Friday, March 7, 2014

ಕಾಟಾಚಾರದ ಕ್ಷಮೆ ಕೇಳಿದಾಗ ರಕ್ತದ ಕಲೆಗಳು ಮಾಸುವುದೇ? (ಲೇಖನ)





 ನಾವು ಮುಸ್ಲಿಮರಲ್ಲಿ ಮಂಡಿಯೂರಿ ಕ್ಷಮೆ ಯಾಚಿಸುತ್ತೇವೆ ಎಂದು ರಾಜನಾಥ್ ಸಿಂಗ್ ಹೇಳಿದ್ದರ ಹಿಂದೆ ಹಲವು ಅಂಶಗಳನ್ನು ಪಟ್ಟಿ ಮಾಡಬಹುದು ಈ ಹೇಳಿಕೆಯನ್ನು ಬಹುಶಃ ಒಂದು 'ಕೋಮು-ಸಂಪ್ರದಾಯವಾದಿ' ಪಕ್ಷದ ಬಿಜೆಪಿಯ ಮತ ಬ್ಯಾಂಕ್ ಪರವಾಗಿ ಕೇಳಿರಬಹುದು ಮತ್ತು ವರ್ಷಗಳು ಉರುಳಿರುವುದರಿಂದ ರಕ್ತದ ಕಲೆಗಳು ಮಾಸಿದೆ ಜನರು ಅದನ್ನು ಮರೆತಿದ್ದಾರೆ ಎಂದು ತಿಳಿದು ಅದನ್ನು ತೊಡೆದುಹಾಕಲು ಬಳಸಿಕೊಂಡ ತಂತ್ರವಾಗಿರಲೂಬಹುದು. ಇದು ಒಂದು ಸಾಂಕೇತಿಕ ರಾಜಕೀಯ ದುರ್ಭುದ್ದಿಯನ್ನು ಪ್ರತಿನಿಧಿಸಿರಬಹುದು.

ನಿಸ್ಸಂಶಯವಾಗಿ ಕಾಂಗ್ರೆಸ್ ಒಂದು ಸಮರ್ಥ ಪರ್ಯಾಯ ಪಕ್ಷ ಎಂದು ನಂಬಿಕೊಂಡು ಬಂದಿರುವ ಮುಸ್ಲಿಂ ಸಮುದಾಯಕ್ಕೆ ಬಿಜೆಪಿ ಮುಸ್ಲಿಮರ ಪರವಾಗಿದ್ದೇವೆ ಎಂದು ಹೇಳಿ ಚುನಾವಣಾ ಪೂರ್ವ ಲಾಭ ಪಡೆಯುವ ಆಸಕ್ತಿ ತೊರಿಸಿದ್ದರಬಹುದು. ಈ ಅರ್ಥದಲ್ಲಿ ಮುಸ್ಲಿಮರಲ್ಲಿ ಕೇಳಿದ 'ಕ್ಷಮೆ' ಪ್ರಜ್ಞಾಪೂರ್ವಕ ರಾಜಕೀಯ ನಡೆಯನ್ನು ತೋರಿಸಿದ್ದು ಎಂದು ಸಾಕಷ್ಟು ಅರ್ಥವಾಗುವಂತಹದ್ದಾಗಿದೆ. ಆದಾಗ್ಯೂ ಮುಸ್ಲಿಮರು ಕಡೆಗೆ ಬಿಜೆಪಿಯ ಅಧಿಕೃತ ನೀತಿ ಮತ್ತು ಹೇಳಿಕೆ ಇತರೆ ಅಂಶಗಳನ್ನು  ಅರ್ಥ ಮಾಡಿಕೊಲ್ಲುವವರಾಗಿದ್ದಾರೆ,ವಿಮರ್ಶನೆಗೆ ಒಳಪಡಿಸಿದ್ದಾರೆ ಎಂದೇ ಹೇಳಬಹುದು


ಬಾಬರಿ ಮಸ್ಜಿದ್ ದ್ವಂಸ ಮತ್ತು ಅದರ ನಂತರ ನಡೆದ ಘಟನೆಗಳು, ಗುಜರಾತ್ ಕೋಮು ಗಲಭೆ ಮತ್ತು ಇಂತಹ ಹತ್ತು ಹಲವು ಅನ್ಯಾಯದ ಘಟನೆಗಳನ್ನು ಮುಸ್ಲಿಮರು ಕಾಲ್ಪನಿಕ ಎಂದು ಭಾವಿಸಿ ಮರೆತುಬಿಟ್ಟಿದ್ದಾರೆ ಎಂದು ಇವರು ತಿಳಿದು ಕೊಂಡ ಹಾಗೆ ಕಾಣುತ್ತದೆ. ಆದ್ದರಿಂದಲೇ ಈ ಹಿಂದೆ ನಮ್ಮಿಂದೇನಾದರೂ ತಪ್ಪಾಗಿದೆ ಎಂದೆನಿಸದರೆ ನಮ್ಮನ್ನು ಕ್ಷಮಿಸಿ ಎಂದು ಹೇಳಿರುವುದು. ನರೇಂದ್ರ ಮೋದಿ ಅವರ ವಿಚಾರ ಬಂದಾಗಲೆಲ್ಲಾ 2002ರ ಗುಜರಾತ್ ಕೋಮುಗಲಭೆಯನ್ನೇ ಕೆಲವರು ಕೇಂದ್ರವಾಗಿಸಿಕೊಳ್ಳುತ್ತಾರೆ ಎಂದು ಹೇಳಿದ ಇವರಿಗೆ ಕ್ಷಮೆ ಕೇಳಿದ ತಕ್ಷಣ ಇವರು ಹರಿಸಿದ ರಕ್ತದ ಕೊಡಿಯಿಂದ ಉಂಟಾದ ರಕ್ತದ ಕಲೆಗಳು ಮಾಸುವುದಿಲ್ಲ ಎಂದು ತಿಳಿದಿಲ್ಲ. 

changed
 ನರೇಂದ್ರ ಮೋದಿ ಮುಖ್ಯಮಂತ್ರಿಯಾಗುವುದಕ್ಕೂ ಮೊದಲು ಗುಜರಾತಿನಲ್ಲಿ ಕೋಮು ಗಲಭೆಗಳೇ ನಡೆದಿರಲಿಲ್ಲವೇ ಎಂದು ಕೇಳಿದ ಇವರಿಗೆ ಗುಜರಾತಿನಲ್ಲಿ ನಡೆದಂತಹ ಹತ್ಯಾಕಾಂಡ ಊಹೆಗೆ ನಿಳುಕಳು ಅಸಾಧ್ಯವಾದಸ್ಟು ಕ್ರೂರವಾಗಿತ್ತೆಂದು   ಅನಿಸಿಲ್ಲವೇಕೆ? 'ದೇಶವನ್ನು ಇಬ್ಭಾಗ ಮಾಡಲಿಚ್ಛಿಸುವವರೇ ಕೋಮುವಾದಿಗಳು ನಾವು ಅಧಿಕಾರಕ್ಕಾಗಿ ರಾಜಕೀಯ ಮಾಡಲು ಬಂದಿಲ್ಲ ದೇಶ ನಿರ್ಮಾಣ ಮಾಡಲು ರಾಜಕಾರಣ ಮಾಡುತ್ತಿದ್ದೇವೆ' ಎಂದು ಹೇಳುವುದಕ್ಕೆ ಸ್ವಲ್ಪವೂ ನೈತಿಕತೆ ಉಳ್ಳವರು ನಾವಲ್ಲ ಎಂದು ಗ್ರಹಿಸಕೊಳ್ಳಲಿಲ್ಲವೇಕೆ?.

