ಬಡತನ ಮಾನವ ಸಮಾಜವೇ ಸೃಷ್ಟಿಸಿದ ಶಾಪ,
ಬಡತನ ಅನ್ಯಾಯ ಸೃಷ್ಟಿಗೆ ಪ್ರಚಲಿತ ಸಬೂಬು.
ಬಡತನ ಅನಕ್ಷರತೆಗೆ ನಾಂದಿ ಹಾಕಿದ ಉದ್ಗಾರ,
ಬಡತನ ಸಂಪೂರ್ಣ ಮಾನವ ಸೃಷ್ಟಿತ ಪ್ರದರ್ಶನ.
ಬಡತನ ಸಂಪೂರ್ಣ ಮಾನವ ಸೃಷ್ಟಿತ ಪ್ರದರ್ಶನ.
ಬಡತನ ಕರ್ತವ್ಯವನ್ನು ಹೀರಿಕೊಳ್ಳುವುದಕ್ಕೆ ಪ್ರೋತ್ಸಾಹ,
ಬಡತನ ಸುಲಭವಾದ ನಮ್ಮ ಗುರಿ ತಪ್ಪಿಸುವುದಕ್ಕೆ ಆಧಾರ.
ಬಡತನ ಸುಲಭವಾದ ನಮ್ಮ ಗುರಿ ತಪ್ಪಿಸುವುದಕ್ಕೆ ಆಧಾರ.
ಬಡತನ ಭ್ರಷ್ಟಾಚಾರದ ನಿವ್ವಳ ಹರಡುವಿಕೆಗೆ ನಾಂದಿ,
ಬಡತನ ಅನಿಷ್ಟಿಗಳ ಸಮಾಜದ ಅನಾವರಣಕ್ಕೆ ಉಡುಗುರೆ.
ಬಡತನ ಆಧುನಿಕತೆಯ ಮಡಿಲಲ್ಲಿ ಅಸ್ತಿತ್ವ ಪಡೆದಿದೆ,
ಬಡತನ ದಿನನಿತ್ಯ ಕಟೋರತೆಗಳನ್ನೂ ಪ್ರದರ್ಸಿಸುತ್ತಿದೆ.
ಬಡತನ ದಿನನಿತ್ಯ ಕಟೋರತೆಗಳನ್ನೂ ಪ್ರದರ್ಸಿಸುತ್ತಿದೆ.
ಬಡತನ ನಮ್ಮ ದುರ್ವ್ರಿತ್ತಿ ಉತ್ತೆಜನೆಗೆ ಮೂಲ ಆಧಾರ,
ಬಡತನ ನಮಗೆ ನಾವೇ ಅರ್ಥ ಮಾಡಿಕೊಳ್ಳಬೇಕಾದ ಪ್ರಕ್ರೀಯೆ.
ಬಡತನ ನಮಗೆ ನಾವೇ ಅರ್ಥ ಮಾಡಿಕೊಳ್ಳಬೇಕಾದ ಪ್ರಕ್ರೀಯೆ.
ಬಡತನ ಎಲ್ಲಾ ತಾತ್ವಿಕ ಕೊರತೆಗಳಿಗೆ ಕೊನೆಯಲ್ಲಿ ಕಾರಣ,
ಬಡತನ ದೇವರ ಆಶೀರ್ವಾದ ಎಂದು ನಾವೇ ಹಾಕಿಕೊಂಡ ಪ್ರಶ್ನೆ.
ಬಡತನ ಜೀವನ ಅರಿತುಕೊಳ್ಳುವುದಕ್ಕೆ ಆಗಬಹುದಾದ ಪಾಠ,
ಬಡತನ ಸ್ವಲ್ಪ ಉಳಿಯಬೇಕು! ಸಾಮಾಜಿಕ ಕಾಳಜಿ ಇರಬೇಕು.
ಬಡತನ ಹೆಚ್ಚಾಗಲು ತೆರಿಗೆ ಹೆಚ್ಚಳವೂ ಆಧಾರ,
ಬಡತನ ಪೋಷಿಸಲು ಪುಗಸಟ್ಟೆಗೆ ಕೊಟ್ಟದ್ದೂ ಕಾರಣ.
ಬಡತನ ಅಷ್ಟಕ್ಕೂ ನಮ್ಮ ಸೋದರ ಸಂಬಂದಿಯಲ್ಲ,
ಬಡತನ ನಾವು ಬಯಸಿ ಬಂದ ಪ್ರೇಮದಂತೆಯೂ ಅಲ್ಲ.
ಬಡತನ ನಾವು ಬಯಸಿ ಬಂದ ಪ್ರೇಮದಂತೆಯೂ ಅಲ್ಲ.
ಬಡತನ ನಾವ್ಯಾರು ಪ್ರಾರ್ಥಿಸಿ ಬಂದ ಕೊಡುಗೆಯಲ್ಲ,
ಬಡತನ ನಾವೆಲ್ಲಾ ಕಟ್ಟಿಕೊಂಡ ಕನಸು ಕೂಡಾ ಅಲ್ಲ.
ಬಡತನ ನಮ್ಮೆಲ್ಲರ ಆಪ್ತ ಸಂಗಾತಿ ಆದದ್ದು ಹೇಗೆ?
ಬಡತನ ನೋವುಗಳಿಂದಲೇ ನಮಗೆ ನೆರಳಾದದ್ದು ಏಕೆ?
ಬಡತನ ನಮ್ಮೆಲ್ಲರ ಆಪ್ತ ಸಂಗಾತಿ ಆದದ್ದು ಹೇಗೆ?
ಬಡತನ ನೋವುಗಳಿಂದಲೇ ನಮಗೆ ನೆರಳಾದದ್ದು ಏಕೆ?
ಬಡತನ ನಮ್ಮಲ್ಲಿ ಸಂಪೂರ್ಣ ನಿರಾಶೆ ಮೂಡಿಸಿದಾಗ,
ಬಡತನ ಶಾಶ್ವತವಾಗಿ ನೋವುಗಳನ್ನು ಕೆರಳಿಸಿದಾಗ.
ಬಡತನ ತಿನ್ನಲು ಇಲ್ಲದ ನಿರಾಶ್ರಿತನಾದ ಅನಾಥನಾಗಿಸಿದಾಗ,
ಬಡತನ ಬ್ರೆಡ್ದೋ, ಹಸಿ ಮಾಂಸವೋ ಎನ್ನುವ ಆಯ್ಕೆ ಮೂಡಿಸಿದಾಗ.
ಬಡತನ ಬ್ರೆಡ್ದೋ, ಹಸಿ ಮಾಂಸವೋ ಎನ್ನುವ ಆಯ್ಕೆ ಮೂಡಿಸಿದಾಗ.
ಬಡತನ ನೀಡಿದ ಹಸಿವಿನ ನೋವು ನಮಗೆ ತಿಳಿದಿರಲಿ,
ಬಡತನ ಕಾಡಿದ ಬಾಯಾರಿಕೆಯ ಸಂಕಟ ನೆನಪಿರಲಿ.
ಬಡತನ ಸ್ವಂತ ಬವಣೆ ಕೊನೆಗೊಳಿಸಲು ಪಣತೊಡಬೇಕು,
ಬಡತನ ಒಂಟಿಯಾಗಿ ಸಮುದ್ರದಲ್ಲಿ ಚಲಿಸಲು ಸಿದ್ದರಿದ್ದಂತೆ.
ಬಡತನ ಒಂಟಿಯಾಗಿ ಸಮುದ್ರದಲ್ಲಿ ಚಲಿಸಲು ಸಿದ್ದರಿದ್ದಂತೆ.

No comments:
Post a Comment