ಬೀದಿ ಬದಿಯಲ್ಲೊಂದು ಅನಾಥವಾಗಿ ಬಿದ್ದುಕೊಂಡು ಅಳುತ್ತಿರುವ ಪುಟ್ಟ ಮಗು, ಸಮೀಪವೇ ನಡೆದುಕೊಂಡು ಹೋಗುವವರು ಅದನ್ನು ಗಮನಿಸಿಯೂ ಗಮನಿಸದಂತೆ, ಅಳುವಿನ ಸಬ್ದ ಕೇಳಿಯೂ ಕೇಳಿಸದಂತೆ ತಮ್ಮ ಪಾಡಿಗೆ ಹೊರಟು ಹೋಗುವ ಒಂದು ದುರಂತ ಕಾಲವನ್ನು ನಮಗೆ ಊಹಿಸಲು ಸಾದ್ಯವೇ? ಖಂಡಿತವಾಗಿಯೂ ಸಾಧ್ಯವಿದೆ ಯಾಕೆಂದರೆ ನಾನು ಮತ್ತು ನೀವು ಇವತ್ತು ಜೀವಿಸುತ್ತಿರುವುದು ಇಂತಹದೇ ಸನ್ನಿವೇಷವಿರುವ ವಾತಾವರಣದ ಅಡಿಯಲ್ಲಿ ಒಂದು ಅಪ್ರಮಾನಿತ ಕಾಲಘಟ್ಟದಲ್ಲಿ.
ಮನುಷ್ಯನು ಆಧುನಿಕವಾಗಿ ಎಷ್ಟು ಮುಂದುವರಿಯುತಿದ್ದಾನೋ ಅಸ್ಟೇ ಮಾನವೀಯತೆಯ ವಿಚಾರಗಳಿಂದ
ದೂರವಾಗುತಿದ್ದಾನೆ, ಮಾನವೀಯ ಮೌಲ್ಯಗಳು ಮರೆಯಾಗುತ್ತಿದೆ, ದೊಡ್ಡ ಬಂಗಲೆಗಳಲ್ಲಿ ಸುಖ ವೈಬೋಗದಲ್ಲಿ ಜೀವಿಸುತ್ತಿರುವ ಮನುಷ್ಯನಿಗೆ ತಮ್ಮಂತೆಯೇ ಇರುವ ಬಡ ಜೀವಗಳ ಬಗ್ಗೆ ಕಾಳಜಿ ಇಲ್ಲದಾಗಿದೆ ಮತ್ತು ಅದರ ಬಗ್ಗೆ ಯೋಚಿಸುವಸ್ಟು ಸಮಯ ಕೂಡಾ ಇಲ್ಲವಾಗಿದೆ, ದುರಂತಗಳನ್ನು ಕಾಲಬುಡದಲ್ಲೇ ಇಟ್ಟುಕೊಂಡು,ಆಹಾರವಿಲ್ಲದೆ ಅದೆಸ್ಟೋ ಮುಗ್ದ ಮಕ್ಕಳು ಪ್ರಾಣಕಳೆದುಕೊಳ್ಳುತ್ತಿರುವಾಗ ನಾವು ಪ್ರಕಾಶಿಸುತ್ತಿದ್ದೇವೆ ಎಂದು ಹಗಲು ಕನಸನ್ನು ತೋರಿಸಿ ನಮ್ಮನ್ನು ಕತ್ತಲೆಯಲ್ಲೇ ಕಾಲ ಕಳೆಯುವಂತೆ ಮಾಡಲಾಗಿದೆ.
ಪ್ರತೀ ನಿಮಿಷಕ್ಕೆ ಹದಿನಾಲ್ಕು ಮಕ್ಕಳು ಸಾಯುತಿದ್ದಾರೆ, ಪ್ರತೀ ನೂರು ಮಕ್ಕಳಲ್ಲಿ ಹತ್ತೊಂಬತ್ತು ಮಕ್ಕಳು ಶಾಲೆ ಬಿಡುತ್ತಿದ್ದಾರೆ ಎಂದು ಹೇಳುವ ವರದಿಗಳನ್ನು ತಲೆಯ ಮೇಲೆ ಹಿಡಿದು ತಿರುಗಾಡುತಿದ್ದೆವೆಯೇ ಹೊರತು ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವ ವ್ಯವಸ್ಥೆ ಸರಿಯಾಗಿ ನಡೆದಿಲ್ಲ. ವರದಿಗಳ ನಂತರ ಗಮನಾರ್ಹ ಇಳಿಕೆ ಕಂಡಿರಬಹುದೇ ಹೊರತು ನಿರೀಕ್ಷಿಸಿದ ಮಟ್ಟಕ್ಕೆ ತಲುಪಲು ಇದುವರೆಗೆ ಸಾಧ್ಯವಾಗಿಲ್ಲ ಎನ್ನುವುದು ಸತ್ಯ
ಸರ್ಕಾರ ಮಕ್ಕಳಿಗೆ ಮೂಲಭೂತ ವ್ಯವಸ್ಥೆ ಕೊಡಿಸುತ್ತೇವೆ ಎಂದು ಹೇಳಿ ಕಣ್ಣಮುಚ್ಚಾಲೆ ಆಡುತ್ತಿದೆ, ಅಭಿವ್ರದ್ದಿಯ ಹೆಸರಿನಲ್ಲಿ ಎಲ್ಲೆಡೆ ವಂಚನೆ ನಡೆಯುತ್ತಿದೆ, ಶಾಲೆ ಬಿಟ್ಟು ಕೆಲಸಕ್ಕೆ ಹೋಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿಗಳು ಹೇಳುವಾಗ ಅದನ್ನು ಮರೆಮಾಚುವ ಪ್ರಯತ್ನಗಳು ಕೂಡಾ ನಡೆದಿದೆ , ಪ್ರತಿ ಮಗುವಿಗೆ ಬದ್ದತೆಯನ್ನು ಕಲಿಸಿಕೊಡಬೇಕಾದ ಅಗತ್ಯ ಇದೆ ಎಂದು ತಿಳಿದಿರುವ ಸರಕಾರಗಳು ತನ್ನ ಬದ್ದತೆಯನ್ನೇ ಮರೆತು ಕೆಸರೆರೆಚಾಟದಲ್ಲಿ ತೊಡಗಿದೆ.
ಮಕ್ಕಳ ಹಕ್ಕುಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಬೇಕು, ಮಕ್ಕಳ ಸಾಕ್ಷರತ ಪ್ರಮಾಣದ ಅಂತರದಲ್ಲಿ ಕಡಿತವನ್ನು ಕಾಪಾಡಿಕೊಳ್ಳಬೇಕು, ಮಕ್ಕಳ ಅರೋಗ್ಯದಲ್ಲಿ ಗುಣಮಟ್ಟವನ್ನು ಕಾಪಾಡಿ ಶಿಕ್ಷಣದ ಕೊರತೆ ನಿಗಿಸುವಂಥ ಕೆಲಸಗಳನ್ನು ಜವಾಬ್ದರಿಯುಲ್ಲ ವ್ಯಕ್ತಿಗಳು ಮಾಡಬೇಕಾಗಿದೆ ಅ ಮೂಲಕ ಸುಂದರ ಕನಸುಗಳನ್ನು ಆ ಮುಗ್ದ ಮಕ್ಕಳಲ್ಲಿ ಕಟ್ಟಿಕೊಡಲು ಸಾದ್ಯ . ಚಹಾ ಹಿಡಿದುಕೊಂಡು ಬರುವ ಒಂದು ಪುಟ್ಟ ಮಗುವಿನಲ್ಲಿ ನೀವು ಕೇಳಿ ನೋಡಿ ನಿನ್ನ ವಯಸ್ಸೆಸ್ಟು ಅವನು ತಕ್ಷಣ ಹೇಳುವುದು "ಹದಿನೆಂಟು ಸಾರ್" ಅದು ಅವನೆಸ್ಟೇ ವಯಸ್ಸಿನವನಾಗಿದ್ದರೂ ಕೂಡಾ, ನಮ್ಮ ವ್ಯವಸ್ಥೆ ಅವನನ್ನು ಬೆಳೆಸಿದ್ದು ಹಾಗೆ, ಅವನು ಕಂಡು ಕೊಂಡ ಜೀವನದ ವ್ಯವಸ್ಥೆ ಹಾಗೆ, ಒಂದು ವೇಳೆ ಅವನು ಹಾಗೆ ಹೇಳದಿದ್ದರೆ ಅವನ ಹೊಟ್ಟೆ ತುಂಬುವುದಿಲ್ಲ ಆದ್ದರಿಂದ ಅವನು ತನ್ನ ಸಣ್ಣ ವಯಸ್ಸಿನಲ್ಲೇ ಸುಳ್ಳಿಗೆ ಮಾರುಹೊಗಿದ್ದಾನೆ. ನಾವು ಇದನ್ನು ನೋಡಿಕೊಂಡು ನೋಡದ ಹಾಗೆ ಮುಂದುವರಿಯಬೇಕೆ? ಸಮಸ್ಯೆಗೆ ನಿಜವಾದ ಕಾರಣ ಹುಡುಕುವ ಮತ್ತು ಪರಿಹಾರದ ವ್ಯವಸ್ಥೆಯನ್ನು ಇಲ್ಲಿ ಮಾಡಬೇಕಾದವರು ಯಾರು? ಇದಕ್ಕೆಲ್ಲ ಉತ್ತರಿಸಬೇಕಾದವರು ಯಾರು?
ಮಕ್ಕಳನ್ನು ಇಂದು ಗಣಿಗಾರಿಕೆ ಮತ್ತು ಶ್ರಮಿಕ ವರ್ಗದ ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ, ಮಕ್ಕಳು ಶಾಲೆಗೆ ಹೋಗುವ ಬದಲು ಕೆಲಸಕ್ಕೆಹೋದರೆ ಆಧಾರವಾಗಬಹುದು ಎಂದು ಬಡ ಹೆತ್ತವರು ತಿಳಿದುಕೊಂಡಿದ್ದಾರೆ, ಸರಕಾರಿ ಶಾಲೆಗಳ ಮುಚ್ಚುಸುವಿಕೆ ಮತ್ತು ಖಾಸಗಿ ಶಾಲೆಗಳ ವಿಪರೀತ ಏರಿಕೆ ಕೂಡಾ ಈ ಸಮಸ್ಯೆ ಹೆಚ್ಚಾಗಲು ಕಾರಣ ಮತ್ತು ಹೆತ್ತವರು ಶಿಕ್ಷನದತ್ತ ಹೆಚ್ಚು ಒಲವು ತೋರಿಸದಿರಲು ಕೂಡಾ ಕಾರಣ, ಇನ್ನು ಇತ್ತೀಚಿಗಿನ ಕೆಲವು ಮೀಸಲಾತಿಗಳು ಸರಕಾರಿ ಶಾಲೆಗಳ ಮುಚ್ಚಿಸುವಿಕೆಗೆ ಕಾರಣ ಆಗಬಹುದೆಂದು ಮೇಲ್ನೋಟಕ್ಕೆ ಕಾಣುತ್ತಿದೆ
ಒಂದು ಕಾಲದಲ್ಲಿ ಸಮಾಜಕ್ಕೆ ಕಂಟಕವಾಗಿ ಅಂಟಿಕೊಂಡಿದ್ದ ಜೀತ ಪದ್ದತಿಯನ್ನು ಅಳಿಸಿ ಹಾಕಲು ಹೇಗೆ ಪರಿಣಾಮಕಾರಿ ಯೋಜನೆಗಳನ್ನು ತರಲಾಯಿತೋ ಅದೇ ರೀತಿ ಮಕ್ಕಳ ಸಮಸ್ಯೆ ನಿರ್ಮೂಲನೆಗೆ ಪರಿಣಾಮಕಾರಿ ವ್ಯವಸ್ಥೆಯನ್ನು ಬಲ ಪಡಿಸುವ ಕೆಲಸ ನಡೆದುಬರಬೇಕಾಗಿದೆ, ಆ ಮೂಲಕ ಬೆಳೆದು ಬರುವ ಮುಗ್ದ ಮಕ್ಕಳ ಬಾಳಿಗೆ ನೆರವಾಗಬೇಕು ಮತ್ತು ಅವರನ್ನು ಭಾವನಾತ್ಮಕವಾಗಿ, ಮಾನಸಿಕವಾಗಿ, ಬೌದ್ದಿಕವಾಗಿ, ಭೌತಿಕವಾಗಿ, ಅಭಿವ್ರದ್ದಿಪಡಿಸಲು ಸರಕಾರಗಳು ಯೋಜನೆಯನ್ನು ತರಬೇಕು, ಸಮಿತಿಗಳು ಪುಸ್ತಕದ ಹಾಳೆಗಳಿಗೆ ಮಾತ್ರ ಸೀಮಿತವಾಗದೆ ವರದಿಗಳು ಅನುಸ್ಟಾನಗೊಳ್ಳಬೇಕು, ಮಕ್ಕಳು ಕಾರ್ಖಾನೆಗಳಿಂದ, ಗಣಿಗಾರಿಕೆಗಳಿಂದ, ಹೋಟೆಲು ಕೆಲಸದಿಂದ ಹೊರಗೆ ಬಂದು ಶಾಲೆಗಳತ್ತ ಹೆಜ್ಜೆ ಹಾಕಬೇಕು.

ಭಾರತದ ಮಕ್ಕಳಿಗೆ ಮೂಲಬೂತ ಹಕ್ಕುಗಳ ಜಾರಿಯಾಗುವಂತೆ ಮತ್ತು ಅದರ ಖಾತರಿ ಕಡೆಗೆ ಗಮನಾರ್ಹ ಬದ್ದತೆಗಳ ಅಗತ್ಯದ ಬಗ್ಗೆ ಸಮಾಜದಲ್ಲಿ ಜಾಗ್ರತಿ ಉಂಟಾಗಬೇಕು. ಇಲ್ಲಿ ಬದಲಾವಣೆಗಳು ಆಗಿರಬಹುದು ಆದರೆ ಅದು ನೀರಿಕ್ಷಿಸಿದ ಮಟ್ಟಕ್ಕೆ ತಲುಪಿಲ್ಲವಾದ್ದರಿಂದ ಆ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು ಆ ರೀತಿಯಲ್ಲಿ ನಿರೀಕ್ಷೆಗಳನ್ನು ಪೂರ್ತಿಗೊಳಿಸುವಲ್ಲಿ ಯಶ್ವಿಯಾಗಬೇಕು. ಮಕ್ಕಳು ಬೀದಿಗಳಲ್ಲಿ ಮಲಗುವುದನ್ನು ನಿಲ್ಲಿಸಿ ಅವರಲ್ಲಿ ಸಾಮಾಜಿಕ ಬದ್ದತೆ ಉಂಟಾಗಿ ಸದ್ರಡವಾದ ಸಮಾಜ ನಿರ್ಮಾಣದತ್ತ ಪರಿಣಾಮಕಾರಿ ಕೆಲಸಗಳು ನಡೆಯಬೇಕು.


No comments:
Post a Comment