ಮುಸ್ಲಿಮರು ಮೋದಿಯನ್ನು ನೋಡಿ ಮತ ನೀಡಬೇಡಿ ಎಂದು ಹೇಳಿದ ಇವರು ಯಾರ ಮುಖ ನೋಡಿ ಬಿಜೆಪಿಗೆ ಮತ ಹಾಕಬೇಕು ಎಂದು ಸ್ಪಸ್ಟಪಡಿಸಿಲ್ಲವೆಕೆ ? ದೇಶದ ಹಿತ ಚಿಂತನೆಯನ್ನು ಗಮನದಲ್ಲಿಟ್ಟುಕೊಂಡು ನಮಗೆ ಮತ ನೀಡಿ ಎಂದು ದೇಶದಲ್ಲಿ ವಿಷ ಬೀಜವನ್ನು ಬಿತ್ತುವಲ್ಲಿ ಶ್ರಮಿಸಿದವರು ಹೇಳಿದ್ದು ಹೇಗೆ?  ಬಿಜೆಪಿಯು ಯಾವತ್ತೂ ಮುಸ್ಲಿಮರ ವಿರೋಧಿಯಲ್ಲ ಎಂದವರಿಗೆ ವಿರೊಧವನ್ನು ತೋರ್ಪಡಿಸಲೆಂದೇ ಮುಸ್ಲಿಮರ ಮೇಲೆ ಅನ್ಯಾಯ ಮಾಡಿದಾಗ ನೆನಪಾಗಿಲ್ಲವೇಕೆ?. ಬಿಜೆಪಿಯನ್ನು ಆಗದ ವಿರೋಧಿಗಳು ಮುಸ್ಲಿಮರನ್ನು ಬಿಜೆಪಿಯ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಹೇಳಿದವರು ಮುಸ್ಲಿಮರ ಪರವಾಗಿ ನಾವು ಮಾಡಿದ ಕಾರ್ಯ ಯಾವುದು ಎಂದು ಅವಲೋಕಿಸಿದ್ದರೆ ಒಳ್ಳೆಯದ್ದಿತ್ತಲ್ಲವೇ?
.
 ಬಿಜೆಪಿಯ ತತ್ವ ಸಿದ್ಧಾಂತಗಳಲ್ಲಿ ಯಾವುದೇ ರೀತಿಯ ಮುಸ್ಲಿಂ ವಿರೋಧಿ ನಿಲುವು ಹೊಂದಿಲ್ಲ ಎಂದು ಹೇಳುವ ಮೂಲಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸಬೇಕು ಎಂದಿದ್ದಾರೆ, ಯಾರನ್ನು ಬೆಂಬಲಿಸಬೇಕು ಯಾರನ್ನು ಬೆಂಬಲಿಸಬಾರದು ಎಂದು ಈ ಜನತೆ ತೀರ್ಮಾನಿಸಲಿ. ಜನರು ತಮ್ಮ ನೋವುಗಳನ್ನು ವ್ಯಕ್ತಪಡಿಸಲು ಮತ್ತೊಮ್ಮೆ ಅವಕಾಶ ಒದಗಿ ಬಂದಿದೆ ಅದನ್ನು ಸರಿಯಾಗಿ ಉಪಯೋಗಿಸಿ ಯೋಗ್ಯರನ್ನು ಆರಿಸಿ ಇನ್ನಾದರೂ ಬದಲಾವಣೆಗಳನ್ನು ನಿರೀಕ್ಷಿಸೋಣ, ಮತ್ತೊಮ್ಮೆ ಯೆಡವದಿರೋಣ, ಭ್ರಸ್ಟಾಚಾರಿಗಳಿಗೆ, ಫ್ಯಾಸಿಸ್ಟ್ ಶಕ್ತಿಗಳಿಗೆ ಸಂಪೂರ್ಣ ವಿಶ್ರಾಂತಿ ಕೊಟ್ಟುಬಿಡುವತ್ತ ಪಯಣ ಸಾಗಲಿ .    







No comments: