Thursday, February 13, 2014

ದುಸ್ಟ ಸಂಸ್ಕೃತಿ (ಚುಟುಕ)



ಕಾಲೇಜು ಮೆಟ್ಟಲು ಹತ್ತಿದಾಗ ಮೊಬೈಲ್ ಹಿಡಿಯಬೇಕಾಯಿತು,
ತಲೆಗೆ ಪ್ರೇಮದ ಹುಚ್ಚು ಹತ್ತಿದಾಗ ಹೆತ್ತವರ ನೆನಪು ಮರೆಯಾಯಿತು,

ವಾತ್ಸಲ್ಯಕ್ಕೆ ಕಾಲದಲ್ಲಿ ಯಾವ ಬೆಲೆಯೂ ಇಲ್ಲದಾಯಿತು,
ಪ್ರಿಯಕರ ಕೈ ಕೊಟ್ಟಾಗ ಇವರಿಗೆ ಮನೆಯ ನೆನಪಾಯಿತು,

ಕರುಳ ಕುಡಿ ಮರಳಿದಾಗ ಸ್ವೀಕರಿಸುವುದು ಅನಿವಾರ್ಯವಾಯಿತು,
ಹೆತ್ತ ತಪ್ಪಿಗಾಗಿ ಎಲ್ಲರ ಮುಂದೆ ತಲೆತಗ್ಗಿಸಬೇಕಾಯಿತು,

ಅಧುನಿಕ ಜಗತ್ತಿಗೆ ಇದು ನಿತ್ಯ ಪರಿಪಾಟವಾಯಿತು,
ದಿನ ನಿತ್ಯ ಇಲ್ಲಿ ಸಂಸ್ಕೃತಿಯ ಹರಣ ಮಾಮುಲಿಯಾಯಿತು,

  ಬದಲಾಯಿಸಬೇಕು ದುಸ್ಟ ಸಂಸ್ಕೃತಿಯನ್ನು ಬದಲಾಗುವವವರೆಗೂ 

ಹೋರಾಡಬೇಕಿದೆ ನಮ್ಮ ಸಹೋದರಿಯರ ಮಾನ ಕಾಪಾಡುವವರೆಗೂ.


No comments: