Saturday, February 15, 2014

ಕೇಜ್ರಿ ಇಳಿದರೂ ಕೇಜ್ರಿಯ ಕ್ರೇಜ್ ಇಳಿದೀತೇ?? (ಲೇಖನ)






ಚರಿತ್ರೆಯ ಪುಟಗಳಲ್ಲಿ ಸೇರಿದ ರಾಜೀನಾಮೆ ಎಂಬ ಘಟನೆ ಅನಿರೀಕ್ಸಿತವೇನಲ್ಲ, ದೆಹಲಿಯಲ್ಲಿ ಈಗಷ್ಟೇ ಉದಯವಾದ ಒಂದು ಪಕ್ಷ ಜನರ ನಿರೀಕ್ಷೆಗೂ, ರಾಷ್ಟ್ರೀಯ ಪಕ್ಷಗಳ ಅಮಿಷಗಳಿಗೂ ಸಡ್ಡು ಹೊಡೆದು, ಸುದ್ದಿ ವಾಹಿನಿಗಳ ವಿಮರ್ಶೆಯನ್ನೂ ಮೀರಿ ಗೆದ್ದು ಯಾವಾಗ ಒಂದು ರಾಷ್ಟ್ರೀಯ ಪಕ್ಷದ ಬೆಂಬಲದೊಂದಿಗೆ ಅಧಿಕಾರ ಹಿಡಿಯಿತೋ ಅಂದೇ ಇ ದೇಶದ ಜನತೆ ಈಗಷ್ಟೇ ನಡೆದುಹೋದ ಘಟನೆಯನ್ನು ಎದುರು ನೋಡುತ್ತಿತ್ತು ಮತ್ತು ಅದು ನಡೆದು ಹೋಯಿತು ಕೂಡಾ.

ಪೊರಕೆಯ ಹೊಡೆತಕ್ಕೆ ರಾಷ್ಟ್ರೀಯ ಪಕ್ಷಗಳು  ಹೇಗೆ ಧೂಲಿಪಟವಾಯಿತೋ ಅದೇ ರೀತಿ ಪಳಗಿದವರ ಪಾಳಯದ ಕೈ ಏಟಿನ ಮುಂದೆ ಆಮ್ ಆದ್ಮಿ ಎನ್ನುವ ಪಕ್ಷವೂ ಅಧಿಕಾರ ಬಿಟ್ಟು ಕೆಳಗಿಳಿಯಬೇಕಾಯಿತು. ಕಾಂಗ್ರೆಸ್ ಎನ್ನುವ ಮಹಾಕಡಲಿನ ಮುಂದೆ ಇಜಾಡಿ ದಡ ಸೇರಿದವರು ಬಹಳ ಕಡಿಮೆ ಆ ದಾರಿಗೆ ಐ ಆರ್ ಎಸ್ ಹುದ್ದೆ ತ್ಯಜಿಸಿ ಜನಲೋಕಪಾಲ್ ಎನ್ನುವ  ಮಸೂದೆಯ ಹೋರಾಟಗಳಿಂದ ಜನಸಾಮಾನ್ಯರ ಮನಗೆದ್ದು ತನ್ನದೇ ಪಕ್ಷ ಸ್ಥಾಪಿಸಿ ದೆಹಲಿಯಲ್ಲಿ ಅಧಿಕಾರ ಹಿಡಿದ ಅರವಿಂದ ಕೇಜ್ರಿವಾಲ್ ಎನ್ನುವ ಜನಮೆಚ್ಚಿದ ಜನನಾಯಕ ಕೂಡಾ ಸೇರಿಹೊದದ್ದು ವಿಪರ್ಯಾಸದ ಸಂಗತಿ.



ಜನರು ಇನ್ನು ಯಾರಿಗೆ ಮತ ಹಾಕುವುದು ಇರುವ ಪಕ್ಷಗಳೆಲ್ಲ ಜನರಿಗೆ ನಿರೀಕ್ಷೆಗಳನ್ನು ಹುಟ್ಟು ಹಾಕಿಸಿ ಗೆದ್ದು ಬಂದ ನಂತರ ಮತದಾರನನ್ನೆ ಕೈಬಿಡುವ ಸಂದರ್ಭದಲ್ಲಿ, ದೇಶಕ್ಕೆ ಹೊಸ ಕ್ರಾಂತಿಯ ಅಲೆಯನ್ನು ತಂದ ಅರವಿಂದ ಕೇಜ್ರಿವಾಲ್ ನೇತ್ರತ್ವದ ಆಮ್ ಆದ್ಮಿ ಪಕ್ಷದ ಕೈ ಹಿಡಿಯಿತು. ದೆಹಲಿಯ ಜನತೆಯ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರವನ್ನು ಆಮ್ ಆದ್ಮಿ ಪ್ರಕಟಿಸಿತು, ದೇಶದ ಇತಿಹಾಸದಲ್ಲೇ ಮುಖ್ಯಮಂತ್ರಿಯೊಬ್ಬರು ಸಾಮಾನ್ಯರಂತೆ ಮಾಮೂಲಿ ಕಾರಿನಲ್ಲಿ ತಿರುಗಾಡತೊಡಗಿದರು, ಐಶಾರಾಮಿ  ಬಂಗಳೆಗಳಿಗೆ ವಿದಾಯ ಹೇಳಿದರು, ಕೆಂಪು ದೀಪ ಬಳಕೆಯ ಕ್ರಮವನ್ನು ನಿಲ್ಲಿಸಿದರು ವಿಶೇಷ ಭದ್ರತೆ ಬೇಡ ಎಂದರು, ದೆಹಲಿಯ ಮುಖ್ಯ ಸಮಸ್ಯೆಯಾದ ನೀರು ಮತ್ತು ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಆಮ್ ಆದ್ಮಿ ಪಕ್ಷದ ಸಚಿವರು, ಮಂತ್ರಿಗಳು ನಿದ್ರೆಯಿಲ್ಲದೆ ಕೆಲಸ ಮಾಡಿದರು,

ಆದರೆ ಹೊಸ ಚಿಂತನೆಗಳೇ ಈ ಸರ್ಕಾರಕ್ಕೆ ಮುಳುವಾಯಿತು ಜನರಿಗೆ ಇವರು ಕನಸು ತೋರಿಸುತಿದ್ದಾರೆ ಎಂದು ಹಲವು ವರ್ಷಗಳಿಂದ ಜನರಿಗೆ ಕನಸು ಕಾಣಲು ಕೂಡಾ ಅವಕಾಶ ನೀಡದ ರಾಷ್ಟ್ರೀಯ ಪಕ್ಷಗಳ ನೇತಾರರು ಹೇಳಿಕೊಂಡರು, ಭದ್ರತೆಯ  ವಿಚಾರವನ್ನೇ ದೊಡ್ಡ ವಿಷಯ ಮಾಡಿ ಹೊಸ ಸರಕಾರದ ಕೆಲಸಗಳಿಗೆ ಪರೋಕ್ಷವಾಗಿ ಅಡ್ಡಿ ಪಡಿಸಿದರು, ಜನಲೋಕಪಾಲ್ ಮಹತ್ವದ ಅರಿವು ನಮಗಿದೆ ಎಂದು ಅದನ್ನು ಸ್ತಾಪಿಸಲು ಬಿಡದೆ ಹುನ್ನಾರ ನಡೆಸಿದ ಮತ್ತು ಮಸೂದೆ ಅಂಗೀಕಾರವಾದರೆ ಅರ್ಧಕ್ಕೂ ಹೆಚ್ಚು ಮಂತ್ರಿ ಮಹಾಶಯರು ಜೈಲು ಪಾಲಾಗಬೇಕಾದೀತು ಎಂದು ಅರಿವಿದ್ದ  ಮುಕೇಶ್ ಅಂಬಾನಿ  ಎನ್ನುವ ವ್ಯಪಾರಸ್ತನ ಹಿಂದೆ ತಿರುಗಾಡುವ ಜನರು ಹೇಳಿಕೊಂಡರು.   

ಬಡವರ ಪಾಲಿಗೆ ವರದಾನವಾಗುವ  ಚಿಂತನೆಗಳು ಹೊರಬರುತ್ತಿದ್ದಂತೆ ನಾಟಕಗಳು ಆರಂಭವಾಯಿತು, ಆಮ್ ಆದ್ಮಿ ಎಂಬ ಪಕ್ಷ ಅಧಿಕಾರಕ್ಕೆ ಬಂದಿರುವುದೇ ಜನಲೋಕಪಾಲ್ ಎನ್ನುವ ಮಸೂದೆಯನ್ನು ಹಿಡಿದುಕೊಂಡು ಅದೇ ಮಂಡನೆಯಾಗದಿರುವಾಗ ಅಧಿಕಾರದಲ್ಲಿ ಇದ್ದರೇನು ಇಲ್ಲದಿದ್ದರೇನು ಎಂದು ಕೇಜ್ರಿವಾಲ್ ರಾಜೀನಾಮೆ ಕೊಟ್ಟೂ ಬಿಟ್ಟರು. ಅವಾಗಳೂ  ಕಾಲೆಳೆಯುವವರು   ಬಿಡಲಿಲ್ಲ, ಇದು ಲೋಕಸಭಾ ಚುನಾವಣೆಯಲ್ಲಿ ಜನರ ಅನುಕಂಪ ಪಡೆಯುವ ನಾಟಕ ಎಂದರು, ಆದರೆ ನಲವತ್ತೆಂಟು ದಿನಗಳ ಆಡಳಿತಾವದಿಯಲ್ಲಿ ಆಮ್ ಆದ್ಮಿ ಮಾಡಿದ  ಸಾಧನೆ ಹಲವಾರು ವರ್ಷಗಳಿಂದ ಅಧಿಕಾರ ನಡೆಸಿಕೊಂಡು ಬಂದವರಿಂದ ಸಾಧ್ಯವಾಗಿಲ್ಲ ಎನ್ನುವುದು  ಸತ್ಯ .ನಾವು ಆಮ್ ಆದ್ಮಿ ಪಕ್ಷದ ವಕ್ತಾರರಲ್ಲದಿದ್ದರೂ ಒಂದು ಹೊಸ ಚಿಂತನೆಗಳಿಗೆ ಬೆಂಬಲ ನೀಡಬೇಕಾದ್ದು ಮತ್ತು ಅದರ ಭರವಸೆಗಳ ಇಡೇರಿಕೆಗೆ ಸಹಾಯ ನೀಡಬೇಕಾದದ್ದು ಅಗತ್ಯ. ಆಮ್ ಆದ್ಮಿ ಪಕ್ಷ ಮುಂದಿನ ದಿನಗಳಲ್ಲಿ ಯಾವ ರೀತಿ ನಡೆದುಕೊಳ್ಳಬಹುದು ಎನ್ನುವ ಅರಿವಿಲ್ಲದಿದ್ದರೂ, ಕೇಜ್ರಿವಾಲ್ ಎನ್ನುವ ಜನ ಮೆಚ್ಚಿದ ನಾಯಕನ ಕ್ರೇಜ್  ಜನರಲ್ಲಿ ಕಡಮೆಯಾಗುವುದು ಕಷ್ಟ  

No comments: