Saturday, March 22, 2014

ರಾಜಕಾರಣದ ನಗೆ ಬರುವ ಸಾಲು (ಚುಟುಕ)


ಬೀನ್ಸು, ಕಡಲೇಕಾಯಿ ಇನ್ನಿತರ ತರಕಾರಿ ಹೆಚ್ಚಿ ಬೇಯಿಸಿದಾಗ ಸಾಂಬಾರು,
ಕಳ್ಳರು, ಸುಳಿಗೆಕೋರರು, ಅತ್ಯಾಚಾರಿಗಳು ಪ್ರಸಕ್ತ ರಾಜಕಾರಣದ ಮಾಲು. 
 
ಪದವಿ ಪಡೆದವನಿಗೆ ಇಂದು ಸುಲಭದಲ್ಲಿ ಸಿಗುತ್ತಿಲ್ಲ ಎಲ್ಲೂ ಜೋಬು,
ಜನರ ಸಮಸ್ಯೆ ಆಳಿಸದವನಿಗೆ ಪಾರ್ಲಿಮೆಂಟ್ನಲ್ಲೊಂದು ಧರ್ಮದ ಚೇರು. 

ನಮ್ಮನ್ನು ಆಳುತ್ತಿರುವವರ ವಾಸ್ತವಿಕತೆಯ ಬಗ್ಗೆ ನಗೆ ಬರುವ ಸಾಲು,
ಬಡವರು ಅಸಹಾಯಕತೆಯಿಂದ ನರಳುವುದೇ ದಿನನಿತ್ಯದ ಗೋಳು. 

ಕೀಳು ರಾಜಕಾರಣದಿಂದ ಅರ್ಥ ವ್ಯವಸ್ಥೆಯಲ್ಲಿ ಆಗಿದೆ ಏರು ಪೇರು,
ಮತದಾರ ಎಚ್ಚೆತ್ತುಕೊಳ್ಳುವವರೆಗೆ ರಾಜಕಾರಣದಲ್ಲಾಗದು ಮಾರ್ಪಾಡು. 

No comments: