Monday, March 17, 2014

ಸಿದ್ಧಾಂತವಿಲ್ಲದ ರಾಜಕಾರಣದ ನಡುವೆ ಅತಂತ್ರನಾದ ಮತದಾರ (ಲೇಖನ)








೨೧ ನೆಯ ಶತಮಾನವನ್ನು ಬಿಟ್ಟು ಸ್ವಲ್ಪ ಹಿಂದಿನ ಕಾಲದ ಕಡೆಗೆ ಹಿಂತಿರುಗಿ ಯೋಚಿಸುವುದಾದರೆ ಅಂದು ಕೂಡಾ ಹಲವು ರಾಷ್ಟ್ರೀಯತೆಯ ರಾಜಕೀಯ ಪಕ್ಷಗಳಿದ್ದವು ಮತ್ತು ಅದಕ್ಕೆ ಅದರದೇ ಆದ ನೈತಿಕ ಸಿದ್ಧಾಂತಗಳಿದ್ದವು ಅದರಲ್ಲಿ ಸ್ಥಿರವಾಗಿ ಗುರುತಿಸಿಕೊಂಡ ನಾಯಕರುಗಳು ಕೂಡಾ ಇದ್ದದ್ದು ಸತ್ಯ ಮತ್ತು ನಾಯಕರೆನಿಸಿಕೊಂಡವರನ್ನು ಕಾರ್ಯಕರ್ತರು ಕೂಡಾ ನಾಯಕರೆಂದೇ ಗುರುತಿಸಿಕೊಂಡಿದ್ದರು ಹಾಗಾಗಿ ಅಲ್ಲಿ ಒಂದು ಕಾಟಾಚಾರದ ರಾಜಕೀಯವಿರದೆ ಅವರೊಳಗೆ ಸಾಮ್ಯತೆ ಇದ್ದವು ಮತ್ತು ಅದನ್ನು ಅವರು ಪ್ರತಿಪಾದಿಸುತಿದ್ದರು. 

ಕಾಲ ಬದಲಾಗಿದೆ, ಶತಮಾನಗಳು ಉರುಳಿದೆ, ರಾಜಕೀಯ ವ್ಯವಸ್ಥೆ ಬುಡಮೇಲಾಗಿದೆ, ರಾಜಕೀಯ ದೊಂಬರಾಟವಾಗಿ ಗೊಂದಲದ ಗೂಡಾಗಿದೆ. ಯಡಿಯೂರಪ್ಪ, ಶ್ರೀರಾಮುಲುನಂತಹ ದಿಗ್ಗಜರು ಮತ್ತೊಮ್ಮೆ ಸ್ಥಾನ ಪಡೆಯುವ ತವಕದಲ್ಲಿದ್ದಾರೆ, ಜನತೆಗೆ ಹೇಳಿಕೊಳ್ಳುವಂತಹ ಕೊಡುಗೆಯೇನೂ ನೀಡಲಿಲ್ಲ ಎಂದು ಗೊತ್ತಿದ್ದರೂ ಜಾಫ಼ರ್ ಶರೀಫ್ ನಂತವರು ಟಿಕೆಟ್ಗಾಗಿ ಕ್ಯು ನಲ್ಲಿ ನಿಂತು ಕೈ ಸುಟ್ಟುಕೊಂಡಿದ್ದಾರೆ, ಇನ್ನಸ್ಟು ಮಂದಿ ಹೊಸ ಪಕ್ಷ ಕಟ್ಟಿ ಅದರ ಬೆಳವಣಿಗೆಯ ಕೆಲಸದಲ್ಲಿ ವಿಪರೀತ ಬ್ಯುಸಿ ಆಗಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ತೀರ್ಪು ನೀಡಲಿರುವ ಮತದಾರನನ್ನು ಮರೆತು ಬಿಟ್ಟಿದ್ದಾರೆ, ಈ ನಡುವೆ ಮತದಾರ ತನ್ನ  ನಾಯಕನನ್ನು ಗುರುತಿಸದ ಮಟ್ಟಿಗೆ ಕಂಗಾಲಾಗಿ ಹೋಗಿದ್ದಾನೆ, ರಾಜಕೀಯ ಕೆಸರೆರೆಚಾಟ ನಡೆಯುತ್ತಿದೆ ಆದರೆ ಮತದಾರ ಎಲ್ಲವನ್ನು ಸೂಕ್ಷಮವಾಗಿ ಗಮನಿಸುತಿದ್ದಾನೆ. 

ಕೈಯಲ್ಲಿ ಹೂ ಹಿಡಿಯುವ, ಬತ್ತ ಹಿಡಿಯುವ, ಹಿಡಸೂಡಿ ಹಿಡಿಯುವ ಪ್ರಮೇಯಗಲೂ ಬರುತ್ತಿದೆ, ನಂಬಿದವರನ್ನುನಡು ನೀರಿನಲ್ಲಿ ಕೈ ಬಿಟ್ಟವರು ಕೂಡಾ ಕಣದಲ್ಲಿದ್ದಾರೆ, ಫ಼ಸಲು ಇಲ್ಲ ಎಂದು ಹಲವರು ಬೇರೆಯವರ ಗದ್ದೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ.  ಲಜ್ಜೆಯನ್ನು ಮರೆತು ಜನರ ಮುಂದೆ ಬರಲು ಮತ್ತೊಮ್ಮೆ ತಯಾರಾಗಿದ್ದಾರೆ, ಸುಸ್ಥು ಆಯಾಸ ಎಲ್ಲ ಮರೆತು ಜನತೆಗಾಗಿ ಹೋರಾಟ ಮಾಡಲು ಮುಂದೆ ಬಂದಿದ್ದೇವೆ ಎನ್ನುತ್ತಿದ್ದಾರೆ, ಜನತೆಯ ಮುಂದೆ ಮತ್ತೊಮೆ ರಂಗದಲ್ಲಿ ನಾಟಕಕಾರರು ಬಂದಿದ್ದಾರೆ, ಆದರೆ ನಾಟಕವನ್ನು ಜನತೆ ತನ್ಮಯೆತೆಯಿಂದ ನೋಡುತ್ತಿದೆ ಮತ್ತು ಈಗಲೇ ಅಂಕ ನೀಡುವ ಲೆಕ್ಕಾಚಾರದಲ್ಲಿ  ಜನತೆ ತೊಡಗಿದೆ.

ಇವರೆಕೋ ಈ ಜನತೆಯನ್ನು ಯಾವ ಕಾಲದಲ್ಲಿಯೂ ಬದಲಾಯಿಸದಂತೆ ಕಾಣುತಿದ್ದಾರೆ, ಇವರು ಹಲವು ಕಾಲದಿಂದಲೂ ಬದಲಾಯಿಸಿದ್ದು ಪಕ್ಷವನ್ನು, ಚಿನ್ನೆಯನ್ನು, ಸ್ಪರ್ದಿಸುವ ಸ್ಥಳವನ್ನೇ ಹೊರತು ಮುಗ್ದ ಅಸಹಾಯಕ ಜನರ ಸಮಸ್ಯೆಯನ್ನಲ್ಲ.  ನೀರಿಲ್ಲದ, ಆಹಾರವಿಲ್ಲದ, ಮೂಲವಸತಿ ಇಲ್ಲದ ಜನರಿಗೆ ಸಾಂತ್ವನ ಇವರಿಂದ ಈ ಮೊದಲು ಕೂಡಾ ಸಿಕ್ಕಿಲ್ಲ ಇನ್ನು ಕೂಡಾ ಸಿಗುವ ಯಾವ ನಿರೀಕ್ಷೆಯೂ ಮತದಾರನಿಗಿಲ್ಲ, ಇವರು ಎಷ್ಟು ಬದಲಾದರು ಇವರ ಸಿದ್ದಾಂತ ಬದಲಾಗಿಲ್ಲ, ಇವರ ಸಿದ್ದಾಂತ ಈಗಲೂ ಬಡವರನ್ನು ಮತ್ತಸ್ಟು ಬಡತನಕ್ಕೆ ತಲ್ಲುವುದಾಗಿದೆ, ಮತದಾರರು ಇವರ ಸುಳ್ಳಿನ ಕಟ್ಟು ಕತೆ ಗೊತ್ತಿದ್ದು ಬಲಿಯಾಗುತಿದ್ದಾರೆ, ಎಲ್ಲವನ್ನು ಕಂಡು ಇವರು ಇವರ ಜೇಬುಗಳನ್ನು ತುಂಬಿಸುವುದರಲ್ಲೇ ನಿರತರಾಗಿದ್ದಾರೆ ಮತ್ತೆ ಇವರಿಂದ ಬೇರೇನೂ ನಿರೀಕ್ಷಿಸಲು ಜನತೆಗೆ ಸಾಧ್ಯ ಹೇಳಿ?.

ಇವುಗಳ ಮಧ್ಯೆ ಕೆಲವರು ಮೌಲ್ಯಾದಾರಿತ ವಿಷಯಗಳನ್ನು ಹಿಡಿದುಕೊಂಡು, ಮತ್ತು ಇನ್ನು ಕೆಲವರು ಕೆಲವು ಸೀಮಿತ ಸಿದ್ದಾಂತಗಳನ್ನು ಹಿಡಿದುಕೊಂಡು ಬಂದಿದ್ದಾರೆ ಮತ್ತು ಇನ್ನೊಂದು ಕಡೆ ಕೆಲವರು ಸಬಲೀಕರಣದ ಹೆಸರಿನಲ್ಲಿ ನಮ್ಮ ಮುಂದೆ ಇದ್ದಾರೆ ಆದರೆ ಸಾಮಾನ್ಯ ವ್ಯಕ್ತಿ ಮಾತ್ರ ಇವರ್ಯಾರನ್ನು ನಂಬಲು ತಯಾರಿಲ್ಲ, ದೇಶದಲ್ಲಿ ಎಷ್ಟು ಜನ ಏನೆಲ್ಲಾ ಸಿದ್ದಾಂತಗಳನ್ನು ಹಿಡಿದುಕೊಂಡು ಬಂದಿದ್ದರು ಮಾತು ಅವರು ಜೈಸಿದ ನಂತರ ಏನು ಮಾಡಿದ್ದಾರೆ ಎನ್ನುವುದು ನೋಡಿ  ಜನತೆ ರೋಸಿ ಹೊಗಿದೆ, ಮುಗ್ದ ಜನತೆ ಹೊಸಬರೊಂದಿಗೆ ಕೈ ಜೋಡಿಸಲು ಸಿದ್ದರಾಗಿಲ್ಲ, ಸಾಮಾನ್ಯರ ಮನ ಮುಟ್ಟುವಂತೆ ಯಾವ ರಾಜಕೀಯ ಪಕ್ಷಗಳು ಕೂಡಾ ಕೆಲಸ ಮಾಡಿಲ್ಲ.

ಯಡಿಯೂರಪ್ಪನಂತಹ ಪ್ರಭಾವಿ ರಾಜಕಾರಣಿಗಳು ತಾವಿದ್ದ ಪಕ್ಷವನ್ನು ತೊರೆದು ಹೊಸದಾಗಿ ಪಕ್ಷ ಕಟ್ಟಿ ತೆಂಗಿನ ಕಾಯಿಯ ಬೆಲೆ ಹೆಚ್ಚಿಸಲು ನೋಡಿದರು ಬೆಲೆ ಕುದುರಲಿಲ್ಲ ಎಂದಾಗ ಮೋದಿ ಅಲೆಯ ಹೆಸರು ಹೇಳಿ ಮಾತ್ರ್ ಪಕ್ಷಕ್ಕೆ ವಾಪಾಸಾಗಿ ಈಮೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ, ತಾನು ಪಕ್ಷ ಬಿಟ್ಟು ಹೋದಾಗ ಆಡಿದ್ದ ಮಾತುಗಳನ್ನು ಜನರು ಮರೆತು ಬಿಟ್ಟಿದ್ದಾರೆ ಎಂದು ತಿಳಿದಿದ್ದಾರೆ ಮತ್ತೊಮೆ ಕೈ ಚಾಚಿ ಮತ ಯಾಚಿಸಲು ರೆಡಿ ಆಗಿದ್ದಾರೆ, ಇನ್ನು ಶ್ರೀರಾಮುಲು ಎನ್ನುವ ಘಣಿ ಲೂಟಿಕೋರರ ಸಹಪಾಟಿ ತಾನು ತೆರೆದ ಹೊಸ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿಲ್ಲ ಎಂದು ಹೇಳಿ ಸಹಜವೆನ್ನುವಂತೆ  ಮೋದಿ ಅಲೆಯ ಹೆಸರು ಹೇಳಿ ವಾಪಸಾಗಿದ್ದಾರೆ, ಕೆಲವು ನಾಯಕರು ಇವರನ್ನು ಒಪ್ಪಿಕೊಂಡಿಲ್ಲ ಎಂದರೂ ಅವರೆಲ್ಲ ಒಪ್ಪಿಕೊಂಡಿದ್ದಾರೆ ಎಂದೇ ಇವರು ಸಮರ್ತಿಸುತಿದ್ದಾರೆ ಮತ್ತು ಗಹಗಹಿಸಿ ನಗುವಂತೆ ತನ್ನ ಸ್ವಾಭಿಮಾನಕ್ಕೆ ಅಡ್ಡಿಯಾಗಿದ್ದರಿಂದ ಪಕ್ಷ ಬಿಟ್ಟು ಹೋಗಿದ್ದೆ ಈಗ ದೇಶದ ಸ್ವಾಭಿಮಾನಕ್ಕಾಗಿ ಮರಳಿ ಪಕ್ಷಕ್ಕೆ ಬಂದಿದ್ದೇನೆ ಎಂದು ಹೇಳುತ್ತಾ ತಿರುಗಾಡತೊಡಗಿದ್ದಾರೆ, ಮನಸ್ಸಿನ ಮೂಲೆಯಲ್ಲಿ ಹೀಗಾದರೂ ತನ್ನ ಸ್ನೇಹಿತ ಹೊರಗಡೆ ಬರಲಿ ಎನ್ನುವ ಕನಸು, ಒಟ್ಟಿನಲ್ಲಿ ಇವರು  ಸ್ವಾಭಿಮಾನದ ಅರ್ಥವನ್ನು ತಮಗೆ ಬೇಕಾದ ಹಾಗೆ ಬಳಸಿಕೊಲ್ಲುತಿದ್ದಾರೆ.

ಇನ್ನು ಇಳಿ ವಯಸ್ಸಿನ ವ್ಯಕ್ತಿಯೊಬ್ಬರು ಕೈ ಕಾಲು ಹಿಡಿದಾಗಲೂ ಅವರಿಗೆ ಪಕ್ಷ ಟಿಕೆಟ್ ನೀಡದೆ ನೀರಾಸೆ ಮೂಡಿಸಿದೆ, ಆದರೂ ಅವರು ತನ್ನನ್ನು ನಂಬಿದ್ದ ಜನತೆಗೆ ಇಷ್ಟು ವರ್ಷ ತಾನೇನು ಮಾಡಿಲ್ಲ ಎನ್ನುವುದನ್ನು ಚಿಂತಿಸದೆ ಇನ್ನೊಂದು ಪಕ್ಷ ಸೇರಲು ತಯಾರಾದಂತೆ ವರ್ತಿಸುತಿದ್ದಾರೆ,  ನಾಚಿಕೆ ಮಾನ ಮಾರ್ಯಾದಿಗಳು ಇದ್ದರೆ  ತಾನೇ ಆ ಚಿಂತನೆಗಳು ಬರಲು ಸಾಧ್ಯ, ಕೆಲವರು ಬೇಡ ಬೇಡ ಎಂದರು ಅವರಿಗೆ ಮನ್ನಣೆ ನೀಡಿ ಸ್ವಾಗತಿಸಲಾಗಿದೆ. ಈ ರೀತಿ ಹಲವು ವಿಧಗಳಲ್ಲಿ ರಾಜಕೀಯ ದೊಂಬರಾಟ ಘರ್ಜನೆಯಿಂದ ಆರಂಭವಾಗಿದೆ. ತೀರ್ಪುಗಾರ ಎನಿಸಿಕೊಂಡವನು ಮಾತ್ರ ತನ್ನ ತೀರ್ಪಿನತ್ತ ಯೋಚಿಸತೊಡಗಿದ್ದಾನೆ ಇವರಿಗೆಲ್ಲ ಒಟ್ಟಾಗಿ ಬುದ್ದಿ ಕಲಿಸುವ ಪ್ರಯತ್ನದಲ್ಲಿದ್ದಾನೆ, ಎಲ್ಲವನ್ನೂ ಅವಲೋಕಿಸುತಿದ್ದಾನೆ.

ಕೆಲವರು ಬಹಿರಂಗವಾಗಿ ರಕ್ತ ಹರಿಸುತಿದ್ದಾರೆ ಇನ್ನು ಕೆಲವರು ತೆರೆ ಮರೆಯ ಹಿಂದೆ ನಿಂತು ಅದಕ್ಕೆ ಕುಮ್ಮಕ್ಕು ನೀಡುತಿದ್ದಾರೆ ಇವರ ಮಧ್ಯೆ ಅಮಾಯಕನೆನಿಸಿಕೊಂಡವರು ಮಾತ್ರ ಬಲಿಪಸುವಾಗುತಿದ್ದಾರೆ, ರಾಜಕೀಯ ಎನ್ನುವ ವ್ಯವಸ್ಥೆ ಕೆಟ್ಟು ದುರ್ನಾತ ಬೀರತೊಡಗಿದೆ, ಮುಂದಿರುವ ಚುಣಾವನೆಯಲ್ಲಾದರು ಮತದಾರರು ಯಾರನ್ನು ಆಯ್ಕೆ ಮಾಡಬೇಕು ಯಾರನ್ನು ಕೈ ಬಿಡಬೇಕು ಎಂದು ತಿರ್ಮಾನಿಸಲಿ, ಮತದಾರನಿಗೆ ಯಾರೂ ಸರಿಯಾದ ಅಭ್ಯರ್ತಿ ಇಲ್ಲ ಎನ್ನುವುದನ್ನು ಸೂಚಿಸಲು ಕೂಡಾ ವ್ಯವಸ್ಥೆ ಕಲ್ಪಿಸಲಾಗಿದೆ, ರಾಜಕೀಯ ವ್ಯವಸ್ಥೆಯಿಂದ ರೋಸಿಹೋದ ಮತದಾರ ಅದರ ಕಡೆಗೆ ಒಲವು ತೋರಿಸದಿದ್ದರೆ ಸರಿ.  ಏನಿದ್ದರೂ ಮತದಾರನಿಂದ ಮಾತ್ರ ಇದಕ್ಕೆಲ್ಲಾ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡಲು ಸಾಧ್ಯ ಆ ಮೂಲಕ ಈಗಿನ ರಾಜಕೀಯ ವ್ಯವಸ್ಥೆಗೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಶತಮಾನಗಳ ಹಿಂದೆ ಇದ್ದ ಅಲ್ಪ ಸ್ವಲ್ಪ ಮಾನ ಮರ್ಯಾದಿ ಇದ್ದ ರಾಜಕಾರಣ ವ್ಯವಸ್ಥೆಯಾದರು ಮರಳಿ ಬರಲಿ. 

No comments: