ಯಾರೋ ಬರೆದದ್ದನ್ನು ಬದಲಾವಣೆಗಳೊಂದಿಗೆ ಬರೆಯುವುದು, ಯಾವುದೋ ಭಾಷೆಯಲ್ಲಿ ಬರೆದದ್ದನ್ನು ಭಾಷಾಂತರಿಸಿ ಪ್ರಕಟಿಸುವುದು, ಯಾರದೋ ಪ್ರತಿಕ್ರೀಯೆಗಳಿಗೆ ಪ್ರತ್ಯುತ್ತರ ನೀಡುವುದು ನಾವು ಅತಿ ಸಾಮಾನ್ಯವಾಗಿ ಕಾಣುವ ವಿಚಾರ, ಕೆಲವದರಲ್ಲಿ ಹೊಸತನವಿದ್ದರೆ ಇನ್ನು ಕೆಲವು ಯಾವಾಗ ಮುಗಿಯುತ್ತೇ ಎಂದು ಬೇಸರಿಸುವಸ್ಟರ ಮಟ್ಟಿಗೆ ಇರುತ್ತದೆ, ಇದೆಲ್ಲದರ ಮಧ್ಯೆ ಎಲ್ಲರೂ ಬರೆಯುತ್ತಾರೆ ಮತ್ತು ಹಲವು ಪ್ರಕಟವಾಗುತ್ತದೆ ಇನ್ನು ಹಲವು ಮೂಲೆಗುಂಪಾಗುತ್ತದೆ,ಇದನ್ನೆಲ್ಲಾ ಅವಲೋಕಿಸಿ ನಾನೇಕೆ ನನ್ನದೇ ವಿಚಾರಗಳನ್ನು ಮಂಡಿಸಬಾರದು ಅಂದುಕೊಂಡೆ.
ನಾವು ಬಯಸಿದ್ದೆಲ್ಲವೂ ನಮಗೆ ಸಿಗದೇ ಇರಬಹುದು, ನಾವು ಕೇಳುವುದಕ್ಕಿಂತ ಮುಂಚೆಯೇ ನಮಗೆ ಹಲವಾರು ವಸ್ತುಗಳು ಸಿಕ್ಕಿರಬಹುದು, ನಮ್ಮನ್ನು ವಾತ್ಸಲ್ಯದಿಂದ ನೋಡಿಕೊಳ್ಳುವವರಿರಬಹುದು, ಅವರ ವಾತ್ಸಲ್ಯ ನಮ್ಮನ್ನು ಎಲ್ಲ ರೀತಿಯಲ್ಲಿ ಬಂಧಿಸಿರಬಹುದು, ನಾವು ಅವರ ವಿಶ್ವಾಸಕ್ಕೆ ಮಾರುಹೋಗಿರಬಹುದು, ಇದೆಲ್ಲದರ ಮಧ್ಯೆ ಜೀವನದ ಒಂದು ಪ್ರಮುಖ ಹಂತದಲ್ಲಿ ಕಳೆದುಕೊಂಡವರೇ ಹೆಚ್ಚು ಮತ್ತು ತಾವು ಬಯಸಿದ್ದು ಸಿಗದಿದ್ದಾಗ ಜೀವನದಲ್ಲಿ ಕೊರಗಿದವರ ಪಟ್ಟಿಯಲ್ಲಿರುವವರೇ ಅಧಿಕ, ಮರುಕ ಪಟ್ಟವರು ಹೆಚ್ಚಿನವರು, ಕಳೆದುಕೊಂಡ ವ್ಯಥೆ ಹಲವರಿಗೆ, ಕನಸುಗಳನ್ನು ಬಚ್ಚಿಟ್ಟು ಮುಂದುವರಿದವರೂ ನಮ್ಮಲ್ಲಿದ್ದಾರೆ.
ಆದರೆ ಕೇಳದೆಯೇ ನಮಗೆಲ್ಲ ಕೊಟ್ಟವರು, ಮಾತಿನ ಲಕ್ಷಣಗಳಿಂದಲೇ ನಮ್ಮನ್ನು ಗ್ರಹಿಸಿಕೊಂಡವರು ಕೆಲವು ವಿಚಾರಗಳಲ್ಲಿ ನಮ್ಮನ್ನು ನಿರ್ಲಕ್ಸಿಸಿದ್ದಾರೆ, ನಾವು ಹೇಳಿಯೂ ಅವರಿಗೆ ಕೇಳುವ ವ್ಯವಧಾನ ಇರಲಿಲ್ಲ, ಎಲ್ಲಿ ಅವರು ನಮ್ಮನ್ನು ಅರ್ಥ ಮಾಡಿಕೊಳ್ಳಬೇಕಿತ್ತೋ ಅಲ್ಲಿ ಯಾರೂ ನಮ್ಮನ್ನು ಅರ್ಥ ಮಾಡಿಕೊಂಡಿಲ್ಲ, ಕೊನೆಗೆ ನಮ್ಮ ಜೀವನ ನೋವಿನಲ್ಲಿಯೇ ಕಳೆಯುವ ಪರಿಸ್ತಿತಿ, ಕಣ್ಣೇರು ಬಚ್ಚಿಡುವ ಪ್ರಯತ್ನ, ವಿಷಯ ಪ್ರಸ್ತಾಪಿಸದೆ ಅರ್ಥ ಆಗುವ ವಿಚಾರ ಇದು, ಆದರೆ ಇದರ ಬಗ್ಗೆ ಯಾರೂ ಗಮನ ಕೊಡಲಿಲ್ಲ, ಇಲ್ಲಿ ಎಲ್ಲವನ್ನು ಸ್ವಂತ ಅಭಿಪ್ರಾಯಕ್ಕಾಗಿ ಕಡೆಗನಿಸಲಾಯಿತು, ಭಾವನೆಗಳಿಗೆ ಕಿಂಚಿತ್ತು ಬೆಲೆ ಕೊಡಲು ಯಾರೂ ತಯಾರಾಗಲಿಲ, ಚಿಕ್ಕ ವಯಸ್ಸಿನಲ್ಲಿರುವಾಗ ಹೊಸ ಬಟ್ಟೆ ಖರೀದಿಸಿಕೊಟ್ಟಂತೆ ಎಂದು ಇದನ್ನೂ ಅದೇ ಸಾಲಿನಲ್ಲಿ ಸೇರಿಸಿಬಿಟ್ಟರು. ಕೊನೆಗೆ ಎಲ್ಲವನ್ನು ಮರೆತು ನೋವಿನೊಂದಿಗೆ ಹೊಸ ಜೀವನಕ್ಕೆ ತಮ್ಮನ್ನು ತಯಾರು ಗೊಳಿಸಬೇಕಾದ ವ್ಯವಸ್ತೆ, ಹಾಗೆ ಮರೆಯಲಾಗದಿದ್ದರು ನೆನಪುಗಳ ನಡುವ ಮರೆತಂತೆ ನಟನೆ ಮಾಡುವ ಒಂದು ಜೀವನ, ಇದು ನಡೆದುಕೊಂಡು ಬಂದ ಪದ್ಧತಿ ಇದರ ವಿರುದ್ದ ಮಾತನಾಡಿದರೆ ತಪ್ಪುಎಂಬ ಭಾವನೆ, ಹೀಗಾಗಿ ತಪ್ಪು ಸರಿಗಳ ಮಧ್ಯೆ ಯಾರಿಗೂ ಸುಖ ಸಿಗದಂತಹ ಒಂದು ನರಕ ಜೀವನ, ಒಂದು ಕಾಲದಲ್ಲಿ ನಮಗೆಲ್ಲವನ್ನೂ ನೀಡಿದವರಿಗಾಗಿ ನಮ್ಮ ಜೀವನ ಮುಡಿಪಾಗಿಸಿ ಅವರ ಮನಸ್ಸುಗಳಿಗೆ ತಂಪೆರೆಯುವ ಆತುರದಲ್ಲಿ ನಮ್ಮ ಕನಸುಗಳನ್ನು ಬಚ್ಚಿಡುವ ಪ್ರಯತ್ನ. ಆ ಪ್ರಯತ್ನದಲ್ಲಿ ಜೀವನದಲ್ಲಿ ಸಫಲತೆ ಕಂಡವರು ಮತ್ತು ನೋವಿನಲ್ಲಿಯೇ ಜೀವನ ಕಳೆದವರೂ ಇದ್ದಾರೆ.
ಎಲ್ಲವೂ ಸರಿಯಾಗಿತ್ತು ಯವ್ವನದ ಮತ್ತಿನಲ್ಲಿ, ಆಕಾಂಕ್ಷೆಗಳ ಹಿಂದೆ ಹೋಗಿ ಒಂದು ಕ್ಷಣ ಸ್ರಸ್ಟಿಸಿದ ದೇವನನ್ನು ಮರೆತದ್ದಕ್ಕಾಗಿ ಜೀವನ ಪೂರ್ತಿ ಒದ್ದಾಡುವ ಪರಿಸ್ತಿಸಿ, ಅ ಒಂದು ಕ್ಷಣ ದೇವನನ್ನು ಭಯಪಟಿದ್ದರೆ ಜೀವನ ಅದೆಸ್ಟು ಸುಂದರವಾಗಿರುತಿತ್ತು, ಈಗ ಕುಳಿತು ದೇವನ ಶಾಪವೆಂದು ತಿಳಿಯುವ ಅಗತ್ಯ ಬರುತ್ತಿರಲಿಲ್ಲ, ನಮಗೆ ನಾವೇ ಕರೆಯಿಸಿ ಪಡೆದುಕೊಂಡ ಶಾಪ ಮುಕ್ತಿಗಾಗಿ ಜೀವನವಿಡೀ ನೋವು ಅನುಭವಿಸುವ ಸಂದರ್ಭ, ಎಲ್ಲವನ್ನು ಮೈಮೇಲೆ ಎಳೆದುಕೊಂಡು ನೋವು ಅನುಭವಿಸುವ ದುರಂತ ನಾವೇ ಸ್ರಸ್ಟಿಸಿಕೊಂಡದ್ದು.


No comments:
Post a Comment