದ್ದ ದ್ವನಿ ಎತ್ತಿ, ಅನ್ಯಾಯದ ವ್ಯವಸ್ಥೆಯ ವಿರುದ್ದ ಹೋರಾಡಿ, ಆದರ್ಶ ಸಮರ ನಿರ್ವಹಿಸಿದ ಒಬ್ಬ ಪ್ರವಾದಿಯನ್ನು ನೆನಪಿಸಿಕೊಳ್ಳುತ್ತಾ ಹೋರಾಟದಲ್ಲಿ ಮುಂದುವರೆಯಬೇಕು, ಆ ಮೂಲಕ ಸಾಮ್ರಾಜ್ಯಶಾಹಿ, ಬಂಡವಾಳಷಾಹಿ, ಫ್ಯಾಸಿಸ್ಟ್ ಶಕ್ತಿಗಳ ವಿರುದ್ದ ಸಮರ ಸಾರಬೇಕು.
ಆದರ್ಶವುಳ್ಳ ಹೋರಾಟದಲ್ಲಿ, ಅದಕ್ಕಾಗಿ ಮುನ್ನುಗುವ ಪ್ರಯಾಣದಲ್ಲಿ ಹೊರಾಡಲು ತಿರ್ಮಾನಿಸಿದವರು ಖಂಡಿತ ನಿರಾಶದಾಯಕರಾಗಬೇಕಾಗಿಲ್ಲ, ವಿಜಯದ ಪತಾಕೆ ಯಾರಿಗೂ ತಾನಾಗಿಯೇ ಬಂದು ಅಪ್ಪಿಕೊಂಡ ಉದಾಹರಣೆಗಳು ಎಲ್ಲಿಯೂ ಕಾಣ ಸಿಗುವುದಿಲ್ಲ, ಹೋರಾಟ ಎಂದ ಮೇಲೆ ತ್ಯಾಗ, ಬಲಿದಾನಗಳು ಇರಲೇಬೇಕು. ಯವ್ವನವನ್ನು ಆದರ್ಶಕ್ಕಾಗಿ, ನೀತಿಗಾಗಿ ಉಪಯೋಗಿಸಿಕೊಳ್ಳಬೇಕು ಮತ್ತು ಆ ನಿಟ್ಟಿನಲ್ಲಿರುವ ಸಮರದ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು, ಕೆಲವೇ ಕೆಲವು ಭಾಗ್ಯಶಾಲಿಗಳಿಗೆ ಮಾತ್ರ ಜನರ ಪರವಾಗಿ ಹೋರಾಡಲು ಅವಕಾಸ ಲಭಿಸಿದೆ, ಆ ಮೂಲಕ ಆದಿವಾಸಿಗಳ, ದಲಿತರ ಪ್ರತಿದ್ವನಿಯಾಗಬೇಕು ಮತ್ತು ಸದಾಚಾರದ ಕಲ್ಪನೆ ಹುಟ್ಟುಹಾಕುವತ್ತ ಪಯಣ ಸಾಗಬೇಕಾಗಿದೆ.
ವೈವಿದ್ಯತೆಯನ್ನು ಅಂಗೀಕರಿಸುವ, ಬಹುಸಂಸ್ಕೃತಿ ಇರುವ ದೇಶದಲ್ಲಿ ಮನುಷ್ಯನ ಮೌಲ್ವಿಕ ಗುಣಗಳು ಮರೆಮಾಚಿಸಲ್ಪಡುತ್ತಿರುವ, ಸಹೋದರತೆ ಮರೆಯಾಗುತ್ತಿರುವ ಸಮಾಜದಲ್ಲಿ ಅದನ್ನೆಲ್ಲ ಮರಳಿ ಸ್ಥಾಪಿಸುವ ನಿಟ್ಟಿನಲ್ಲಿ ಸಬಲೀಕರಣದ ಕಡೆಗೆ ಹೋರಾಟಗಳು ಆರಂಬವಾಗಬೇಕು. ಜನಮುನ್ನಡೆ ಹೋರಾಟಗಳು ಅದು ನೋವನ್ನು ನುಂಗಿಕೊಂಡೆ ನಡೆದಿರುವಂತದ್ದು, ಅಲ್ಲಿ ಸೋಲಿತ್ತು, ಆದರೆ
ಸೋಲು ಸೋಲಾಗಿಯೇ ಉಳಿಯಲಿಲ್ಲ ಕಡೆಗೆ ಅದು ವಿಜಯದತ್ತ ಸಾಗಿತ್ತು ಮತ್ತೆಂದೂ ಆ ವಿಜಯಿಗಳು
ಸೋಲಿನತ್ತ ಮುಖ ತಿರುಗಿಸಲೇ ಇಲ್ಲ ಎನ್ನುವುದು ವಾಸ್ತವ. ಅಂತಹ ಆದರ್ಶ ನಮ್ಮಲ್ಲಿರಲಿ, ಸತ್ಯದ ಪಥದಲ್ಲಿ ನಡೆಯುವವನಿಗೆ
ನೋವುಗಳು ಸಹಜ, ನೋವುಗಲಿಂದಲೇ ಮುನ್ನಡೆಯೋಣ.
ನಮ್ಮ ಜೊತೆ ಇದ್ದ ಕೆಲವು ವ್ಯಕ್ತಿಗಳು ನಮನ್ನು ಅಗಲಿದಾಗ ನಾವು ಕುಗ್ಗುವ, ಹತಾಶರಾಗುವ, ವ್ಯಥೆಪಡುವ ಅಗತ್ಯವಿಲ್ಲ, ನಾವು ಇಲ್ಲಿ ಏನೂ ಕಳೆದುಕೊಂಡಿಲ್ಲ, ಜನಮುನ್ನಡೆ ಕುಗ್ಗಬೆಕಾಗಿಯೂ ಇಲ್ಲ, ಆದರ್ಶಗಳನ್ನು ಒಪ್ಪುವ, ಸಮಾಜದ ಅಶಾದಾಯವಾದಿಗಳನ್ನು ಒಟ್ಟು ಸೇರಿಸಿಕೊಂಡು ಮುಂದೆ ಸಾಗೋಣ ಅದರಲ್ಲಿ ಜಯವಿದೆ, ಆ ವಿಜಯದ ಬಗ್ಗೆ ನಿರೀಕ್ಷೆಯಿದೆ, ನಮ್ಮ ನಿಜವಾದ ಕೆಲಸಗಳು ಇನ್ನಸ್ಟೇ ಆರಂಬವಾಗಬೇಕಾಗಿದೆ. ನಮ್ಮೊಂದಿಗೆ ಕೈ ಜೋಡಿಸುವ ಯುವಕರೊಂದಿಗೆ ನಾವು ಮುನ್ನಡೆಯೋಣ, ಸಮಾಜದಲ್ಲಿ ಕಡೆಗನಿಸಲ್ಪಟ್ಟವರು ನಮ್ಮ ನಿರೀಕ್ಷೆಯಲ್ಲಿದ್ದಾರೆ, ಅವರು ನಮ್ಮನ್ನು ಕಾಯುತಿದ್ಡಾರೆ, ಸಮಸ್ಯೆಗೆ ಸ್ಪಂದಿಸುವವರು ಬರಲಿದ್ದಾರೆ ಎನ್ನುವ ಆತುರದಲ್ಲಿದ್ದಾರೆ. ನಾವು ಇನ್ನಸ್ಟು ಹೊಸ ಜಾಗಗಳಲ್ಲಿ ಪರಿಚಿತರಾಗಬೇಕು, ಈ ಕಾಲಕ್ಕೆ ನಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡುವ ನಿಟ್ಟಿನಲ್ಲಿ ಹೆಜ್ಜೆಗಳು ಸಾಗಲಿ, ಧೈರ್ಯಗುಂದದೆ ಜನಮುನ್ನಡೆ ಮುಂದುವರೆದು ಒಂದು ಜನಾಂಧೋಳನವಾಗಲಿ ಆ ಮೂಲಕ ದೇವನ ಆದೇಶವನ್ನು ಪಾಲಿಸುವ ನಡೆ ನಮ್ಮದಾಗಿರಲಿ.

No comments:
Post a Comment