ಹಿಮವು ಕರಗಿ ನೀರಾಗುವುದು ಎಲ್ಲಿ,
ಕೊನೆಗೆ ಬಂದು ಸೇರುವುದು ಗಂಗೆಯಲ್ಲಿ,
ಕೊನೆಗೆ ಬಂದು ಸೇರುವುದು ಗಂಗೆಯಲ್ಲಿ,
ಸೈನಿಕರ ಬೂಟಿನ ಸದ್ದು ಮೊಳಗುವುದಲ್ಲಿ,
ಮಡಿದವು ಅಮಾಯಕ ಪ್ರಾಣಗಳು ಸಂಕಟದಲ್ಲಿ,
ಮಡಿದವು ಅಮಾಯಕ ಪ್ರಾಣಗಳು ಸಂಕಟದಲ್ಲಿ,
ಭಾರತಕ್ಕೋ
ಪಾಕಿಸ್ತನಕ್ಕೋ ಎನ್ನುವ ಚರ್ಚೆ ನಿತ್ಯವೂ ಅಲ್ಲಿ,
ಸಮಸ್ಯೆಗೆ ಪರಿಹಾರ ಕಂಡಿಲ್ಲ ಎನ್ನುವುದೇ ನಮಗೆ ಬೇಸರವಿಲ್ಲಿ,
ಸಮಸ್ಯೆಗೆ ಪರಿಹಾರ ಕಂಡಿಲ್ಲ ಎನ್ನುವುದೇ ನಮಗೆ ಬೇಸರವಿಲ್ಲಿ,
ಆಪಲ್ ನ ಮರವೂ ನಿಮಗೆ ಕಾಣಸಿಗುವುದು ಎತ್ತರದಲ್ಲಿ,
ಕಾಶ್ಮೀರ ದೂರದಿಂದ ನೋಡುವುದೇ ಚೆಂದ ಎನ್ನುವರು ಹಲವರಿಲ್ಲಿ..
ಕಾಶ್ಮೀರ ದೂರದಿಂದ ನೋಡುವುದೇ ಚೆಂದ ಎನ್ನುವರು ಹಲವರಿಲ್ಲಿ..

No comments:
Post a Comment